ಪ್ರಯಾಗ್‌ರಾಜ್‌ನಲ್ಲಿ ಕಾಲ್ತುಳಿತದ ನಂತರ, ದಿಕ್ಕು ತೋಚದ ಹಿಂದೂ ಯಾತ್ರಿಕರಿಗೆ ಮುಸ್ಲಿಂ ಸಮುದಾಯ ಆಶ್ರಯ ನೀಡಿ ಮಾನವೀಯತೆ ಮೆರೆದಿದೆ. ಮಸೀದಿ, ದರ್ಗಾ, ಇಮಾಮ್‌ಬಾದಗಳಲ್ಲಿ ಆಹಾರ, ನೀರು, ವಿಶ್ರಾಂತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳೀಯ ಮುಸ್ಲಿಮರು ತಮ್ಮ ಮನೆಗಳಲ್ಲೂ ಯಾತ್ರಿಕರಿಗೆ ಆಶ್ರಯ ನೀಡಿ, ಊಟೋಪಚಾರ ನೀಡಿದರು. ಇದು ಸೌಹಾರ್ದತೆಯ ಪ್ರತೀಕವಾಯಿತು.

ಮಹಾಕುಂಭದ ಮೌನಿ ಅಮವಾಸ್ಯೆಯ ದಿನ 10 ಕೋಟಿಗೂ ಅಧಿಕ ಭಕ್ತರು ಒಂದೆಡೆ ಸೇರಿದ್ದರಿಂದ ನಡೆದ ಕಾಲ್ತುಳಿತದಲ್ಲಿ ಸುಮಾರು 30 ಜನರು ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡ ನಂತರ, ಅಲ್ಲಿಗೆ ಹೋದ ಹಲವು ಭಕ್ತರು ದಿಕ್ಕೇ ತೋಚದಂತಾಗಿ ಎಲ್ಲೆಲ್ಲೋ ಅಲೆದಾಡತೊಡಗಿದರು. ಅಂಥ ಸಮಯದಲ್ಲಿ, ಅಲ್ಲಿಯ ಮುಸ್ಲಿಂ ಸಮುದಾಯದವರು ಹಿಂದೂ ಭಕ್ತರಿಗೆ ಹಲವು ರೀತಿಯಲ್ಲಿ ಸಹಾಯ ಹಸ್ತ ಚಾಚಿರುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಸಂಗಮ್ ನಗರದ ಚಾಕ್-ಒ-ಬ್ಲಾಕ್ ರಸ್ತೆಗಳಲ್ಲಿ ದಣಿದ ಮತ್ತು ಹಸಿವಿನಿಂದ ಅಲೆದಾಡುತ್ತಿದ್ದ ಭಕ್ತರಿಗೆ ಮಸೀದಿ, ದರ್ಗಾ ಮತ್ತು ಇಮಾಮ್‌ಬಾದಗಳಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದ್ದೂ ಅಲ್ಲದೇ, ಆ ಭಾಗದಲ್ಲಿ ಹೆಚ್ಚಾಗಿರುವ ಮುಸ್ಲಿಂ ಸಮುದಾಯದವರು ತಮ್ಮ ಮನೆಗಳಲ್ಲಿಯೂ ಉಳಿಯಲು ಅವಕಾಶ ಕಲ್ಪಿಸಿಕೊಟ್ಟಿದ್ದರು ಎಂದು ವರದಿಯಾಗಿದೆ.

ಖುಲ್ದಾಬಾದ್ ಸಬ್ಜಿಮಂಡಿ ಮಸೀದಿ, ಬಡಾ ತಾಜಿಯಾ ಇಮಾಮ್‌ಬಾದ, ಹಿಮ್ಮತ್‌ಗಂಜ್ ದರ್ಗಾ ಮತ್ತು ಚೌಕ್ ಮಸೀದಿಯಲ್ಲಿ ಸಿಲುಕಿರುವ ಸಾವಿರಾರು ಯಾತ್ರಿಕರಿಗೆ ವಿಶ್ರಾಂತಿ, ಆಹಾರ ಮತ್ತು ನೀರಿನ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ. ಮಹಾಕುಂಭದಿಂದ ಹಿಂದಿರುಗುವ ಹಿಂದೂ ಭಕ್ತರಿಗೆ ಈ ಸ್ಥಳಗಳನ್ನು ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಇದಲ್ಲದೆ, ನಖಾಸ್ ಕೊಹ್ನಾ ಪ್ರದೇಶದ ಹಫೀಜ್ ರಜ್ಜಬ್ ಮಸೀದಿ ಮತ್ತು ಚೌಕ್‌ನಲ್ಲಿರುವ ಜಾಮಾ ಮಸೀದಿ 400 ಕ್ಕೂ ಹೆಚ್ಚು ಹಿಂದೂ ಭಕ್ತರಿಗೆ ಆಶ್ರಯ ನೀಡಿರುವುದು ವರದಿಯಾಗಿದೆ.

ಕುಂಭಮೇಳಕ್ಕೆ ಹೋದ್ರೆ ತಪ್ಪೇನಿದೆ? ನಾನು ದೇವರಿಲ್ದೇ ಬದುಕಬಲ್ಲೆ, ಆದ್ರೆ ನನ್ನ ಹೆಂಡ್ತಿ... ಪ್ರಕಾಶ್‌ ರಾಜ್‌ ಮಾತು ಕೇಳಿ...

ಅದೇ ರೀತಿ, ರೋಶನ್‌ಬಾಗ್, ಖುಲ್ಲಾಬಾದ್, ರಾಣಿ ಮಂಡಿ ಮತ್ತು ಶಹಗಂಜ್ ಸೇರಿದಂತೆ ಮುಸ್ಲಿಂ ಪ್ರದೇಶಗಳ ನಿವಾಸಿಗಳು ತಮ್ಮ ಮನೆಗಳಲ್ಲಿ ಆಶ್ರಯ ಕಲ್ಪಿಸಿದ್ದಾರೆ. ದಣಿದ ಯಾತ್ರಿಕರಿಗೆ ಆಶ್ರಯ ನೀಡಿ, ಉಪಾಹಾರ ಮತ್ತು ಆಹಾರವನ್ನು ನೀಡಿದರು. ನಖಾಸ್ ಕೊಹ್ನಾದ ಹಫೀಜ್ ರಜ್ಜಬ್ ಮಸೀದಿಯಿಂದ ಕೆಲವೇ ಮೀಟರ್ ದೂರದಲ್ಲಿ, ಒಂದು ಮುಸ್ಲಿಂ ಕುಟುಂಬವು ರಾಜಸ್ಥಾನ, ಜಾರ್ಖಂಡ್ ಮತ್ತು ಬಿಹಾರದ 40 ಭಕ್ತರನ್ನು ಅವರ ಆರು ಮಲಗುವ ಕೋಣೆಗಳ ಮನೆಯಲ್ಲಿ ಆತಿಥ್ಯ ವಹಿಸುವ ಮೂಲಕ ರಕ್ಷಿಸಿತು.

 ಚೌಕ್ ಪ್ರದೇಶದ ವೃತ್ತಿಯಲ್ಲಿ ಶಿಕ್ಷಕ ಮಸೂದ್ ಅಹ್ಮದ್ ಅವರು, “ಆ ರಾತ್ರಿ ಅಗತ್ಯವಿರುವವರಿಗೆ ಸಹಾಯ ಮಾಡಲು ಬಂದಾಗ, ನಾವು ಜಂಟಿಯಾಗಿ ಕೆಲಸ ಮಾಡಿದ್ದೇವೆ. ಪ್ರಯಾಗ್‌ರಾಜ್‌ಗೆ ದೂರದಿಂದ ಬಂದವರಿಗೆ ಆಗುತ್ತಿದ್ದ ತೊಂದರೆಯನ್ನು ಕಡಿಮೆ ಮಾಡುವುದು ನಮ್ಮ ಮುಖ್ಯ ಗುರಿಯಾಗಿತ್ತು. ನಿಲ್ದಾಣಕ್ಕೆ ಬರುವ ವೃದ್ಧರಿಗೆ ಸಹಾಯ ಮಾಡಲು ನಾವು ಪ್ರಯತ್ನಿಸಿದೆವು. ಇಲ್ಲಿಗೆ ಬಂದಿರುವವರು ಮಾನವೀಯತೆಯ ಭಾವನೆಯೊಂದಿಗೆ ಹಿಂತಿರುಗಬೇಕೆಂದು ನಾವು ಬಯಸಿದ್ದೆವು" ಎಂದು ಹೇಳಿದರು.

ಕುಂಭಮೇಳ ಸುಂದರಿ ಮೊನಾಲಿಸಾ ಐಎಎಸ್​ ಅಧಿಕಾರಿ! ಅಬ್ಬಬ್ಬಾ ಇದೆಂಥ ಸುದ್ದಿ? ಫೋಟೋ ನೋಡಿ ಸುಸ್ತಾದ ಫ್ಯಾನ್ಸ್​

View post on Instagram