ಕುಂಭಮೇಳ ಸುಂದರಿ ಮೊನಾಲಿಸಾ ಐಎಎಸ್​ ಅಧಿಕಾರಿ! ಅಬ್ಬಬ್ಬಾ ಇದೆಂಥ ಸುದ್ದಿ? ಫೋಟೋ ನೋಡಿ ಸುಸ್ತಾದ ಫ್ಯಾನ್ಸ್​

ಕುಂಭಮೇಳದ ಸೆನ್ಸೇಷನ್​ ಮೊನಾಲಿಯಾ ಐಎಎಸ್​ ಅಧಿಕಾರಿಯಾಗಿರುವ ಫೋಟೋ ಹರಿದಾಡುತ್ತಿದ್ದು, ಇದನ್ನು ನೋಡಿ ಫ್ಯಾನ್ಸ್​ ಶಾಕ್​ ಆಗಿದ್ದಾರೆ.
 

Kumbha Mela sensation Monalisa AI photos as IAS officer gone viral in social media suc

ಈ ಬಾರಿಯ ಕುಂಭಮೇಳ ಸಕತ್‌ ವೈರಲ್‌ ಆಗಲು ಕಾರಣ, ಮೊನಾಲಿಸಾ ಎನ್ನುವ ಹೆಣ್ಣುಮಗಳು. ಸೋಷಿಯಲ್‌ ಮೀಡಿಯಾಗಳಲ್ಲಿ ಈಕೆಯದ್ದೇ ಕಾರುಬಾರು. ಕುಂಭಮೇಳ ಎಂದರೆ ಮೊನಾಲಿಸಾ ಎನ್ನುವಷ್ಟರ ಮಟ್ಟಿಗೆ ಈಕೆ ಸದ್ದು ಮಾಡುತ್ತಿದ್ದಾಳೆ. ರುದ್ರಾಕ್ಷಿ ಮಾರುತ್ತಿದ್ದ ಮೊನಾನಿಸಾಳ ಬ್ಯೂಟಿಯನ್ನು ಯೂಟ್ಯೂಬರ್‌ ಒಬ್ಬರು ತಮ್ಮ ಯೂಟ್ಯೂಬ್‌ನಲ್ಲಿ ಶೇರ್‌ ಮಾಡಿದ್ದೇ, ಎಲ್ಲರೂ ಆಕೆಯನ್ನು ಹುಡುಕಿ ಹೋಗುವಂತೆ ಮಾಡಿದೆ. ಹೆಣ್ಣು- ಗಂಡುಗಳು ಎನ್ನುವ ಬೇಧವಿಲ್ಲದೇ ಈಕೆಯ ಮೇಲೆ ಕವನ ಬರೆಯುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಕವಿಗಳು ಅಲ್ಲದವರೂ ಕವಿಗಳಾಗಿ ಬಿಟ್ಟಿದ್ದಾರೆ.

ಅಷ್ಟಕ್ಕೂ, ಇದಕ್ಕೆಲ್ಲಾ ಕಾರಣ ಈಕೆಯ ಆಕರ್ಷಕ ಕಣ್ಣುಗಳು. ಜೇನುಕಣ್ಣೋಳೇ, ಮೀನ ಕಣ್ಣೋಳೆ, ನೀಲಿ ಕಣ್ಣೋಳೆ, ಐಶ್ವರ್ಯ ಕಣ್ಣೋಳೆ.... ಹೀಗೆ ಏನೇನೋ ಬಿರುದು ಬಾವಲಿಗಳನ್ನು ಕೊಟ್ಟು ಈಕೆಯನ್ನು ಸ್ಟಾರ್‌ ಮಾಡಿದವರು, ಕೊನೆಗೆ ಆಕೆಗೆ ಚಿತ್ರಹಿಂಸೆ ಎನ್ನಿಸುವಷ್ಟರ ಮಟ್ಟಿಗೆ ಕಾಡತೊಡಗಿದರು. ಮೊನಾಲಿಸಾಳ ಸೇರಿದಂತೆ ಆಕೆಯ ಕುಟುಂಬಸ್ಥರು ಕಣ್ಣೀರು ಹಾಕುವಷ್ಟರ ಮಟ್ಟಿಗೆ ಯೂಟ್ಯೂಬರ್‌ಗಳು ಹಾಗೂ ಪ್ರವಾಸಿಗರ ಕಾಟ ಶುರುವಾಯಿತು. ಮಾಸ್ಕ್‌ ಹಾಕಿಕೊಂಡು ಈಕೆ ತಿರುಗಿದರೂ ಬಿಡಲಿಲ್ಲವಂತೆ. ರುದ್ರಾಕ್ಷಿಯನ್ನು ಖರೀದಿ ಮಾಡುವ ಬದಲು ಬರುವವರೆಲ್ಲರೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರೇ ಆದರು. ಇದೀಗ ಮೊನಾಲಿಸಾದ ಸಿನಿಮಾಗಳ ಆಫರ್‌ ಕೂಡ ಬರುತ್ತಿವೆ. ಇದಾಗಲೇ ಸ್ಟೋರಿ ಆಫ್‌ ಮಣಿಪುರ್‌ನಲ್ಲಿ ಈಕೆಯನ್ನು ಸೇರಿಸಿಕೊಳ್ಳುವುದಾಗಿ ನಿರ್ದೇಶಕರು ಹೇಳಿಯಾಗಿದೆ.  

ಮೊನಾಲಿಸಾಳ ಮೇಕಪ್‌ ರಹಿತ ವಿಡಿಯೋ ವೈರಲ್‌: ಎರ್‍ರಾ ಬಿರ್‍ರಿ ಹೊಗಳ್ದೋರೇ ಉಲ್ಟಾ ಹೊಡೀಯೋದಾ?

ಇದೀಗ ಮೊನಾಲಿಸಾ ಐಎಎಸ್​ ಅಧಿಕಾರಿಯಾಗಿದ್ದಾಳೆ. ಆಕೆ ಮಾರುವೇಷದಲ್ಲಿ ಕುಂಭಮೇಳಕ್ಕೆ ಬಂದಿದ್ದಾಳೆ. ಕುಂಭಮೇಳದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಬಂದಿದ್ದಾಳೆ ಎಂಬೆಲ್ಲಾ ಸುದ್ದಿಗಳು ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ. ಇದಕ್ಕೆ ಇಂಬು ಕೊಡಲು ಆಕೆಯ ಅಧಿಕಾರಿಯಾಗಿರುವ ಫೋಟೋಗಳೂ ವೈರಲ್​ ಆಗಿವೆ. ಇದರಲ್ಲಿ ಮೊನಾಲಿಸಾ ಪಕ್ಕಾ ಐಎಎಸ್​ ಅಧಿಕಾರಿ ರೀತಿಯಲ್ಲಿ ಕಾಣಿಸುತ್ತಿದ್ದಾಳೆ. ಅಂದಹಾಗೆ, ಇದಾಗಲೇ ಹಲವರಿಗೆ ತಿಳಿದಿರುವಂತೆ ಇದು ಮೊನಾಲಿಸಾಳ ನಿಜವಾಗಿರುವ ಫೋಟೋ ಅಲ್ಲ. ಬದಲಿಗೆ ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ (AI) ಮೂಲಕ ತೆಗೆದಿರುವ ಫೋಟೋ. ಐಎಎಸ್​ ಅಧಿಕಾರಿಯ ರೀತಿಯಲ್ಲಿ ಫೋಟೋ ರಚಿಸಿ, ಕಥೆ ಕಟ್ಟಿ ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾಗುತ್ತಿದೆ.

ಮೊನಾಲಿಸಾ ಸದ್ದು ಮಾಡುತ್ತಿರುವಂತೆಯೇ ಈಕೆಯ ಹೆಸರು ಹೇಳಿಕೊಂಡು ಇದಾಗಲೇ ಹಲವಾರು ಯೂಟ್ಯೂಬರ್​ಗಳು ತಮ್ಮ ಯೂಟ್ಯೂಬ್​ ವ್ಯೂಸ್​ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ಇಲ್ಲದ ಕಥೆಗಳನ್ನು ಕಟ್ಟಿ ಹಾಕುತ್ತಿದ್ದಾರೆ. ಇದೀಗ ಐಎಎಸ್​ ಅಧಿಕಾರಿಯಾಗಿರುವಂಥ ಫೋಟೋ ಹಾಕಿ, ಈಕೆ ನಿಜವಾಗಿಯೂ ಐಎಎಸ್​​ ಅಧಿಕಅರಿ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಮೊನಾಲಿಸಾಳ ಬಗ್ಗೆ ಪ್ರಚಾರ ಆಗುತ್ತಿರುವ ಸುದ್ದಿಗಳ ಪೈಕಿ ಬಹುತೇಕವು ಫೇಕ್​ ಎನ್ನುವುದು ಮಾತ್ರ ನೆನಪಿರಲಿ. 

ಬಾಲಿವುಡ್​ಗೆ ಮೊನಾಲಿಸಾ: ನಿರ್ದೇಶಕ ಸನೋಜ್​ ಮಿಶ್ರಾ ಆಫರ್​- ರಾಣು ಸ್ಥಿತಿ ಆಗದಿರಲಿ ಅಂತಿರೋ ಫ್ಯಾನ್ಸ್​

 

Latest Videos
Follow Us:
Download App:
  • android
  • ios