Asianet Suvarna News Asianet Suvarna News

Beautiful Churches: ಭಾರತದಲ್ಲೇ ಅತಿ ಜನಪ್ರಿಯ ಚರ್ಚ್‌ಗಳಿವು..

ಏಷ್ಯಾದ ಅತಿ ದೊಡ್ಡ ಚರ್ಚ್‌ನಿಂದ ಹಿಡಿದು ಯುನೆಸ್ಕೋ ಪಾರಂಪರಿಕ ತಾಣ ಎನಿಸಿಕೊಂಡ ಚರ್ಚ್‌ಗಳವರೆಗೆ, ಬೇರೆ ಬೇರೆ ವಿಶೇಷಗಳಿಗಾಗಿ ಭಾರತದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ಚರ್ಚ್‌ಗಳಿವು..

Most Astonishing Churches of India skr
Author
Bangalore, First Published Dec 25, 2021, 12:48 PM IST

ಭಾರತದ ಮೂರನೇ ಅತಿ ದೊಡ್ಡ ಧರ್ಮ ಕ್ರೈಸ್ತರದು. ಸುಮಾರು 27.8 ದಶಲಕ್ಷ ಕ್ರೈಸ್ತರು ಇಲ್ಲಿದ್ದಾರೆ. ಪೋರ್ಚುಗೀಸರು, ಡಚ್ಚರು, ಬ್ರಿಟಿಷರು ಮುಂತಾದವರು ಇಲ್ಲಿ ವಸಾಹತು ನಡೆಸಿದ ಕಾಲದಲ್ಲಿ ಹಲವು ಸುಂದರ ಚರ್ಚ್‌ಗಳನ್ನು ನಿರ್ಮಿಸಿದ್ದಾರೆ. ದೇಶದೆಲ್ಲೆಡೆ ಕ್ರೈಸ್ತರ ಪವಿತ್ರ ಚರ್ಚ್‌ಗಳಿವೆ. ಅವುಗಳಲ್ಲಿ ಕೆಲವು ಅತಿ ಪ್ರಸಿದ್ಧವಾಗಿವೆ. ಅವು ಯಾವುವು ನೋಡೋಣ.

ಸೀ ಕೆಥೆಡ್ರಾಲ್(Se Cathedral), ಗೋವಾ(Goa)
ಏಷ್ಯಾದಲ್ಲೇ ಅತಿ ಪುರಾತನ ಹಾಗೂ ಅತಿ ದೊಡ್ಡ ಚರ್ಚ್ ಗೋವಾದ ಮಾಂಡೋವಿ ನದಿ ತೀರದಲ್ಲಿದೆ. ಈ ಸೀ ಕೆಥೆಡ್ರಾಲ್ ಚರ್ಚ್ ತನ್ನ ಅದ್ಭುತ ವಾಸ್ತುಶಿಲ್ಪ ಹಾಗೂ ದೊಡ್ಡ ದೊಡ್ಡ ಗಂಟೆಗಳಿಗಾಗಿ ಜನಪ್ರಿಯವಾಗಿದೆ. ಇಲ್ಲಿನ ದೊಡ್ಡ ಗಂಟೆಗಳನ್ನು ಗೋಲ್ಡನ್ ಬೆಲ್ ಆಫ್ ಗೋವಾ(Golden Bell of Goa) ಎಂದು ಕರೆಯಲಾಗುತ್ತದೆ. 

ಸ್ಯಾಕ್ರೆಡ್ ಹಾರ್ಟ್ ಚರ್ಚ್, ಶಿವಮೊಗ್ಗ(Shimoga)
ಶಿವಮೊಗ್ಗದಲ್ಲಿರುವ ಸ್ಯಾಕ್ರೆಡ್ ಹಾರ್ಟ್ ಚರ್ಚ್ ಭಾರತದ ಎರಡನೇ ಅತಿ ದೊಡ್ಡ ರೋಮನ್ ಕ್ಯಾಥೋಲಿಕ್ ಚರ್ಚಾಗಿದೆ. ಸುಮಾರು 18,000 ಚದರ ಅಡಿಯಲ್ಲಿ ಈ ಚರ್ಚ್ ಹಬ್ಬಿ ನಿಂತಿದ್ದು, ರೋಮನ್ ಹಾಗೂ ಗೋತಿಕ್ ಸ್ಟೈಲ್ ಹೊಂದಿದೆ. 

Personality Traits: ಲವ್ವಲ್ಲಿದ್ದಾಗ ಈ ರಾಶಿಯ ವೀಕ್ನೆಸ್ ಏನ್ ಗೊತ್ತಾ?

ಸೇಂಟ್ ಮೇರೀಸ್ ಬೇಸಿಲಿಕಾ, ಬೆಂಗಳೂರು(Bangalore)
ಬೆಂಗಳೂರಿನ ಅತಿ ಹಳೆಯ ಚರ್ಚಾಗಿರುವ ಸೇಂಟ್ ಮೇರೀಸ್ ಬೇಸಿಲಿಕಾ, ಶಿವಾಜಿನಗರದಲ್ಲಿದೆ. ಸೆಪ್ಟೆಂಬರ್‌ನಲ್ಲಿ ನಡೆವ ಸೇಂಟ್ ಮೇರೀಸ್ ಫೀಸ್ಟ್‌ಗೆ ಹೆಸರುವಾಸಿಯಾಗಿದೆ. ತಮಿಳು ಕ್ರಿಶ್ಚಿಯನ್ನರು 17ನೇ ಶತಮಾನದಲ್ಲಿ ಇದನ್ನು ನಿರ್ಮಿಸಿದ್ದಾರೆ. 

ಕುಂಕುರಿ ಚರ್ಚ್(Kunkuri-Church)
ಅವರ್ ಲೇಡಿ ಆಫ್ ದ ರೋಸರಿ ಚರ್ಚ್ ಛತ್ತೀಸ್‌ಗಢದ ಜಶ್ಪುರದ ಕುಂಕುರಿ ಎಂಬಲ್ಲಿದೆ. ಇದು ಏಷ್ಯಾದ ಎರಡನೇ ಅತಿ ದೊಡ್ಡ ಕ್ಯಾಥೋಲಿಕ್ ಚರ್ಚಾಗಿದೆ. 

ಮೇದಕ್ ಕ್ಯಾಥೆಡ್ರಲ್, ತೆಲಂಗಾಣ(Telangana)
ಮೇದಕ್‌ನಲ್ಲಿರುವ ಚರ್ಚ್ ತೆಲಂಗಾಣ ರಾಜ್ಯದ ಅತಿ ದೊಡ್ಡ ಚರ್ಚ್. ವ್ಯಾಟಿಕನ್ ನಂತರದ ವಿಶ್ವದ ಎರಡನೇ ಅತಿ ದೊಡ್ಡ ಕ್ಯಾಥೆಡ್ರಲ್ ಚರ್ಚ್ ಇದಾಗಿದೆ. ಇಲ್ಲಿನ ಗಾಜಿನ ಕಿಟಕಿಗಳು ಬೈಬಲ್‌ನ ಎಪಿಸೋಡ್‌ಗಳನ್ನು ಬಿಂಬಿಸುತ್ತವೆ. ಬೆಳಗ್ಗೆ ಹೊತ್ತಿನಲ್ಲಿ ಗಾಜಿನ ಕಿಟಕಿಯಿಂದ ಸೂರ್ಯನ ಕಿರಣಗಳು ನುಗ್ಗುವುದನ್ನು ನೋಡುವುದೇ ಚೆಂದ. ಇಲ್ಲಿನ 175 ಎತ್ತರದ ಬೆಲ್ ಟವರ್‌ನಿಂದ ಬೆಲ್ ಮಾಡಿದಾಗ ಸದ್ದು ಬಹಳ ದೂರಗಳವರೆಗೆ ಪ್ರತಿಧ್ವನಿಸುತ್ತದೆ. ಈ ಕಟ್ಟಡವನ್ನು ಗೋಥಿಕ್ ರಿವೈವಲ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ. ಈ ಚರ್ಚು ಒಂದೇ ಸಮಯದಲ್ಲಿ ಸುಮಾರು 5000 ಜನರಿಗೆ ಸ್ಥಳಾವಕಾಶ ನೀಡುವ ಸಾಮರ್ಥ್ಯ ಹೊಂದಿದೆ.

Fertility Astrology: ಗರ್ಭ ಕಟ್ಟುತ್ತಿಲ್ಲವೇ? ಈ ಟಿಪ್ಸ್ ಫಾಲೋ ಮಾಡಿ..

ಬೇಸಿಲಿಕಾ ಆಫ್ ಅವರ್ ಲೇಡಿ ಆಫ್ ಡೋಲರ್ಸ್, ತ್ರಿಶೂರ್(Thrissur)
ತ್ರಿಶೂರ್‌ನಲ್ಲಿರುವ ಬೇಸಿಲಿಕಾ ಆಫ್ ಅವರ್ ಲೇಡಿ ಆಫ್ ಡಾಲರ್ಸ್ ಏಷ್ಯಾದ ಮೂರನೇ ಅತಿ ಎತ್ತರದ ಚರ್ಚ್. ಇದು ಇದರ ಗೋಥಿಕ್ ಆರ್ಕಿಟೆಕ್ಚರ್‌ಗೆ ಖ್ಯಾತಿ ಪಡೆದಿದೆ. 

ಬೇಸಿಲಿಕಾ ಆಫ್ ಬೋಮ್ ಜೀಸಸ್(Basilica of Bom Jesus), ಗೋವಾ
ಹಳೆ ಗೋವಾದಲ್ಲಿರುವ ಬೇಸಿಲಿಕಾ ಆಫ್ ಬೋಮ್ ಜೀಸಸ್ ಚರ್ಚ್ ಭಾರತದ ವಿಶ್ವ ಪಾರಂಪರಿಕ ತಾಣಗಳಲ್ಲೊಂದು. ಈ ಸುಂದರವಾದ ಚರ್ಚ್ ನ ನಿರ್ಮಾಣವು 1594 ರಲ್ಲಿ ಪ್ರಾರಂಭವಾಯಿತು ಮತ್ತು 1605 ರಲ್ಲಿ ಪೂರ್ಣಗೊಂಡಿದ್ದು, ಇದು ಭಾರತದ ಅತಿ ಪುರಾತನ ಚರ್ಚ್‌ಗಳಲ್ಲೊಂದು. 

ಸ್ಯಾನ್ ಥೋಮ್ ಬೇಸಿಲಿಕಾ, ಚೆನ್ನೈ(Chennai)
ಚೆನ್ನೈನಲ್ಲಿರುವ ಸ್ಯಾನ್ ಥೋಮ್ ಬೇಸಿಲಿಕಾ ಬಹು ಮುಖ್ಯ ಪ್ರವಾಸಿ ತಾಣವಾಗಿದೆ. 16ನೇ ಶತಮಾನದಲ್ಲಿ ಸಂತ ಥಾಮಸ್ ರ ಸಮಾಧಿ ಮೇಲೆ ಪೋರ್ಚುಗೀಸರು ಇದನ್ನು ನಿರ್ಮಿಸಿದ್ದಾರೆ. ಅಪೊಸ್ತಲರ ಸಮಾಧಿಯ ಮೇಲೆ ನಿರ್ಮಿಸಿರುವ ವಿಶ್ವದ ಮೂರು ಪ್ರಸಿದ್ಧ ಚರ್ಚುಗಳಲ್ಲಿ ಈ ಚರ್ಚ್ ಸಹ ಒಂದಾಗಿದೆ. ಚರ್ಚ್‌ನಲ್ಲಿ ವಸ್ತು ಸಂಗ್ರಹಾಲಯವಿದ್ದು, ಅದು ಕೆಲವು ಸ್ಮಾರಕಗಳನ್ನು ಪ್ರದರ್ಶಿಸುತ್ತದೆ.

Follow Us:
Download App:
  • android
  • ios