Personality Traits: ಲವ್ವಲ್ಲಿದ್ದಾಗ ಈ ರಾಶಿಯ ವೀಕ್ನೆಸ್ ಏನ್ ಗೊತ್ತಾ?
ಎಲ್ಲ ರಾಶಿಗಳಿಗೂ ಕೆಲ ವೀಕ್ನೆಸ್‌ಗಳಿರುತ್ತವೆ. ಪ್ರೀತಿಯಲ್ಲಿ ಬಿದ್ದಾಗ ಅವು ಹೆಚ್ಚು ಎದ್ದು ಕಾಣತೊಡಗುತ್ತದೆ. ಯಾವ ರಾಶಿಯ ವೀಕ್ನೆಸ್ ಏನು ನೋಡೋಣ.
ಸಾಮಾನ್ಯ ದಿನದಲ್ಲಿ ವ್ಯಕ್ತಿಯು ಒಂದು ರೀತಿಯಿದ್ದರೆ, ಲವ್ವಲ್ಲಿದ್ದಾಗ ಆತನ ಹಾವಭಾವ, ನಡತೆ, ಗುಣ ಎಲ್ಲ ಬದಲಾಗುತ್ತದೆ. ಅದಕ್ಕೇ ಲವ್ವಲ್ಲಿದ್ದಾಗ ವ್ಯಕ್ತಿಯ ವೀಕ್ನೆಸ್(weakness) ಕೂಡಾ ಬೇರೆಯೇ ಇರುತ್ತದೆ. ಯಾವ ರಾಶಿಯವರು ಪ್ರೀತಿಯಲ್ಲಿ ಬಿದ್ದಾಗ ಯಾವ ವೀಕ್ನೆಸ್ ಹೊಂದಿರುತ್ತಾರೆ ಎಂದು ತಿಳಿದುಕೊಳ್ಳುವುದರಿಂದ ಅವರ ಜೊತೆ ಹೊಂದಿಕೊಳ್ಳಲು, ಅವರನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ.
ಮೇಷ(Aries)
ಮೇಷ ರಾಶಿಯವರು ಪರಿಶ್ರಮ ಹಾಕುವವರು. ಆದರೆ, ಅವರಿಗೆ ಗಡಿಬಿಡಿ ಹೆಚ್ಚು. ವೈಯಕ್ತಿಕ ಇಲ್ಲ ಔದ್ಯೋಗಿಕ ವಿಷಯಗಳಿರಬಹುದು- ಎರಡನೇ ಯೋಚನೆಯನ್ನೇ ಮಾಡದೆ ನಿರ್ಧಾರ ತೆಗೆದುಕೊಂಡು ಬಿಡುತ್ತಾರೆ. ಇದರಿಂದಲೇ ಸಮಸ್ಯೆ ಎದುರಿಸುತ್ತಾರೆ. ತಮ್ಮ ಈ ವೀಕ್ನೆಸ್‌ನಿಂದ ತಮಗೂ, ಪ್ರೀತಿಸುವವರಿಗೂ ನೋವು ತರುತ್ತಾರೆ.
ವೃಷಭ(Taurus)
ಮೇಷದವರು ಸಿಕ್ಕಾಪಟ್ಟೆ ಫಾಸ್ಟಾದರೆ, ವೃಷಭ ಅದಕ್ಕೆ ತದ್ವಿರುದ್ಧ. ತುಂಬಾ ನಿಧಾನಿಗಳು. ಅದು ಉದಾಸೀನವೋ ಏನೋ- ಆಮೆಗತಿ ಇವರದು. ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಬೇಕೆಂದು ಪ್ರೇಮಿ ಬಯಸುತ್ತಿದ್ದರೆ, ಈ ವೃಷಭ ರಾಶಿಯವರು ಮಾತ್ರ ಮುಂದೂ ಹೋಗದೆ, ಹಿಂದೆ ಹೋಗಲೂ ಬಿಡದೆ ಸತಾಯಿಸುತ್ತಾರೆ. ಒಂದು ನಿರ್ಧಾರ ತೆಗೆದುಕೊಳ್ಳೋಕೆ ಹೆದರುತ್ತಲೇ ಮುಂದೆ ಹಾಕುವುದು ಇವರ ಸ್ವಭಾವ.
Chakras in our body: ದೇಹದ ಏಳು ಚಕ್ರಗಳ ಕೆಲಸವೇನ್ ಗೊತ್ತಾ?
ಮಿಥುನ(Gemini)
ಮಿಥುನದವರಿಗೆ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಕೆಲಸಗಳನ್ನು ಮಾಡಿ ಮುಗಿಸುವ ಆತುರ. ಇದರಿಂದ ಇರೋಬರೋದೆಲ್ಲ ತಲೆ ಮೇಲೆ ಹಾಕಿಕೊಂಡು ಯಾವುದನ್ನೂ ಸರಿಯಾಗಿ ಪೂರೈಸದೆ, ಸಂಬಂಧಕ್ಕೆ ಸರಿಯಾಗಿ ಕಮಿಟ್‌ಮೆಂಟ್ ಕೊಡದೆ ಒದ್ದಾಡುತ್ತಾರೆ. ಇವರ ಅತಿಯಾದ ಕುತೂಹಲ ಕೂಡಾ ಪ್ರೇಮಿಗೆ ಕಿರಿಕಿರಿ ತರಬಹುದು.
Sex and Star Signs: ಯಾವ ರಾಶಿಯ ಲೈಂಗಿಕಾಸಕ್ತಿ ಹೇಗಿರುತ್ತದೆ ತಿಳಿಯಿರಿ..
ಕಟಕ(Cancer)
ಕಟಕ ರಾಶಿಯವರು ಸಿಕ್ಕಾಪಟ್ಟೆ ಸೂಕ್ಷ್ಮ ಸ್ವಭಾವದವರು. ವಾಸ್ತವಕ್ಕೆ ಕಾಲಿಡಲು ಪ್ರಯತ್ನವನ್ನೇ ಪಡದೆ ಗತಕಾಲದಲ್ಲೇ ಹೊಳಕಾಡುತ್ತಿರುತ್ತಾರೆ. ಭವಿಷ್ಯದ ಬಗ್ಗೆಯಂತೂ ಯೋಚನೆ ಇಲ್ಲವೇ ಇಲ್ಲ. ಸಂಬಂಧದ ವಿಷಯಕ್ಕೆ ಬಂದರೆ ರಿಸ್ಕ್ ತೆಗೆದುಕೊಳ್ಳುವವರಲ್ಲ. ಸಣ್ಣಪುಟ್ಟದ್ದಕ್ಕೂ ಹೆದರುವವರು.
ಸಿಂಹ(Leo)
ಸಿಂಹ ರಾಶಿಯವರಿಗೆ ಅಹಂಕಾರ ಹೆಚ್ಚು. ಇದರಿಂದ ತಾವು ಇರುವುದಕ್ಕಿಂತ ಹೆಚ್ಚು ಪ್ರಮುಖರೆಂದು ಭಾವಿಸಿಕೊಂಡಿರುತ್ತಾರೆ. ಹಾಗಾಗಿ, ಸಂಗಾತಿಯ ಸಲಹೆಗಳನ್ನು ಪರಿಗಣಿಸುವುದಿಲ್ಲ. ಇದು ಇವರ ಪ್ರೇಮಿಗೆ ಇರಿಸುಮುರಿಸು ತರುತ್ತದೆ. ತಾವೇ ಯಾವಾಗಲೂ ಸರಿ ಎಂದುಕೊಳ್ಳುವುದು ವೀಕ್ನೆಸ್ ಅಲ್ಲದೆ ಮತ್ತೇನು?
ಕನ್ಯಾ(Virgo)
ಕನ್ಯಾ ರಾಶಿಯವರದು ಸಿಕ್ಕಾಪಟ್ಟೆ ಚಿಂತಿಸುವ ಸ್ವಭಾವ. ಅವರ ತಲೆಯಲ್ಲಿ ಓಡುವ ಬಹುತೇಕ ಎಲ್ಲ ವಿಷಯಗಳ ಬಗ್ಗೆಯೂ ಚಿಂತೆಯೇ. ಯೋಜಿಸುವ ಕಲೆ ಚೆನ್ನಾಗಿದೆ. ಆದರೆ, ಅದನ್ನು ಕಾರ್ಯಗತಗೊಳಿಸುವುದರಲ್ಲಿ ಹಿಂದೆ ಬೀಳುತ್ತಾರೆ. ಸಂಬಂಧದಲ್ಲಿ ಇವರನ್ನು ಮೆಚ್ಚಿಸುವುದು ಸುಲಭವಲ್ಲ.
ತುಲಾ(Libra)
ನಿರ್ಧಾರ ತೆಗೆದುಕೊಳ್ಬೇಕಂದ್ರೆ ಮಾರು ದೂರ ಜಿಗಿವವರಿವರು. ಪ್ರತಿ ಸನ್ನಿವೇಶದ ಪ್ಲಸ್ಸು, ಮೈನಸ್ಸನ್ನು ಅಳೆದು ತೂಗುತ್ತಾ ಕೂತು ಸಮಯ ವ್ಯರ್ಥ ಮಾಡುತ್ತಾರೆ. ಇವರ ಭಾವನೆಗಳನ್ನು ಹಾಗೂ ಮೂಡನ್ನು ಅರ್ಥ ಮಾಡಿಕೊಳ್ಳಲೇ ಸಂಗಾತಿ ಸಿಕ್ಕಾಪಟ್ಟೆ ಶ್ರಮ ಹಾಕಬೇಕು.
ವೃಶ್ಚಿಕ(Scorpio)
ಇವರ ಸಂವಹನ ಕಲೆ ಸರಿ ಇರದಿರುವುದೇ ಇವರ ವೀಕ್ನೆಸ್. ಎಲ್ಲ ವಿಷಯಗಳನ್ನು ಮುಚ್ಚಿಡುವ ಸ್ವಭಾವದಿಂದಾಗಿ ಇವರನ್ನು ಅರ್ಥ ಮಾಡಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿ ಬಿಡುತ್ತದೆ ಪ್ರೇಮಿಗೆ. ತಮ್ಮನ್ನು ಏನು ಬಾಧಿಸುತ್ತಿದೆ ಎಂದು ಹೇಳದೆ ಪ್ರಶ್ನೆಯಾಗಿಯೇ ಉಳಿದು ಬಿಡುತ್ತಾರೆ.
ಧನು(Sagittarius)
ಧನು ರಾಶಿಯವರು ಸಿಕ್ಕಾಪಟ್ಟೆ ಮೂಡಿ(Moody). ಅತಿಯಾಗಿ ಯೋಚಿಸಿ ಸಂಬಂಧದಲ್ಲಿ ತೊಡಕು ತಂದುಕೊಳ್ಳುವುದು ಇವರ ವೀಕ್ನೆಸ್. ಅಲ್ಲದೆ, ಯಾವ ಸಮಯದಲ್ಲಿ ಹೇಗಿರುತ್ತಾರೋ ಅರ್ಥವಾಗದೆ ಇವರ ಪ್ರೇಮಿ ಪೇಚಾಡಬೇಕು.
ಮಕರ(Capricorn)
ಮಕರ ರಾಶಿಗೆ ಕೋಪವನ್ನು ಸರಿಯಾಗಿ ನಿಯಂತ್ರಿಸಲು ಬರುವುದಿಲ್ಲ. ಒಂದೇ ಅತಿ ರೇಗಾಡುತ್ತಾರೆ, ಇಲ್ಲವೇ ಅತಿಯಾಗಿ ಸುಮ್ಮನಿರುತ್ತಾರೆ. ಈ ಅತಿರೇಖಗಳೇ(extremities) ಇವರ ಪ್ರೇಮಿಗೆ ತಲೆನೋವು ತರುವುದು.
ಕುಂಭ(Aquarius)
ಫ್ರೆಂಡ್ಸ್ ಮಾಡಿಕೊಳ್ಳುವುದು, ಹೊರಗಿರುವುದು ಇಷ್ಟ ಪಡುವವರಾದರೂ ಇವರಿಗೆ ಕೆಲವೇ ಸ್ನೇಹಿತರಿರುವುದು. ಇವರ ಅಗತ್ಯಗಳು ಹೆಚ್ಚು ಸ್ವಾರ್ಥದಿಂದ ಕೂಡಿರುವುದರಿಂದ ನಿರ್ಧಾರ ತೆಗೆದುಕೊಳ್ಳುವಾಗ ಮತ್ತೊಬ್ಬರ ಬಗ್ಗೆ ಯೋಚಿಸಲಾರರು.
ಮೀನ(Pisces)
ಅತಿ ಭಾವಜೀವಿಗಳು ಹಾಗೂ ಮತ್ತೊಬ್ಬರ ಸಮಸ್ಯೆಯನ್ನೂ ತಮ್ಮ ಹೆಗಲ ಮೇಲೆ ಹೊತ್ತು ಅದಕ್ಕೂ ದುಃಖ ಪಡುವವರು. ಸದಾ ಸಮಸ್ಯೆ, ಗೋಳಿನಲ್ಲೇ ಇರುವುದೇ ಇವರ ಸಮಸ್ಯೆ. ಎಲ್ಲರನ್ನೂ, ಎಲ್ಲವನ್ನೂ ಸರಿ ಪಡಿಸುವ ಹಂಬಲವೇ ಇವರ ವೀಕ್ನೆಸ್.