ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಒಳ್ಳೆಯದು, ಆದ್ರೆ ಈ ಮಿಸ್ಟೇಕ್ಸ್ ಮಾಡ್ಬೇಡಿ!
ಬೆಳಿಗ್ಗೆ ಬೇಗ ಏಳ್ಬೇಕು ಎಂಬ ಮಾತನ್ನು ಎಲ್ಲರೂ ಕೇಳಿರ್ತೇವೆ. ಆದ್ರೆ ಕೆಲವೇ ಕೆಲವು ಮಂದಿ ಮಾತ್ರ ಬ್ರಹ್ಮ ಮುಹೂರ್ತದಲ್ಲಿ ಏಳ್ತಾರೆ. ಎದ್ಮೇಲೂ ಕೆಲವೊಂದು ತಪ್ಪುಗಳನ್ನು ಮಾಡಿ ಇಡೀ ದಿನ ಹಾಳು ಮಾಡಿಕೊಳ್ತಾರೆ. ಇದ್ರ ಜೊತೆಗೆ ಆರೋಗ್ಯಕ್ಕೂ ನಷ್ಟವುಂಟು ಮಾಡಿಕೊಳ್ತಾರೆ.
ಬ್ರಹ್ಮ ಮುಹೂರ್ತದ (Brhama Muhurat) ಸಮಯಕ್ಕೆ ಶಾಸ್ತ್ರಗಳಲ್ಲಿ ಬಹಳ ಪ್ರಾಮುಖ್ಯತೆ ಇದೆ. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ಹಾಗೂ ಜನರು ಬ್ರಹ್ಮ ಮುಹೂರ್ತದಲ್ಲಿ ಏಳ್ತಿದ್ದರು. ನಿತ್ಯದ ಕೆಲಸ ಮುಗಿಸಿ, ಸ್ನಾನ ಮಾಡಿ, ದೇವರ (God) ಪೂಜೆ ಮಾಡ್ತಿದ್ದರು. ಈಗಲೂ ಹಿರಿಯರು, ಮಕ್ಕಳಿಗೆ ಬ್ರಹ್ಮ ಮುಹೂರ್ತದಲ್ಲಿ ಏಳುವಂತೆ ಸಲಹೆ ನೀಡ್ತಾರೆ. ಅನೇಕ ಮನೆ (Home) ಗಳಲ್ಲಿ ಈಗ್ಲೂ ಬ್ರಹ್ಮ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿ ದೇವರ ನಾಮಸ್ಮರಣೆ ಮಾಡುವ ಜನರಿದ್ದಾರೆ. ಈ ಸಮಯವನ್ನು ಧರ್ಮಗ್ರಂಥಗಳ ದೃಷ್ಟಿಕೋನದಿಂದ ಮಾತ್ರವಲ್ಲದೆ ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯದಲ್ಲಿಯೂ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ ಬ್ರಹ್ಮ ಎಂದರೆ ಜ್ಞಾನ ಮತ್ತು ಮುಹೂರ್ತ ಎಂದರೆ ಸಮಯ ಅಥವಾ ಅವಧಿ ಎಂದರ್ಥ. ಗ್ರಂಥಗಳಲ್ಲಿ ನಿರ್ದಿಷ್ಟ ಕೃತಿಗಳಿಗೆ ಬ್ರಹ್ಮ ಮುಹೂರ್ತವನ್ನು ಅತ್ಯುತ್ತಮವೆಂದು ವಿವರಿಸಲಾಗಿದೆ.
ಆಯುರ್ವೇದ (Ayurveda) ದ ಪ್ರಕಾರ, ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುವುದರಿಂದ ವ್ಯಕ್ತಿಯು ರೋಗ ಮುಕ್ತನಾಗಿರುತ್ತಾನೆ ಮತ್ತು ಜೀವಿತಾವಧಿ ಹೆಚ್ಚಾಗುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಎದ್ದು ಶುಭ ಕಾರ್ಯಗಳನ್ನು ಮಾಡುವುದರಿಂದ ಲಾಭ ಸಿಗುತ್ತದೆ. ಆದರೆ ಈ ಸಮಯದಲ್ಲಿ ನಿಷೇಧಿತವೆಂದು ಪರಿಗಣಿಸಲಾದ ಕೆಲವು ಚಟುವಟಿಕೆಗಳಿವೆ. ಈ ಕೆಲಸಗಳನ್ನು ಮಾಡುವುದರಿಂದ ರೋಗಗಳು ನಮ್ಮ ದೇಹವನ್ನು ಸುತ್ತುವರೆಯುತ್ತವೆ. ಆಯಸ್ಸು ಕಡಿಮೆಯಾಗುತ್ತದೆ. ಇಂದು ನಾವು ಬ್ರಹ್ಮ ಮುಹೂರ್ತದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಎಂದು ಹೇಳ್ತೇವೆ.
ಬ್ರಹ್ಮ ಮುಹೂರ್ತದಲ್ಲಿ ಮಾಡ್ಬೇಡಿ ಈ ಕೆಲಸ :
ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ : ಬ್ರಹ್ಮ ಮುಹೂರ್ತದಲ್ಲಿ ವ್ಯಕ್ತಿಯ ಮನಸ್ಸು ಜಾಗೃತವಾಗಿರುತ್ತದೆ. ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು, ಪ್ರಮುಖ ಯೋಜನೆಗಳನ್ನು ಮಾಡಲು ಈ ಸಮಯವು ತುಂಬಾ ಸೂಕ್ತವಾಗಿದೆ. ಈ ಸಮಯದಲ್ಲಿ ನಕಾರಾತ್ಮಕ ಭಾವನೆಗಳನ್ನು ಮನಸ್ಸಿನಲ್ಲಿ ತರಬಾರದು. ನಕಾರಾತ್ಮ ಭಾವನೆ ದಿನವನ್ನು ಹಾಳು ಮಾಡುತ್ತದೆ. ದಿನ ಪೂರ್ತಿ ಒತ್ತಡಕ್ಕೆ ಕಾರಣವಾಗುತ್ತದೆ. ಇದ್ರಿಂದ ಮಾನಸಿಕ ನೆಮ್ಮದಿ ಸಿಗುವುದಿಲ್ಲ.
ಪ್ರೇಮ ಸಂಬಂಧ : ಬ್ರಹ್ಮ ಮುಹೂರ್ತವನ್ನು ದೇವರ ಪೂಜೆಯ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮರೆತೂ ಶಾರೀರಿಕ ಸಂಬಂಧ (Physcial Relatinship) ಬೆಳೆಸಬಾರದು. ಶಾಸ್ತ್ರಗಳ ಪ್ರಕಾರ, ಈ ಸಮಯದಲ್ಲಿ ಲೈಂಗಿಕತೆಯನ್ನು ನಿಷೇಧಿಸಲಾಗಿದೆ. ಇದ್ರಿಂದ ಅನಾರೋಗ್ಯ ನಿಮ್ಮನ್ನು ಕಾಡುತ್ತದೆ. ಜೀವನ ಅಳಿವಿನತ್ತ ಸಾಗುತ್ತದೆ ಎಂದು ನಂಬಲಾಗಿದೆ.
ಬ್ರಹ್ಮ ಮುಹೂರ್ತದಲ್ಲಿ ಆಹಾರ ಸೇವಿಸಬೇಡಿ : ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಆಹಾರ ಸೇವನೆ ಮಾಡ್ತಾರೆ. ಬೆಡ್ ಕಾಫಿ ಅಥವಾ ಟೀ ಬೇಕು. ಇನ್ನು ಕೆಲವರು ಬ್ರಹ್ಮ ಮುಹೂರ್ತದಲ್ಲಿಯೇ ಆಹಾರ ಸೇವನೆ ಶುರು ಮಾಡ್ತಾರೆ. ಈ ಅಭ್ಯಾಸವು ಆರೋಗ್ಯದ ದೃಷ್ಟಿಯಿಂದ ತುಂಬಾ ಕೆಟ್ಟದು. ಬೆಳಿಗ್ಗೆ ಎದ್ದ ತಕ್ಷಣ ಅಥವಾ ಬ್ರಹ್ಮ ಮುಹೂರ್ತದ ಸಮಯದಲ್ಲಿ ಆಹಾರವನ್ನು ಸೇವಿಸಬಾರದು. ಈ ಸಮಯದಲ್ಲಿ ಆಹಾರ ಸೇವನೆ ಮಾಡಿದ್ರೆ ನಿಮ್ಮನ್ನು ರೋಗ ಆವರಿಸುತ್ತದೆ.
ಕನ್ನಡಿ (Mirror) : ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡ್ಬಾರದು ಎಂಬ ನಂಬಿಕೆಯಿದೆ. ಬ್ರಹ್ಮ ಮುಹೂರ್ತವಾಗಿರಲಿ ಇಲ್ಲ ಬೇರೆ ಯಾವುದೇ ಮುಹೂರ್ತವಾಗಿರಲಿ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡ್ಬೇಡಿ.
ವಂಚನೆಗೆ ಒಳಗಾದಾಗ ಯಾವ ರಾಶಿ ಹೇಗೆ ಪ್ರತಿಕ್ರಿಯಿಸುತ್ತೆ?
ಹಿಂಸಾತ್ಮಕ ಪ್ರಾಣಿಗಳ ಚಿತ್ರ : ಬೆಳಿಗ್ಗೆ ಎದ್ದ ತಕ್ಷಣ ಸಿಂಹ, ಹುಲಿಯಂತಹ ಕಾಡು ಪ್ರಾಣಿಗಳ ಚಿತ್ರವನ್ನು ನೋಡಬಾರದು. ಇದು ಮನಸ್ಸನ್ನು ಚಂಚಲಗೊಳಿಸುತ್ತದೆ. ಇದ್ರಿಂದಾಗಿ ಇಡೀ ದಿನ ಹಾಳಾಗುತ್ತದೆ. ಮನಸ್ಸು ಕ್ರೂರವಾಗಿರುತ್ತದೆ.
Numerology Today: ಈ ಸಂಖ್ಯೆ ನಿಮ್ಮ ನಂಬರ್ ಆಗಿದ್ದರೆ, ನಿಮಗಿಂದು ಕಾದಿದೆ ಗುರಿ ಸಾಧನೆಯ ಖುಷಿ
ನೆರಳು : ಹಾಗೆಯೇ ಬ್ರಹ್ಮ ಮುಹೂರ್ತದಲ್ಲಿ ಎದ್ದವರು ತಮ್ಮ ನೆರಳನ್ನು ನೋಡಿಕೊಳ್ಳಬಾರದು. ನೆರಳು ನೋಡಿದ್ರೆ ಅನವಶ್ಯಕ ಭಯ ಹಾಗೂ ಒತ್ತಡ (Stress) ನಿಮ್ಮನ್ನು ಕಾಡಲು ಶುರುವಾಗುತ್ತದೆ.