Numerology Today: ಈ ಸಂಖ್ಯೆ ನಿಮ್ಮ ನಂಬರ್ ಆಗಿದ್ದರೆ, ನಿಮಗಿಂದು ಕಾದಿದೆ ಗುರಿ ಸಾಧನೆಯ ಖುಷಿ

ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಈ ದಿನದ ಭವಿಷ್ಯವೇನು ಎಂಬುದನ್ನು ತಿಳಿಯಿರಿ. ನಿಮ್ಮ ಸಂಖ್ಯೆ ಯಾವುದೆಂಬುದನ್ನು ಕಂಡುಕೊಳ್ಳಲು, ನಿಮ್ಮ ಜನ್ಮ ದಿನಾಂಕದ ಅಂಕೆಗಳನ್ನು ಸೇರಿಸಿ. ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ 23 ಆಗಿದ್ದರೆ 2 + 3 = 5. 5 ನಿಮ್ಮ ಸಂಖ್ಯೆಯಾಗಿರುತ್ತದೆ. ಈಗ ನೀವು ಸಂಖ್ಯೆ 5ರ ಮೇಲೆ ನಿಮ್ಮ ಸಂಖ್ಯಾಶಾಸ್ತ್ರ(Numerology)ದ ಮುನ್ಸೂಚನೆಯನ್ನು ಪರಿಶೀಲಿಸಬೇಕು. 

Daily Numerology predictions of June 14th 2022 in Kannada SKR

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28 ರಂದು ಜನಿಸಿದ ಜನರು)
ಮನೆ ಮತ್ತು ವೃತ್ತಿ ಎರಡರಲ್ಲೂ ಸರಿಯಾದ ಸಮನ್ವಯವನ್ನು ನಿರ್ವಹಿಸಲಾಗುವುದು. ಪ್ರಯಾಣ ಪ್ರಯೋಜನಕಾರಿಯಾಗಿದೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಸಂಬಂಧಗಳನ್ನು ಬಲಪಡಿಸಬಹುದು. ಕೋಪ ಮತ್ತು ಮೊಂಡುತನದ ಸ್ವಭಾವ ನಿಯಂತ್ರಿಸಿ. ಆದಾಯದಲ್ಲಿ ಕಡಿತ ಮತ್ತು ವೆಚ್ಚಗಳ ಹೆಚ್ಚಳ. ಖಿನ್ನತೆ ಅನುಭವಿಸಬಹುದು.

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ನೀವು ಪ್ರಯತ್ನಿಸುತ್ತಿದ್ದ ಗುರಿಯನ್ನು ಇಂದು ಸಾಧಿಸಬಹುದು. ಪ್ರಭಾವಿ ವ್ಯಕ್ತಿಗಳೊಂದಿಗೆ ಉತ್ತಮ ಸಂಪರ್ಕ ಸ್ಥಾಪಿಸಬಹುದು. ಆರ್ಥಿಕ ಚಟುವಟಿಕೆಯಲ್ಲಿನ ಮಂದಗತಿಯಿಂದ ಆತಂಕ. ಕೆಲಸದತ್ತ ಗಮನ ಹರಿಸುವ ಅವಶ್ಯಕತೆಯಿದೆ. ಇದುವರೆಗೆ ಕ್ಷೀಣಿಸುತ್ತಿದ್ದ ವ್ಯಾಪಾರ ಚಟುವಟಿಕೆಗಳು ಈಗ ಸುಧಾರಿಸಲಿವೆ. ಕೌಟುಂಬಿಕ ವಾತಾವರಣ ಸಂತೋಷವಾಗಿರಬಹುದು. ಅಲರ್ಜಿ ಕಾಡಬಹುದು.

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಹಿರಿಯರ ಬೆಂಬಲ ಮತ್ತು ಸಹಕಾರ ಇರಲಿದೆ. ಮಂಗಲ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ. ಸ್ನೇಹಿತರು ಮತ್ತು ಸಂಬಂಧಿಕರ ಭೇಟಿ. ಯಾವುದೇ ಸಮಸ್ಯೆ ಪರಿಹರಿಸುವಲ್ಲಿ ಕೋಪದ ಬದಲು ಬುದ್ಧಿವಂತಿಕೆಯಿಂದ ವರ್ತಿಸಿ. ಮಕ್ಕಳನ್ನು ಅತಿಯಾಗಿ ನಿಯಂತ್ರಿಸಬೇಡಿ. ವ್ಯವಹಾರ ಸಂಬಂಧಿತ ಚಟುವಟಿಕೆಗಳಲ್ಲಿ ಜನರೊಂದಿಗೆ ಪಾರದರ್ಶಕತೆ ಹೊಂದಿರುವುದು ಅವಶ್ಯಕ. ಮದುವೆ ಮಧುರವಾಗಿರುತ್ತದೆ.

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ಆರ್ಥಿಕ ಚಟುವಟಿಕೆಗಳಿಂದ ಲಾಭ. ಯುವಕರು ತಮ್ಮ ವೃತ್ತಿಜೀವನದ ಬಗ್ಗೆ ಜಾಗರೂಕರಾಗಬೇಕು. ಮನೆಯ ಯಾವುದೇ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಬಹುದು. ಬಿಡುವಿಲ್ಲದ ದಿನ. ವ್ಯಾಪಾರ ಚಟುವಟಿಕೆಗಳು ಸುಗಮವಾಗಿ ನಡೆಯುತ್ತವೆ, ಮನೆ ಮತ್ತು ವ್ಯಾಪಾರದ ನಡುವೆ ಸರಿಯಾದ ಸಮನ್ವಯ ಕಾಪಾಡಿಕೊಳ್ಳುವಿರಿ. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಆಳಲು ಬಿಡಬೇಡಿ.

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ಮನೆಯ ಆರೈಕೆ ಮತ್ತು ಸೌಕರ್ಯಗಳಿಗಾಗಿ ಶಾಪಿಂಗ್ ಮಾಡುವಿರಿ. ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಇರುವುದು. ಸಹೋದರರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ. ಖರ್ಚು ಮಾಡುವಾಗ ಬಜೆಟ್ ಬಗ್ಗೆ ಗಮನವಿರಲಿ. ಸಣ್ಣ ವಿಷಯಕ್ಕೆ ಪತಿ-ಪತ್ನಿಯ ನಡುವೆ ಜಗಳ ಉಂಟಾಗಬಹು. ತಲೆನೋವು ಕಾಡುವುದು.

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ಮಕ್ಕಳ ಯಾವುದೇ ಯಶಸ್ಸಿನಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಇದು ಧಾರ್ಮಿಕ ಯೋಜನೆ ಕಾರ್ಯಕ್ರಮವೂ ಆಗಿರಬಹುದು. ನಿಕಟ ಸಂಬಂಧಿಯೊಂದಿಗೆ ವೈಯಕ್ತಿಕ ವಿಷಯವು ವಿವಾದದ ಸ್ಥಿತಿಗೆ ಕಾರಣವಾಗಬಹುದು. ನಿಮ್ಮ ಅಹಂ ಮತ್ತು ಕೋಪವನ್ನು ನಿಯಂತ್ರಿಸಿ. ಹಣಕಾಸಿನ ಹೂಡಿಕೆಗೆ ಬಂದಾಗ ಚಿಂತನಶೀಲ ನಿರ್ಧಾರ ತೆಗೆದುಕೊಳ್ಳಿ. ಗ್ಯಾಸ್, ಮಲಬದ್ಧತೆ, ಕೀಲು ನೋವು ಕಾಡಬಹುದು.

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ಹಣಕಾಸಿನ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸಿ. ನಿಕಟ ಸಂಬಂಧಿಗಳೊಂದಿಗೆ ಕುಟುಂಬ ಪುನರ್ಮಿಲನ ಇರುತ್ತದೆ. ಬಹಳ ಸಮಯದ ನಂತರ ನೀವು ವಿಶ್ರಾಂತಿ ಮತ್ತು ಸಂತೋಷವನ್ನು ಅನುಭವಿಸುವಿರಿ. ಮನೆಯ ಯಾವುದೇ ಸದಸ್ಯರ ಆರೋಗ್ಯ ಸಮಸ್ಯೆ ಕಾಡಬಹುದು. ಇಂದು ಯಾವುದೇ ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಬೇಡಿ. ಮನೆಯ ವ್ಯವಹಾರಗಳಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಬೇಡಿ. 

ಲಕ್ಷ್ಮೀ ನಾರಾಯಣ ಯೋಗದಿಂದ ಈ ನಾಲ್ಕು ರಾಶಿಗಳಿಗೆ ಬಂಪರ್ ಅದೃಷ್ಟ

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ಸ್ಥಳಾಂತರ ಯೋಜಿಸುತ್ತಿದ್ದರೆ, ನೀವು ಇಂದು ಚಟುವಟಿಕೆಗಳನ್ನು ಪ್ರಾರಂಭಿಸಬಹುದು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯ ಕಳೆಯಿರಿ. ಇದು ನಿಮ್ಮ ವ್ಯಕ್ತಿತ್ವದಲ್ಲಿ ಧನಾತ್ಮಕ ಬದಲಾವಣೆಯನ್ನು ತರಬಹುದು. ಅತ್ತೆಯೊಂದಿಗೆ ಸಂಬಂಧವನ್ನು ಸುಧಾರಿಸಿ. ಯಾರಿಗೂ ಸಾಲ ಕೊಡಬೇಡಿ. ಅವರು ಮರಳಿ ಬರುವ ಸಾಧ್ಯತೆ ಇಲ್ಲ. ಔದ್ಯೋಗಿಕ ಚಟುವಟಿಕೆಗಳು ಸಾಮಾನ್ಯವಾಗಿರಬಹುದು. ಪತಿ ಪತ್ನಿ ಕಲಹ ಇರುವುದು. ಹೊಟ್ಟೆ ನೋವು ಮತ್ತು ಮಲಬದ್ಧತೆ ಕಾಡುವುದು.

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ಹಣ ಮರಳಿ ಬಂದು ಅಥವಾ ಬಹಳ ದಿನದಿಂದ ಅಂಟಿಕೊಂಡಿದ್ದ ಕೆಲಸ ಪೂರ್ಣವಾಗಿ ಒತ್ತಡದಿಂದ ಮುಕ್ತರಾಗಬಹುದು. ನಿಕಟ ಸಂಬಂಧಿಯೊಂದಿಗೆ ಸಂಬಂಧಗಳು ಮತ್ತೆ ಸಿಹಿಯಾಗಬಹುದು. ನಿರ್ಧಾರ ತೆಗೆದುಕೊಳ್ಳಲು ನಿಮಗೆ ಕಷ್ಟವಾಗಿದ್ದರೆ, ಹಿರಿಯರನ್ನು ಸಂಪರ್ಕಿಸಿ. ಈ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣದ ಧನಾತ್ಮಕ ಫಲಿತಾಂಶಗಳು ಲಭ್ಯವಿರುವುದಿಲ್ಲ. ಸಮಸ್ಯೆಗಳು ನಿಮ್ಮ ಕುಟುಂಬ ಜೀವನದಲ್ಲಿ ಮೇಲುಗೈ ಸಾಧಿಸಲು ಬಿಡಬೇಡಿ. 

Latest Videos
Follow Us:
Download App:
  • android
  • ios