ಏಪ್ರಿಲ್ 25ರ ಬೆಳಗಿನ ಜಾವದಲ್ಲಿ ಬುಧ ಗ್ರಹವು ವೃಷಭ ರಾಶಿಗೆ ಕಾಲಿಡುತ್ತಿದೆ. ಇದೇ ರಾಶಿಯಲ್ಲಿ ಬುಧವು ಜುಲೈ 2ರವರೆಗೂ ಇರಲಿದೆ. ಇದರಿಂದ 4 ರಾಶಿಗಳ ಜೀವನದಲ್ಲಿ ಸಂತಸ ಚಿಮ್ಮಲಿದೆ. 

ಬುಧ ಎಂದರೆ ಬುದ್ಧಿಕಾರಕ ಗ್ರಹ. ತಾರಾ ಮತ್ತು ಚಂದ್ರನ ಮಗನಾಗಿರುವ ಬುಧ ಗ್ರಹದ ಮಲತಂದೆ ಗುರುವಾಗಿದ್ದಾನೆ. ಬುಧನು ಮಾತು, ಬುದ್ಧಿವಂತಿಕೆ, ಹಾಸ್ಯ ಮಾತ್ರವಲ್ಲದೆ ತಾರ್ಕಿಕ ಮಾತು ಮತ್ತು ವಾದ ಮಾಡುವ ಶಕ್ತಿಯನ್ನು ನಿಯಂತ್ರಿಸುತ್ತಾನೆ. ಅಲ್ಲದೆ, ವ್ಯಾಪಾರ ಮತ್ತು ವಾಣಿಜ್ಯ, ಶಿಕ್ಷಣ, ಸಮೂಹ ಸಂವಹನ, ಬರವಣಿಗೆಯ ಶಕ್ತಿ, ಪುಸ್ತಕಗಳು, ಹಾಸ್ಯ, ವಿದ್ವಾಂಸರು ಮತ್ತು ಜ್ಯೋತಿಷಿಗಳ ಗ್ರಹವಾಗಿದೆ. 

ಬುಧ(Mercury) ಗ್ರಹವು ಈ ತಿಂಗಳ ಎರಡನೇ ವಾರ ಆರಂಭದಲ್ಲಿ ರಾಶಿ ಪರಿವರ್ತನೆ ಮಾಡಿತ್ತು. ಇದೀಗ ಮತ್ತೊಮ್ಮೆ ಬುಧ ಗ್ರಹವು ಪರಿವರ್ತನೆಯಾಗುತ್ತಿದ್ದು, ಏಪ್ರಿಲ್ 25ರಂದು ವೃಷಭ ರಾಶಿಗೆ ಪ್ರವೇಶಿಸುತ್ತಿದೆ. ಜುಲೈ 2ರವರೆಗೂ ಬುಧವು ಅಲ್ಲಿಯೇ ಇರಲಿದೆ. ಬುಧನ ಈ ನಡೆಯಿಂದಾಗಿ ಕೆಲವು ರಾಶಿಗಳಿಗೆ ವೃತ್ತಿ(career)ಬದುಕಿನಲ್ಲಿ ಯಶಸ್ಸು ದೊರೆಯುತ್ತಿದೆ. ಕೆಲ ರಾಶಿಯ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೆಚ್ಚಲಿದೆ. ಸ್ಮರಣ ಶಕ್ತಿ ಹೆಚ್ಚಾಗಲಿದೆ. ಹಣ ಉಳಿತಾಯ ಸಾಧ್ಯವಾಗಲಿದೆ. ಹಾಗಾದರೆ, ವೃಷಭದಲ್ಲಿ ಬುಧ ಗೋಚಾರದಿಂದ ಯಾವೆಲ್ಲ ರಾಶಿಗಳು ಲಾಭ ಪಡೆಯಲಿವೆ ನೋಡೋಣ. 

ವೃಷಭ ರಾಶಿ(Taurus): ಈ ರಾಶಿಯವರಿಗೆ ಬುಧನ ಈ ಸಂಚಾರವು ಪ್ರಯೋಜನಕಾರಿಯಾಗಿದೆ. ಸಂಗಾತಿಗೆ ಪ್ರತಿಯೊಂದು ಕೆಲಸದಲ್ಲೂ ಸಂಪೂರ್ಣ ಬೆಂಬಲ ದೊರೆಯುತ್ತದೆ. ಆರ್ಥಿಕ ಜೀವನವು ಬಲಗೊಳ್ಳುತ್ತದೆ. ಹೊಸ ಮನೆ ಕಟ್ಟಲು ಇಚ್ಛಿಸುವವರು ಈ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಹೂಡಿಕೆಯ ವಿಷಯದಲ್ಲಿ ಈ ಚಲನೆಯು ತುಂಬಾ ಉತ್ತಮವಾಗಿದೆ ಎಂದು ಸಾಬೀತುಪಡಿಸುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಉದ್ಯೋಗಸ್ಥರಿಗೆ ಯಶಸ್ಸು(success) ಸಿಗಲಿದೆ. ನೀವು ವ್ಯವಹಾರದಲ್ಲಿ ಉತ್ತಮ ವ್ಯವಹಾರಗಳನ್ನು ಮಾಡಲು ಸಾಧ್ಯವಾಗುತ್ತದೆ.

ಗುಲಾಬಿ ಹೀಗೆ ಬಳಸಿದ್ರೆ ನಿಮ್ಮೆಡೆ ಹರಿಯುವುದು ದುಡ್ಡೋ ದುಡ್ಡು!

ಕರ್ಕಾಟಕ ರಾಶಿ(Cancer): ಈ ಬುಧ ಗೋಚಾರ ಅವಧಿಯಲ್ಲಿ ನಿಮ್ಮ ಆದಾಯ(income)ದಲ್ಲಿ ಉತ್ತಮ ಏರಿಕೆ ಕಾಣುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಅವಕಾಶಗಳಿವೆ. ನೀವು ಒಂದಕ್ಕಿಂತ ಹೆಚ್ಚು ಮಾಧ್ಯಮಗಳ ಮೂಲಕ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಸಮಯವು ಅನುಕೂಲಕರವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಎಲ್ಲೋ ಸಿಕ್ಕಿಕೊಂಡು ವರ್ಷಗಳಿಂದ ಕೈಗೆ ಸಿಗದ ಹಣವನ್ನೂ ಪಡೆಯಲು ಅವಕಾಶಗಳಿವೆ. 

ಧನು ರಾಶಿ(Sagittarius): ಬುಧನು ಧನು ರಾಶಿಯವರಿಗೆ ಸಾಕಷ್ಟು ಒಳಿತನ್ನು ಮಾಡಲಿದ್ದಾನೆ. ಈ ರಾಶಿಗೆ ಸಾಡೇಸಾತಿ ಮುಗಿವ ಸಮಯ ಕೂಡಾ ಇದಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಈ ರಾಶಿಯ ಜನರು ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಪ್ರತಿ ಕೆಲಸದಲ್ಲೂ ಬಾಸ್ ಬೆಂಬಲವನ್ನು ಪಡೆಯಬಹುದು. ಸಹೋದ್ಯೋಗಿಗಳ ನೆರವು ದೊರಕಲಿದೆ. ನಿಮ್ಮ ಹೆಸರು, ಗೌರವ ಹೆಚ್ಚಲಿದೆ. ವ್ಯಾಪಾರ ವ್ಯವಹಾರಗಳು ವಿಸ್ತರಣೆಯಾಗಲಿವೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

ಗ್ರಹಗಳ ಸ್ಥಾನಪಲ್ಲಟ; ಭಯ ಹುಟ್ಟಿಸೋ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ!

ಮೀನ ರಾಶಿ(Pisces): ಬುಧನ ಅನುಗ್ರಹದಿಂದ ನಿಮ್ಮ ಸಂವಹನ ಕೌಶಲ್ಯ(communication skills)ವು ಸುಧಾರಿಸುತ್ತದೆ. ಹೀಗಾಗಿ ವಾಕ್ಚಾತುರ್ಯ ಬೇಡುವ ವೃತ್ತಿಗಳವರಿಗೆ ಅಪಾರ ಲಾಭ, ಹೆಸರು, ಅವಕಾಶಗಳು ದೊರೆಯುವುವು. ಅಲ್ಲದೆ, ಮಾತಿನ ಸುಧಾರಣೆಯು ನಿರುದ್ಯೋಗಿಗಳಿಗೆ ಅವಕಾಶಗಳನ್ನೂ ಕೊಡಿಸುತ್ತದೆ. ದೀರ್ಘಾವಧಿಯ ಹೂಡಿಕೆ ಲಾಭವನ್ನು ನೀಡುತ್ತದೆ. ನೀವು ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಯಾಣದಿಂದ ಕಾರ್ಯಗಳಲ್ಲಿ ಯಶಸ್ಸು ದಕ್ಕುತ್ತದೆ. ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲಾಗುವುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.