ಗುಲಾಬಿ ಹೀಗೆ ಬಳಸಿದ್ರೆ ನಿಮ್ಮೆಡೆ ಹರಿಯುವುದು ದುಡ್ಡೋ ದುಡ್ಡು!

ಹೂವುಗಳಿಗೆ ಅದರದ್ದೇ ಆದ ವಿಶೇಷತೆಗಳು ಇರುತ್ತವೆ. ಇದು ದೇವರಿಗೆ ಹಾಗೂ ಹೆಣ್ಣಿನ ಅಲಂಕಾರಕ್ಕೆ ಮಾತ್ರವಲ್ಲದೆ, ನಾನಾ ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಔಷಧೀಯ ಗುಣಗಳನ್ನೂ ಹೊಂದಿದೆ. ಇದರಲ್ಲಿ ಗುಲಾಬಿ ಹೂವು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಈ ಗುಲಾಬಿ ಹೂವಿನ ಮೂಲಕ ಆರ್ಥಿಕ ಸಂಕಷ್ಟಗಳನ್ನು, ಆರೋಗ್ಯ ಸಮಸ್ಯೆಗಳನ್ನು ಸಹ ಪರಿಹರಿಸಿಕೊಳ್ಳಬಹುದಾಗಿದ್ದು, ಅದರ ಬಗ್ಗೆ ನೋಡೋಣ...

Astro Tips The way to make a profit out of a rose!

ದೇವರ (God) ಅಲಂಕಾರಕ್ಕೆ ಹೂವು (Flower) ಬೇಕು, ಹೆಣ್ಣಿನ ಅಂದ ಹೆಚ್ಚಳಕ್ಕೂ ಹೂವು ಬೇಕು. ಜೇನುಗಳಿಗೆ (Honey) ಮಕರಂದ ಹೀರಲೂ ಹೂವು ಬೇಕು. ಸುಗಂಧ ದ್ರವ್ಯಕ್ಕೂ (Perfume) ಹೂವು ಬೇಕು. ಹೀಗೆ ಹೂವುಗಳಿಂದ ಸಾಕಷ್ಟು ರೀತಿಯ ಪ್ರಯೋಜನಗಳಿವೆ. ಅದೇ ರೀತಿ ಹೂವುಗಳ ರಾಜನೆಂದು ಗುಲಾಬಿ ಹೂವಿಗೆ ಕರೆಯಲಾಗುತ್ತದೆ. ಕೆಂಪು ಗುಲಾಬಿಯನ್ನು ಪ್ರೀತಿಯ (Love) ಸಂಕೇತವಾದರೆ, ಹಳದಿ ಗುಲಾಬಿಯು ಸ್ನೇಹದ (Frienship) ಸಂಕೇತವಾಗಿದೆ. ಇನ್ನು ಬಿಳಿ ಗುಲಾಬಿಯು ಶಾಂತಿಯ (Peace) ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಆದರೆ, ಈ ಗುಲಾಬಿಯು ನಿಮಗೆ ಅದೃಷ್ಟದ (Luck) ಮಾರ್ಗವನ್ನು ತೋರಿಸುತ್ತದೆ ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಗುಲಾಬಿ ಹೂವಿನ ಮೂಲಕ ಹಲವಾರು ಸಮಸ್ಯೆಗಳಿಗೆ (Problem) ಪರಿಹಾರವನ್ನು (Solution) ಕಂಡುಕೊಳ್ಳಬಹುದು ಎಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. ಹೀಗೆ ಆರ್ಥಿಕ ಪ್ರಗತಿಯನ್ನು (Economic Growth) ಕಾಣಬಲ್ಲ ಗುಲಾಬಿ ಹೂವಿನ ಕೆಲವು ಸೂತ್ರಗಳ ಬಗ್ಗೆ ನೋಡೋಣ... 

ಆಸೆಯ ಈಡೇರಿಕೆಗಾಗಿ
ಯಾವುದೇ ಶುಕ್ಲ ಪಕ್ಷದ ಮೊದಲ ಮಂಗಳವಾರದಂದು (Tuesday) ಹನುಮಂತನಿಗೆ 11 ಹೊಸ ಗುಲಾಬಿಗಳನ್ನು ಅರ್ಪಿಬೇಕು. ಸತತ 11 ಮಂಗಳವಾರಗಳ ಕಾಲ ಈ ಪರಿಹಾರವನ್ನು ಮಾಡುವ ಮೂಲಕ, ಹನುಮಂತನ ಕೃಪೆಗೆ ಪಾತ್ರರಾಗಬಹುದು. 

ದಿಢೀರ್ ಹಣ ಪ್ರಾಪ್ತಿಗೆ 
ನೀವು ಇದ್ದಕ್ಕಿದ್ದಂತೆ ಹಣವನ್ನು (Money) ಪಡೆಯಲು ಬಯಸಿದರೆ, ಖಂಡಿತವಾಗಿಯೂ ಇದಕ್ಕಾಗಿ ಈ ಪರಿಹಾರವನ್ನು ಪ್ರಯತ್ನಿಸಿ. ಸಂಜೆ, ಗುಲಾಬಿ ಹೂವಿನ ಮೇಲೆ ಕರ್ಪೂರದ ತುಂಡನ್ನು ಹಾಕಿ ಅದನ್ನು ಸುಡಬೇಕು. ಬಳಿಕ ಅದನ್ನು ತಾಯಿ ಲಕ್ಷ್ಮಿಗೆ (Goddess Laxmi) ಅರ್ಪಿಸಬೇಕು. ಆದರೆ, ಇದನ್ನು ಬಹಳ ಭಕ್ತಿ, ಶ್ರದ್ಧಾಪೂರ್ವಕವಾಗಿ ಮಾಡಬೇಕು. 

ಇದನ್ನು ಓದಿ: ಮನಸ್ತಾಪಗಳ ಬೇಗ ಮರೆಯುವ ಮುದ್ದು ಮನಸಿನ ರಾಶಿಗಳಿವು

ಮನೆಯಲ್ಲಿ (Home) ಕೃಪೆ ಇರಲು
ನಿಮ್ಮ ಮನೆಯಲ್ಲಿ ಸದಾ ದೇವರ ಹಾಗೂ ಲಕ್ಷ್ಮೀ ಕೃಪೆಯು ಇರಬೇಕೆಂದರೆ, ಎಂದಿಗೂ ಸಹ ಹಣದ ಕೊರತೆ ಆಗಬಾರದು ಎಂದು ನೀವು ಬಯಸಿದರೆ, ಇದಕ್ಕಾಗಿ ಮಂಗಳವಾರದಂದು ಚಂದನ, ಕೆಂಪು ಗುಲಾಬಿ ಮತ್ತು ಕುಂಕುಮವನ್ನು ತೆಗೆದುಕೊಂಡು ಕೆಂಪು ಬಟ್ಟೆಯಲ್ಲಿ ಕಟ್ಟಿ ಒಂದು ವಾರಗಳ ಕಾಲ ದೇವರ ಕೋಣೆಯಲ್ಲಿ ಇಡಬೇಕು. ಒಂದು ವಾರದ ನಂತರ ಆ ಕೆಂಪು ಬಟ್ಟೆಯ ಗಂಟನ್ನು ಮನೆ ಅಥವಾ ಅಂಗಡಿಯ (Shop) ಕಪಾಟಿನಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಹಣವು ಪೋಲಾಗದೆ ನಿಮ್ಮ ಬಳಿ ಸದಾ ಹಣದ ಹರಿವು ಇರುವಂತೆ ಮಾಡುತ್ತದೆ. 

ಸಾಲದ ಪರಿಹಾರಕ್ಕೆ ಹೀಗೆ ಮಾಡಿ
ಸಂಪೂರ್ಣ ದಳಗಳುಳ್ಳ ಐದು (Five) ಗುಲಾಬಿಗಳನ್ನು ತೆಗೆದುಕೊಳ್ಳಬೇಕು. ಬಳಿಕ 1.5 ಮೀಟರ್ ಬಿಳಿ ಬಟ್ಟೆಯನ್ನು ತೆಗೆದುಕೊಂಡು ಅದರ ನಾಲ್ಕು ಮೂಲೆಗಳಲ್ಲಿ 4 ಗುಲಾಬಿಗಳನ್ನು ಕಟ್ಟಬೇಕು. ಐದನೇ ಗುಲಾಬಿಯನ್ನು ಮಧ್ಯದಲ್ಲಿ ಇರಿಸಿ ಅದನ್ನು ಗಂಟು ಕಟ್ಟಬೇಕು. ಇದಾದ ಬಳಿಕ ಅದನ್ನು ತೆಗೆದುಕೊಂಡು ಹರಿಯುವ ನದಿಗೆ ಹಾಕಬೇಕು. ಈ ಪರಿಹಾರವು ಸಾಲ ಪರಿಹಾರಕ್ಕೆ ಕಾರಣವಾಗುತ್ತದೆ. ಜೊತೆಗೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಣಬಹುದಾಗಿದೆ. 

ಉದ್ಯೋಗಕ್ಕಾಗಿ (Job) ಗುಲಾಬಿ ಪರಿಹಾರ
ಯಾವುದೇ ಒಂದು ಮಂಗಳವಾರದಿಂದ 40 ದಿನಗಳ ಕಾಲ ಬೆಳಗ್ಗೆ ಬರಿಗಾಲಿನಲ್ಲಿ ಹನುಮಂತನ (Hanuman) ದೇವಾಲಯಕ್ಕೆ ಹೋಗಿ ಕೆಂಪು ಗುಲಾಬಿಗಳನ್ನು ಅರ್ಪಿಸಬೇಕು. ಹಾಗೆ ಮಾಡುವುದರಿಂದ, ಶೀಘ್ರದಲ್ಲೇ ಉದ್ಯೋಗವನ್ನು ಪಡೆದುಕೊಳ್ಳಬಹುದು. 

ಇದನ್ನು ಓದಿ: ಈ ಮಂತ್ರ ಪಠಣ ಮನೆಗೂ, ಮನಸ್ಸಿಗೂ ತರುತ್ತೆ ಶಾಂತಿ!

ರೋಗಗಳ ವಾಸಿಗೂ ಪರಿಹಾರ (Remedy for diseases)
ಮನೆಯ ಸದಸ್ಯರೊಬ್ಬರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ, ವೀಳ್ಯದೆಲೆ, ಗುಲಾಬಿ ಹೂವು ಮತ್ತು ಕೆಲವು ಸಿಹಿತಿಂಡಿಗಳನ್ನು ರೋಗಿಯ ಮೇಲೆ 31 ಬಾರಿ ಸುಳಿಯಬೇಕು. ಬಳಿಕ ಅದನ್ನು ನಾಲ್ಕು ರಸ್ತೆ ಕೂಡುವಲ್ಲಿ ಇಟ್ಟುಬರಬೇಕು. ಹೀಗೆ ಮಾಡುವುದರಿಂದ ರೋಗಿಯ ಸ್ಥಿತಿಯಲ್ಲಿ ತ್ವರಿತವಾಗಿ ಸುಧಾರಣೆಯನ್ನು ಕಾಣಬಹುದಾಗಿದೆ. 

Latest Videos
Follow Us:
Download App:
  • android
  • ios