Focus ಮಾಡಲು ಕಷ್ಟವೇ? ಈ ಮಂತ್ರ ಪಠಿಸಿ, ಏಕಾಗ್ರತೆ ಹೆಚ್ಚುತ್ತೆ!
ವಿದ್ಯಾರ್ಥಿಗಳನ್ನಂತೂ ಬೆಂಬಿಡದೇ ಕಾಡುತ್ತೆ ಚಂಚಲತೆ. ಹತ್ತು ನಿಮಿಷವೂ ಏಕಾಗ್ರತೆಯಿಂದ ಓದಲು ಕೆಲವರಿಗೆ ಆಗೋದಿಲ್ಲ. ಮನಸ್ಸು ಅನ್ನುವುದೇ ಹರಿಯೋ ನೀರಿದ್ದಂತೆ. ಅದನ್ನು ಹಿಡಿದಿಡಿಯಲು ಸ್ವಲ್ಪ ಜಾಸ್ತಿ ಶ್ರಮಿಸಬೇಕು. ಈ ಮಂತ್ರಗಳು ಮನಸ್ಸಿನ ಏಕಾಗ್ರತೆ ಹೆಚ್ಚಿಸುತ್ತೆ.
ಬುಧ(mercury) ಬುದ್ಧಿಶಕ್ತಿ ಮೇಲೆ ಪ್ರಭಾವ ಬೀರುವ ಗ್ರಹ. ಮಕ್ಕಳು ಹಾಗೂ ಹಿರಿಯಲ್ಲಿ ಏಕಾಗ್ರತೆ ಹೆಚ್ಚಿಸಲು ಕೆಲವು ಸ್ತ್ರೋತ್ರ, ಮಂತ್ರಗಳು ಸಹಕಾರಿಯಾಗುತ್ತವೆ. ಅದರಲ್ಲಿಯೂ ವಿದ್ಯಾರ್ಥಿಗಳು(students) ಪರೀಕ್ಷಾ ಸಮಯದಲ್ಲಿ ಕೆಲವು ಮಂತ್ರಗಳನ್ನು ಪಠಿಸುವ ಮೂಲಕ ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಬಾದಾಮಿಯಂಥ ಕೆಲವು ಆಹಾರ ಪದಾರ್ಥಗಳೂ ಬುದ್ಧಿ ಶಕ್ತಿ ಹೆಚ್ಚಲು ಸಹಕರಿಸುತ್ತೆ. ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಕೆಲವು ಶ್ಲೋಕಗಳನ್ನು ಪಠಿಸುವುದರಲ್ಲೂ ಹೆಚ್ಚು ಅನುಕೂಲವಾಗುತ್ತದೆ. ಕೆಲವು ಮಂತ್ರಗಳು ನಮ್ಮ ಮನಸ್ಸು ಮತ್ತು ಏಕಾಗ್ರತೆ ಮೇಲೆ ಅತ್ಯುತ್ತಮ ಪರಿಣಾಮ ಬೀರಬಲ್ಲದು.
ಬುಧ ಬುದ್ಧಿಶಕ್ತಿ ಮೇಲೆ ಪರಿಣಾಮ ಬೀರುವ ಗ್ರಹ(planet). ವಯಸ್ಕರಲ್ಲಿ ವ್ಯವಹಾರ ಜ್ಞಾನದ ಅಭಿವೃದ್ಧಿಗೆ ಹಾಗೂ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಕಸರತ್ತು ಮಾಡಬೇಕು. ಏಕಾಗ್ರತೆ ಕೊರತೆಯಿಂದ ಮಕ್ಕಳಲ್ಲಿ ವಿಶ್ವಾಸವೇ ಕುಂದುತ್ತದೆ. ಇದು ಮಗುವಿನ ಭವಿಷ್ಯದ ಮೇಲೂ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಪರಿಹಾರವೆಂಬಂತೆ ಕೆಲವು ಶ್ಲೋಕ, ಮಂತ್ರಗಳನ್ನು ವಿವರಿಸಲಾಗಿದೆ. ಇವುಗಳನ್ನು ಪಠಿಸಿದರೆ ಅತ್ಯುತ್ತಮ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ.
ಯಾವ ಶ್ಲೋಕಗಳು ಮನಸ್ಸಿನ ಮೇಲೆ ಬೀರುತ್ತೆ ಪ್ರಭಾವ?
ಜ್ಞಾಪಕ (memory power) ಹಾಗೂ ಬುದ್ಧಿಶಕ್ತಿ ಮೇಲೆ ಪ್ರಭಾವ ಬೀರುವ ಬುಧಗ್ರಹವನ್ನು ಸಂತುಷ್ಟಗೊಳಿಸಲು ದಿನಾಲೂ 'ಓಂ ಬ್ರಾಂ ಬ್ರೌಂ ಸಹ ಬುಧಾಯ ನಮಃ', 'ಓಂ ಬಂ ಬುಧಾಯ ನಮಃ', 'ಓಂ ಐಂ ಶ್ರೀಂ ಶ್ರೀಂ ಬುಧಾಯ ನಮಃ', ಎಂಬ ಶ್ಲೋಕವನ್ನು ದಿನಕ್ಕೆ 108 ಸಾರಿ ಪಠಿಸಬೇಕು. ಈ ಕ್ರಮದಿಂದ ಬುಧ ನಿಮ್ಮ ಮೇಲೆ ಸಂತುಷ್ಟಗೊಳ್ಳುವುದು ಗ್ಯಾರಂಟಿ. ಉತ್ತಮ ಬುದ್ಧಿಶಕ್ತಿಯಿಂದ ಪ್ರತಿಯೊಂದೂ ಹಿಡಿದ ಕಾರ್ಯದಲ್ಲಿ ಯಶಸ್ಸು ಸಿಗೋದು ಗ್ಯಾರಂಟಿ.
ನನ್ನಿಂದಾಗದೆಂದು ಕೈ ಕಟ್ಟಿ ಕೂರೋ ಜಾಯಮಾನ ಈ ರಾಶಿಯವರದ್ದು!
ದುರ್ಗಾ ಸಪ್ತಶತಿ ಮಂತ್ರ
ದುರ್ಗಾ ಸಪ್ತಶತಿಯ 'ಓಂ ಐಂ ಹ್ರೀಂ ಕ್ಲೀಂ ಮಹಾಸರಸ್ವತಿ ದೇವ್ಯಾಯ ನಮಃ' ಎಂಬ ಮಂತ್ರವನ್ನು ಪಠಿಸುತ್ತಾ ದುರ್ಗೆಯನ್ನು ಆರಾಧಿಸಬೇಕು. ಈ ಮಂತ್ರ ಪ್ರತಿನಿತ್ಯ ಜಪಿಸುವುದರಿಂದ ಜ್ಞಾನ ವೃದ್ಧಿಸುತ್ತದೆ. ಬುದ್ಧಿ ಚುರುಕಾಗುತ್ತದೆ. ದುರ್ಗಾ ಮಾತೆ ಆಶೀರ್ವಾದದಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಇದು ಪರೀಕ್ಷೆಯ ಸಮಯದಲ್ಲಿ (Exam Time) ಅಥವಾ ಯಾವುದೇ ಕಾರಣದಿಂದ ಮರೆತುಹೋದ ವಿಷಯಗಳು ಮತ್ತೆ ನೆನಪಾಗುವಂತೆ ಮಾಡಿಕೊಳ್ಳಲು ಸಹಕರಿಸುತ್ತದೆ.
ಬುಧ ಹಾಗೂ ಸೂರ್ಯನ ಪೂಜೆ
ಸಾಮಾನ್ಯವಾಗಿ ಬುಧ ಮತ್ತು ಸೂರ್ಯ (Sun) ಒಟ್ಟಿಗೆ ಇರುತ್ತಾರೆ. ಬುದ್ಧಿಶಕ್ತಿ ಹೆಚ್ಚಿಸಲು ಪ್ರತಿದಿನ ಸೂರ್ಯನನ್ನು ಪೂಜಿಸಬೇಕು. ಮತ್ತೊಂದೆಡೆ, ಸೂರ್ಯ ಮತ್ತು ಬುಧನ ಸಂಯೋಗವು ಬುಧಾದಿತ್ಯ ಯೋಗವನ್ನು ಸೃಷ್ಟಿಸಬಲ್ಲದು. ಸೂರ್ಯನನ್ನು ಆರಾಧಿಸಿದರೆ ಬುದ್ಧಿವಂತಿಕಾ (Intelligent) ಸಾಮರ್ಥ್ಯ ಹೆಚ್ಚಿಸುತ್ತದೆ, ಇದು ಜೀವನದ ಎಲ್ಲಾ ಕ್ಷೇತ್ರಗಳ ಯಶಸ್ಸಿಗೆ ಕಾರಣವಾಗುತ್ತದೆ. ನಿಯಮಿತವಾಗಿ ಸೂರ್ಯ ದೇವನ ದರ್ಶನ ಮಾಡಿ, ಅರ್ಘ್ಯ ಅರ್ಪಿಸುವುದು ಶ್ರೇಷ್ಠ.
ಗಣೇಶನಿಗೆ ಶಮಿ ಎಲೆ ಸಮರ್ಪಣೆ
ಬುದ್ಧಿಶಕ್ತಿಯ ಪ್ರತೀಕ ಗಣೇಶ. ಅವನನ್ನು ಪೂಜಿಸುವುದು ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ಬುಧವಾರ ಐದು ಗಂಟು ದೂರ್ವೆ ಮತ್ತು ಶಮಿ ಎಲೆಗಳನ್ನು ಗಣೇಶನಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಗಣೇಶ ಪ್ರಸನ್ನನಾಗುತ್ತಾನೆ. ಚುರುಕಾದ ಮನಸ್ಸು ಮತ್ತು ಜ್ಞಾಪಕ ಶಕ್ತಿ (Memory Power) ನಿಮ್ಮದಾಗುತ್ತದೆ. ಇದರೊಂದಿಗೆ, ಗಣೇಶ ಅಥರ್ವ ಶೀರ್ಷ ಪಥವನ್ನು ಪಠಿಸಿ, ಬೌದ್ಧಿಕ ಸಾಮರ್ಥ್ಯ ಮತ್ತು ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಅತ್ಯಂತ ಪರಿಣಾಮಕಾರಿ.
ಈ ನಾಲ್ಕು ರಾಶಿಯ ಪತಿ ಮಹಾಶಯರು ನಿಷ್ಠೆಗೆ ಇನ್ನೊಂದು ಹೆಸರು!
ಕೆಲವು ವಸ್ತುಗಳ ದಾನ (Donation)
ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಲು ಬುಧ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು. ಹಸಿರು ಬಟ್ಟೆ (Green Cloth), ಹೆಸರು ಕಾಳು, ಪಾಲಕ್, ಕಂಚು, ತುಪ್ಪ ಇತ್ಯಾದಿ ವಸ್ತುಗಳನ್ನು ದಾನ ಮಾಡಬಹುದು. ಇದರಿಂದ ಬುಧನ ಆಶೀರ್ವಾದ ಸಿಗುತ್ತದೆ. ಜಾತಕದಲ್ಲಿ ಬುಧನ ಸ್ಥಾನ ಬಲಗೊಳ್ಳುತ್ತದೆ. ಇದರಿಂದ ಬುದ್ಧಿಶಕ್ತಿ ಚುರುಕಾಗುವುದಲ್ಲದೇ, ಮಾನಸಿಕ ನೆಮ್ಮದಿಯೂ ದೊರೆಯುತ್ತದೆ. ಇದರೊಂದಿಗೆ ಹಸುವಿಗೆ ಹಸಿರು ಮೇವನ್ನೂ ಕೊಟ್ಟರೆ ಒಳ್ಳೆಯದು.
ಪಚ್ಚೆ (Emerald) ಧಾರಣೆ:
ಕೆಲವರು ಲೆಕ್ಕದಲ್ಲಿ ಮೋಸ ಹೋಗುತ್ತಾರೆ. ಅವರ ಬುದ್ಧಿ ಅನೇಕ ಸಿಕ್ಕುಗಳಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಇದಕ್ಕೆ ಕಾರಣ. ಇದಕ್ಕೆ ಪಚ್ಚೆ ರತ್ನಗಳನ್ನು ಧರಿಸಬಹುದು. ರತ್ನ ಶಾಸ್ತ್ರದಲ್ಲಿ, ಪಚ್ಚೆಯನ್ನು ಬುಧ ಗ್ರಹದ ರತ್ನವೆನ್ನುತ್ತಾರೆ. ಇದನ್ನು ಧರಿಸುವುದರಿಂದ, ಮನಸ್ಸು ಚುರುಕಾಗುತ್ತದೆ ಮತ್ತು ವ್ಯವಹಾರದಲ್ಲಿ ಸಂಪೂರ್ಣವಾಗಿ ಸಕ್ರಿಯವಾಗುತ್ತೀರಿ. ಇದರೊಂದಿಗೆ ಬುದ್ಧಿ, ಮಾತು ಕೂಡ ಚುರುಕಾಗುತ್ತದೆ. ಆದಾಗ್ಯೂ, ಯಾವುದೇ ರತ್ನವನ್ನು (Gems) ಧರಿಸುವ ಮೊದಲು ಉತ್ತಮ ಜ್ಯೋತಿಷಿಯನ್ನು (Astrologer) ಸಂಪರ್ಕಿಸಿದರೆ ಒಳ್ಳೆಯದು.