ನನ್ನಿಂದಾಗದೆಂದು ಕೈ ಕಟ್ಟಿ ಕೂರೋ ಜಾಯಮಾನ ಈ ರಾಶಿಯವರದ್ದು!
ಆ ಹನುಮಂತನಿಗೆ ಲಂಕೆಗೆ ಹಾರೋ ಶಕ್ತಿ ಇದೆ ಅನ್ನುವುದೇ ಗೊತ್ತಿರಲಿಲ್ಲಿವಂತೆ. ಉಳಿದವರು ಹೇಳಿ ಮೋಟಿವೇಟ್ ಮಾಡಿದಾಗ, ಓಕೆ, ನಂಗೂ ಇಂಥದ್ದೊಂದು ಶಕ್ತಿ ಇದೆ ಅಂತ ಸಮುದ್ರವನ್ನೇ ಹಾರಿ, ಸೀತೆ ಇರೋ ಜಾಗ ಹುಡುಕಿದನಂತೆ. ಹಾಗೆ ಕೆಲವರಿಗೆ ತಮ್ಮಲ್ಲಿರೋ ಶಕ್ತಿಯೇ ಗೊತ್ತಿರುವುದಿಲ್ಲ. ತಮ್ಮ ಕೈಯಲ್ಲಿ ಆಗೋಲ್ಲ ಅಂತ ಕೈ ಕಟ್ಟಿ ಕುಳಿತಿರುತ್ತಾರೆ. ಅಷ್ಟಕ್ಕೂ ಅವರು ಯಾವ ರಾಶಿಯಲ್ಲಿ ಹುಟ್ಟಿರುತ್ತಾರೆ?
ಇಲ್ಲ, ನನ್ನಿಂದ ಈ ಕೆಲಸ ಆಗೋಲ್ಲ ಅನ್ನೋ ಮನಸ್ಥಿತಿ ನಿಮ್ಮದಾ? ಇದನ್ನು ಬಿಟ್ಹಾಕು, ಬೇರೆ ಏನಾದರೂ ಮಾಡೋಣ ಅಂತ ಕೂರ್ತೀರಾ? ಅಥವಾ ನಾವೇ ಒಂದು ಕೆಲಸ ಮಾಡಲು ಹೊರಟಾಗ ಬೇರೆಯವರು ಇದು ನಿನ್ನ ಕೈಯಲ್ಲಿ ಆಗೋಲ್ಲ ಬಿಡು ಅಂತ ಹೇಳುವುದ ಕೇಳಿದ್ದೇವೆ. ಇನ್ನೊಬ್ಬರ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳದೇ ಅಂಡರ್ ಎಸ್ಟಿಮೇಟ್ ಮಾಡುವ ಗುಣ ಅನೇಕರದ್ದು. ಇದರಿಂದ ಅವರಲ್ಲಿ ಮಾಡೋ ಶಕ್ತಿ ಇದ್ದರೂ ಆತ್ಮವಿಶ್ವಾಸದ (Confidence) ಕೊರತೆಯಿಂದ ಒಂದು ಹೆಜ್ಜೆ ಹಿಂದೆ ಇಡುತ್ತಾರೆ. ಹೀಗೆ ಹಿಂದಡಿ ಇಡೋ ರಾಶಿ ಕೆಲವರದ್ದು.
ಸಾಮಾನ್ಯವಾಗಿ ಮನುಷ್ಯನಿಗೆ ತಮ್ಮ ಸಾಮರ್ಥ್ಯವೇನು ಎಂಬುವುದೇ ಗೊತ್ತಿರೋಲ್ಲ. ಅನೇಕರು ಆತ್ಮ ವಿಶ್ವಾಸದ ಕೊರತೆಯಿಂದ ಬಳಲುತ್ತಿರುತ್ತಾರೆ. ಆದರೆ, ಇನ್ನೊಬ್ಬರು ಬೆನ್ನು ತಟ್ಟಿದಾಗ ಹುಮ್ಮಸ್ಸು ಹೆಚ್ಚಿಸಿಕೊಂಡು ಕೆಲಸ ಮಾಡಿ, ಯಶಸ್ವಿಗಳಾಗುತ್ತಾರೆ. ಅಷ್ಟಕ್ಕೂ ತಮ್ಮ ಮೇಲೆ ತಮಗೇ ವಿಶ್ವಾಸವಿಲ್ಲದ ರಾಶಿಗಳು ಯಾವೆಲ್ಲ ಬಲ್ಲಿರಾ?
ಕನ್ಯಾ(Virgo) ರಾಶಿ
ಇವರಿಗಂತೂ ಇವರ capacity ಏನೆಂಬುವುದೇ ಗೊತ್ತಿರೋಲ್ಲ. ಇವರನ್ನು ಕನ್ಸಿಡರ್ ಮಾಡೋದು ಎಲ್ಲರ ಟರ್ನ್ ಮುಗಿದ ಮೇಲೆ. ಇವರನ್ನು ಎಲ್ಲರೂ underestiamate ಮಾಡುವುದೇ ಹೆಚ್ಚು. ಅದಕ್ಕೆ ಹಿಂದಿಂದೆ ಉಳಿಯುವ ಇವರ ಸ್ವಭಾವವೇ ಕಾರಣ. ಆದರೆ, ಅಪ್ಪಿ ತಪ್ಪಿ ಅವಕಾಶ ಸಿಕ್ಕಿ ಯಾರಾದರೂ ಮುಂದೆ ತಳ್ಳಿದರೆ, ತಮ್ಮ ಎಬಿಲಿಟಿ (Ability) ಏನೆಂಬುದನ್ನು ಜಗಜ್ಜಾಹೀರು ಮಾಡುತ್ತಾರೆ. ಆದರೆ, ಇವರ ಜವಾಬ್ದಾರಿ ಮೇಲೆ ಬೇರೆಯವರಿಗೆ ನಂಬಿಕೆ ಬರೋದು ಸ್ವಲ್ಪ ಕಷ್ಟ.
ವೃಷಭ (Taurus) ರಾಶಿ
ಇವರು ಹೆಸರಿಗೆ ತಕ್ಕಂತೆ ಗೂಳಿ ಗೂಳಿ ಇದ್ದಂತೆ. ಹಾಗಂಥ ತಮ್ಮ ಶಕ್ತಿ ಏನೆಂಬುದನ್ನು ಜಗತ್ತಿಗೆ ತೋರಿಸಿರೋಲ್ಲ. ಇನ್ನೊಬ್ಬರ ಸೈಕೋಲಜಿ (Psychology) ಅರ್ಥ ಮಾಡಿಕೊಳ್ಳುವುದರಲ್ಲಿ ಇವರು ನಿಸ್ಸೀಮರು. ಹಾಗಂಥ ತಮ್ಮ ಶಕ್ತಿ ಏನೆಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಹನುಮಂತನಂತೆ ಇವರನ್ನೂ ಸದಾ ಹೊಗಳಿ ಹೊಗಳಿ ಅಟ್ಟಕ್ಕೇರಿಸಿಯೇ ಕೆಲಸ ಮಾಡಿಸಿಕೊಳ್ಳಬೇಕು. ಪ್ರತಿಸ್ಪರ್ಧಿಗಳ ಜನಮನವನ್ನು ಕದಿಯಬಲ್ಲರು ಇವರು. ಬೇರೆಯವರು ಜೊತೆ ಮುಂದಿರುತ್ತಾರೆ. ಹಾಗಂಥ ಒಮ್ಮೆ ಹೋರಾಟಕ್ಕೆ ಧುಮುಕಿದರೋ, ಗೆಲ್ಲುವವರೆಗೂ ಛಲ ಬಿಡದೇ ಹೋರಾಡಬಲ್ಲರು.
ಈ ರಾಶಿಗಳಿಗೆ ಚಿನ್ನ ಧರಿಸಿದ್ರೆ ಅದೃಷ್ಟವೋ ಅದೃಷ್ಟ!
ವೃಶ್ಚಿಕ (Scorpio) ರಾಶಿ
ಈ ಕೆಲಸ ನನ್ನಿಂದ ಆಗುವುದೇ ಇಲ್ಲವೆಂದು ಬಹು ದೂರ ಕೂತಿರುತ್ತಾರೆ ಇವರು. ಅಬ್ಬಾ, ಇವರನ್ನು ಹುರಿದುಂಬಿಸಿ ಕರೆ ತರುವಲ್ಲಿ ಜೊತೆಯಲ್ಲಿದ್ದೋರಿಗೆ ಸಾಕೋ ಸಾಕಾಗುತ್ತದೆ. ಕಡೆಗೂ ಅವರು ಯಶಸ್ವಿಯಾದರೆ, ಈ ರಾಶಿಯವರು ಹಿಡಿದ ಕಾರ್ಯದಲ್ಲಿ ಗೆಲವು ಸಾಧಿಸೋದು ಮಾತ್ರ ಗ್ಯಾರಂಟಿ. ಹಠಮಾರಿಗಳು ಇವರು. ಮತ್ತೊಂದು ಕೆಟ್ಟ ಬುದ್ಧಿಯೂ ಇವರಿಗೆ ಇರುತ್ತೆ. ಗೆಲ್ಲುವ ತರಾತುರಿಯಲ್ಲಿ ಮತ್ತೊಬ್ಬರನ್ನು ತುಳಿಯಲು ಹಿಂದೇಟು ಹಾಕೋಲ್ಲ. ಇನ್ನೊಬ್ಬರು ತಪ್ಪೆಂದು ಸಾಬೀತುಪಡಿಸಲು ಹಿಂದುಮುಂದು ನೋಡುವುದೇ ಇಲ್ಲ.
ಧನು (Sagittarius) ರಾಶಿ
ಇವರಿಗಂತೂ ತಮ್ಮ ಸಾಮರ್ಥ್ಯವೂ ಗೊತ್ತಿರೋಲ್ಲ. ಮತ್ತೊಬ್ಬರ ಶಕ್ತಿಯನ್ನೂ ಗುರುತಿಸಲು ಬರುವುದಿಲ್ಲ. ತಮಗಿಂತ ಕಡಿಮೆ ಅನುಭವ ಮತ್ತು ಪ್ರತಿಭೆ (Talent) ಇರೋರಿಗೆ ಆದ್ಯತೆ ಕೊಟ್ಟು, ಎಂಥವರಿಗೋ ಮಣೆ ಹಾಕುತ್ತಾರೆ. ಇದೇ ಇವರಿಗೆ ಸಮಸ್ಯೆಯಾಗಬಹುದು, ಹಾಗಂಥ ತಮ್ಮನ್ನು ಬಿಟ್ಟು ಕೊಡುವುದೂ ಇಲ್ಲ. ಗೆಲ್ಲುವವರೆಗೂ (Success) ತಮ್ಮ ಹೋರಾಟವನ್ನೂ ನಿಲ್ಲಿಸುವ ಜಾಯಮಾನ ಇವರದ್ದಲ್ಲ.
ಧನು ರಾಶಿಯವರು ರಿಲೇಶನ್ ಶಿಪ್ ನಲ್ಲಿ ಮಾಡೋ ತಪ್ಪುಗಳಿವು
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.