Asianet Suvarna News Asianet Suvarna News

ಶಿಷ್ಟಾಚಾರದಿಂದಲೇ ಎಲ್ಲರನ್ನೂ ಮೋಡಿ ಮಾಡೋ ರಾಶಿಗಳಿವರು!

ಉತ್ತಮ ವರ್ತನೆ, ಶಿಷ್ಟಾಚಾರ ಎಲ್ಲರಿಗೂ ಒಲಿದಿರುವುದಿಲ್ಲ. ಮಕ್ಕಳಿಗೆ ಒಳ್ಳೆಯ ನಡೆನುಡಿಗಳನ್ನು ಅಭ್ಯಾಸ ಮಾಡಿಸಬೇಕೆಂದು ಪ್ರತಿ ಮಹಿಳೆಯರೂ ಹೋರಾಡುತ್ತಾರೆ. ಆದರೆ, ಕೆಲವೇ ರಾಶಿಗಳ ಜನರಿಗೆ ಜನ್ಮಜಾತವಾಗಿ ಈ ಗುಣ ಬಂದಿರುತ್ತದೆ. 
 

 Men of these zodiac signs have good manners
Author
Bangalore, First Published Aug 15, 2022, 12:50 PM IST

ಉತ್ತಮ ವರ್ತನೆ ಎನ್ನುವುದು ಜನ್ಮಜಾತವಾಗಿ ಬರುವ ಗುಣ ಎನ್ನುವುದು ಕೆಲವರ ನಂಬಿಕೆ. ಏಕೆಂದರೆ, ಯಾವುದೇ ಸ್ಥಿತಿ ಇರುವ ಕುಟುಂಬದಲ್ಲಿ ಜನಿಸಿದರೂ ಕೆಲವರಿಗೆ ಉತ್ತಮ ಗುಣಗಳನ್ನು ರೂಢಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವರು ಸಲೀಸಾಗಿ ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಮುಂದೆ ಸಾಗುತ್ತಾರೆ. ಇನ್ನು, ಉತ್ತಮ ವರ್ತನೆ ಹಾಗೂ ಗುಣಗಳು ಸಂಸ್ಕಾರದಿಂದ ಬರುತ್ತವೆ ಎನ್ನುವವರೂ ಇದ್ದಾರೆ. ಆದರೆ, ಸಂಸ್ಕಾರವಿರಲಿ, ಇಲ್ಲದಿರಲಿ. ಕೆಲವು ಜನ ಒಳ್ಳೆಯ ನಡೆನುಡಿಗಳನ್ನು ಹೊಂದಿರುವುದು ಸತ್ಯವಾದ ಮಾತು. ಈ ಗುಣ ಕೂಡ ಅವರವರ ರಾಶಿಗಳನ್ನು ಆಧರಿಸಿ ರೂಪುಗೊಂಡಿರುತ್ತದೆ. ಕೆಲವು ಜನ ಅದ್ಭುತ ಸಾಮಾಜಿಕ ವರ್ತನೆ ಹೊಂದಿರುವುದು ಸಹ ಇದೇ ಆಧಾರದ ಮೇಲೆ. ಮಕ್ಕಳು ಉತ್ತಮ ನಡೆನುಡಿ ಅಳವಡಿಸಿಕೊಂಡರೆ ಎಲ್ಲರಿಗಿಂತ ಹೆಚ್ಚಾಗಿ ಖುಷಿ ಪಡುವವಳು ಅಮ್ಮ. ಹಾಗೆ ಅಮ್ಮ ಹೆಮ್ಮೆ ಪಡುವಂತೆ ಒಳ್ಳೆಯ ವರ್ತನೆ ತೋರುವ ಜನ ಈ ಕೆಲವು ರಾಶಿಗಳಲ್ಲಿ ಸಿಗುತ್ತಾರೆ. ಅದರಲ್ಲೂ ಈ ರಾಶಿಗಳ ಪುರುಷರು ಒಳ್ಳೆಯ ನಡೆನುಡಿ, ಶಿಷ್ಟಾಚಾರವನ್ನು ಅಳವಡಿಸಿಕೊಂಡು ಎಲ್ಲರೂ ಮೆಚ್ಚುವಂತೆ ಬೆಳೆಯುತ್ತಾರೆ. ಹೀಗಾಗಿ, ಈ ರಾಶಿಗಳ ಪುರುಷರೊಂದಿಗೆ ಸ್ನೇಹ ಸಂಬಂಧ, ಪ್ರೀತಿ-ಪ್ರೇಮ ಹೊಂದುವುದು ಮಹಿಳೆಯರಿಗೆ ಅದ್ಭುತ ಅನುಭವ ನೀಡಬಲ್ಲದು.

•    ಸಿಂಹ (Leo)
ಅಗ್ನಿ (Fire) ತತ್ವದ ಸಿಂಹ ರಾಶಿಯ ಜನ ನಡೆನುಡಿಯಲ್ಲಿ Behave) ಎಲ್ಲರೂ  ಮೆಚ್ಚುವಂತೆ ಇರುತ್ತಾರೆ. ಈ ರಾಶಿಯ ಪುರುಷರೊಂದಿಗೆ ಸ್ನೇಹ (Friendship) ಮಾಡುವುದು ನಿಜಕ್ಕೂ ಅದ್ಭುತ ಅನುಭವ. ಏಕೆಂದರೆ, ಇವರು ಮೋಡಿ (Charm) ಮಾಡಬಲ್ಲ ಗುಣ ಹೊಂದಿರುತ್ತಾರೆ. ಕೇವಲ ಪುಸ್ತಕಗಳಲ್ಲಿ ಕಾಣಸಿಗುವಂತಹ ಉತ್ತಮ ಶಿಷ್ಟಾಚಾರ (Manners) ಹೊಂದಿರುತ್ತಾರೆ. ತಮ್ಮ ಮನೆಗೆ ಸ್ನೇಹಿತೆ ಬಂದರೆ ಬಾಗಿಲು ತೆರೆದು ಸ್ವಾಗತ ಮಾಡುವುದರಿಂದ ಹಿಡಿದು ಊಟದ ಟೇಬಲ್ ಗೆ ಕರೆದೊಯ್ಯುವವರೆಗೆ ಇವರು ಶಿಷ್ಟಾಚಾರ ಪಾಲಿಸುತ್ತಾರೆ. ಗರಿಷ್ಠ ಮಟ್ಟದ ಪ್ರಾಮಾಣಿಕತೆ (Sincerity) ತೋರುತ್ತಾರೆ. ಈ ಗುಣ ನಿಮ್ಮ ಹೃದಯವನ್ನು ಸೆಳೆಯದೇ ಇರದು. ತಮ್ಮ ಸಮಾನಮನಸ್ಕ ಸ್ನೇಹಿತರನ್ನು ಟ್ರೀಟ್ ಮಾಡಲು ಹೆಮ್ಮೆ ಪಡುತ್ತಾರೆ, ನಿಜವಾಗಿಯೂ ಖುಷಿ ಪಡುತ್ತಾರೆ, ಇತರರನ್ನು ಖುಷಿಯಾಗಿಡಲು ಯತ್ನಿಸುತ್ತಾರೆ. ಹಾಗೆಯೇ ತಮ್ಮ ಜೀವನದಲ್ಲಿ ಬರುವ ಎಲ್ಲ ಮಹಿಳೆಯರನ್ನೂ ಅತ್ಯಂತ ಗೌರವದಿಂದ ಕಾಣುತ್ತಾರೆ. 

•    ಮೇಷ (Aries)
ಮೇಷ ರಾಶಿಯವರಿಗೆ ಯೋಚನೆ (Think) ಮಾಡುವುದೆಂದರೆ ಗೀಳಿನಂತೆ (Obsess). ಅಂದರೆ, ಕ್ಷಣಕಾಲವೂ ಯೋಚಿಸದೆ ಅವರು ಇರಲಾರರು. ಸ್ವಲ್ಪ ಮುಂಗೋಪಿಗಳೂ (Impulsive) ಹೌದು. ಅಗ್ನಿ ತತ್ವದ ಈ ರಾಶಿಯ ಜನ ಮೇಲ್ನೋಟಕ್ಕೆ ಮೌನವಾಗಿದ್ದಷ್ಟು ಒಳಗೆ ಶಾಂತಿಯಿಂದ ಇರಲಾರರು. ಅಂತರಂಗದಿಂದ ಇವರ ಹೃದಯ ಬಂಗಾರ. ಇವರು ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಲಾರರು. ಒಳ್ಳೆಯ ಮನುಷ್ಯರೋ ಅಲ್ಲವೋ ಎನ್ನುವುದಕ್ಕಿಂತ ಪ್ರಶ್ನಿಸುವುದರಲ್ಲೇ ಹೆಚ್ಚಿನ ಸಮಯ ಕಳೆಯುತ್ತಾರೆ. ಪ್ರಶಾಂತವಾಗಿ ಆತ್ಮಾವಲೋಕನ (Introspect) ಮಾಡಿಕೊಳ್ಳುತ್ತಾರೆ. ಹೀಗಾಗಿ, ವಿಷಯಗಳನ್ನು ಅರಿತುಕೊಳ್ಳಲು ಬೇರೆ ಎಲ್ಲರಿಗಿಂತ ಹೆಚ್ಚುವರಿ ಸಮಯ ಇವರಿಗೆ ಲಭ್ಯವಾಗುತ್ತದೆ. ತಮ್ಮ ಸುತ್ತ ಇರುವವರ ಜೀವನವನ್ನು ಉತ್ತಮಪಡಿಸುವುದು (Bettering) ಇವರ ಸಾಮಾನ್ಯ ಉದ್ದೇಶವಾಗಿರುತ್ತದೆ. ಹಾಗೂ ಇವರು ಇದರಲ್ಲಿ ಯಶಸ್ವಿಯೂ ಆಗುತ್ತಾರೆ. ಎಲ್ಲರಿಗಿಂತ ಇವರ ಮೇಲೆ ಹೆಚ್ಚು ಭರವಸೆ ಇಡಬಹುದು. ಅಪರಿಚಿತರಿಗೆ ಸಹಾಯ ಮಾಡುವುದರಿಂದ ಹಿಡಿದು ಜಾಗತಿಕ ಬಡತನದ ಸಮಸ್ಯೆಯವರೆಗೆ ಚಿಂತನೆ ಮಾಡುತ್ತಾರೆ. ಹಾಗೂ ಕೈಲಾದಷ್ಟು ಸಹಾಯವನ್ನೂ ಮಾಡುತ್ತಾರೆ. 

ಈ ರಾಶಿಗಳ ಜೊತೆ ಸಮಯ ಕಳೆಯೋದು ಬೋರಿಂಗ್

•    ಕರ್ಕಾಟಕ (Cancer)
ಕರ್ಕಾಟಕ ರಾಶಿಯ ಜನ ಸಂಗಾತಿ ಹುಡುಕುವ ಸಮಯದಲ್ಲಿ ತಮ್ಮ ಅತ್ಯುತ್ತಮ ಗುಣಗಳನ್ನು ತೋರ್ಪಡಿಸಿಕೊಳ್ಳುತ್ತಾರೆ. ಚೆನ್ನಾಗಿ ಡ್ರೆಸ್ ಮಾಡುವುದರಿಂದ ಹಿಡಿದು, ಕಾಲ್ಬೆರಳಿನ ಉಗುರಿನವರೆಗೆ ಕಾಳಜಿ ವಹಿಸುತ್ತಾರೆ. ಪ್ರೀತಿಯಲ್ಲಿ ಇರುವಾಗ ಏನು ಬೇಕಿದ್ದರೂ ಮಾಡಬಲ್ಲರು. ಯಾವುದೇ ಕಾರಣಕ್ಕೂ, ಯಾವುದೇ ಸಮಯದಲ್ಲೂ ಸೋಗು (Pretend) ಹಾಕಲು ಬಾರದ ಕೆಟೆಗರಿ ಇವರದ್ದು. ತಮ್ಮ ಸಂಗಾತಿಯ (Partner) ಕುರಿತಾಗಿ ಭಾರೀ ಕಾಳಜಿ ಹೊಂದಿರುತ್ತಾರೆ. ಸಹಾನುಭೂತಿಯಿಂದ ವರ್ತಿಸುತ್ತಾರೆ. ಹಾಗೆಯೇ ಎಲ್ಲ ಮಹಿಳೆಯರು, ಸಹೋದ್ಯೋಗಿ, ಸ್ನೇಹಿತರ ಬಗ್ಗೆಯೂ ಗೌರವ ಹೊಂದಿರುತ್ತಾರೆ. ಉತ್ತಮ ಶಿಷ್ಟಾಚಾರದ ಬಗ್ಗೆ ಇವರನ್ನು ಕೇಳಿನೋಡಿ, ತಮ್ಮ ತಾಯಿಗೆ ಆ ಕ್ರೆಡಿಟ್ (Credit) ನೀಡುತ್ತಾರೆ.

ಈ ರಾಶಿಯವರು ಬಾಲ್ಯದ ಭಯದಿಂದ ಹೊರ ಬರೋದು ಕಷ್ಟ

Follow Us:
Download App:
  • android
  • ios