Asianet Suvarna News Asianet Suvarna News

Zodiac Sign: ಈ ರಾಶಿಗಳ ಜನ ಬಾಲ್ಯದ ಭಯದಿಂದ ಹೊರಬರುವುದೇ ಇಲ್ಲ

ಬಾಲ್ಯಕಾಲವನ್ನು ಯಾರು ತಾನೆ ನೆನಪಿಸಿಕೊಳ್ಳುವುದಿಲ್ಲ? ಆದರೆ, ಸಾಮಾನ್ಯವಾಗಿ ಎಲ್ಲರೂ ಬಾಲ್ಯದ ಅನುಭವಗಳಿಂದ ಖುಷಿ ಪಟ್ಟರೆ, ಕೆಲವರು ಮಾತ್ರ ಬಾಲ್ಯದ ಭಯದಿಂದ ಹೊರಬರದೇ ಅವುಗಳನ್ನು ಬದುಕಿಡೀ ನೆನಪಿನಲ್ಲಿ ಇಟ್ಟುಕೊಂಡು ನೋವು ಅನುಭವಿಸುತ್ತಾರೆ. 
 

These zodiac sign people continue to be haunted by childhood terrors
Author
Bangalore, First Published Aug 12, 2022, 12:58 PM IST

ಬಾಲ್ಯಕಾಲದ ಅನುಭವಗಳು ನಮ್ಮನ್ನು ಜೀವನವಿಡೀ ಪೊರೆಯುತ್ತವೆ. ಬಾಲ್ಯದ ಅದೆಷ್ಟೋ ಅನುಭವಗಳು ನಮಗೆ ಖುಷಿ ನೀಡಿದರೆ ಕೆಲವು ಭಯಪಡಿಸಲೂಬಹುದು. ಬಾಲ್ಯದಲ್ಲಿ ನಮ್ಮನ್ನು ಯಾರ್ಯಾರು ಹೇಗೆ ಟ್ರೀಟ್‌ ಮಾಡಿದ್ದರು ಎನ್ನುವುದರಿಂದ ಹಿಡಿದು ನಾವು ತಿಂದ ತಿಂಡಿಗಳು, ಭೇಟಿಯಾದ ಜನರು, ನೆಂಟರಿಷ್ಟರ ಮನೆಯಲ್ಲಿ ನಡೆದ ಘಟನೆಗಳು, ಮನೆಯಲ್ಲೇ ಜರುಗಿದ ಜಗಳ, ಮುನಿಸು, ಮಾತುಗಳು ಎಲ್ಲವೂ ನಮಗೆ ನೆನಪಿನಲ್ಲಿ ಇರುತ್ತವೆ. ಆದರೆ, ಬೆಳೆಯುತ್ತ ಬೆಳೆಯುತ್ತ ನಾವು ಕೆಲವು ಘಟನೆಗಳನ್ನು ಸಹಜವಾಗಿ ಸ್ವೀಕರಿಸಲು ತೊಡಗುತ್ತೇವೆ. ಮನೆಯಲ್ಲೇ ಏನೋ ದುರ್ಘಟನೆ ನಡೆದಿದ್ದರೂ ಅದನ್ನು ಮರೆಯಲು ಯತ್ನಿಸುತ್ತೇವೆ. ಅಥವಾ ಹೆಚ್ಚು ಕಾಡದಂತೆ ಎಚ್ಚರಿಕೆ ವಹಿಸುತ್ತೇವೆ. ಮಗುವಲ್ಲಿ ಅಪರಿಚಿತರ ಕುರಿತು ತುಂಬಿರುವ ಭಯ ಬೆಳೆದಂತೆ ಹೇಗೆ ಕಡಿಮೆಯಾಗುವುದೋ ಹಾಗೆಯೇ ಅಂದು ಭಯಪಡಿಸಿದ್ದ ಘಟನೆಯೊಂದನ್ನು ದೊಡ್ಡವರಾದಂತೆ ಸ್ನೇಹಿತರ ಬಳಿ ಹೇಳಿಕೊಂಡು ನಗುತ್ತೇವೆ. ಆದರೂ ಕೆಲವು ಜನರಿರುತ್ತಾರೆ. ಅವರು ಬಾಲ್ಯಕಾಲದ ಭಯದ ನೆರಳಿನಿಂದ ಹೊರಬರುವುದೇ ಇಲ್ಲ. ಅಂದಿನ ಭಯವನ್ನು ದೂರ ಮಾಡಿಕೊಳ್ಳಲು ಅವರಿಂದ ಸಾಧ್ಯವಾಗುವುದಿಲ್ಲ. ದೊಡ್ಡವರಾದ ಬಳಿಕವೂ ಬಾಲ್ಯದ ಭಯ ಅವರನ್ನು ಕಾಡುತ್ತದೆ. ಕೆಲವು ರಾಶಿಗಳ ಜನ ಇದರಲ್ಲಿ ಅತೀ ಮುಂದು.

•    ಮೀನ (Pisces)
ಮೀನ ರಾಶಿ (Zodiac Sign) ಜನ (People) ತುಂಬ ಸೂಕ್ಷ್ಮಮನಸ್ಸನ್ನು ಹೊಂದಿರುತ್ತಾರೆ. ಜಲ (Water) ತತ್ವದ ಇವರು ಬೇರೆ ಯಾವುದೇ ರಾಶಿಗಿಂತ ಅಧಿಕವಾಗಿ ತಮ್ಮ ಭಾವನೆಗಳೊಂದಿಗೆ (Feelings) ಅನುಭಾವ (Touch) ಹೊಂದಿರುತ್ತಾರೆ. ಅವರು ಎಲ್ಲರಿಗಿಂತ ಹೆಚ್ಚಾಗಿ ಬಾಲ್ಯವನ್ನು (Childhood) ನೆನಪಿನಲ್ಲಿ (Memories) ಇಟ್ಟುಕೊಂಡಿರುತ್ತಾರೆ. ಮನೆ ಹಾಗೂ ಹುಟ್ಟಿದ ಊರಿನ ಬಗ್ಗೆ ಅತಿಯಾದ ಪ್ರೀತಿ ಹೊಂದಿರುವ ಇವರು ಉತ್ಕಂಠವಾಗಿ ಮನೆಯನ್ನು ನೆನಪಿಸಿಕೊಳ್ಳುತ್ತಾರೆ. ಬಾಲ್ಯಕಾಲದ ಅನುಭವಗಳು ಅವರನ್ನು ಕಾಡುತ್ತವೆ. ಪದೇ ಪದೆ ಬಾಲ್ಯದ ಭಯದ ನೆರಳಿಗೆ ಹೋಗುವುದಿಲ್ಲವಾದರೂ ಕೆಲವೊಮ್ಮೆ ಅಂದಿನ ನೆನಪಿನಲ್ಲಿ ಸಪ್ಪಗಾಗುತ್ತಾರೆ. ಯಾವಾಗಲಾದರೂ ತಾವು ಅಂದುಕೊಂಡಿದ್ದು ನಡೆಯದೇ ಹೋದರೆ, ಆತ್ಮವಿಶ್ವಾಸದ ಕೊರತೆ ಆದರೆ ಅವರು ಬಾಲ್ಯಕಾಲದ ಭಯವನ್ನು (Fear) ಮತ್ತೆ ಆವಾಹಿಸಿಕೊಂಡು ತೀವ್ರವಾದ ಆತಂಕಕ್ಕೆ (Anxiety) ಬೀಳುತ್ತಾರೆ. ಸಂಕಷ್ಟದ ಸಮಯದಲ್ಲಿ ಕೈ ಹಿಡಿಯಬೇಕಿದ್ದ ಬಾಲ್ಯದ ಸ್ಮರಣೆಗಳು ಅವರಿಗೆ ಇನ್ನಷ್ಟು ಸಮಸ್ಯೆ ತರುತ್ತವೆ. ಏಕೆಂದರೆ, ಅವರು ಬಾಲ್ಯದಲ್ಲಿ ಅನುಭವಿಸಿದ ಕೆಲವು ಭಯವನ್ನು ಆ ಸಮಯದಲ್ಲಿ ಮತ್ತೆ ಅನುಭವಿಸುತ್ತಾರೆ.

ಇದನ್ನೂ ಓದಿ: Relationship Tips : ಈ ಹುಡುಗಿಗೆ ಮದುವೆ ಆಗೋಕೆ ಭಯವಂತೆ..! ಯಾಕೆ ಗೊತ್ತಾ?

•    ಮಕರ (Capricorn)
ಮಕರ ರಾಶಿಯವರು ಭೂಮಿ (Earth) ತತ್ವದ ಜನ. ತಮ್ಮ ಭಾವನೆಗಳಿಗೆ ಬಿರಡೆ ಹಾಕಿಕೊಂಡಿರುತ್ತಾರೆ. ತುಂಬ ಚಿಕ್ಕ ವಯಸ್ಸಿನಿಂದಲೂ ಅವರು ಅತ್ಯಂತ ಸ್ವತಂತ್ರ (Independent) ಮನೋಭಾವ ಹೊಂದಿರುತ್ತಾರೆ. ತಮ್ಮ ಸಮಸ್ಯೆಗಳನ್ನು (Problems) ತಾವೇ ನಿವಾರಣೆ ಮಾಡಿಕೊಳ್ಳುವ ಹಂಬಲ ಹೊಂದಿರುತ್ತಾರೆ. ಅತ್ಯಧಿಕ ಮಟ್ಟದಲ್ಲಿ ಸ್ವತಂತ್ರ ಚಿಂತನೆಗಳನ್ನು ಹೊಂದಿರುತ್ತಾರೆ. ಬಾಲ್ಯದ ಬಹುತೇಕ ಸಮಯವನ್ನು ಅವರು ತಮ್ಮ ಸಹೋದರ-ಸಹೋದರಿಯರ ರಕ್ಷಣೆಗಾಗಿ ಮೀಸಲಿಡುತ್ತಾರೆ. ಹಾಗೆಯೇ, ವಯಸ್ಸಿಗೆ ಮೀರಿದ ಚಿಂತನಾ ಸಾಮರ್ಥ್ಯ ಹೊಂದಿರುತ್ತಾರೆ. ಅಂದರೆ, ತಮ್ಮ ವಯಸ್ಸಿಗಿಂತ ಹೆಚ್ಚು ಪ್ರಬುದ್ಧತೆ ಹೊಂದಿರುತ್ತಾರೆ. ಹೀಗಾಗಿ, ಬಾಲ್ಯ ಕಾಲದಲ್ಲಿ ಕೆಲವು ಬಗೆಹರಿಸಲಾದ ಸಮಸ್ಯೆಗಳು ಅವರಿಗೆ ಎದುರಾಗಿರುತ್ತವೆ. ಇದು ಮುಂದಿನ ಬದುಕಿನಲ್ಲಿ ಅವರನ್ನು ಎಷ್ಟರ ಮಟ್ಟಿಗೆ ಕಾಡುತ್ತವೆ ಎಂದರೆ, ತಮ್ಮ ಭಾವನೆಗಳನ್ನು ಸೂಕ್ತವಾಗಿ ನಿಭಾಯಿಸಿಕೊಳ್ಳಲು ಸಾಧ್ಯವಾಗದ ಮಟ್ಟಿಗೆ ಅವರು ಹೈರಾಣಾಗುತ್ತಾರೆ. ತಮಗೆ ಎದುರಾಗುವ ಸಮಸ್ಯೆಗಳ ನಿವಾರಣೆ ಮಾಡಿಕೊಳ್ಳಲು ಅವರು ಕೆಲವೊಮ್ಮೆ ಬಾಲ್ಯದ ಅನುಭವಗಳ ಹಿನ್ನೆಲೆಯಲ್ಲಿಯೇ ವಿಫಲರಾಗುತ್ತಾರೆ. 

ಇದನ್ನೂ ಓದಿ: ಪುರುಷರು ಸಂಗಾತಿಯನ್ನು ಹೊಗಳೋದು ಸುಮ್ನೆ ಏನಲ್ಲ,ಕಾರಣ ತಿಳ್ಕೊಳ್ಳಿ

•    ಕುಂಭ (Aquarius)
ವಾಯು (Air) ತತ್ವವನ್ನು ಆಧರಿಸಿರುವ ಕುಂಭ ರಾಶಿಯ ಜನ ಮೇಲ್ನೋಟಕ್ಕೆ ಒರಟಾಗಿರುತ್ತಾರೆ. ತಮ್ಮ ಕುಟುಂಬದ ಸದಸ್ಯರ ನಡುವೆ ಇದ್ದರೂ, ಎಲ್ಲರೊಂದಿಗೆ ಚೆನ್ನಾಗಿದ್ದರೂ ಒಂಟಿ ತೋಳದಂತೆ (Single Wolf) ಇರುತ್ತಾರೆ. ಅವರ ಈ ಗುಣ ಹಲವು ಬಾರಿ ಅವರ ಬಾಲ್ಯದ ನೋವಿನಿಂದ (Pain) ಬಂದಿರುತ್ತದೆ. ಬಾಲ್ಯದಲ್ಲಿ ಅವರೇನಾದರೂ ಅಪಘಾತ (Accident) ಅಥವಾ ಭಯವನ್ನು (Terror) ಅನುಭವಿಸಿದ್ದರೆ ಅದನ್ನು ದೊಡ್ಡವರಾದ ಬಳಿಕವೂ ಅಗಾಧವಾಗಿ ಫೀಲ್‌ ಮಾಡಿಕೊಳ್ಳುತ್ತಾರೆ. ಬಾಲ್ಯದ ಕೆಲವು ಅನುಭವ ಅವರಲ್ಲಿ ಆಳವಾದ ಗಾಯ (Deep Scar) ಉಂಟುಮಾಡಿರುವುದರಿಂದ ಅದರ ನೆರಳಿನಲ್ಲೇ ಅವರು ಅನೇಕ ಬಾರಿ ವರ್ತಿಸುವುದು ಕಂಡುಬರುತ್ತದೆ.

Follow Us:
Download App:
  • android
  • ios