Asianet Suvarna News Asianet Suvarna News

ಈ ಜನ್ಮರಾಶಿಯವರ ಜತೆ ಸಮಯ ಕಳೆಯುವುದು ಮಹಾ ಬೋರಿಂಗ್!

ಕೆಲವರು ತಮ್ಮ ಸೇಫ್ ಜೋನ್ ಬಿಟ್ಟು ಹೊರಬರಲು ಇಷ್ಟಪಡುವುದಿಲ್ಲ. ಇದು ಅವರನ್ನು ಬೋರಿಂಗ್ ಮನುಷ್ಯರನ್ನಾಗಿ ಮಾಡುತ್ತದೆ. ಈಗ ಅಂಥವರು ಯಾರು, ಅವರು ಸಾಮಾಜಿಕ ಜೀವನದಲ್ಲಿ ಬೆರೆಯುವಂತೆ ಮಾಡಲು ಏನು ಮಾಡಬಹುದು ಎಂಬುದನ್ನು ನೋಡೋಣ.
 

these zodiac born are very boring persons can not spend much time
Author
Bengaluru, First Published Aug 15, 2022, 12:17 PM IST

ಪ್ರತಿಯೊಬ್ಬರೂ ತಮ್ಮೊಂದಿಗೆ ಸಮಯ ಕಳೆಯುವ ಮತ್ತು ನಗಿಸುವ ಸ್ನೇಹಿತರ ಗುಂಪನ್ನು ಹೊಂದಲು ಬಯಸುತ್ತಾರೆ. ತಮಾಷೆಯಾಗಿ ಮತ್ತು ವಿನೋದದಿಂದ ಇರುವುದು ಕಷ್ಟದ ಪ್ರತಿಭೆ. ಅದು ಎಲ್ಲರಲ್ಲೂ ಇರುವುದಿಲ್ಲ. ಕೆಲವರು ತಮ್ಮ ಹಾಸ್ಯ ಮತ್ತು ತಮಾಷೆಯಿಂದ ಜನರನ್ನು ಅಲ್ಲಾಡಿಸುತ್ತಾರೆ. ಇನ್ನು ಕೆಲವರು ನೀರಸ. ಈ ಜನರು ಎಲ್ಲರನ್ನು ತೊಡಗಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ, ಇತರರ ಗಮನವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ, ಸಂಬಂಧ ಕಾಪಾಡಿಕೊಳ್ಳುವುದೂ ಇವರಿಗೆ ಕಷ್ಟವಾಗುತ್ತದೆ. ನೀರಸ ರಾಶಿಚಕ್ರದವರನ್ನು ಯಾರೂ ಡೇಟ್ ಮಾಡಲು ಬಯಸುವುದಿಲ್ಲ ಅಲ್ಲವೇ? 
ಕೆಲವರು ತಮ್ಮ ಸೇಫ್ ಜೋನ್ ಬಿಟ್ಟು ಹೊರಬರಲು ಇಷ್ಟಪಡುವುದಿಲ್ಲ. ಇದು ಅವರನ್ನು ಬೋರಿಂಗ್ ಮನುಷ್ಯರನ್ನಾಗಿ ಮಾಡುತ್ತದೆ. ಈಗ ಅಂಥವರು ಯಾರು, ಅವರು ಸಾಮಾಜಿಕ ಜೀವನದಲ್ಲಿ ಬೆರೆಯುವಂತೆ ಮಾಡಲು ಏನು ಮಾಡಬಹುದು ಎಂಬುದನ್ನು ನೋಡೋಣ.

ಮಕರ ರಾಶಿ (capricorn)
ಮಕರ ಜನ್ಮರಾಶಿಯವರು ತಮ್ಮ ಮಹತ್ವಾಕಾಂಕ್ಷೆಯ ಸ್ವಭಾವಕ್ಕೆ ಪ್ರಸಿದ್ಧರು. ಇವರು ಕಟ್ಟುನಿಟ್ಟಾದ ಜೀವನಶೈಲಿಯನ್ನು ಅನುಸರಿಸುತ್ತಾರೆ. ಆದರೆ ಅದೇ ಸಮಯದಲ್ಲಿ ಗಂಭೀರ ವ್ಯಕ್ತಿತ್ವದವರು. ಇದು ಅವರನ್ನು ಜಡವಾಗಿ ಕಾಣುವಂತೆ ಮಾಡುತ್ತದೆ. ಇವರು ಅತ್ಯಂತ ನೀರಸ ರಾಶಿಚಕ್ರದ ಚಿಹ್ನೆಗಳವರು. ಇವರು ತಮ್ಮ ಜೀವನ, ಕನಸುಗಳು ಮತ್ತು ಅವರ ಸುತ್ತಲಿನ ಎಲ್ಲವನ್ನೂ ತುಂಬಾ ಗಂಭೀರವಾಗಿ ಪರಿಗಣಿಸುತ್ತಾರೆ, ಇದರಿಂದಾಗಿ ಜೀವನವು ನೀಡುವ ವಿನೋದವನ್ನು ಕಳೆದುಕೊಳ್ಳುತ್ತಾರೆ. ಶನಿಯು ಇವರ ಆಳುವ ಗ್ರಹವಾಗಿರುವುದರಿಂದ, ಇವರು ಸಾಂಪ್ರದಾಯಿಕ ನಿಯಮಗಳನ್ನು ಅನುಸರಿಸಲು ಇಷ್ಟಪಡುತ್ತಾರೆ. ಇವರು ತಮ್ಮ ಆರಾಮ ವಲಯದಿಂದ ಹೊರಬರಲು ಇಷ್ಟಪಡುವುದಿಲ್ಲ. ಮಕರ ರಾಶಿಯವರು ಯಾವಾಗಲೂ ಅಪಾಯಕಾರಿ ಅಥವಾ ಸಾಹಸದಿಂದ ದೂರವಿರುತ್ತಾರೆ. ಇದರಿಂದಾಗಿ ತಮ್ಮ ಜೀವನವನ್ನು ಆಸಕ್ತಿರಹಿತವಾಗಿಸುತ್ತಾರೆ. ಅವರು ತಮ್ಮ ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಇದು ಅವರ ಸುತ್ತಲೂ ನೀರಸ ವಾತಾವರಣ ಸೃಷ್ಟಿ ಮಾಡುತ್ತದೆ.

ಮೀನ ರಾಶಿ (pisces)
ಮೀನವು ಸಿಹಿಯಾದ ಮತ್ತು ದಯೆ ಇರುವ ರಾಶಿಚಕ್ರದ ಚಿಹ್ನೆಗಳಲ್ಲಿ ಒಂದು. ಈ ಜನರು ತಮ್ಮ ತೋಳುಗಳನ್ನು ಸದಾ ತೆರೆದೇ ಇರುತ್ತಾರೆ. ಇವರು ಬೇಷರತ್ತಾಗಿ ಭಾವಿಸುತ್ತಾರೆ ಮತ್ತು ಪ್ರೀತಿಸುತ್ತಾರೆ. ಆದರೆ ಈ ತೀವ್ರವಾದ ಭಾವನಾತ್ಮಕತೆಯು ಅವರ ಸುತ್ತಮುತ್ತಲಿನ ಜನರಿಗೆ ಅವರೊಂದಿಗೆ ಮುಂದುವರಿಯಲು ಕಷ್ಟವಾಗುತ್ತದೆ. ಅವರು ಆಗಾಗ್ಗೆ ಅಳುವುದರಿಂದ, ಯಾವ ಮಾತು ಅವರನ್ನು ಅಸಮಾಧಾನಗೊಳಿಸಬಹುದು ಎಂದು ಯಾರೂ ಊಹಿಸಲು ಕಷ್ಟ. ಈ ಜನರು ಸಂಪೂರ್ಣವಾಗಿ ಸಂವೇದನಾಶೀಲರು. ಹಾಸ್ಯವನ್ನು ಮುಂದಿಟ್ಟುಕೊಂಡು ಅವರೊಂದಿಗೆ ಸಂವಾದ ಮಾಡಲು ಸಾಧ್ಯವಿಲ್ಲ. ಎಲ್ಲರಿಗಿಂತ ಹೆಚ್ಚಾಗಿ, ಈ ಜನರು ಸ್ನೇಹಿತರು ಮತ್ತು ಇತರ ಬದಲು ತಮ್ಮದೇ ಕಂಪನಿಯನ್ನು ಇಷ್ಟಪಡುತ್ತಾರೆ. ಮೀನ ರಾಶಿಯವರು ತಮ್ಮ ಫ್ರೆಂಡ್ ಗ್ರೂಪ್ ಚಾಟ್‌ನಿಂದ ಯಾವುದೇ ಮುನ್ಸೂಚನೆಯಿಲ್ಲದೆ ಕಣ್ಮರೆಯಾಗುತ್ತಾರೆ. 

ಚಾಣಕ್ಯ ನೀತಿ: ಯಶಸ್ವಿಯಾಗಲು,ಕತ್ತೆಯಿಂದ ಈ ವಿಷ್ಯಗಳನ್ನು ಕಲಿಯಬೇಕಂತೆ

ಕಟಕ ರಾಶಿ  (cancer)
ಕ್ಯಾನ್ಸರ್ ಯಾವಾಗಲೂ ಗುಂಪಿನಲ್ಲಿರುವ ರಾಶಿ. ಅವರನ್ನು ರಾಶಿಚಕ್ರ ಚಿಹ್ನೆಗಳ ನಡುವೆ ಪೋಷಕ ಎಂದು ಕರೆಯಲಾಗುತ್ತದೆ. ಇತರರನ್ನು ನೋಡಿಕೊಳ್ಳಲು ಇಷ್ಟಪಡುತ್ತಾರೆ. ಆದರೆ ಇದೇ ಗುಣದಿಂದಾಗಿ ತಮ್ಮ ಸ್ನೇಹಿತರು ಅನುಭವಿಸುತ್ತಿರುವ ಮೋಜುಗಳನ್ನು ಕಳೆದುಕೊಳ್ಳುತ್ತಾರೆ. ಯಾವುದೇ ಅವ್ಯವಸ್ಥೆಯನ್ನು ಸರಿಪಡಿಸುವ, ಇತರರು ಮಾಡಿದ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಹೊಣೆ ಹೊರುತ್ತಾರೆ. ಅವರು ಪ್ರಶಾಂತ ವಾತಾವರಣವನ್ನು ಹೆಚ್ಚು ಇಷ್ಟಪಡುವ ಕಾರಣ ಸಾಹಸಗಳನ್ನು ಬಯಸುವುದಿಲ್ಲ. ಸ್ವಯಂಪ್ರೇರಿತವಾಗಿ ವಿಹಾರಕ್ಕೆ ಹೋಗುವ ಯೋಜನೆಯನ್ನು ಮಾಡುವುದಿಲ್ಲ. ಯಾರಾದರೂ ತಮ್ಮ ದಿನಚರಿಗೆ ಅಡ್ಡಿಪಡಿಸುವುದನ್ನು ಬಯಸುವುದಿಲ್ಲ. ಬದಲಾಗಿ, ಅವರು ತಮ್ಮ ಬೆಕ್ಕುಗಳೊಂದಿಗೆ ಮನೆಯಲ್ಲಿಯೇ ಇರುತ್ತಾರೆ. ಕಟಕ ನೀರಸ ರಾಶಿಚಕ್ರದ ಚಿಹ್ನೆ ಏಕೆಂದರೆ ಇವರು ಅನಿರೀಕ್ಷಿತವಾಗಿ ಏನನ್ನೂ ಪ್ರಶಂಸಿಸುವುದಿಲ್ಲ. ಇದಲ್ಲದೆ, ಅವರು ಎಲ್ಲವನ್ನೂ ಮುಂಚಿತವಾಗಿ ಯೋಜಿಸಲು ಇಷ್ಟಪಡುತ್ತಾರೆ,ಹಾಗಾಗಿ ಹೊಸ ಜನರನ್ನು ಭೇಟಿಯಾಗುವುದು ಮತ್ತು ಏನಾದರೂ ಸಾಹಸ ಮಾಡುವುದು ಅವರಿಗೆ ಆತಂಕ ಉಂಟುಮಾಡುತ್ತದೆ. 

ತುಲಾ ರಾಶಿ (libra)
ತುಲಾ ರಾಶಿಯವರು ಏನಾದರೂ ಮಾಡುವ ಮೊದಲು ಒಂದು ಯೋಜನೆ ಮಾಡಲು ಇಷ್ಟಪಡುತ್ತಾರೆ. ತಮ್ಮನ್ನು ಯಾವುದರಲ್ಲಾದರೂ ತೊಡಗಿಸಿಕೊಳ್ಳುವ ಮೊದಲು ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ. ಅವರು ಶಾಂತ ವ್ಯಕ್ತಿತ್ವವನ್ನು ಹೊಂದಿದ್ದರೂ, ಪ್ರಬುದ್ಧ ರಾಶಿಚಕ್ರದ ಚಿಹ್ನೆಗಳಲ್ಲಿ ಒಂದಾಗಿದ್ದರೂ, ಸಾಹಸಮಯ ಕೆಲಸಗಳನ್ನು ಮಾಡಲು ಇಷ್ಟಪಡುತ್ತಾರೆ. ಆದರೆ ಅದಕ್ಕೂ ಮುನ್ನ ಮೊದಲೇ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾರೆ. ತುಲಾದವರು ಸಾಮಾನ್ಯವಾಗಿ ಪ್ರಾಯೋಗಿಕ, ಆದರೆ ಅವರಿಗೆ ಸೃಜನಶೀಲತೆ ಮತ್ತು ಕಲ್ಪನೆಯ ಕೊರತೆಯಿದೆ. ಯಾವಾಗಲೂ ಸುರಕ್ಷಿತ ಆಯ್ಕೆಯನ್ನು ಆರಿಸಿಕೊಳ್ಳುತ್ತಾರೆ. ಅವರು ತಮ್ಮ ನಿಜವಾದ ಭಾವನೆಗಳು ಮತ್ತು ಅಭಿಪ್ರಾಯಗಳ ಬಗ್ಗೆ ವಿರಳವಾಗಿ ತೆರೆದುಕೊಳ್ಳುತ್ತಾರೆ. ಇದು ಅವರನ್ನು ಕಡಿಮೆ ಕನೆಕ್ಟ್ ಆಗುವಂತೆ ಮಾಡುತ್ತದೆ. ಇವರು ಕೆಲವು ಸಂದರ್ಭಗಳಲ್ಲಿ ಕುಶಲತೆಯಿಂದ ವರ್ತಿಸಬಹುದು. ಇತರರು ಅದರ ಬಗ್ಗೆ ಕಂಡುಕೊಂಡಾಗ ಅದು ಆಸಕ್ತಿರಹಿತವಾಗಿ ಕಾಣುವಂತೆ ಮಾಡುತ್ತದೆ. 

ವೃಷಭ ರಾಶಿ (taurus)
ವೃಷಭ ರಾಶಿಯವರು ತಮ್ಮ ಶ್ರಮಶೀಲ ಸ್ವಭಾವ ಮತ್ತು ಅತಿಯಾಗಿ ಸಾಧಿಸುವ ಗುಣಲಕ್ಷಣಗಳಿಂದಾಗಿ ಆಕರ್ಷಕವಾಗಿರಬಹುದು. ಆದಾಗ್ಯೂ, ಮತ್ತೊಂದೆಡೆ, ಈ ಜನರು ಹಠಮಾರಿ ಸ್ವಭಾವದವರು. ಈ ಜನರು ಸಮಪ್ರಜ್ಞೆಯನ್ನು ಹೊಂದಿರುವುದಿಲ್ಲ. ಅವರು ಹೊಸ ಅಥವಾ ವಿಭಿನ್ನವಾದದ್ದನ್ನು ಪ್ರಯತ್ನಿಸುವುದು ಅಪರೂಪ. ಅವರಿಗೆ ಸರಿಹೊಂದದ ಸಂದರ್ಭಗಳನ್ನು ತಪ್ಪಿಸುತ್ತಾರೆ. ಸಂಭಾಷಣೆಯು ತಮಗೆ ಇಷ್ಟವಿಲ್ಲದ ಕಡೆಗೆ ಚಲಿಸುತ್ತಿದೆ ಎಂದು ಭಾವಿಸಿದರೆ, ಅವರು ಇಡೀ ಸಂಭಾಷಣೆಯಿಂದ ತಮ್ಮನ್ನು ಹಿಂತೆಗೆದುಕೊಳ್ಳುತ್ತಾರೆ. ವೃಷಭ ರಾಶಿಯವರು ತಮಗೆ ಆಸಕ್ತಿಯಿಲ್ಲದ ಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಅವರ ಸ್ನೇಹಿತರು ಅವರೊಂದಿಗೆ ಆನಂದಿಸಲು ಕಷ್ಟವಾಗುತ್ತದೆ. ವೃಷಭ ರಾಶಿಯವರು ತಮ್ಮ ಆಪ್ತರಿಗಾಗಿ ಸಹ ತಮ್ಮ ಆರಾಮ ವಲಯದಿಂದ ಹೊರಬರುವುದಿಲ್ಲ, ಇದು ಅವರನ್ನು ಸ್ವಲ್ಪಮಟ್ಟಿಗೆ ಸ್ವಾರ್ಥಿಗಳನ್ನಾಗಿ ಮಾಡುತ್ತದೆ. ತಮ್ಮ ಹಣದ ಬಗ್ಗೆಯೂ ಜಾಗರೂಕರಾಗಿರುತ್ತಾರೆ, ಆದ್ದರಿಂದ ಮೊದಲೇ ಯೋಚಿಸದೆ ಏನನ್ನೂ ಮಾಡುವುದಿಲ್ಲ. 

ಈ ರಾಶಿಗಳು ದೈಹಿಕವಾಗಿಯಷ್ಟೇ ಅಲ್ಲ, ಮಾನಸಿಕವಾಗಿಯೂ ಸಖತ್ ಸ್ಟ್ರಾಂಗ್
 

Follow Us:
Download App:
  • android
  • ios