ರಾಕ್ಷಸರ ರಕ್ತ ಹೀರುವ ಕಾಳಿ ದೇವಿಯ ನಾಲಿಗೆ!
ಕಾಳಿ ದೇವಿಯನ್ನು ಸಾಮಾನ್ಯವಾಗಿ ನಾಲಿಗೆ ಕಳೆದುಕೊಂಡ ಉಗ್ರ ರೂಪದಲ್ಲಿಯೇ ನೋಡುತ್ತೇವೆ. ಈ ರೂಪದ ಹಿಂದಿನ, ಈ ನಾಲಿಗೆಯ ರಹಸ್ಯವೇನು ಗೊತ್ತಾ?
ಕಾಳಿ ದೇವಿಯು ಮಾ ದುರ್ಗೆಯ ಭಯಾನಕ ರೂಪ. ಅವಳು ಬ್ರಹ್ಮಾಂಡದ ದೈವಿಕ ಸ್ತ್ರೀ ಶಕ್ತಿಯ ಸಂಕೇತ. ಮಾ ಕಾಳಿ ಕೆಟ್ಟದ್ದನ್ನು ನಾಶ ಪಡಿಸುತ್ತಾಳೆ ಮತ್ತು ಅತ್ಯಂತ ಶಕ್ತಿಶಾಲಿಯಾಗಿದ್ದಾಳೆ. ಅವಳು ಮರ್ತ್ಯರು, ರಾಕ್ಷಸರು ಮತ್ತು ದೇವತೆಗಳಿಂದ ಸಮಾನವಾಗಿ ಪೂಜಿಸಲ್ಪಡುತ್ತಾಳೆ. ಕಾಳಿ ಎಂದರೆ ಕಾಲ ಎಂದರ್ಥ, ಕಪ್ಪು ಎಂಬರ್ಥವೂ ಇದೆ. ಕಾಳಿಯು ಶಿವನ ಜೊತೆಗಾತಿಯಾಗಿ ಪ್ರತಿನಿಧಿಸಲ್ಪಡುತ್ತಾಳೆ. ಶಿವನ ಶರೀರದ ಮೇಲೆ ಕಾಳಿ ನಿಂತಿರುತ್ತಾಳೆ. ಆಕೆ ಪಾರ್ವತಿ ದೇವಿಯ ಉಗ್ರ ರೂಪ. ದುಷ್ಟ ಸಂಹಾರಕಿ.
ಇತ್ತೀಚಿನ ದಿನಗಳಲ್ಲಿ ಮಾ ಕಾಳಿ(Goddess Kali) ವಿಶೇಷ ಚರ್ಚೆಯಲ್ಲಿದ್ದಾಳೆ. ಜನರು ಮಾ ಕಾಳಿಯ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ತಮಿಳು ಸಾಕ್ಷ್ಯಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ತಮ್ಮ ಚಿತ್ರದ ಪೋಸ್ಟರ್‌ನಲ್ಲಿ ಕಾಳಿ ದೇವಿಯನ್ನು ಸಿಗರೇಟ್ ಸೇದುವ ಹಾಗೆ ಮತ್ತು ಲೆಸ್ಬಿಯನ್ ಹಾಗೆ ಚಿತ್ರಿಸಿದ್ದರು. ಈ ಪೋಸ್ಟರ್ ಬಿಡುಗಡೆಯಾದ ತಕ್ಷಣ ಅಲ್ಲೋಲಕಲ್ಲೋಲ ಉಂಟಾಗಿತ್ತು. ಇದು ಹಿಂದೂ ಧರ್ಮದ ಅವಹೇಳನ. ಕಾಳಿ ದೇವಿಯು ಮಾ ದುರ್ಗೆಯ ಭಯಾನಕ ರೂಪ. ಕತ್ತಲ್ಲಿ ತಲೆಬುರುಡೆಗಳ ಹಾರ, ಹೊರ ಚಾಚಿರುವ ನಾಲಿಗೆ, ಕಪ್ಪು ಬಣ್ಣ, ಕೈಯ್ಯಲ್ಲಿ ರಕ್ತ ಇಳಿಯುತ್ತಿರುವ ಕತ್ತಿ. ಅವಳನ್ನು ಬ್ರಹ್ಮಾಂಡದ ದೈವಿಕ ಸ್ತ್ರೀ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಆಕೆ ಬಹಳ ಶಕ್ತಿಯುತ ನಾರಿ. ಎಲ್ಲ ಹೆಣ್ಣುಮಕ್ಕಳಿಗೆ ಧೈರ್ಯವನ್ನೂ, ಆದರ್ಶವನ್ನೂ ತುಂಬುವವಳು. ಆಕೆ ಮರ್ತ್ಯರು, ರಾಕ್ಷಸರು ಮತ್ತು ದೇವತೆಗಳಿಂದ ಸಮಾನವಾಗಿ ಪೂಜಿಸಲ್ಪಡುತ್ತಾಳೆ. ಕಾಳಿ ದೇವಿ ಯಾರು ಮತ್ತು ಆಕೆಯ ನಾಲಿಗೆ ಹೊರಳುವುದರ ಹಿಂದಿನ ರಹಸ್ಯವೇನು ಎಂದು ತಿಳಿಯೋಣ.
ಸೂರ್ಯಾಸ್ತದ ಸಮಯದಲ್ಲಿ ಈ ಕೆಲಸ ಮಾಡಿದ್ರೆ ತಾಯಿ ಲಕ್ಷ್ಮಿ ಕೋಪಿಸ್ತಾಳೆ
ರಕ್ತ ಬೀಜಾಸುರಿ
ರಕ್ತಬೀಜ ಎಂಬ ರಾಕ್ಷಸನಿಗೊಂದು ವರವಿತ್ತು. ಆತನ ಮೈಯಿಂದ ಭೂಮಿ ಮೇಲೆ ಬೀಳುವ ಪ್ರತಿ ಹನಿ ರಕ್ತದಿಂದಲೂ ಒಬ್ಬೊಬ್ಬ ರಕ್ತಬೀಜಾಸುರ(Demon) ಹುಟ್ಟುತ್ತಿದ್ದ. ಹೀಗಾಗಿ, ತನ್ನನ್ನು ಸಂಹರಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಆತ ಮೆರೆಯುತ್ತಿದ್ದ. ಮೂಲೋಕದಲ್ಲಿಯೂ ಸಮಸ್ಯೆ ಸೃಷ್ಟಿಸುತ್ತಾ, ಅಟ್ಟಹಾಸಗೈಯ್ಯುತ್ತಾ ಮೆರೆಯುತ್ತಿದ್ದ. ಈತನ ಉಪಟಳ ತಾಳಲಾಗದೆ ದೇವತೆಗಳು ಅವನೊಂದಿಗೆ ಹೋರಾಡಲು ನಿರ್ಧರಿಸಿದರು. ಆದರೆ, ಅವರು ಯಶಸ್ವಿಯಾಗದಿದ್ದಾಗ, ಅವರು ಮಾ ಕಾಳಿಯನ್ನು ತಲುಪಿದರು.
ತಾಯಿ ಕಾಳಿ ತನ್ನ ಭೀಕರ ರೂಪವನ್ನು ತೆಗೆದುಕೊಂಡು ದೇವತೆಗಳಿಗೆ ಸಹಾಯ ಮಾಡಲು ಯುದ್ಧಭೂಮಿಯನ್ನು ತಲುಪಿದಳು. ಯುದ್ಧದ ಸಮಯದಲ್ಲಿ, ಅವನ ಒಂದು ಹನಿ ರಕ್ತವನ್ನೂ ನೆಲದ ಮೇಲೆ ಬೀಳಲು ಬಿಡದೆ, ತನ್ನ ನಾಲಿಗೆಯನ್ನು ದೊಡ್ಡದಾಗಿ ಹೊರ ಚಾಚಿ, ಅದರಿಂದ ರಕ್ತಬೀಜನ ರಕ್ತವನ್ನೆಲ್ಲ ಕುಡಿದಳು. ರಕ್ತಬೀಜ ಸಾವನ್ನಪ್ಪಿದನು. ಆದರೆ, ಅವನೊಂದಿಗಿನ ಹೋರಾಟದಲ್ಲಿ ಕಾಳಿ ಅದೆಷ್ಟು ಆವೇಶಭರಿತಳಾಗಿದ್ದಳೆಂದರೆ ಯಾರಿಂದಲೂ ಆಕೆಯನ್ನು ಸಮಾಧಾನಪಡಿಸಲು ಸಾಧ್ಯವಾಗಲಿಲ್ಲ.
ಸೀರಿಯಲ್‌ಗಳಲ್ಲಿ ಜೋಗವ್ವ, ಕೊರವಂಜಿ ಶಕುನ, ಈಗ್ಲೂ ಜನ ಇದನ್ನೆಲ್ಲ ನಂಬ್ತಾರಾ?
ಆಗ ಎಲ್ಲ ದೇವಾನುದೇವತೆಗಳು ಶಿವನಿಗೆ ಮಹಾ ಕಾಳಿಯನ್ನು ಒಲಿಸಿಕೊಳ್ಳುವಂತೆ ಕೋರಿದರು. ಶಿವನು ಅನೇಕ ಪ್ರಯತ್ನಗಳನ್ನು ಮಾಡಿದರೂ ಆಕೆಯನ್ನು ಶಾಂತಗೊಳಿಸಲು ವಿಫಲನಾದನು. ಆಗ ಭೋಲೇನಾಥನು ಕಾಳಿಯನ್ನು ತಡೆಯಲು ಆಕೆಯ ಮುಂದೆ ಅಡ್ಡಲಾಗಿ ಮಲಗಿದನು. ಕೋಪದಿಂದ ಕುದಿಯುತ್ತಿದ್ದ ತಾಯಿ ಕಾಳಿ ತನ್ನ ಹೆಜ್ಜೆಗಳನ್ನು ಇಟ್ಟ ತಕ್ಷಣ, ತಾನು ಶಿವನ ಮೇಲೆ ಹೆಜ್ಜೆ ಹಾಕುತ್ತಿರುವುದನ್ನು ಅರಿತುಕೊಂಡಳು. ಈ ಅರಿವು ಬರುತ್ತಲೇ ಆಕೆ ಶಾಂತಳಾದಳು. ಕಾಳಿಗೆ ತನ್ನ ತಪ್ಪಿನ ಅರಿವಾದಾಗ ನಾಚಿಕೆಯಿಂದ ನಾಲಿಗೆ ಹೊರಳಿದಳು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.