ಮನೋಕೂಟ ಎಂದರೆ, ಎರಡು ಮನಸ್ಸುಗಳು ಒಂದೇ ಥರ ಸ್ಪಂದಿಸುವುದು ಅಥವಾ ಮಿಡಿಯುವುದು. ಸಾಮಾನ್ಯವಾಗಿ ಮದುವೆಯ ವಿಚಾರ ಬಂದಾಗ ಮನೋಕೂಟವನ್ನು ನೋಡಲಾಗುತ್ತದೆ. ಕೆಲವೊಮ್ಮೆ ವಧು- ವರರ ಗ್ರಹಗಳು ಅಥವಾ ಜಾತಕ ಕೂಡಿ ಬರದಿದ್ದರೂ ಚಿಂತೆಯಿಲ್ಲ; ಮನೋಕೂಟ ಸೇರಬೇಕು ಎನ್ನುತ್ತಾರೆ. ಹೀಗೆ ಮನೋಕೂಟ ಸೇರಿದವರ ಪ್ರೀತಿ, ಪ್ರೇಮ, ಸಾಂಗತ್ಯ ಮತ್ತು ದಾಂಪತ್ಯಗಳು ಸುಮಧುರವಾಗಿರುತ್ತವೆ. 
ಹಾಗಿದ್ದರೆ ನಿಮ್ಮ ರಾಶಿಗೆ ಯಾವ ರಾಶಿಯವರ ಮನೋಕೂಟ ಸೇರಿಬರುತ್ತದೆ ಅಂತ ನೋಡೋಣವೇ?

ಕನ್ಯಾ ರಾಶಿ
ಮನೋಕೂಟ ರಾಶಿಗಳು: ವೃಶ್ಚಿಕ, ಮಕರ, ಕಟಕ, ವೃಷಭ
ಕನ್ಯಾ ರಾಶಿಯವರ ಸೊಫಿಸ್ಟಿಕೇಟೆಡ್, ಜಟಿಲ ಸ್ವಭಾವದವರು, ಮಹತ್ವಾಕಾಂಕ್ಷೆ ಇರುವವರು ಹಾಗೂ ಅಚಲ ಶ್ರದ್ಧೆ ಹೊಂದಿರುವವರು. ಇವರ ಸಂಗಾತಿಗಳೂ ಸ್ವಲ್ಪ ಜಟಿಲ ಸ್ವಭಾವದರು ಆಗಿದ್ದರೆ ಇವರೊಡನೆ ಹೊಂದಿಕೊಂಡು ಹೋಗಬಲ್ಲರು. ಕೊಂಚ ಅದ್ಧೂರಿತನ, ಐಷಾರಾಮಿತನವನ್ನೂ ಇವರು ಅಪೇಕ್ಷಿಸುತ್ತಾರೆ. ಇವರು ಒಂದಿಡೀ ದಿನ ಸುಮ್ಮನಿದ್ದು ಏನೋ ಮಾಡುತ್ತ ಕಳೆದುಬಿಡುವವರಲ್ಲ. ಏನು ಮಾಡಿದರೂ ಅದರಲ್ಲಿ ಒಂದು ಮಹತ್ವಾಕಾಂಕ್ಷೆ, ಗುರಿ, ಶ್ರದ್ಧೆ ಹೊಂದಿದವರು. ತಮ್ಮ ಸಂಗಾತಿಗೂ ಅದೇ ಗುಣ ಇರಬೇಕು ಎಂದು ಅಪೇಕ್ಷಸುತ್ತಾರೆ. ಹಾಗೇ ತಮ್ಮ ಸಂಬಂಧಕ್ಕೂ ಅಚಲ ಬದ್ಧತೆಯನ್ನೂ ನಿರೀಕ್ಷಿಸುತ್ತಾರೆ.

ಮೇಷ, ವೃಷಭ. ಮಿಥುನ, ಕಟಕ ರಾಶಿಯವರಿಗೆ ಮನೋಕೂಟ ಯಾರ ಜೊತೆಗೆ? ...

ತುಲಾ ರಾಶಿ
ಮನೋಕೂಟ ರಾಶಿಗಳು: ಮಿಥುನ, ಕುಂಭ, ಧನು, ಸಿಂಹ
ಪ್ರೀತಿ ಪ್ರೇಮ ಹಾಗೂ ಮದುವೆಯ ವಿಚಾರ ಬಂದಾಗ ಇವರು ಬಹಳ ಮಹತ್ವಾಕಾಂಕ್ಷಿಗಳು. ಯಾರೋ ಒಬ್ಬ ಸಾಮಾನ್ಯ ವ್ಯಕ್ತಿಯ ಜೊತೆಗೆ ಸೆಟಲ್ ಆಗಲು ಇಚ್ಛೆಡುವವರೇ ಅಲ್ಲ. ಒಳ್ಳೆಯ ಸೌಂದರ್ಯ ಹೊಂದಿರಬೇಕು, ಒಳ್ಳೆಯ ಮೆದುಳು ಹೊಂದಿ ಚುರುಕಾಗಿ ಇರಬೇಕು, ಆತ್ಮವಿಶ್ವಾಸ ಇರಬೇಕು ಅಂತಊ ಅಪೇಕ್ಷಿಸುತ್ತಾರೆ. ಸೌಂದರ್ಯದ ಬಗ್ಗೆ ಇವರಿಗೆ ತುಂಬಾ ಅಪೇಕ್ಷೆ ಇರುವುದರಿಂದ ತಮ್ಮ ಸಂಗಾತಿ ಸುಂದರವಾಗಿರಬೇಕೆಂದು ಬಯಸುತ್ತಾರೆ. ಜಡ ಮೆದುಳಿನವರೊಡನೆ ಇವರಿಗೆ ಬೋರ್ ಆಗಿಬಿಡುತ್ತದೆ. ಹೀಗಾಗಿ ಸಂಗಾತಿಯೂ ಚುರುಕಾದ ಬುದ್ಧಿಶಕ್ತಿ ಹೊಂದಿರಬೇಕು ಎಂಬ ಅಪೇಕ್ಷೆ. 


ವೃಶ್ಚಿಕ ರಾಶಿ
ಮನೋಕೂಟ ರಾಶಿಗಳು: ಮೀನ, ಕನ್ಯಾ, ಕಟಕ, ಮಕರ
ವೃಶ್ಚಿಕ ರಾಶಿಯವರ ಪ್ರೀತಿ ಪ್ರೇಮಗಳು ತುಂಬಾ ಆಳವಾದದ್ದು, ಬದ್ಧತೆಯುಳ್ಳದ್ದು, ತೀವ್ರವಾದದ್ದು ಹಾಗೂ ಯಾವುದೇ ಶರತ್ತುಗಳನ್ನು ಹಾಕದೆ ಇರುವಂಥದ್ದು. ಆದರೆ ತಮ್ಮೊಳಗಿನ ಒಂದು ಕಿಚ್ಚನ್ನು ಹೊತ್ತಿಸಬಲ್ಲ ಇನ್ನೊಬ್ಬರನ್ನು ಅವರು ಸದಾ ಅಪೇಕ್ಷೆ ಪಡುತ್ತಿರುತ್ತಾರೆ. ಇವರಿಗೆ ಮಾದರಿ ಸಂಗಾತಿ ಎಂದರೆ ಆಳವಾದ ಕಲ್ಪನೆ, ಕಲ್ಪನಾಶೀಲತೆ ಹೊಂದಿರುವವರು, ತುಂಬಾ ಯೋಚಿಸುವವರು ಹಾಗೂ ತೀವ್ರವಾಗಿ ಭಾವಿಸುವವರು. ಆದರೆ ಇವರು ತಮ್ಮ ಎಲ್ಲ ಭಾವನೆಯನ್ನೂ ಒಂದೇ ಸಲ ವ್ಯಕ್ತಪಡಿಸುವುದಿಲ್ಲ. ಇವರ ಪ್ರೀತಿಯೂ ನಿಗೂಢವಾದುದು. ಹಾಗೇ ತುಂಬಾ ಚುರುಕಾದವರತ್ತಲೂ ಆಕರ್ಷಿತರಾಗುತ್ತಾರೆ.

ವೇದವ್ಯಾಸರು ಭಾಗವತ ಬರೆಯಲು ಪ್ರೇರಣೆಯೇನು? ...

ಧನು ರಾಶಿ
ಮನೋಕೂಟ ರಾಶಿಗಳು: ಸಿಂಹ, ಕುಂಭ, ಮೇಷ, ತುಲಾ
ಧನು ರಾಶಿಯವರು ತಮ್ಮ ಸ್ವಾತಂತ್ರ್ಯ ಹಾಗೂ ಮುಕ್ತತೆಯನ್ನು ತುಂಬಾ ಗೌರವಿಸುತ್ತಾರೆ. ಅದನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಹೀಗಾಗಿ ತುಂಬಾ ಪೊಸೆಸಿವ್ ಆಗಿರುವವರು ತಮ್ಮ ಸುತ್ತ ಇರುವುದನ್ನು ಇಷ್ಟಪಡುವುದಿಲ್ಲ. ಇವರಿಗೆ ಮಾದರಿ ಸಂಗಾತಿಗಳೆಂದರೆ ತಮಾಷೆಯನ್ನು ಇಷ್ಟಪಡುವವರು, ಹ್ಯೂಮರ್ ಸೆನ್ಸ್ ಇರುವವರು, ಬದುಕಿನ ಕಡೆಗೆ ಮುಕ್ತವಾದ ಅಪ್ರೋಚ್ ಹೊಂದಿರುವವರು. ತಮ್ಮನ್ನು ಒಂದು ಗುರಿಯ ಕಡೆಗೋ ಒಂದು ಸಂಬಂಧದ ಕಡೆಗೋ ಕಟ್ಟಿ ಹಾಕುವವರನ್ನು ಇವರು ಎಂದೂ ಇಷ್ಟಪಡುವುದಿಲ್ಲ. ಇವರು ಎಂದೂ ಫಿಕ್ಸ್ ಆಗುವುದಿಲ್ಲ. ಸಂಗಾತಿ ಮುಕ್ತವಾಗಿ ತನ್ನಷ್ಟಕ್ಕೆ ಬೆಳೆದರೆ ಇವರಿಗೆ ಖುಷಿ.

ಮಕರ ರಾಶಿ
ಮನೋಕೂಟ ರಾಶಿಗಳು: ಮೀನ, ವೃಷಭ, ಕನ್ಯಾ, ವೃಶ್ಚಿಕ
ಇವರಿಗೆ ಸಂಗಾತಿಗಳು ಕ್ಲಾಸಿಕ್ ಆಗಿರಬೇಕು, ಸ್ಟೈಲಿಶ್ ಆಗಿರಬೇಕು, ಹಾಗೂ ತಮ್ಮ ಜೊತೆಗಿನ ಸಂಬಂಧದಲ್ಲಿ ಕೊನೆಯವರೆಗೂ ನಿಷ್ಠೆ ಹೊಂದಿರಬೇಕು. ಲವರ್‌ಗಳ ವಿಷಯ ಬಂದಾಗ ಇವರು ತುಂಬಾ ಚೂಸಿ ಆಗಿರುವವರು. ತಮ್ಮ ಐಡಿಯಲ್ ಪಾರ್ಟ್‌ನರ್ ಸ್ಟೈಲಿಶ್ ಆಗಿರಬೇಕು ಎಂಬುದು ಇವರಿಷ್ಟ. ಅದರಲ್ಲಿ ಇವರು ಹೆಮ್ಮೆಯನ್ನು ಕಾಣುತ್ತಾರೆ. ಹಾಗೇ ತಮ್ಮ ಸಂಗಾತಿಗಳ ಜೊತೆಗೆ ಬೌದ್ಧಿಕವಾದ, ಭಾವನಾತ್ಮಕವಾದ ಸಂಬಂಧವನ್ನು ಹೊಂದಿರುವುದೂ ಇವರಿಗೆ ಇಷ್ಟ. ಅಂಥವರನ್ನು ಸದಾ ಹುಡುಕುತ್ತ ಇರುತ್ತಾರೆ. ಅದೇ ಅರ್ಥಪೂರ್ಣ ಬದುಕಿನ ದಾರಿ ಎಂದು ನಂಬಿರುತ್ತಾರೆ.

ಈ ರಾಶಿಯ ಸ್ತ್ರೀಯರಿಗೆ ತಮಗಿಂತ ಕಡಿಮೆ ವಯಸ್ಸಿನ ಗಂಡಸರೇ ಇಷ್ಟ! ...

ಕುಂಭ ರಾಶಿ
ಮನೋಕೂಟ ರಾಶಿಗಳು: ತುಲಾ, ಮೇಷ, ಮಿಥುನ, ಧನು
ಕುಂಭ ರಾಶಿಯವರು ಸಾಮಾನ್ಯವಾಗಿ ಕ್ರೇಜಿಯಾಗಿ ಇರುವವರು. ಕೆಲವು ಸಂಬಂಧಗಳನ್ನು, ಕೆಲವೊಮ್ಮೆ ಕೆರಿಯರ್ ಅನ್ನು ಕೂಡ ಕ್ರೇಜಿಯಾಗಿ ತೆಗೆದುಕೊಳ್ಳುತ್ತಿರುತ್ತಾರೆ. ಇಂಥವರು ತಮಗೆ ಕ್ರೇಜಿ ಪಾರ್ಟ್‌ನರ್‌ ಬೇಕು ಎಂದು ಅಪೇಕ್ಷಿಸಿದರೆ ಅದೇನೂ ವಿಚಿತ್ರವಲ್ಲ. ಅಡ್ವೆಂಚರ್ ಎಂದರೆ ಇವರಿಗೆ ಪ್ರೀತಿ. ಚುರುಕಾದ, ಚುಟುಕಾದ ಸೆನ್ಸ್ ಆಫ್ ಹ್ಯೂಮರ್ ಇದ್ದ ಸಂಗಾತಿಗಳು ಇವರಿಗೆ ಭಯಂಕರ ಇಷ್ಟ. ಶಾರ್ಪ್ ವಿಟ್ ಕೂಡ ಇದ್ದರೆ ಚೆನ್ನ. ನೀವು ಇವರನ್ನು ನಗುವಂತೆ ಮಾಡಿದರೆ, ಇವರು ನಿಮಗೆ ಬೇಕಾಗಿ ಏನನ್ನು ಮಾಡಲೂ ಸಿದ್ಧರಿರುತ್ತಾರೆ. ಇವರು ಪಾಕಪ್ರಿಯರು. ತಮಗೆ ಪಾಕಪ್ರಿಯರೇ ಸಿಕ್ಕರೆ ಇನ್ನಷ್ಟು ಸಂತೋಷಪಡುತ್ತಾರೆ.

ಮೀನ ರಾಶಿ
ಮನೋಕೂಟ ರಾಶಿಗಳು: ಕಟಕ, ವೃಶ್ಚಿಕ, ಮಕರ, ವೃಷಭ
ಇವರು ತಮ್ಮದೇ ಲೋಕದಲ್ಲಿ ಸಾಮಾನ್ಯವಾಗಿ ವಿಹರಿಸುತ್ತ ಇರುತ್ತಾರೆ. ಬದುಕನ್ನು ಸೀರಿಯಸ್ಸಾಗಿ ಪರಿಗಣಿಸುವವರು ಇವರಲ್ಲ. ಹೀಗಾಗಿ ಆತ್ಮವಿಶ್ವಾಸ ಹೊಂದಿದವರು ಮತ್ತು ಇವರನ್ನು ಖುಷಿಯಾಗಿ ಇಡುವವರು ಇವರ ಆಯ್ಕೆ. ಅಡ್ವೆಂಚರ್‌ ಇಷ್ಪಡುವವರಿಂದ ಸ್ವಲ್ಪ ದೂರ. ಹಾಗಂತ ಅದರಿಂದ ದೊರೆಯುವ ಖುಷಿ ಬೇಡವೆಂದಲ್ಲ. ವೈಲ್ಡ್ ಆಗಿ, ಕ್ರಿಯೇಟಿವ್ ಆಗಿ ಇರುವವರನ್ನು ಅಭಿಮಾನದಿಂದ ನೋಡುತ್ತಾರೆ. ತಮ್ಮನ್ನು ಆಳವಾಗಿ ಅರ್ಥ ಮಾಡಿಕೊಳ್ಳುವವರನ್ನು, ಆತ್ಮ ಸಾಂಗತ್ಯ ಬೆಳೆಸಿಕೊಳ್ಳಬಲ್ಲವರನ್ನು ಬಯಸುತ್ತಾರೆ.