ಮೇಷ, ವೃಷಭ. ಮಿಥುನ, ಕಟಕ ರಾಶಿಯವರಿಗೆ ಮನೋಕೂಟ ಯಾರ ಜೊತೆಗೆ?
ಗ್ರಹಕೂಟದಂತೆಯೇ ಮನೋಕೂಟವೂ ಇರುತ್ತದೆ. ಮನೋಕೂಟ ಎಂದರೆ ಮನಸ್ಸುಗಳು ಸೇರಿ ಬರುವುದು. ಜಾತಕ ಸೇರುವುದಕ್ಕಿಂತಲೂ ಮನಸ್ಸು ಸೇರುವುದು ಮುಖ್ಯ. ಮನೋಕೂಟಕ್ಕೂ ರಾಶಿಗಳಿಗೆ ಸಂಬಂಧವಿದೆ ಗೊತ್ತಾ?
ಗ್ರಹಸ್ಥಿತಿಯಲ್ಲಿ ಗ್ರಹಕೂಟ ಎಂಬುದು ಇರುತ್ತದೆ. ಹಾಗೆಂದರೆ, ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ಸರಳರೇಖೆಯಲ್ಲಿ ಬರುವಂತೆ ಒಟ್ಟುಗೂಡುವುದು. ಕೆಲವೊಮ್ಮೆ ಈ ಗ್ರಹಕೂಟವನ್ನು ಆಕಾಶದಲ್ಲೂ ನಾವು ಬರಿಗಣ್ಣಿನಿಂದ ಅಥವಾ ಸೂಕ್ಷ್ಮದರ್ಶಕದಿಂದಲೂ ನೋಡಬಹುದು. ಈ ಗ್ರಹಕೂಟಗಳು ಸೇರಿದಾಗ ನಾನಾ ಶುಭಾಶುಭ ಫಲಗಳು ಆಯಾ ಜಾತಕನಿಗೆ ಇರುತ್ತವೆ.
ಅದಿರಲಿ. ಈಗ ಮನೋಕೂಟವನ್ನು ನೋಡೋಣ. ಮನೋಕೂಟ ಎಂದರೆ, ಎರಡು ಮನಸ್ಸುಗಳು ಒಂದೇ ರೀತಿಯಲ್ಲಿ ಭಾವಿಸುವುದು, ಸ್ಪಂದಿಸುವುದು ಅಥವಾ ಮಿಡಿಯುವುದು. ಸಾಮಾನ್ಯವಾಗಿ ಮದುವೆಯ ವಿಚಾರ ಬಂದಾಗ ಮನೋಕೂಟವನ್ನು ನೋಡಲಾಗುತ್ತದೆ. ಕೆಲವೊಮ್ಮೆ ವಧು- ವರರ ಗ್ರಹಗಳು ಅಥವಾ ಜಾತಕ ಕೂಡಿ ಬರದಿದ್ದರೂ ಚಿಂತೆಯಿಲ್ಲ; ಮನೋಕೂಟ ಸೇರಬೇಕು ಎನ್ನುತ್ತಾರೆ. ಹೀಗೆ ಮನೋಕೂಟ ಸೇರಿದವರ ಪ್ರೀತಿ, ಪ್ರೇಮ, ಸಾಂಗತ್ಯ ಮತ್ತು ದಾಂಪತ್ಯಗಳು ಸುಮಧುರವಾಗಿರುತ್ತವೆ.
ಹಾಗಿದ್ದರೆ ನಿಮ್ಮ ರಾಶಿಗೆ ಯಾವ ರಾಶಿಯವರ ಮನೋಕೂಟ ಸೇರಿಬರುತ್ತದೆ ಅಂತ ನೋಡೋಣವೇ?
ಮೇಷ ರಾಶಿ
ಮನೋಕೂಟ ರಾಶಿಗಳು: ಮೇಷ, ಸಿಂಹ, ಧನು, ಮಿಥುನ, ಕುಂಭ
ಮೇಷ ರಾಶಿಯವರು ದೈನಂದಿನ ಕೆಲಸಗಳಲ್ಲೂ ಮುನ್ನುಗ್ಗುವ, ಆಕ್ರಮಣಕಾರಿ ಸ್ವಭಾವದವರು. ಇವರು ತಮ್ಮಂಥದೇ ಗುಣವುಳ್ಳ ಅಥವಾ ತಮ್ಮೊಂದಿಗೆ ಸಮಾನ ವೇಗದಿಂದ ಸಾಗಬಲ್ಲ ಸಂಗಾತಿಗಳನ್ನು ಬಯಸುತ್ತಾರೆ. ಇವರಿಗೆ ಲೈಫು ಯಾವಾಗಲೂ ಫಾಸ್ಟ್ ಲೇನ್‌ನಲ್ಲಿ ಇರಬೇಕು. ಆತ್ಮವಿಶ್ವಾಸ ಹೊಂದಿರುವ, ಯಾವಾಗಲೂ ತಮ್ಮನ್ನು ಕೆಳಗೆ ಬೀಳಲು ಬಿಡದ, ತಮ್ಮ ಆತ್ಮವಿಶ್ವಾಸವನ್ನೂ ಎತ್ತಿ ಹಿಡಿಯಬಲ್ಲ ಸಂಗಾತಿಗಳನ್ನು ಇವರು ಬಯಸುತ್ತಾರೆ.
ವೃಷಭ ರಾಶಿ
ಮನೋಕೂಟ ರಾಶಿಗಳು: ಕಟಕ, ಮಕರ, ಕನ್ಯಾ, ಮೀನ
ಇವರು ತಮಗೆ ಅತ್ಯಂತ ನಿಷ್ಠೆ ತೋರಿಸುವ, ತಮಗೆ ಸದಾ ಪ್ರೀತಿ ತೋರಿಸುವ ಸಂಗಾತಿಗಳನ್ನು ಬಯಸುತ್ತಾರೆ. ವೃಷಭ ರಾಶಿಯವರ ಸ್ವಭಾವವೂ ಅಂಥದೇ. ಇವರು ಒಬ್ಬ ಸಂಗಾತಿಯನ್ನು ಆರಿಸಿಕೊಂಡರೆ ಜೀವನಪೂರ್ತಿ ಅವರಿಗೆ ನಿಷ್ಠೆ, ಶ್ರದ್ಧೆ, ಪ್ರೀತಿಗಳನ್ನು ತೋರುತ್ತಾರೆ. ತಮ್ಮ ಸಂಗಾತಿಯಿಂದಲೂ ಅದನ್ನೇ ಬಯಸುತ್ತಾರೆ. ಮೈಂಡ್‌ಗೇಮ್‌ಗಳನ್ನು ಆಡಲು ಇವರ ಬಳಿ ಸಮಯ ಇರೋಲ್ಲ. ಸಂಗಾತಿಯಿಂದಲೂ ಅದನ್ನು ನಿರೀಕ್ಷಿಸಲಾರರು. ಜಗತ್ತಿನಲ್ಲಿ ತಾವು ಮಾತ್ರ ಇರೋದು ಎಂಬ ಭಾವನೆಯನ್ನು ಸೃಷ್ಟಿಸುವಂಥ ಸಂಗಾತಿಗಳನ್ನು ಇವರು ಹೆಚ್ಚು ಇಷ್ಟಪಡುತ್ತಾರೆ.
ಈ ರಾಶಿಯ ಸ್ತ್ರೀಯರಿಗೆ ತಮಗಿಂತ ಕಡಿಮೆ ವಯಸ್ಸಿನ ಗಂಡಸರೇ ಇಷ್ಟ! ...
ಮಿಥುನ ರಾಶಿ
ಮನೋಕೂಟ ರಾಶಿಗಳು: ಸಿಂಹ, ತುಲಾ, ಮೇಷ, ಕುಂಭ
ಸ್ವಲ್ಪ ತುಂಟ, ತರಲೆ. ಲೈಟಾಗಿ ಫ್ಲರ್ಟಿಂಗ್ ಮಾಡುವ ಸ್ವಭಾವ ಇದ್ದವರನ್ನೂ ಈ ರಾಶಿಯವರು ಇಷ್ಟಪಡುತ್ತಾರೆ. ಬುದ್ಧಿವಂತಿಕೆಯಂತೂ ಇರಬೇಕು. ಸೆನ್ಸ್ ಆಫ್ ಹ್ಯೂಮರ್ ಇದ್ದರೆ ತುಂಬಾ ಒಳ್ಳೆಯದು. ಅಲ್ಪಸ್ವಲ್ಪ ಭಿನ್ನಾಭಿಪ್ರಾಯ ಇದ್ದರೆ ಪರವಾಗಿಲ್ಲ, ಅಡ್ಜಸ್ಟ್ ಮಾಡುತ್ತಾರೆ. ಹಾಗೆ ವ್ಯತ್ಯಾಸಗಳು ಇರೋದರಿಂದಲೇ ದಾಂಪತ್ಯ ಇನ್ನೂ ಇಂಟರೆಸ್ಟಿಂಗ್ ಅನಿಸುತ್ತಂತೆ ಅವರಿಗೆ. ಒಟ್ಟಾರೆಯಾಗಿ ಬದುಕು ಬೋರಿಂಗ್ ಆಗಿರಬಾರದು, ಇನ್ನೂ ಇನ್ನೂ ಕುತೂಹಲ ಮೂಡಿಸುವಂತೆ ಇರಬೇಕು.
2020ರ ಕಡೆಯ ಚಂದ್ರ ಗ್ರಹಣ, ಯಾರಿಗೆ, ಏನು ಫಲ? ...
ಕಟಕ ರಾಶಿ
ಮನೋಕೂಟ ರಾಶಿಗಳು: ವೃಶ್ಚಿಕ, ವೃಷಭ, ಮೀನ, ಕನ್ಯ
ಕಟಕ ರಾಶಿಯವರು ನಿಜಕ್ಕೂ ದೊಡ್ಡ ಹೃದಯದವರು, ಉದಾರಿಗಳು, ಊರಿಗೆಲ್ಲ ಹಂಚಬಲ್ಲಷ್ಟು ಪ್ರೀತಿಯನ್ನು ಹೊಂದಿದವರು. ಆದರೆ ಇವರ ಪ್ರೀತಿಯನ್ನು ಪಡೆಯಬೇಕಿದ್ದರೆ ನೀವೂ ಅಷ್ಟೇ ಪ್ರೀತಿಯನ್ನು ತೋರಿಸಬೇಕಾದ್ದು ಅಗತ್ಯ. ತಮ್ಮ ಬುದ್ದಿಯನ್ನು ಪ್ರಚೋದಿಸಬಲ್ಲ, ತಮ್ಮನ್ನು ಬೆಳೆಸಬಲ್ಲಂಥ ಬುದ್ಧಿವಂತರನ್ನೂ ಇವರು ಅಪೇಕ್ಷೆಪಡುತ್ತಾರೆ. ತಾವು ಪ್ರೀತಿಸಿದವರನ್ನು ತಾವು ಸ್ಪೆಶಲ್ ಎಂಬ ಭಾವನೆ ಮೂಡುವಂತೆ ಮಾಡುವುದು ಇವರ ವಿಶೇಷ. ಸ್ವಾರ್ಥಕ್ಕೆ ಇವರಲ್ಲಿ ಸಮಯವಿಲ್ಲ. ಹೀಗಾಗಿ ಇವರ ಸಂಗಾತಿಗಳೂ ನಿಸ್ವಾರ್ಥಿಗಳಾಗಿರಲು ಬಯಸುತ್ತಾರೆ.
ಹಣ ದೇವತೆ ಲಕ್ಷ್ಮೀದೇವಿ ಮೈಬಣ್ಣ ಕಪ್ಪು ಆಗಿದ್ರೆ ಏನಾಗುತ್ತೆ? ...
ಸಿಂಹ ರಾಶಿ
ಮನೋಕೂಟ ರಾಶಿಗಳು: ಮಿಥುನ, ತುಲಾ, ಕುಂಭ, ಮೇಷ
ಸ್ವಲ್ಪ ನಿಗೂಢವಾಗಿರುವ, ಹೆಚ್ಚು ಆತ್ಮವಿಶ್ವಾಸ ಹೊಂದಿರುವ, ತಮ್ಮನ್ನು ಸದಾ ತುದಿಗಾಲಲ್ಲಿ ನಿಲ್ಲಿಸಬಲ್ಲಂಥ ಸ್ವಭಾವದ ಸಂಗಾತಿ ಇವರಿಗೆ ಇಷ್ಟ. ಸಿಂಹ ರಾಶಿಯವರು ಯಾವಾಗಲೂ ತಮಗಿಂತ ಬುದ್ಧೀವಂತರಾದ, ಆದರೆ ನಿಗೂಢರಾದ ವ್ಯಕ್ತಿಗಳ ಕಡೆಗೆ ತುಡಿಯುತ್ತಾರೆ. ಸಾಹಸಿ ಸ್ವಭಾವದವರು ಎಂದರೆ ತುಂಬಾ ಇಷ್ಟ. ಅವರ ಸಾಹಸಗಳಲ್ಲಿ ಇವರೂ ಪಾಲ್ಗೊಳ್ಳಲು ಬಯಸುತ್ತಾರೆ. ಮುಂದೇನು ಎಂಬ ನಿಶ್ಚಿತತೆ ಇಲ್ಲದ ಬಾಂಧವ್ಯಗಳು ಇವರಲ್ಲಿ ಸ್ವಾರಸ್ಯವನ್ನು ಹೆಚ್ಚಿಸುತ್ತವೆ. ಅಂಥವರ ಕಡೆ ಹೆಚ್ಚಿನ ಕುತೂಹಲ.