ನಮ್ಮಲ್ಲಿ ಮದುವೆಯ ವಯಸ್ಸನ್ನು ಗಂಡಿಗೆ ಇಪ್ಪತ್ತೊಂದು ವರ್ಷ ಅಂತಲೂ, ಹೆಣ್ಣಿಗೆ ಹದಿನೆಂಟು ವರ್ಷ ಅಂತಲೂ ಫಿಕ್ಸು ಮಾಡಿದ್ದಾರೆ. ಅಂದರೆ ಮದುವೆಯಾಗುವಾಗ ಹೆಣ್ಣು ಸಣ್ಣ ಪ್ರಾಯದವಳಿರುತ್ತಾಳೆ, ಗಂಡು ದೊಡ್ಡವನಿರಬೇಕು ಎಂಬುದು ಒಂದ ಉಸಾಮಾನ್ಯ ಗ್ರಹಿಕೆ. ಅದು ಹಾಗೇ ನಡೆದುಕೊಂಡು ಬಂದಿದೆ. ನಮ್ಮಲ್ಲಿ ಅಧಿಕಾರ ಚಲಾಯಿಸುವುದು ಹೆಚ್ಚಾಗಿ ಗಂಡಸೇ ಆದ್ದರಿಂದ, ಮದುವೆಯಾಗುವಾಗ ಹೆಣ್ಣು ಸಣ್ಣವಳಾಗಿರುವಂತೆ ನೋಡಿಕೊಳ್ಳುವುದು ಸ್ವಾಭಾವಿಕ. ಆದರೆ ಪ್ರೇಮ ಪ್ರಕರಣಗಳು ಹಾಗೂ ಮದುವೆಗಳು ನಡೆಯತೊಡಗಿದಾಗ ಈ ಸಮೀಕರಣ ತಲೆಕೆಳಗಾಗತೊಡಗಿತು. ಗಂಡಿಗಿಂತ ಹೆಚ್ಚು ಪ್ರಾಯದ ಹೆಣ್ಣುಮಕ್ಕಳು ತಮಗಿಂತ ಕಡಿಮೆ ಪ್ರಾಯದ ಹುಡುಗರನ್ನು ಮದುವೆಯಾಗತೊಡಗಿದರು. ಉದಾಹರಣೆಗೆ, ಸಚಿನ್‌ ತೆಂಡುಲ್ಕರ್‌ ಮತ್ತು ಅಂಜಲಿ ತೆಂಡುಲ್ಕರ್. ಸಚಿನ್ ಅವರ ಪತ್ನಿ ಸಚಿನ್‌ಗಿಂತ ಐದು ವರ್ಷ ದೊಡ್ಡವರು. 
ಹಾಗಿದ್ದರೆ ಯಾವ ರಾಶಿಯ ಸ್ತ್ರೀಯರು ಸಾಮಾನ್ಯವಾಗಿ ತಮಗಿಂತ ಸಣ್ಣ ಪ್ರಾಯದ ಹುಡುಗರನ್ನು ಬಾಯ್‌ಫ್ರೆಂಡ್ ಆಗಿ ಅಥವಾ ಗಂಡನಾಗಿ ಆರಿಸಿಕೊಳ್ತಾರೆ ಅಂತ ನೋಡೋಣವೇ?

ಕಟಕ ರಾಶಿ
ಈ ರಾಶಿಯ ಹೆಣ್ಣುಮಕ್ಕಳು ಸಾಮಾನ್ಯವಾಗಿ ತಾಯ್ತನದ ಸ್ವಭಾವದವರು. ತಮ್ಮ ಕುಟುಂಬದವರನ್ನು ತನಗಿಂತ ಸಣ್ಣವರೇ ಇರಲಿ, ದೊಡ್ಡವರೇ ಇರಲಿ, ತಾಯಿಯಂತೆ ನೋಡಿಕೊಳ್ಳುವುದು ಸಾಮಾನ್ಯ. ಇಂತವರು ಸಾಮಾನ್ಯವಾಗಿ ತಮಗಿಂತ ಸಣ್ಣ ಪ್ರಾಯದ ಹುಡುಗರತ್ತ ಆಕರ್ಷಿತರಾಗುತ್ತಾರೆ. ಪೋಷಿಸುವುದು ಇವರ ಸಹಜ ಗುಣ. ಇವರ ಇನ್ನೊಂದು ಸ್ವಭಾವ ಎಂದರೆ ತಮ್ಮ ತಪ್ಪುಗಳನ್ನು ಮುಚ್ಚಿಡಲು ಬಯಸುವುದು. ಅದಕ್ಕಾಗಿ ತಮಗಿಂತ ಸಣ್ಣವರನ್ನು ಆರಿಸಿಕೊಳ್ಳುತ್ತಾರೆ. ನಿಮಗಿಂತ ಸಣ್ಣವರ ತಪ್ಪುಗಳನ್ನು ನೀವು ಕ್ಷಮಿಸಿದರೆ ಅವರೂ ನಿಮ್ಮ ತಪ್ಪುಗಳನ್ನು ಕ್ಷಮಿಸುವುದು ಸಹಜ ಅಲ್ಲವೇ?

ಮೇಷ ರಾಶಿ
ಮೇಷ ರಾಶಿಯವರು ತಮಗಿಂತ ಸಣ್ಣ ಪ್ರಾಯದವರನ್ನು ಆರಿಸಿಕೊಳ್ಳುವುದು, ತಮ್ಮ ಕ್ರಿಯೆಗಳನ್ನು ಇನ್ನೊಬ್ಬರು ಅನುಸರಿಸಲಿ ಎಂಬ ಕಾರಣದಿಂದ. ಇನ್ನೊಬ್ಬರನ್ನು ಪ್ರಭಾವಿಸುವುದು ಇವರಿಗೆ ಅತ್ಯಂತ ಇಷ್ಟದ ಕ್ರಿಯೆ. ಹಾಗೇ ತಮಗಿಂತ ಸಣ್ಣವರಲ್ಲಿ ಇವರು ತಮ್ಮನ್ನೇ ಕಾಣುತ್ತಾರೆ. ಅಂದರೆ ತಮಗೆ ವಯಸ್ಸಾಗಿಲ್ಲ ಅಂತ ಕಾಣಿಸಿಕೊಳ್ಳೋಕೆ ಇವರಿಗೆ ಇಷ್ಟ. ತಮ್ಮಿಂದ ಸಣ್ಣವರಲ್ಲಿ ತಮ್ಮ ಹರೆಯವನ್ನು ಬಚ್ಚಿಡುವ ಬುದ್ಧಿ ಇವರದು. ಹುಡುಗುತನವನ್ನು ತುಂಬಾ ಇಷ್ಟಪಡುತ್ತಾರೆ. ಸಂಗಾತಿಯ ಸಣ್ಣಸಣ್ಣ ಬಾಲಿಶ ಕ್ರಿಯೆಗಳನ್ನು ಇಷ್ಟಪಡುತ್ತಾರೆ. 

ವೃಷಭ ರಾಶಿ
ಇವರು ರಕ್ಷಿಸುವ ಸ್ವಭಾವದವರು. ತಮ್ಮ ಅಧಿಕಾರ ಹಾಗೂ ಮಮತೆಯ ವ್ಯಾಪ್ತಿಯ ಕಕ್ಷೆಯಲ್ಲಿ ಬರುವ ಎಲ್ಲವರನ್ನು ತಾನೇ ರಕ್ಷಿಸುವ ಹೊಣೆ ಹೊರುತ್ತಾರೆ. ಹೀಗಾಗಿ ಸಂಗಾತಿಯೊಂದಿಗಿನ ಸಂಬಂಧದಲ್ಲಿಯೂ ಸಹ ಅವರನ್ನು ರಕ್ಷಿಸುವ ಪಾತ್ರವನ್ನು ತಾವೇ ವಹಿಸುವ ಹೊಣೆ ಹೊರುತ್ತಾರೆ. ಇವರು ತಮಗಿಂತ ಕೆಳಗಿನವರ ಮೇಲೆ ಸ್ವಲ್ಪ ಅಧಿಕಾರ ಚಲಾಯಿಸುವುದನ್ನೂ ಅಪೇಕ್ಷಿಸುತ್ತಾರೆ. ಸಂಗಾತಿ ಸಣ್ಣ ಪ್ರಾಯದವನಾಗಿದ್ದರೆ ಈ ಆರ್ಡರ್ ಚಲಾಯಿಸುವಿಕೆ ಸಲೀಸಾಗಿ ನಡೆಯುತ್ತದೆ. ಅದಕ್ಕಾಗಿಯೇ ಕಿರಿಯ ಸಂಗಾತಿಯನ್ನು ಬಯಸುಬಹುದು.

ಜ್ಯೋತಿಷ್ಯದ ಈ ನಿಯಮಗಳನ್ನು ಅನುಸರಿಸಿದರೆ ಉಜ್ವಲವಾಗುತ್ತೆ ಲೈಫ್ ...

ಮಿಥುನ ರಾಶಿ 
ಇವರು ತಮ್ಮಂತೆಯೇ ಇರುವ ವ್ಯಕ್ತಿಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅಂದರೆ ತಮ್ಮದೇ ಪ್ರಾಯದ ಸಂಗಾತಿಗಳಾಗಿದ್ದರೆ ತಮ್ಮದೇ ಥರದ ತಲೆಮಾರಿನ ಆಸೆ ಆಮಿಷಗಳನ್ನು ಬಯಕೆಗಳನ್ನೂ ಸಣ್ಣತನ ಇತ್ಯಾದಿಗಳನ್ನೂ ಹೊಂದಿರುವವರಾಗಿರುತ್ತಾರೆ. ಅಂತವರ ಜೊತೆಗೆ ತಮಾಷೆ ಮಾಡುತ್ತ ಎಂಜಾಯ್ ಮಾಡುತ್ತ ಇರುವುದು ಎಂದರೆ ಅವರಿಗೆ ತುಂಬ ಇಷ್ಟ. ಗಂಡಸಿಗೆ ಹೆಚ್ಚು ವಯಸ್ಸಾದರೆ ಅವರು ತಮಾಷೆ ಸ್ವಭಾವ ಕಳೆದುಕೊಳ್ತಾರೆ, ತಮಾಷೆಯಾಗಿರೊಲ್ಲ ಎಂಬುದು ಇವರ ಕಂಪ್ಲೇಂಟು. ಫ್ಲರ್ಟ್ ಮಾಡುವ ಸ್ವಭಾವವನ್ನೂ ಇವರು ಹೊಂದಿರುತ್ತಾರೆ. ಆದ್ದರಿಂದ ಇವರಿಗೆ ಕಿರಿಯರೇ ಸೂಕ್ತ ಸಂಗಾತಿ.

ಸಿಂಹ, ತುಲಾ, ಕಟಕ ರಾಶಿಯವರೇ ದಯವಿಟ್ಟು ಗಮನಿಸಿ ...

ವೃಶ್ಚಿಕ ರಾಶಿ
ಇವರು ಪ್ಯಾಷನೇಟ್ ಆದ, ಇಂಟಿಮೇಟ್ ಆದ ಸಂಬಂಧಗಳನ್ನು ಇಷ್ಟಪಡುತ್ತಾರೆ. ದಾಂಪತ್ಯದಲ್ಲಿಯೂ ಹಾಗಿರುವುದು ಇವರಿಗೆ ಇಷ್ಟ. ಕಿರಿಯರಲ್ಲಿ ಸಂಬಂಧಗಳ ಬಗ್ಗೆ ಇನ್ನೂ ಆಳವಾದ ಪ್ಯಾಷನ್‌ ಇರುತ್ತದೆ. ಹಿರಿಯ ಪ್ರಾಯದ ಗಂಡಸಾಗಿದ್ದರೆ ಹೊಣೆಗಾರಿಕೆ ಇತ್ಯಾದಿಗಳನ್ನೆಲ್ಲ ಹೊತ್ತುಕೊಂಡು ಗಂಭೀರವಾಗಿರುತ್ತಾರೆ ಂಬುದು ಇವರ ಕಂಪ್ಲೇಂಟು.

ಹಸ್ತರೇಖೆಯಿಂದ ತಿಳಿಯಿರಿ ವೈವಾಹಿಕ ಜೀವನದ ರಹಸ್ಯ..! ...