Asianet Suvarna News Asianet Suvarna News

ಮಕರ ಸಂಕ್ರಾಂತಿ: ರಾಶಿಯನುಸಾರ ಈ ಕಾರ್ಯ ಮಾಡಿ.. ಸಮೃದ್ಧಿ ಪಡೆಯಿರಿ..

ಜನವರಿ ತಿಂಗಳಿನಲ್ಲಿ ಬರುವ ಮಕರ ಸಂಕ್ರಾಂತಿ ಹಬ್ಬ ಹಿಂದೂಗಳಿಗೆ ವಿಶೇಷ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಸುದಿನವೇ ಮಕರ ಸಂಕ್ರಾಂತಿಯಾಗಿದೆ. ಎಳ್ಳು-ಬೆಲ್ಲವನ್ನು ಎಲ್ಲರಿಗೂ ಹಂಚಿ ಹಬ್ಬವನ್ನು ಮಾಡಲಾಗುತ್ತದೆ. ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಅವರದ್ದೇ ಆದ ಪರಂಪರೆಗನುಸಾರವಾಗಿ ಆಚರಣೆ ಮಾಡುತ್ತಾ ಬಂದಿರುತ್ತಾರೆ. ಆದರೆ ಹಬ್ಬದ ಸುಸಂದರ್ಭದಲ್ಲಿ ಆಯಾ ರಾಶಿಗನುಸಾರವಾಗಿ ಯಾವ ವಸ್ತುವನ್ನು ದಾನ ಮಾಡಿದರೆ ಪುಣ್ಯಫಲ ಲಭಿಸುತ್ತದೆ ಎಂಬುದನ್ನು ನೋಡೋಣ...

Makara Sankranti could bring prosperity if donate as per Zodiac Signs
Author
Bangalore, First Published Jan 13, 2021, 6:39 PM IST

ಮಕರ ಸಂಕ್ರಾಂತಿಯು ಹಿಂದೂಗಳ ವಿಶೇಷವಾದ ಹಬ್ಬಗಳಲ್ಲೊಂದು. ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪರಿವರ್ತನೆ ಹೊಂದುವ ದಿನವೇ ಮಕರ ಸಂಕ್ರಾಂತಿಯ ದಿನವಾಗಿರುತ್ತದೆ. ಎಳ್ಳು-ಬೆಲ್ಲವನ್ನು ಎಲ್ಲರಿಗೂ ಹಂಚಿ, ಸಂಭ್ರಮಿಸುವ ಮಕರ ಸಂಕ್ರಾಂತಿ ಹಬ್ಬವು ವಿಶೇಷವಾಗಿದೆ. ಜನವರಿ 14ರಂದು ಆಚರಿಸಲ್ಪಡುವ ಈ ಹಬ್ಬದಂದು ಹೆಣ್ಣು ಮಕ್ಕಳು ಬಾಗಿನವನ್ನು ಧಾರೆ ಎರೆದು ಅದನ್ನು ತಾಯಿಗೆ ನೀಡುವ ಪರಂಪರೆ ಹಲವು ಕಡೆ ಇದೆ. ಅಷ್ಟೇ ಅಲ್ಲದೆ ಮಕರ ಸಂಕ್ರಾಂತಿಯ ದಿನ ಪವಿತ್ರವಾದ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ಸಹ ಹೇಳಲಾಗುತ್ತದೆ.

ಈ ಪವಿತ್ರವಾದ ದಿನದಂದು ಆಯಾ ರಾಶಿಯವರು ಯಾವ ರೀತಿಯ ದಾನ –ಧರ್ಮಗಳನ್ನು ಮಾಡಿದರೆ ಉತ್ತಮ ಎಂಬ ಬಗ್ಗೆ ತಿಳಿಯೋಣ...

ಮೇಷ ರಾಶಿ
ಮೇಷ ರಾಶಿಯವರು ಸಂಕ್ರಾಂತಿ ಹಬ್ಬದಂದು ಬೆಲ್ಲವನ್ನು ದಾನ ಮಾಡಿದರೆ ಉತ್ತಮ. ಇದರಿಂದ ಆರ್ಥಿಕ ಸಮೃದ್ಧಿಯನ್ನು ಪಡೆಯುವುದಲ್ಲದೆ, ಧನಲಾಭವನ್ನು ಪಡೆಯುವ ಯೋಗವನ್ನು ಹೊಂದಬಹುದಾಗಿದೆ.

ಇದನ್ನು ಓದಿ: ಈ ರಾಶಿಯವರುವಿವಾಹವಾದರೆ ಮಹಾಯುದ್ಧವೇ ಸರಿ; ನಿಮ್ಮ ರಾಶಿ ಸೇರಿದ್ಯಾ? 

ವೃಷಭ ರಾಶಿ
ವೃಷಭ ರಾಶಿಯವರು ಕಲ್ಲು ಸಕ್ಕರೆಯನ್ನು ದಾನವಾಗಿ ನೀಡಿದರೆ ಉತ್ತಮ ಫಲವನ್ನು ಪಡೆಯಬಹುದಾಗಿದೆ. ಹೀಗೆ ಮಾಡುವುದರಿಂದ  ಜೀವನದಲ್ಲಿ ಸುಖ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ.

ಮಿಥುನ ರಾಶಿ
ಈ ಮಕರ ಸಂಕ್ರಾಂತಿಯಂದು ಮಿಥುನ ರಾಶಿಯವರು ಹಸಿರು ಬಣ್ಣದ ಧಾನ್ಯವನ್ನು ದಾನವಾಗಿ ನೀಡಿದರೆ ಒಳಿತಾಗುತ್ತದೆ. ಇದರಿಂದ ವೈವಾಹಿಕ ಜೀವನದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ನಿವಾರಣೆಯಾಗುತ್ತದೆ. 

Makara Sankranti could bring prosperity if donate as per Zodiac Signs



ಕರ್ಕಾಟಕ ರಾಶಿ
ಕಟಕ ರಾಶಿಯ ವ್ಯಕ್ತಿಗಳು ಈ ಮಕರ ಸಂಕ್ರಾಂತಿಯ ಪವಿತ್ರ ಸಮಯದಲ್ಲಿ ಅಕ್ಕಿಯನ್ನು ದಾನವಾಗಿ ನೀಡುವುದರಿಂದ ಸುಖ-ಸಮೃದ್ಧಿ ಲಭಿಸುತ್ತದೆ. ಇದರಿಂದ ಮಾನಸಿಕ ಶಾಂತಿ ಸಿಗುವುದಲ್ಲದೆ, ಮನೋಕಾಮನೆಗಳು ಈಡೇರುತ್ತವೆ.

ಸಿಂಹ ರಾಶಿ
ಮಕರ ಸಂಕ್ರಾಂತಿಯಂದು ಸಿಂಹ ರಾಶಿಯವರು ಗೋಧಿಯನ್ನು ದಾನವಾಗಿ ನೀಡುವುದರಿಂದ ಒಳಿತಾಗುತ್ತದೆ. ಅಷ್ಟೇ ಅಲ್ಲದೆ ಸಮಾಜದಲ್ಲಿ ಈ ರಾಶಿಯವರ ಗೌರವ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ.

ಇದನ್ನು ಓದಿ: 2021ರಲ್ಲಿ ಧನ ಸಮೃದ್ಧಿಯಾಗಲು ರಾಶಿಯನುಸಾರ ಹೀಗೆ ಮಾಡಿ..! 

ಕನ್ಯಾ ರಾಶಿ
ಸಮಕ ಸಂಕ್ರಾಂತಿಯು ವಿಶೇಷವಾದ ಹಬ್ಬವಾಗಿದ್ದು, ಈ ದಿನದಂದು ಧಾರ್ಮಿಕ ಕಾರ್ಯಗಳನ್ನು ಮಾಡಿದರೆ ಒಳಿತಾಗುತ್ತದೆ. ಈ ರಾಶಿಯವರು  ಗೋವಿಗೆ ಹಸಿ ಹುಲ್ಲನ್ನು ನೀಡಿದರೆ ಒಳಿತಾಗುತ್ತದೆ. ಇದರಿಂದ ಸಮಸ್ಯೆಗಳು ನಿವಾರಣೆಯಾಗಿ, ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ.

ತುಲಾ ರಾಶಿ
ಮಕರ ಸಂಕ್ರಾಂತಿಯಂದು ಈ ರಾಶಿಯವರು ಅಗತ್ಯವಿರುವವರಿಗೆ ಭೋಜನವನ್ನು ನೀಡಿದರೆ ಉತ್ತಮ ಫಲವನ್ನು ಕಾಣಬಹುದಾಗಿದೆ. ಇದರಿಂದ ಸಂಪತ್ತು ವೃದ್ಧಿಸುವುದಲ್ಲದೆ, ಸಮೃದ್ಧಿ ವೃದ್ಧಿಸುತ್ತದೆ.

ವೃಶ್ಚಿಕ ರಾಶಿ
ಈ ರಾಶಿಯವರು ಮಕರ ಸಂಕ್ರಾಂತಿಯಂದು ಪ್ರಾಣಿಗಳಿಗೆ ಆಹಾರವನ್ನು ನೀಡುವುದಲ್ಲದೆ, ಗೋವಿಗೆ ಬೆಲ್ಲ ಮತ್ತು ಬೇಳೆಯನ್ನು ನೀಡುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುವುದಲ್ಲದೆ, ಶತ್ರುನಾಶವಾಗುತ್ತದೆ ಎಂದು ಹೇಳಲಾಗುತ್ತದೆ.

ಧನು ರಾಶಿ
ಈ ರಾಶಿಯವರು ಬೇಳೆಯನ್ನು ದಾನವಾಗಿ ನೀಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸುಖ ಮತ್ತು ಶಾಂತಿ ವೃದ್ಧಿಸುತ್ತದೆ.

ಮಕರ ರಾಶಿ
ಈ ರಾಶಿಯವರು ಸಂಕ್ರಾಂತಿಯ ಸಂದರ್ಭದಲ್ಲಿ  ಅಗತ್ಯವಿರುವವರಿಗೆ ಕಂಬಳಿಯನ್ನು ದಾನವಾಗಿ ನೀಡಿದರೆ ಒಳಿತಾಗುತ್ತದೆ. ಅಷ್ಟೇ ಅಲ್ಲದೆ ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಕುಂಭ ರಾಶಿ
ಈ ರಾಶಿಯವರು ಮಕರ ಸಂಕ್ರಾಂತಿಯಂದು ಉದ್ದಿನ ಬೇಳೆಯನ್ನು ದಾನವಾಗಿ ನೀಡುವುದರಿಂದ ತೊಂದರೆ –ತಾಪತ್ರಯಗಳು ನಿವಾರಣೆಯಾಗುತ್ತವೆ. ಇದರಿಂದ ವ್ಯಾಪಾರ ಕ್ಷೇತ್ರದಲ್ಲಿ ಲಾಭವನ್ನು ಸಹ ಹೊಂದಬಹುದಾಗಿದೆ.

ಇದನ್ನು ಓದಿ: ಈ ಐದು ರಾಶಿಯವರು ಕೊನೇ ತನಕ ಪ್ರೀತಿಯನ್ನು ನಿಭಾಯಿಸಬಲ್ಲರು! 

ಮೀನ ರಾಶಿ
ಮಕರ ಸಂಕ್ರಾಂತಿಯಂದು ಮೀನ ರಾಶಿಯವರು ಸಿಹಿಯನ್ನು ಹಂಚುವುದರಿಂದ ಸಮೃದ್ಧಿ ವೃದ್ಧಿಯಾಗುವುದಲ್ಲದೆ, ಹಣಕಾಸಿನ ಸಮಸ್ಯೆಗಳು ಇದ್ದಲ್ಲಿ ನಿವಾರಣೆಯಾಗುತ್ತವೆ.

Follow Us:
Download App:
  • android
  • ios