Asianet Suvarna News Asianet Suvarna News

ಐದೇ ದಿನದಲ್ಲಿ ನಾಲ್ಕು ರಾಶಿ ಪರಿವರ್ತನೆ, ಜೊತೆಗೆ ಗ್ರಹಣ, ಹಬ್ಬ ಹುಣ್ಣಿಮೆ..

ಈ ವಾರ ಬಹಳ ವಿಶೇಷವಾಗಿದೆ. ಒಂದಲ್ಲಾ, ಎರಡಲ್ಲ ಈ ವಾರದಲ್ಲಿ ನಾಲ್ಕು ರಾಶಿಗಳು ಪರಿವರ್ತನೆ ಹೊಂದುತ್ತಿವೆ. ಅಷ್ಟೇ ಅಲ್ಲ, ವರ್ಷದ ಮೊದಲ ಚಂದ್ರಗ್ರಹಣ, ವೈಶಾಖ ಪೂರ್ಣಿಮಾ, ಬುದ್ಧ ಪೂರ್ಣಿಮಾ, ನಾರದ ಜಯಂತಿ, ನರಸಿಂಹ ಜಯಂತಿ ಸೇರಿ ಹಲವು ಹಬ್ಬ ಹುಣ್ಣಿಮೆಗಳೂ ಇದೇ ವಾರದಲ್ಲಿ ಬರುತ್ತಿವೆ.

major planet transits in 5 days see the details skr
Author
Bangalore, First Published May 14, 2022, 3:41 PM IST

ಮೇ 13ರಿಂದ ಮೇ 19ರವರೆಗಿನ ಈ ಒಂದು ವಾರ ಬಹಳ ವಿಶೇಷವಾಗಿದೆ. ಎಲ್ಲ ಸಾಮಾನ್ಯ ದಿನಗಳಂತಲ್ಲ, ಜ್ಯೋತಿಷ್ಯದ ವಿಚಾರವಾಗಿ ತೆಗೆದುಕೊಂಡರೆ ಈ ವಾರ ಬಹಳ ಬದಲಾವಣೆಗಳು, ಹಬ್ಬ ಹರಿದಿನಗಳು ಘಟಿಸುತ್ತವೆ. 
ಹೌದು, ಈ ವಾರದಲ್ಲಿ ಐದೇ ದಿನದಲ್ಲಿ ನಾಲ್ಕು ಗ್ರಹಗಳು ಸ್ಥಾನಪಲ್ಲಟ ಮಾಡುತ್ತಿವೆ. ಸಾಲದೆಂಬಂತೆ ಹುಣ್ಣಿಮೆ, ಗ್ರಹಣ, ಮತ್ತೊಂದಿಷ್ಟು ಹಬ್ಬದ ದಿನಗಳೂ ಸಾಲಿನಲ್ಲಿ ನಾ ಮುಂದು ತಾ ಮುಂದು ಎಂದು ಬರುತ್ತಿರುವುದು ಬಹಳ ವಿಶೇಷವಾಗಿದೆ. ಈ ಎಲ್ಲ ಬದಲಾವಣೆಗಳು ಪ್ರತಿಯೊಬ್ಬರ ಜೀವನದಲ್ಲೂ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗುತ್ತವೆ. 

ಪ್ರತಿ ಗ್ರಹಗಳೂ ಒಂದು ಗ್ರಹದಿಂದ ಮತ್ತೊಂದಕ್ಕೆ ಚಲಿಸಲು ತಮ್ಮದೇ ಆದ ಸಮಯ ತೆಗೆದುಕೊಳ್ಳುತ್ತವೆ. ಪ್ರತಿ ಗ್ರಹವೂ ತಮ್ಮದೇ ಗತಿಯಲ್ಲಿ ಒಂದು ರಾಶಿಯಿಂದ ಮತ್ತೊಂದಕ್ಕೆ ಸ್ಥಳ ಬದಲಾವಣೆ ಮಾಡುತ್ತಿರುತ್ತವೆ. ಅವು ಹಾಗೆ ಮಾಡಿದಾಗೆಲ್ಲ ಎಲ್ಲ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಈ ಬಾರಿ ಮೇ 13ರಿಂದ ಮೇ 17ರ ಮಧ್ಯೆ ಬರೋಬ್ಬರಿ ನಾಲ್ಕು ಗ್ರಹಗಳು ರಾಶಿ ಪರಿವರ್ತನೆ, ನಕ್ಷತ್ರ ಪರಿವರ್ತನೆ ಹೊಂದುತ್ತಿವೆ. ಅವು ಯಾವುವು ನೋಡೋಣ.

ಈ ವಾರ ಈ ಗ್ರಹಗಳ ರಾಶಿಚಕ್ರ ಬದಲಾವಣೆ
ಬುದ್ಧಿಕಾರಕ ಬುಧವು 14ನೇ ಮೇ 2022ರಂದು, ಶನಿವಾರ ರಾತ್ರಿ 9:14 ಕ್ಕೆ ಕೃತಿಕಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಅವನಾಗಲೇ ವೃಷಭ ರಾಶಿಯಲ್ಲಿದ್ದಾನೆ. ಮರುದಿನ ಅಂದರೆ ಭಾನುವಾರ ಮೇ 15ರಂದು ಬೆಳಿಗ್ಗೆ 5:44 ಕ್ಕೆ ಸೂರ್ಯನು ವೃಷಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಈ ಸೂರ್ಯ ಸಂಕ್ರಮಣದ ಬೆನ್ನಲ್ಲೇ, ಅದೇ ದಿನ ಮಧ್ಯಾಹ್ನ 2:29 ಕ್ಕೆ ದೇವಗುರು ಗುರುವು ಉತ್ತರ ಭಾದ್ರಪದ ನಕ್ಷತ್ರದ ಎರಡನೇ ಹಂತವನ್ನು ಪ್ರವೇಶಿಸುತ್ತದೆ. ಇದರ ಬಳಿಕದ ಎರಡೇ ದಿನದಲ್ಲಿ ಅಂದರೆ ಮೇ 17, 2022ರಂದು ಮಂಗಳವಾರ ಬೆಳಿಗ್ಗೆ 9:52ಕ್ಕೆ ಮಂಗಳನು(ಕುಜ) ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.

ಗ್ರಹಗಳ ರಾಶಿ, ನಕ್ಷತ್ರ ಪರಿವರ್ತನೆಯಷ್ಟೇ ಮೆರವಣಿಗೆಯೋಪಾದಿಯಲ್ಲಿ ಸಾಲಾಗಿ ಸಂಭವಿಸುತ್ತಿಲ್ಲ. ಜೊತೆಗೆ ಸಾಕಷ್ಟು ಉತ್ಸವಗಳು, ಉಪವಾಸ ಆಚರಣೆಯ ದಿನಗಳು, ಹುಣ್ಣಿಮೆ, ಗ್ರಹಣ ಎಲ್ಲವೂ ಇದೇ ವಾರದ ದಿನಗಳಲ್ಲಿ ಮುನ್ನುಗ್ಗಿ ಬರುತ್ತಿವೆ.

Chandra Grahan ಸಮಯದಲ್ಲಿ ಹೀಗೆ ಮಾಡಿ, ಹಣದ ಸಮಸ್ಯೆಯಿಂದ ಮುಕ್ತರಾಗಿ!

ಈ ವಾರದ ಉತ್ಸವ ವಿಶೇಷಗಳು

ನರಸಿಂಹ ಜಯಂತಿ: ಪ್ರತಿ ವರ್ಷ ವೈಶಾಖ ಶುಕ್ಲ ಚತುರ್ದಶಿಯಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಬಾರಿ ನರಸಿಂಹ ಜಯಂತಿಯು ಶನಿವಾರ, 14 ಮೇಯಂದು ಬಂದಿದೆ. ನರಸಿಂಹ ಭಗವಾನ್ ವಿಷ್ಣುವಿನ ನಾಲ್ಕನೇ ಅವತಾರವಾಗಿದ್ದು, ಆತನ ಆರಾಧನೆಯನ್ನು ಈ ದಿನ ಮಾಡಲಾಗುತ್ತದೆ. 

ಬುದ್ಧ ಪೂರ್ಣಿಮಾ: ವೈಶಾಖ ಮಾಸದಲ್ಲಿ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ವೈಶಾಖ ಮಾಸದ ಹುಣ್ಣಿಮೆಯ ದಿನ ಅಂದರೆ, ಸೋಮವಾರ, ಮೇ 16ರಂದು ಬೌದ್ಧರಿಗೆ ಮಹತ್ವದ ದಿನವಾಗಿದೆ. ಈ ದಿನ ಗೌತಮ ಬುದ್ಧನ ಜನ್ಮದಿನವೆಂದು ಆಚರಿಸಲಾಗುತ್ತದೆ. 

ಚಂದ್ರಗ್ರಹಣ: ವರ್ಷದ ಮೊದಲ ಚಂದ್ರಗ್ರಹಣವು ವೃಷಭ ರಾಶಿಯಲ್ಲಿ ವೈಶಾಖ ಮಾಸದ ಹುಣ್ಣಿಮೆಯಂದು ಅಂದರೆ ಸೋಮವಾರ, ಮೇ 16ರಂದು ಬೆಳಿಗ್ಗೆ 8:59 ರಿಂದ 10:23 ರವರೆಗೆ ಸಂಭವಿಸುತ್ತದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದ್ದು, ಭಾರತದಲ್ಲಿ ಗೋಚರಿಸುವುದಿಲ್ಲ.

Name Astrology: ಈ ಹೆಸರಿನ ಮಕ್ಕಳ ಮೆದುಳು ಕಂಪ್ಯೂಟರ್‌ಗಿಂತ ಫಾಸ್ಟ್!

ವೈಶಾಖ ಪೂರ್ಣಿಮಾ: ವೈಶಾಖ ಪೂರ್ಣಿಮೆಯು ಈ ತಿಂಗಳ ಎರಡನೇ ಹುಣ್ಣಿಮೆ. ಹಿಂದೂ ಚಂದ್ರನ ಕ್ಯಾಲೆಂಡರ್ ಪ್ರಕಾರ, ಇದು ನರಸಿಂಹ ಜಯಂತಿಯ ನಂತರ ಬರುತ್ತದೆ. ಈ ಬಾರಿ ಸೋಮವಾರ, 16 ಮೇಯನ್ನು ವೈಶಾಖ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. 

ನಾರದ ಜಯಂತಿ: ಇದನ್ನು ದೇವಋಷಿಯ ಜನ್ಮದಿನವೆಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ, ನಾರದ ಮುನಿಯು ಎಲ್ಲಾ ಬಾಲಾಪರಾಧಿ ಕ್ಷೇತ್ರಗಳಿಗೆ, ಆಕಾಶ ಅಥವಾ ಸ್ವರ್ಗ, ಪೃಥ್ವಿ ಮತ್ತು ಪಾತಾಳ ಇತ್ಯಾದಿಗಳಿಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಆತನ ಜನ್ಮ ದಿನವೆಂದು ಮಂಗಳವಾರ, 17 ಮೇಯನ್ನು ಆಚರಿಸಲಾಗುತ್ತದೆ. 

ಈ ವಾರದ ರಾಹುಕಾಲದ ಸಮಯ
ಮೇ 14: ಬೆಳಗ್ಗೆ 08:54 ರಿಂದ 10:36 
ಮೇ 15: ಸಂಜೆ 05:23 ರಿಂದ 07:05 
ಮೇ 16: ಬೆಳಗ್ಗೆ 07:12 ರಿಂದ 08:54 
ಮೇ 17: ಮಧ್ಯಾಹ್ನ 03:42 ರಿಂದ 05:24
ಮೇ 18: ಮಧ್ಯಾಹ್ನ 12:18 ರಿಂದ 02:00 
ಮೇ 19: ಮಧ್ಯಾಹ್ನ 02:00 ರಿಂದ 03:42
 

Follow Us:
Download App:
  • android
  • ios