Asianet Suvarna News Asianet Suvarna News

Astro Recap 2022: 2022ರ ಪ್ರಮುಖ ಜ್ಯೋತಿಷ್ಯ ಘಟನೆಗಳಿವು..

2022ರಲ್ಲಿ ಭಾರತವು ಅನೇಕ ಜ್ಯೋತಿಷ್ಯ ಘಟನೆಗಳಿಗೆ ಸಾಕ್ಷಿಯಾಯಿತು, ಅವುಗಳಲ್ಲಿ ಪ್ರಮುಖ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಈ ಮೂಲಕ ಕಳೆದು ಹೋಗುತ್ತಿರುವ ವರ್ಷದ ಮೆಲುಕು ಹಾಕೋಣ ಬನ್ನಿ..

Major Astrological events happened in 2022 skr
Author
First Published Dec 14, 2022, 12:50 PM IST

ಜ್ಯೋತಿಷ್ಯದ ಪ್ರಕಾರ 2022 ಪ್ರತಿ ವರ್ಷ ಬರುವ ಹಬ್ಬಹರಿದಿನಗಳಲ್ಲದೆ ಹಲವು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಯಿತು. ಇವು ಪ್ರತಿ ವ್ಯಕ್ತಿಯ ಮೇಲೂ ಪರಿಣಾಮ ಬೀರಿವೆ, ಅವರ ಬದುಕಿನಲ್ಲಿ ಕೊಂಚವಾದರೂ ಬದಲಾವಣೆಗೆ ಕಾರಣವಾಗಿವೆ.. ಅಂಥ ಜ್ಯೋತಿಷ್ಯ ಘಟನೆಗಳು ಯಾವೆಲ್ಲ ನೋಡೋಣ.

ಗ್ರಹಣಗಳು
2022ರಲ್ಲಿ 4 ಬಾರಿ ಗ್ರಹಣಗಳು ಸಂಭವಿಸಿದವು. ಇದರಲ್ಲಿ ಎರಡು ಸೂರ್ಯ ಗ್ರಹಣಗಳಾಗಿದ್ದರೆ, ಮತ್ತೆರಡು ಚಂದ್ರಗ್ರಹಣಗಳಾಗಿದ್ದವು. 
ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 30ರಂದು ಸಂಭವಿಸಿದ್ದು, ಇದು ಭಾರತದಲ್ಲಿ ಗೋಚರಿಸಲಿಲ್ಲವಾದ್ದರಿಂದ ಇಲ್ಲಿ ಸೂತಕದ ಅವಧಿಯೂ ಮಾನ್ಯವಾಗಿರಲಿಲ್ಲ. ವರ್ಷದ ಎರಡನೇ ಗ್ರಹಣ ಚಂದ್ರಗ್ರಹಣವಾಗಿದ್ದು, ಮೇ 15ರಂದು ಸಂಭವಿಸಿತ್ತು. 
ವರ್ಷದ ಮೂರನೇ ಗ್ರಹಣ ಸೂರ್ಯಗ್ರಹಣವಾಗಿದ್ದು, ಅಕ್ಟೋಬರ್ 25ರಂದು ನಡೆಯಿತು. ಇದು ವೃಶ್ಚಿಕ ರಾಶಿಯಲ್ಲಾಗಿದ್ದು ಭಾರತದಲ್ಲಿ ಗೋಚರವಾಗಿಲ್ಲ. ಇದು ದೀಪಾವಳಿ ಹಬ್ಬದ ಎರಡನೇ ದಿನವೇ ಬಂದು ಕೊಂಚ ಆತಂಕ ಹುಟ್ಟಿಸಿತ್ತು. 
ವರ್ಷದ ಕಡೆಯ ಹಾಗೂ ನಾಲ್ಕನೇ ಗ್ರಹಣ ಚಂದ್ರಗ್ರಹಣವಾಗಿದ್ದು, ನವೆಂಬರ್ 8ರಂದು ಸಂಭವಿಸಿತ್ತು. ಇದು ಭಾರತದಲ್ಲಿಯೂ ಗೋಚರವಾಗಿದ್ದು, ಸಂಪೂರ್ಣ ಚಂದ್ರಗ್ರಹಣವಾಗಿತ್ತು. 

ಧನು ರಾಶಿಯಲ್ಲಿ Trigrahi Yoga, ಬುಧಾದಿತ್ಯ ಯೋಗ; ಮೂರು ರಾಶಿಗಳಿಗೆ ಅದೃಷ್ಟದ ಸುಯೋಗ

ಶನಿ ಹಿಮ್ಮುಖ ಚಲನೆ
ಇನ್ನು 2022ರಲ್ಲಿ ಪ್ರಮುಖ ಗ್ರಹವಾದ ಶನಿಯು ಹಿಮ್ಮುಖ ಚಲನೆಯಲ್ಲಿದ್ದು ಸಾಕಷ್ಟು ಎಡರು ತೊಡರುಗಳನ್ನು ಸೃಷ್ಟಿಸಿತು.  ಜೂನ್ 5ರಂದು, ಶನಿಯು ತನ್ನದೇ ಆದ ಚಿಹ್ನೆ ಕುಂಭದಲ್ಲಿ ಹಿಮ್ಮುಖ ಚಲನೆ ಆರಂಭಿಸಿದರೆ, ಮತ್ತೆ ಜುಲೈ 12ರಂದು ಮಕರದಲ್ಲಿ ಹಿಮ್ಮುಖ ಚಲನೆಯಲ್ಲಿ ತೊಡಗಿತು. ಯಾವುದೇ ಗ್ರಹದ ವಕ್ರಿ ಓಟವನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಅದರಲ್ಲೂ ಮೊದಲೇ ಶನಿ ಎಂದರೆ ಜನಸಾಮಾನ್ಯರಲ್ಲಿ ನಡುಕ. ಅಂಥ ಪಾಪ ಗ್ರಹ ವಕ್ರಿಯಾಗಿರುವುದು 202ರಲ್ಲಿ ಸಾಕಷ್ಟು ಜನರಲ್ಲಿ ಆತಂಕಕ್ಕೆ ಕಾರಣವಾಯಿತು. ಅಕ್ಟೋಬರ್ 23ರಂದು ಆತ ಮಾರ್ಗಿಯಾಗಿ ಮಕರದಲ್ಲಿದ್ದಾನೆ. 

ಇದಲ್ಲದೆ, ಶುಕ್ರ, ಮಂಗಳ ಸೇರಿದಂತೆ ಬಹಳಷ್ಟು ಗ್ರಹಗಳು ವಕ್ರಿ ನಡೆಯಲ್ಲಿದ್ದವು. ಇನ್ನು 2022ರಲ್ಲಿ, ಎಲ್ಲ ಕಷ್ಟಕೋಟಲೆಗಳ ನಡುವೆ ಜನರ ಮನಸ್ಸಿಗೆ ಸಂತೋಷ ತಂದ ವಿಷಯಗಳೆಂದರೆ ಹಬ್ಬ ಹರಿದಿನಗಳು.

Peacock feather: ಶನಿ ದೋಷದಿಂದ ಮುಕ್ತರಾಗಲು ನವಿಲುಗರಿ ಬಳಸಿ!

ಜನವರಿ 14ರಂದು ಸಂಕ್ರಾಂತಿ, ಭಾರತೀಯರಿಗೆ ಹೊಸ ವರ್ಷವಾದ ಯುಗಾದಿಯು ಏಪ್ರಿಲ್ 1ರಂದು, ಮೇ 3ರಂದು ಅಕ್ಷಯ ತೃತೀಯ, ಆಗಸ್ಟ್ 31ರಂದು ಜಗತ್ತಿನಾದ್ಯಂತ ಸಂಭ್ರಮ ತಂದ ಗಣೇಶ ಚತುರ್ಥಿ, ಸೆಪ್ಟೆಂಬರ್ ಕೊನೆಯಿಂದ ಅಕ್ಟೋಬರ್ 5ರವರೆಗೆ ವಿಜೃಂಭಣೆಯಿಂದ ನಡೆದ ದಸರಾ, ಅಕ್ಟೋಬರ್ 24ರಂದು ಮನೆ ಮನೆಯಲ್ಲೂ ಬೆಳಕು ತುಂಬಿದ ದೀಪಾವಳಿ, ನವೆಂಬರ್ 5ರಂದು ನಡೆದ ತುಳಸಿ ವಿವಾಹ ಮುಂತಾದ ಹಬ್ಬಗಳು ದೇಶದೆಲ್ಲಡೆ ಆಗಾಗ ಸಂಭ್ರಮ ತುಂಬುತ್ತಾ, ಜನರಲ್ಲಿ ಜೀವನೋತ್ಸಾಹ ತುಂಬುವ ಕೆಲಸ ಮಾಡಿದವು. 

Follow Us:
Download App:
  • android
  • ios