Asianet Suvarna News Asianet Suvarna News

ಧನು ರಾಶಿಯಲ್ಲಿ Trigrahi Yoga, ಬುಧಾದಿತ್ಯ ಯೋಗ; ಮೂರು ರಾಶಿಗಳಿಗೆ ಅದೃಷ್ಟದ ಸುಯೋಗ

ಡಿಸೆಂಬರ್ 16ರಂದು ಧನು ರಾಶಿಯಲ್ಲಿ ಅಪರೂಪದ ತ್ರಿಗ್ರಾಹಿ ಯೋಗ ರಚನೆಯಾಗುತ್ತದೆ. ಇದರಿಂದ ನಾಲ್ಕು ರಾಶಿಗಳ ಅದೃಷ್ಟದ ಬಾಗಿಲು ತೆರೆಯುತ್ತದೆ. 

Trigrahi Yog will be formed in Sagittarius these zodiacs luck will open from December 16 skr
Author
First Published Dec 14, 2022, 11:26 AM IST

ಎಲ್ಲಾ ಗ್ರಹಗಳ ರಾಜನಾದ ಸೂರ್ಯನು ಡಿಸೆಂಬರ್ 16ರಂದು ಧನು ರಾಶಿಗೆ ಪ್ರವೇಶಿಸುತ್ತಿದ್ದಾನೆ.  ಸೂರ್ಯನ ಈ ಧನು ಸಂಕ್ರಾಂತಿಯೊಂದಿಗೆ ಧನು ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ. ಏಕೆಂದರೆ ಡಿಸೆಂಬರ್ 5ರಂದು ಶುಕ್ರ ಗ್ರಹವು ತನ್ನ ರಾಶಿಯನ್ನು ಬದಲಾಯಿಸಿದ ನಂತರ ಧನು ರಾಶಿಯನ್ನು ಪ್ರವೇಶಿಸಿ ಸಧ್ಯ ಅಲ್ಲಿಯೇ ಕುಳಿತಿದೆ. ಶುಕ್ರ ಡಿಸೆಂಬರ್ 29ರವರೆಗೂ ಧನು ರಾಶಿಯಲ್ಲಿ ಉಳಿಯುತ್ತಾನೆ. ಇನ್ನು ಬುಧ ಗ್ರಹ ಕೂಡಾ ಡಿಸೆಂಬರ್ 3ರ ಶನಿವಾರದಂದು ಧನು ರಾಶಿಯನ್ನು ಪ್ರವೇಶಿಸಿತ್ತು. ಅದು ಡಿಸೆಂಬರ್ 28ರವರೆಗೆ ಧನು ರಾಶಿಯಲ್ಲಿಯೇ ಇರುತ್ತದೆ. ಇದರಿಂದ ಧನು ರಾಶಿಯಲ್ಲಿ ಸೂರ್ಯ, ಬುಧ ಹಾಗೂ ಶುಕ್ರ ಗ್ರಹಗಳ ಸಮ್ಮಿಲನವಾಗುತ್ತಿವೆ. ಎಲ್ಲ ಶುಭ ಗ್ರಹಗಳ ಈ ಧನು ಮಿಲನದಿಂದ ತ್ರಿಗ್ರಾಹಿ ಯೋಗ(Trigrahi Yog)ವು ರೂಪುಗೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಮಂಗಳಕರ ಯೋಗ ಎನ್ನುತ್ತಾರೆ. ಇದರೊಂದಿಗೆ ಒಂದೇ ರಾಶಿಯಲ್ಲಿ ಏಕಕಾಲದಲ್ಲಿ ಸೂರ್ಯ ಮತ್ತು ಬುಧ ಇರುವುದರಿಂದ ಬುಧಾದಿತ್ಯ ಯೋಗ(Budhaditya Yoga) ಕೂಡಾ ಉಂಟಾಗುತ್ತಿದೆ. 

ಬುಧ, ಶುಕ್ರ, ಸೂರ್ಯ ಧನು ರಾಶಿಗೆ ತೆರಳಿದಾಗ ಚಳಿ ಹೆಚ್ಚಿ ಶೀತಗಾಳಿ ಬರುವ ಸಾಧ್ಯತೆ ಇದೆ. ಇದಲ್ಲದೇ ಷೇರುಪೇಟೆಯಲ್ಲೂ ಏರುಪೇರು ಕಾಣಬಹುದಾಗಿದೆ. ಪ್ರಮುಖ ಆಡಳಿತಾತ್ಮಕ ಬದಲಾವಣೆಗಳ ಸಾಧ್ಯತೆಯೂ ಇರುತ್ತದೆ. ತ್ರಿಗ್ರಾಹಿ ಯೋಗದಿಂದ ಯಾವ ರಾಶಿಗಳು(Zodiac signs) ಹೆಚ್ಚಿನ ಅನುಕೂಲ ಪಡೆಯುತ್ತವೆ ಎಂದು ನೋಡೋಣ. 

ತುಲಾ ರಾಶಿ(Libra): ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುವವರು ಲಾಭವನ್ನು ಪಡೆಯುತ್ತಾರೆ. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತೊಮ್ಮೆ ಸುಗಮವಾಗಿ ಆರಂಭವಾಗಲಿದೆ. ವೃತ್ತಿಯಲ್ಲಿಯೂ ಮುಂದೆ ಸಾಗಲು ಅವಕಾಶವಿರುತ್ತದೆ. ವೃತ್ತಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಲಾಭವಾಗಲಿದೆ. ಹೊಸ ಉದ್ಯೋಗಾವಕಾಶಗಳು ಬರಲಿವೆ. ಧನ ಲಾಭದ ಸಾಧ್ಯತೆ ಇರುತ್ತದೆ.

Peacock feather: ಶನಿ ದೋಷದಿಂದ ಮುಕ್ತರಾಗಲು ನವಿಲುಗರಿ ಬಳಸಿ!

ಮೀನ ರಾಶಿ(Pisces): ಈ ರಾಶಿಯವರಿಗೆ ತ್ರಿಗ್ರಾಹಿ ಯೋಗವು ಲಾಭದಾಯಕವಾಗಿರುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದ ಹಣ ವಾಪಸ್ ಬರುತ್ತದೆ. ವೃತ್ತಿಯ ವಿಷಯದಲ್ಲಿಯೂ ಮುಂದೆ ಸಾಗಲು ಅವಕಾಶವಿರುತ್ತದೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವ ಜನರು ಅನೇಕ ಕೊಡುಗೆಗಳನ್ನು ಪಡೆಯುತ್ತಾರೆ. ಆದರೆ ನಿಮ್ಮ ಮಾತಿನಲ್ಲಿ ಸ್ವಲ್ಪ ಹಿಡಿತವಿರಲಿ, ಇಲ್ಲದಿದ್ದರೆ ಸಂಬಂಧವು ರೂಪುಗೊಳ್ಳುವ ಸಮಯದಲ್ಲಿ ಹಾಳಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಹೊಸ ಪ್ರಸ್ತಾವನೆಗಳೂ ಬರಬಹುದು. ವೃತ್ತಿ ಮತ್ತು ವ್ಯಾಪಾರದಲ್ಲಿ ಉತ್ತಮ ಅವಕಾಶಗಳನ್ನು ಕಾಣಬಹುದು. ಲಾಭದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.

ವೃಷಭ(Taurus): ತ್ರಿಗ್ರಾಹಿ ಯೋಗವು ಈ ರಾಶಿಚಕ್ರದ ಜನರಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಈ ರಾಶಿಚಕ್ರದಲ್ಲಿ, ಸೂರ್ಯನು ಎಂಟನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾನೆ ಮತ್ತು ಅವನ ದೃಷ್ಟಿ ಎರಡನೇ ಮನೆಯಲ್ಲಿ ಬೀಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಚಕ್ರದ ಜನರು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದರೊಂದಿಗೆ ವ್ಯಾಪಾರದಲ್ಲಿ ಲಾಭವಾಗಲಿದೆ. ಆದರೆ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಧನು ರಾಶಿ(Sagittarius): ಈ ರಾಶಿಯವರಿಗೆ ತ್ರಿಗ್ರಾಹಿ ಯೋಗ ಸಂತಸ ತರಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿಯೂ ಅಪಾರ ಯಶಸ್ಸು ದೊರೆಯಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವ ಜನರು ಸಹ ಯಶಸ್ಸನ್ನು ಪಡೆಯುತ್ತಾರೆ. ನಿಮ್ಮ ನಿರ್ಧಾರದಿಂದ ಇತರ ಜನರು ಪ್ರಭಾವಿತರಾಗುತ್ತಾರೆ. ಬಡ್ತಿಗೆ ಅವಕಾಶವಿರುತ್ತದೆ.

Jobs in 2023: ಈ ರಾಶಿಗಳಿಗೆ ಹೊಸ ವರ್ಷದಲ್ಲಿ ಹೊಸ ಉದ್ಯೋಗ, ಬಡ್ತಿ ಅವಕಾಶ..

ತ್ರಿಗ್ರಾಹಿ ಯೋಗದ ಅಶುಭ ಪರಿಣಾಮಗಳನ್ನು ಎದುರಿಸುವ ರಾಶಿಗಳು ಈ ಸಮಯವನ್ನು ಎದುರಿಸಲು ಈ ಕ್ರಮಗಳನ್ನು ಅನುಸರಿಸಬೇಕು. 

  • ಗ್ರಹಗಳ ದುಷ್ಪರಿಣಾಮಗಳನ್ನು ತಪ್ಪಿಸಲು ಹನುಮಂತನನ್ನು ಪೂಜಿಸಬೇಕು.
  • ಹನುಮಾನ್ ಚಾಲೀಸಾ ಪಠಿಸಿ.
  • ಭಗವಾನ್ ಶಿವ ಮತ್ತು ಮಾತೆ ದುರ್ಗೆಯನ್ನು ಪೂಜಿಸಬೇಕು.
  • ಮಹಾಮೃತ್ಯುಂಜಯ ಮಂತ್ರ ಮತ್ತು ದುರ್ಗಾ ಸಪ್ತಶತಿ ಪಠಿಸಬೇಕು.
Follow Us:
Download App:
  • android
  • ios