50 ಕೋಟಿಗೂ ಅಧಿಕ ಭಕ್ತರನ್ನು ಕಂಡ ಮಹಾಕುಂಭದಲ್ಲಿ ಸುದ್ದಿಯಾದ ಮೊನಾಲಿಸಾಗೆ ಬಾಲಿವುಡ್‌ನಲ್ಲಿ ಅವಕಾಶಗಳು ಹರಿದುಬರುತ್ತಿವೆ. ಮೇಕಪ್‌ ರಹಿತ ಮುಖ ನೋಡಿ ಕೆಲವರು ಮೂಗು ಮುರಿದಿದ್ದಾರೆ. ಜ್ಯುವೆಲ್ಲರಿ ಅಂಗಡಿ ಉದ್ಘಾಟನೆಗೆ ಆಗಮಿಸಿದ ಮೊನಾಲಿಸಾಳನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಈ ವರ್ಷದ ಮಹಾಕುಂಭ ಹಿಂದೆಲ್ಲಾ ದಾಖಲೆಗಳನ್ನು ಮೀರಿ 50 ಕೋಟಿಗೂ ಅಧಿಕ ಭಕ್ತರನ್ನು ಕಂಡಿದೆ. ಇನ್ನೂ ಕುಂಭಮೇಳಕ್ಕೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಮಹಾಶಿವರಾತ್ರಿ ಕೂಡ ಸಮೀಪದಲ್ಲಿಯೇ ಇದ್ದು, ಒಟ್ಟಾರೆ 70 ಕೋಟಿಯಷ್ಟು ಜನರು ಪುಣ್ಯಸ್ನಾನ ಮಾಡುವ ನಿರೀಕ್ಷೆ ಹೊಂದಲಾಗಿದೆ. ಇದು ಮಹಾಕುಂಭದ ಮಾತಾದರೆ, ಅದೇ ಇನ್ನೊಂದೆಡೆ ಮಹಾಕುಂಭದ ಸೆನ್ಸೇಷನ್​ 17 ವರ್ಷದ ಮೊನಾಲಿಸಾ ಸದ್ಯ ಭಾರಿ ಸುದ್ದಿಯಲ್ಲಿದ್ದಾಳೆ. ಇವಳ ಹೆಸರು ಹೇಳಿಕೊಂಡು ದುಡ್ಡು ಮಾಡಿಕೊಂಡವರು ಅದೆಷ್ಟೋ ಮಂದಿ. ಯೂಟ್ಯೂಬರ್​ಗಳಿಗಂತೂ ಈಕೆ ದೊಡ್ಡ ಮಟ್ಟದಲ್ಲಿ ಆಹಾರವಾದಳು. ಇದರಿಂದ ತನ್ನ ಬದುಕೇ ಸರ್ವನಾಶವಾಯಿತು ಎಂದು ಮೊನಾಲಿಸಾ ಅತ್ತ ಹೇಳುತ್ತಿದ್ದಂತೆಯೇ ಇತ್ತ ಅವಳಿಗೆ ಅವಕಾಶಗಳ ಬಾಗಿಲೇ ಹರಿದು ಬರುತ್ತಿದೆ.

ಸೋಷಿಯಲ್​ ಮೀಡಿಯಾದಲ್ಲಿ ಮೊನಾಲಿಸಾಳ ಎಐ ವಿಡಿಯೋ ಚಿತ್ರಿಸಿ ತಮಗೆ ಬೇಕಾದ ರೀತಿಯಲ್ಲಿ ಶೃಂಗಾರ ಮಾಡಿ, ವಿಡಿಯೋ ಹರಿಬಿಡುವುದು ಮುಂದುವರೆದಂತೆ ಆಕೆಗೆ ಇದಾಗಲೇ ಬಾಲಿವುಡ್​ನಲ್ಲಿ ಆಫರ್ ಕೂಡ ಸಿಕ್ಕಿದೆ. ಮಣಿಪುರ ಡೈರಿಯಲ್ಲಿ ಆಕೆಗೆ ಅವಕಾಶ ಸಿಕ್ಕಿರುವುದಾಗಿ ನಿರ್ದೇಶಕರೇ ಹೇಳಿದ್ದಾರೆ. ಈಕೆಗೆ ಮಾಡೆಲಿಂಗ್​ ಆಫರ್​ಗಳೂ ಸಿಕ್ಕಿವೆ. ಈಕೆಗೆ ಮೇಕಪ್​ ಮಾಡುವ ಸಂದರ್ಭದಲ್ಲಿ ಮೇಕಪ್​ ರಹಿತ ಮುಖ ನೋಡಿ ಕೆಲವರು ನಿಜವಾಗಿಯೂ ಸುಂದರಿ ಎನ್ನಿಸಿಕೊಂಡವಳು ಹೀಗೆ ಇದ್ದಾಳಾ ಎಂದು ಮೂಗು ಮುರಿದದ್ದೂ ಆಗಿದೆ. ಆದರೆ ಮಾಡೆಲಿಂಗ್​, ಫಿಲ್ಮ್​ ಶೂಟಿಂಗ್​ ಅದೂ ಇದೂ ಅಂತೆಲ್ಲಾ ಎಲ್ಲೆಂದರಲ್ಲಿ ಈಕೆಯನ್ನು ಕರೆದುಕೊಂಡು ಹೋಗುತ್ತಿರುವ ವಿಡಿಯೋಗಳು ವೈರಲ್​ ಆಗುತ್ತಿವೆ. ಆದರೆ ಆ ವಿಡಿಯೋಗಳ ಪೈಕಿ ಕೆಲವು ವಿಡಿಯೋಗಳನ್ನು ನೋಡಿದ ನೆಟ್ಟಿಗರಿಂದ ಕೆಲವು ಅನುಮಾನಗಳ ಕಮೆಂಟ್ಸ್​ಗಳೂ ಹರಿದಾಡುತ್ತಿವೆ. ತನಗೆ ಬಾಲಿವುಡ್​ನಲ್ಲಿ ಅವಕಾಶ ಸಿಕ್ಕಿರುವುದನ್ನು ಮೊನಾಲಿಸಾ ಖುಷಿಯಿಂದ ಹೇಳಿಕೊಂಡಿದ್ದರೂ ಕೆಲವು ವಿಡಿಯೋಗಳಲ್ಲಿ ಆಕೆ ಅನ್​ಕನ್​ಫರ್ಟ್​ ಎನ್ನಿಸುವುದನ್ನು ನೋಡಬಹುದಾಗಿದೆ. 

ಕುಂಭಮೇಳ ಸುಂದರಿ ಮೊನಾಲಿಸಾ ಐಎಎಸ್​ ಅಧಿಕಾರಿ! ಅಬ್ಬಬ್ಬಾ ಇದೆಂಥ ಸುದ್ದಿ? ಫೋಟೋ ನೋಡಿ ಸುಸ್ತಾದ ಫ್ಯಾನ್ಸ್​

ಇದು ಒಂದೆಡೆಯಾದಾರೆ, ಇದೀಗ ಕೇರಳದ ಜ್ಯುವೆಲ್ಲರಿ ಷಾಪ್​ ಒಂದರ ಉದ್ಘಾಟನೆ ವೇಳೆ ಮೊನಾಲಿಸಾಳನ್ನು ಕರೆಸಿ ಕೋಟಿ ಕೋಟಿ ಬೆಲೆ ಬಾಳುವ ಹಾರಗಳನ್ನು ಹಾಕಲಾಗಿದೆ. ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದ ಜ್ಯುವೆಲ್ಲರ್ಸ್ ಶೋರೂಮ್ ಅನ್ನು ಈಕೆ ಉದ್ಘಾಟಿಸಿದ್ದಾಳೆ. ಈಕೆ ಬರುವುದು ತಿಳಿಯುತ್ತಿದ್ದಂತೆಯೇ ಭಾರಿ ಜನಸ್ತೋಮ ನೆರೆದಿತ್ತು. ಯಾವುದೇ ಉದ್ಯಮಿಗಳು ಹಾಲಿ ಚಾಲ್ತಿಯಲ್ಲಿ ಇರುವವರು ಉದ್ಘಾಟನೆಗೆ ಕರೆಸುವುದು ಹೊಸ ವಿಷಯವೇನಲ್ಲ. ಅದೇ ರೀತಿ ಮೊನಾಲಿಸಾಳಿಗೂ ಕರೆಸಲಾಗಿದೆ. ತಾನು ಯಾಕೆ ಬಂದಿದ್ದೇನೆ, ಏಕಾಏಕಿ ತನಗೆ ಏನಾಗುತ್ತಿದೆ ಎನ್ನುವ ಅರಿವು ಕೂಡ ಈಕೆಯಲ್ಲಿ ಇದ್ದಂತೆ ಕಾಣಿಸುತ್ತಿಲ್ಲ.

ಒಟ್ಟಿನಲ್ಲಿ ತನ್ನ ಹೊಸ ಖ್ಯಾತಿಯಿಂದ ಮೊನಾಲಿಸಾ ಖುಷಿ ಪಡುತ್ತಿದ್ದಾರೆ. ಜ್ಯುವೆಲ್ಲರಿ ಮಾಲೀಕ ಬೋಚೆ ಜೊತೆ ಹೆಜ್ಜೆ ಹಾಕಿದ್ದಾಳೆ. ಬೋಚೆ ಮೊನಾಲಿಸಾಳ ಕುತ್ತಿಗೆಗೆ ವಜ್ರದ ಹಾರ ಹಾಕಿದ್ದರು. ಈ ಸಂದರ್ಭದಲ್ಲಿ ಕೂಡ ಮೊನಾಲಿಸಾ ಮುಖ ನೋಡಿದರೆ ಏನೋ ಅಸಹಜ ಎನ್ನಿಸುತ್ತಿದೆ. ಇದರ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಮೊನಾಲಿಸಾಳನ್ನು ಬಲೀ ಕಾ ಬಕರಾ (ಬಲಿ ಕೊಡುವ ಕುರಿ) ಮಾಡುತ್ತಿದ್ದಾರೆ ಎಂದು ಕಮೆಂಟ್​ ಬಾಕ್ಸ್​ನಲ್ಲಿ ಕಮೆಂಟ್ಸ್​ ಸುರಿಮಳೆಯಾಗಿದೆ. ಇದಕ್ಕೆ ಕಾರಣವೂ ಇದೆ. ಜ್ಯುವೆಲ್ಲರಿ ಮಾಲೀಕ ಬೋಚೆ ಈಚೆಗಷ್ಟೇ ಅರೆಸ್ಟ್​ ಆಗಿದ್ದರು. ಮಲಯಾಳಂ ನಟಿ ಹನಿ ರೋಸ್ ಬಗ್ಗೆ ಅಶ್ಲೀಲ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಕೇರಳ ಪೊಲೀಸರು ಅವರನ್ನು ಬಂಧಿಸಿದ್ದರು. ಲೈಂಗಿಕ ಕಿರುಕುಳ ಆರೋಪ ಅವರ ಮೇಲಿದೆ. ಅಷ್ಟಕ್ಕೂ ಇದೇ ರೀತಿ ಷೋ ರೂಮ್​ ಉದ್ಘಾಟನೆ ಸಮಯದಲ್ಲಿ ಅಸಭ್ಯವಾಗಿ ವರ್ತಿಸಿದ್ದರಿಂದ ಇವರ ವಿರುದ್ಧ ಕೇಸ್​ ದಾಖಲಾಗಿದೆ. ಈಗ ಈ ವಿಡಿಯೋದಲ್ಲಿ ಮೊನಾಲಿಸಾಳನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ನೋಡಿದ ಕೇರಳದ ಜನರು, ಯಾಕೋ ಏನೋ ಸರಿ ಎನ್ನಿಸುತ್ತಿಲ್ಲ ಎಂದೇ ಕಮೆಂಟ್​ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಏಕಾಏಕಿ, ರಾತ್ರೋರಾತ್ರಿ ಸೂಪರ್​ಸ್ಟಾರ್​ ಪಟ್ಟ ಗಿಟ್ಟಿಸಿಕೊಂಡ ಮೊನಾಲಿಸಾ ಭವಿಷ್ಯ ಉಜ್ವಲವಾಗಿಯೇ ಇರಲಿ, ಮತ್ತೊಂದು ಬಲಿ ಆಗುವುದು ಬೇಡ ಎಂದು ಆಕೆಯ ಫ್ಯಾನ್ಸ್​ ಅಂದುಕೊಳ್ಳುತ್ತಿದ್ದಾರೆ. 

ಬಾಲಿವುಡ್​ಗೆ ಮೊನಾಲಿಸಾ: ನಿರ್ದೇಶಕ ಸನೋಜ್​ ಮಿಶ್ರಾ ಆಫರ್​- ರಾಣು ಸ್ಥಿತಿ ಆಗದಿರಲಿ ಅಂತಿರೋ ಫ್ಯಾನ್ಸ್​

View post on Instagram