Asianet Suvarna News Asianet Suvarna News

New Year 2023: ಹೊಸ ವರ್ಷದ ಲಕ್ಕಿ ರಾಶಿಗಳಿವು! ನಿಮ್ಮ ರಾಶಿ ಇದ್ಯಾ

2022 ಮುಗಿತಿದೆ. ಇನ್ನೊಂದು ತಿಂಗಳ ನಂತ್ರ ಹೊಸ ವರ್ಷ ಬರ್ತಿದೆ. ನ್ಯೂ ಇಯರ್ ನಲ್ಲಾದ್ರೂ ಜೀವನ ಬದಲಾಗ್ಲಿ ಅಂತಾ ಅನೇಕರು ದೇವರನ್ನು ಪ್ರಾರ್ಥಿಸುತ್ತಿರುತ್ತಾರೆ. ಕೆಲ ರಾಶಿಯವರ ಅದೃಷ್ಟ ಮುಂದಿನ ವರ್ಷ ತೆರೆಯಲಿದೆ. ಯಶಸ್ಸು ಲಭಿಸಲಿದೆ.
 

Lucky Zodiac Signs For The Year
Author
First Published Nov 24, 2022, 3:31 PM IST

ಹೊಸ ವರ್ಷ, ಹರ್ಷ ತರಲಿ ಎಂದು ಎಲ್ಲರೂ ನಿರೀಕ್ಷಿಸ್ತಾರೆ. ಅದೇ ನಿಟ್ಟಿನಲ್ಲಿ ಮುಂದಡಿ ಇಡ್ತಾರೆ. 2023 ಬರ್ತಿದೆ. ನಿರೀಕ್ಷೆಗಳು ಹೆಚ್ಚಾಗಿವೆ. ನಮ್ಮ ಜೀವನ ಮುಂದಿನ ವರ್ಷ ಹೇಗಿರುತ್ತೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡ್ತಿದೆ. ಈ ವರ್ಷದ ಕಷ್ಟ, ದುಃಖಗಳಿವೆ ಫುಲ್ ಸ್ಟಾಪ್ ಬೀಳಬಹುದಾ? ಆರ್ಥಿಕ ಅಭಿವೃದ್ಧಿ ಕಾಣಬಹುದು ಎಂಬೆಲ್ಲ ಪ್ರಶ್ನೆಗಳಿವೆ. ಪ್ರತಿ ವರ್ಷದಂತೆ ಈ ವರ್ಷವೂ ಕೆಲವರಿಗೆ ಒಳ್ಳೆಯದು ಮತ್ತು ಕೆಲವರಿಗೆ ಕೆಟ್ಟದ್ದಾಗಲಿದೆ. ಪ್ರತಿ ರಾಶಿಯಲ್ಲೂ ಸಂತೋಷ ಮತ್ತು ದುಃಖಗಳಿರುತ್ತವೆ.  2023 ರ ವರ್ಷವು ಕೆಲವು ರಾಶಿಯವರಿಗೆ ಅದೃಷ್ಟ ತರಲಿದೆ. ಇಂದು ಯಾವ ರಾಶಿಯವರಿಗೆ ಹೊಸ ವರ್ಷ ಹೊಸತನ ತರಲಿದೆ ಎಂಬುದನ್ನು ನಾವಿಂದು ಹೇಳ್ತೇವೆ.

ಈ ರಾಶಿಯವರ ಅದೃಷ್ಟ (Good Luck) ಬದಲಿಸಲಿದೆ 2023 :  
ಸಿಂಹ (Leo) ರಾಶಿ :
ಸಿಂಹ ರಾಶಿಯವರಿಗೆ ಹೊಸ ವರ್ಷ (New Year) ಉತ್ತಮವಾಗಿರಲಿದೆ. ಅದೃಷ್ಟದ ಬಾಗಿಲು ತೆರೆಯಲಿದೆ. ಈ ವರ್ಷ  ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಆದ್ರೆ ಕೆಲಸದ ಗುಣಮಟ್ಟದಲ್ಲಿ ರಾಜಿ ಸಲ್ಲದು. ಮೆಚ್ಚುಗೆ ಪಡೆಯಲು, ಕಠಿಣ ಪರಿಶ್ರಮ ನೆರವಾಗಲಿದೆ. ವೃತ್ತಿ (Career) ಜೀವನ ಮಂಗಳಕರವಾಗಲಿದೆ. ಉದ್ಯೋಗಾಕಾಂಕ್ಷಿಗಳ ಕನಸು ನನಸಾಗಲಿದೆ. ಪ್ರೀತಿ (Love) ಸುವ ವ್ಯಕ್ತಿ ನಿಮಗೆ ಸಿಗಲಿದ್ದಾರೆ. 

ಮಿಥುನ ರಾಶಿ : ಮಿಥುನ ರಾಶಿಯವರಿಗೂ 2023 ಅದೃಷ್ಟದ ವರ್ಷವಾಗಲಿದೆ. ಈ ವರ್ಷ ಗುರಿ ಸಾಧನೆ ಸಾಧ್ಯವಾಗುತ್ತದೆ. ನಿಮಗೆ ಹೆಚ್ಚು ಪ್ರಚಾರ ಸಿಗಲಿದೆ. ಪ್ರೀತಿಯ ಪ್ರಸ್ತಾಪ ನಿಮ್ಮ ಮುಂದೆ ಬರಲಿದೆ. ವಿದೇಶದಲ್ಲಿ ಓದುವ ಕನಸು ನನಸಾಗಲಿದೆ. ವ್ಯಾಪಾರ ಮತ್ತು ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಇಂಟರ್ನೆಟ್ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಲಿದ್ದೀರಿ. ಕ್ರೀಡೆ ಮತ್ತು ಚಲನಚಿತ್ರೋದ್ಯಮದೊಂದಿಗೆ ಸಂಬಂಧ ಹೊಂದಿರುವ ಜನರು ಹೆಚ್ಚು ಹೆಸರು ಮಾಡಲಿದ್ದೀರಿ.  

SHOPOHOLIC ZODIAC: ಸೇಲ್ಸ್ ಎಂದರೆ ಸಾಕು, ಶಾಪಿಂಗ್ ಮಾಡೋ ರಾಶಿಗಳಿವು! ನಿಮಗೂ ಈ ಅಭ್ಯಾಸ ಇದೆಯಾ?

ವೃಷಭ (Taurus) ರಾಶಿ : ಹೊಸ ವರ್ಷದ ಆರಂಭ ಉತ್ತಮವಾಗಿರಲಿದೆ. ಕಾರ್ಯಗಳನ್ನು ಸಾಧಿಸಲು ಒಳ್ಳೆಯ ಅವಕಾಶವಿದೆ. ಪ್ರಮುಖ ನಿರ್ಧಾರಗಳನ್ನು   ವರ್ಷದ ಆರಂಭದಲ್ಲಿಯೇ ತೆಗೆದುಕೊಂಡರೆ ಒಳ್ಳೆಯದು. 2023 ರ ಆರಂಭಿಕ ತಿಂಗಳುಗಳಲ್ಲಿ ಮದುವೆ, ಮನೆ ಖರೀದಿಗೆ ಅವಕಾಶವಿದೆ.  ಪ್ರಯತ್ನಿಸಿದ ಎಲ್ಲ ವಿಷ್ಯದಲ್ಲಿ ಯಶಸ್ಸು ಸಿಗಲಿದೆ. ಆದ್ರೆ ಇಡೀ ವರ್ಷ ಅದೃಷ್ಟ ನಿಮ್ಮದಾಗುವುದಿಲ್ಲ. ಕೆಲವೊಂದು ಸಮಸ್ಯೆ ಎದುರಾಗುತ್ತದೆ. ಅದಕ್ಕೆ ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಹಣದ ವಿಷ್ಯದಲ್ಲಿ ಈ ವರ್ಷ ಬಲ ಸಿಗಲಿದೆ. ಪ್ರೀತಿಸುವ ವ್ಯಕ್ತಿ ಹತ್ತಿರವಾಗ್ತಾರೆ. ದಾಂಪತ್ಯ ಜೀವನದಲ್ಲಿ ಸುಧಾರಣೆ ಕಾಣಲಿದೆ. ಎದೆಗುಂದದೆ ಕೆಲಸ ಮಾಡಿದ್ರೆ ಹೆಚ್ಚಿನ ಫಲವನ್ನು ನೀಡು ಪಡೆಯಬಹುದು.

ತುಲಾ (Libra) ರಾಶಿ : 2023 ತುಲಾ ರಾಶಿಯವರಿಗೆ ಸಂತೋಷದ ವರ್ಷವಾಗಲಿದೆ. ಪ್ರೀತಿ, ಅದೃಷ್ಟ ಮತ್ತು ಯಶಸ್ಸಿಗೆ ಉತ್ತಮ ಅವಕಾಶಗಳು ತೆರೆದುಕೊಳ್ಳುತ್ತವೆ. ರಾಶಿಚಕ್ರದ ಏಳನೇ ರಾಶಿ ತುಲಾ. 2023 ತುಲಾ ರಾಶಿಯವರಿಗೆ ಅದ್ಭುತ ವರ್ಷವಾಗಲಿದೆ.  ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ  ಹೊಸ ಸಾಧ್ಯತೆಗಳು ಮತ್ತು ಮಹತ್ವದ ಪ್ರಗತಿ ಸಿಗಲಿದೆ. ಗುರಿ ಸಾಧನೆಗೆ ಈ ವರ್ಷ ನೆರವಾಗಲಿದೆ. ಹೆಚ್ಚು ಆರಾಮದಾಯಕ ಮತ್ತು ಅಧಿಕಾರ ನಿಮಗೆ ಸಿಗಲಿದೆ. ಮಾಡಲಿರುವ ಸಣ್ಣ ಮತ್ತು ದೊಡ್ಡ ಒಪ್ಪಂದಗಳು ಜೀವನಕ್ಕೆ ಪ್ರೇರಣೆಯಾಗಲಿದೆ. ಈ ವರ್ಷ ಜೀವನದಲ್ಲಿ ಯಾವುದೇ ಕೊರತೆ ಇರುವುದಿಲ್ಲ.   

ಉದ್ಯೋಗದ ಸ್ಥಳದಲ್ಲಿ ಎಲ್ಲರಿಗೂ ಈ ರಾಶಿಯವರೆಂದರೆ ಅಚ್ಚುಮೆಚ್ಚು!

ವೃಶ್ಚಿಕ (Scorpio)) ರಾಶಿ :  ವೃಶ್ಚಿಕ ರಾಶಿಯವರಿಗೆ ಈ ವರ್ಷ ಅದ್ಭುತ ವರ್ಷವಾಗಲಿದೆ.  ಪ್ರತಿ ಕ್ಷೇತ್ರ ಪ್ರಗತಿ ಸಿಗಲಿದೆ. ಗುರಿ ಸಾಧನೆಗೆ ಸಹಾಯವಾಗಲಿದೆ. ಹೊಸ ಕೆಲಸಕ್ಕೆ ಆತ್ಮವಿಶ್ವಾಸ ಹೆಚ್ಚಾಗಲಿದೆ.  ಹೊಸ ಉದ್ಯೋಗಾವಕಾಶ ಸಿಗಲಿದೆ. ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಕೆಲಸ ಮಾಡುವ ಅವಕಾಶವಿದ್ದು, ವಿದೇಶಕ್ಕೆ ಪ್ರಯಾಣಿಸಲು ಅವಕಾಶ ಸಿಗಲಿದೆ.
 

Follow Us:
Download App:
  • android
  • ios