Shopoholic zodiac: ಸೇಲ್ಸ್ ಎಂದರೆ ಸಾಕು, ಶಾಪಿಂಗ್ ಮಾಡೋ ರಾಶಿಗಳಿವು! ನಿಮಗೂ ಈ ಅಭ್ಯಾಸ ಇದೆಯಾ?

ಶಾಪಿಂಗ್ ಇಷ್ಟಪಡದವರು ವಿರಳ. ಹಣ ಖರ್ಚಾಗುವ ತಲೆಬಿಸಿ ಬಿಟ್ಟರೆ ಶಾಪಿಂಗ್ ವಿಶೇಷ ಕಿಕ್ ನೀಡುತ್ತದೆ. ಕೆಲವರಿಗೆ ಸೇಲ್ಸ್ ಎಂದ ಕೂಡಲೇ ಕಿವಿ ನಿಮಿರುತ್ತದೆ. ಅದರಲ್ಲೂ ಈ 5 ರಾಶಿಗಳು ಸೇಲ್ಸ್, ಡಿಸ್ಕೌಂಟ್ ಎಂಬ ಪದ ಕಿವಿಗೆ ಬೀಳುತ್ತಿದ್ದಂತೆ ಹಿಂದುಮುಂದು ಯೋಚಿಸದೆ ಶಾಪಿಂಗ್ ಮಾಡುತ್ತಾರೆ. 

These zodiac signs love shopping during sales offers and discounts skr

ಬೇಕೋ ಬೇಡವೋ, ಕೈಲಿ ದುಡ್ಡಿದೆ ಎಂದರೆ ಕಂಡಿದ್ದೆಲ್ಲ ಖರೀದಿಸುವ ಹಂಬಲ ಹಲವರಿಗೆ. ಹಾಗಿದ್ದೂ, ಕೆಲವರು ತಮ್ಮ ಈ ಶಾಪಿಂಗ್ ಅರ್ಜ್ ನಿಯಂತ್ರಿಸಿಕೊಂಡು ಅಗತ್ಯವಿದ್ದಾಗ ಮಾತ್ರ ಖರೀದಿಸುತ್ತಾರೆ. ಆದರೆ, ಮತ್ತೆ ಕೆಲವರು ಅಗತ್ಯವಿದೆಯೋ ಇಲ್ಲವೋ, ಕಂಡಕಂಡಿದ್ದೆಲ್ಲ ಕೊಂಡು ಉಂಡು ಸಂತೋಷ ಪಡುತ್ತಾರೆ. 
ಅದರಲ್ಲೂ ಎಲ್ಲಾದರೂ ಸೇಲ್ಸ್, ಡಿಸ್ಕೌಂಟ್, ಫೆಸ್ಟಿವಲ್ ಆಫರ್ ಎಂಬೆಲ್ಲ ಬೋರ್ಡ್ ಕಂಡರೆ ಸಾಕು, ಈ ಐದು ರಾಶಿಯವರು ಶಾಪಿಂಗ್ ಮಾಡುವುದರಲ್ಲಿ ಮೊದಲಿಗರು. ಕಡಿಮೆ ದುಡ್ಡಿಗೆ ಸಾಕಷ್ಟು ಕೊಂಡೆವೆಂದು ಬೇಡವಾದದ್ದನ್ನು ಕೊಂಡು ಸಂತೋಷಪಡುತ್ತಾರೆ. ಈ ರಾಶಿಗಳಲ್ಲಿ ನಿಮ್ಮ ರಾಶಿ ಇದೆಯೇ?

ಮೀನ ರಾಶಿ(Pisces)
ನಿಮ್ಮ ನೆಚ್ಚಿನ ಬ್ರ್ಯಾಂಡ್ ಏನಾದರೂ ವಿಶೇಷ ಸೇಲ್ಸ್ ನಡೆಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ನಿಮ್ಮ ಮೀನ ರಾಶಿಯ ಸ್ನೇಹಿತರ ಬಳಿ ಕೇಳಿ ನೋಡಿ. ಅವರಿಗೆ ಎಲ್ಲಾ ರೀತಿಯ ಮಾರಾಟದ ಮೇಲೆ ಗಮನ ಇರುತ್ತದೆ. ಅದು ಸೌಂದರ್ಯ, ಬಟ್ಟೆ, ಗೃಹಾಲಂಕಾರ ಅಥವಾ ಉಪಕರಣಗಳಿರಬಹುದು- ಎಲ್ಲಿ ಬೆಸ್ಟ್ ಆಫರ್ ನಡೆಯುತ್ತಿದೆ ಎಂಬುದು ಅವರಿಗೆ ತಿಳಿದಿರುತ್ತದೆ. ಅವರು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಅಷ್ಟೇ ಅಲ್ಲ, ಕೆಲವೊಮ್ಮೆ ಬಾರ್ಡರ್‌ಲೈನ್ ಶಾಪೋಹಾಲಿಕ್(Borderline Shopoholic) ಆಗಿರುತ್ತಾರೆ.

ಕುಂಭ ರಾಶಿ (Aquarius)
ವೃಷಭ ರಾಶಿಯವರು ಶಾಪಿಂಗ್ ಮಾಡುವುದನ್ನು ನೀವು ನೋಡಿದರೆ ಅವರು ಅದಕ್ಕಾಗಿಯೇ ಹುಟ್ಟಿದ್ದಾರೇನೋ ಎಂಬ ಅನುಮಾನ ಬಾರದಿರದು. ಅವರು ಐಷಾರಾಮಿಗಳನ್ನು ಎಷ್ಟೇ ಪ್ರೀತಿಸಿದರೂ, ರಹಸ್ಯವಾಗಿ ಅವರು ತಮ್ಮ ಎಲ್ಲಾ ವಸ್ತುಗಳನ್ನು ವಿವಿಧ ಸೇಲ್ಸ್ ಆಫರ್‌ನಲ್ಲಿ, ಕೆ.ಆರ್.ಮಾರ್ಕೆಟ್, ಚಿಕ್ಕಪೇಟೆಯ ರಸ್ತೆಬದಿಯ ಅಂಗಡಿಯಲ್ಲಿ ಖರೀದಿಸಿರಬಹುದು. ಅವರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಆನ್‌ಲೈನ್ ಅಥವಾ ಆಫ್‌ಲೈನ್‌ ಸೇಲ್ಸ್ ನಡೆಯುತ್ತಿದ್ದರೆ ಅವರು ಖರೀದಿಸದೆ ಬಿಡಲಾರರು. ಅವರು ಸಣ್ಣ ಸಂಬಳವನ್ನು ಹೊಂದಿದ್ದರೂ ಸಹ, ಯಾವಾಗಲೂ ತಮ್ಮ ಶಾಪಿಂಗ್ ‌ಗಾಗಿ ಸ್ವಲ್ಪ ಹಣವನ್ನು ಖರ್ಚು ಮಾಡಿಯೇ ತೀರುತ್ತಾರೆ.

ಉದ್ಯೋಗದ ಸ್ಥಳದಲ್ಲಿ ಎಲ್ಲರಿಗೂ ಈ ರಾಶಿಯವರೆಂದರೆ ಅಚ್ಚುಮೆಚ್ಚು!

ಸಿಂಹ ರಾಶಿ (Leo)
ಈ ರಾಶಿಚಕ್ರದ ಜನರು ಟ್ರೆಂಡಿಯಾಗಿರಲು ಇಷ್ಟಪಡುತ್ತಾರೆ ಮತ್ತು ಹೊಸ ಟ್ರೆಂಡ್ ಏನೆಂದು ಸದಾ ಗಮನಿಸುತ್ತಿರುತ್ತಾರೆ. ಮತ್ತು ಈ ಕಾರಣದಿಂದಾಗಿ ಅವರು ಯಾವಾಗಲೂ ಯಾವ ಅಪ್ಲಿಕೇಶನ್ ಅಥವಾ ಬ್ರ್ಯಾಂಡ್‌ನಲ್ಲಿ ಸೇಲ್ಸ್ ನಡೆಯುತ್ತಿದೆ ಎಂದು ತಿಳಿದಿರುತ್ತಾರೆ. ಸಿಂಹ ರಾಶಿಯವರು ವಿಭಿನ್ನವಾಗಿ ಕಾಣಲು ಬಯಸುತ್ತಾರೆ ಮತ್ತು ಸೇಲ್ಸ್ ಸಮಯದಲ್ಲಿ ಅವರು ತಮ್ಮ ವಸ್ತುಗಳನ್ನು ಖರೀದಿಸುತ್ತಾರೆ. 

ತುಲಾ ರಾಶಿ (Libra)
ತುಲಾ ರಾಶಿಯವರು ಫ್ಯಾಶನೇಬಲ್ ಆಗಿರುತ್ತಾರೆ ಮತ್ತು ಆ ಉತ್ಸಾಹವನ್ನು ಪೋಷಿಸಲು ಅವರು ಬಹಳಷ್ಟು ಶಾಪಿಂಗ್ ಮಾಡುತ್ತಾರೆ, ವಿಶೇಷವಾಗಿ ಆಫರ್ ಇರುವಾಗ. ಮೇಕಪ್‌ನಿಂದ ಹಿಡಿದು ಬಟ್ಟೆಬರೆ, ಸ್ವೆಟರ್‌ವರೆಗೆ ಹೊಸ ಫ್ಯಾಶನ್‌ನ ಎಲ್ಲವನ್ನೂ ಖರೀದಿಸುತ್ತಾರೆ. ಸದಾ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ.

Shani Gochar 2023: ಇನ್ನೆರಡು ತಿಂಗಳು ಸಹಿಸಿಬಿಡಿ, ಮತ್ತೆ ನಿಮಗೆ ಶನಿ ಕಾಟ ಇರೋಲ್ಲ!

ವೃಶ್ಚಿಕ ರಾಶಿ (Scorpio)
ಈ ರಾಶಿಚಕ್ರದ ಚಿಹ್ನೆಯು ಶಾಪಿಂಗ್ ಅನ್ನು ಇಷ್ಟಪಡುತ್ತದೆ ಮತ್ತು ಮಾರಾಟದ ಸಮಯವಾಗಿದ್ದರೆ, ಅವರು ಬಯಸಿದ ಎಲ್ಲವನ್ನೂ ಅವರು ಕೊಳ್ಳುತ್ತಾರೆ. ವೃಶ್ಚಿಕ ರಾಶಿಯವರು ಏನನ್ನಾದರೂ ಬಯಸಿದಾಗ, ಅವರು ಅದನ್ನು ಪಡೆಯುವವರೆಗೂ ಸುಮ್ಮನಾಗುವುದಿಲ್ಲ. ಆದಾಗ್ಯೂ, ಆಫರ್, ಡಿಸ್ಕೌಂಟ್ ಮೇಲೆ ಶಾಪಿಂಗ್ ಮಾಡುವುದರಿಂದ ಅವರು ಪಡೆಯುವ ಥ್ರಿಲ್ಲೇ ಬೇರೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios