ಕನ್ಯಾ

ಈ ವರ್ಷದ ಶುರುವಿಗೆ ನಿಮ್ಮ ಪ್ರೀತಿಗೆ ನೀವಂದುಕೊಂಡಂಥಾ ಆರಂಭ  ಸಿಗದೇ ಇರಬಹುದು. ಎಲ್ಲದಕ್ಕೂ ಒಂದು ಟೈಮ್‌  ಅಂತಿರುತ್ತದೆ. ಅಲ್ಲೀತನಕ ಕಾಯಲೇಬೇಕು. ಹಾಗಂತ ನೀವಿಷ್ಟ  ಪಡುವವರನ್ನು ನೀವೇ ಸತಾಯಿಸುವ ವಾತಾವರಣ ನಿರ್ಮಾಣವಾಗಬಹುದು. ಈ ವರ್ಷದ ಬೇಸಿಗೆ ನಿಮ್ಮ ಬದುಕಿನಲ್ಲೂ ರಮ್ಯ ಚೈತ್ರ ಕಾಲ. ನಿಮ್ಮ ಹೃದಯ ಬೆಚ್ಚಗಾಗುವ ಕಾಲ. ಆದರೆ ಅಲ್ಲಿಯವರೆಗೂ ಕಾಯಲೇ ಬೇಕು. ಈ ನಡುವೆ ಸಣ್ಣಪುಟ್ಟ ಏರಿಳಿತಗಳು, ಕೋಪ ತಾಪಗಳು ಬರುತ್ತವೆ. ಆದರೆ  ಇದು ನಿಮ್ಮ ಪ್ರೀತಿಯನ್ನು ಇನ್ನಷ್ಟು ಗಟ್ಟಿಮಾಡುತ್ತಾ ಹೋಗುತ್ತದೆಯೇ ವಿನಃ ನಿರಾಸೆ ಮಾಡದು.

2020 ಯಲ್ಲಿ ಈ ಮೊದಲ ಐದು ರಾಶಿಯವರ ಲವ್‌ ಭವಿಷ್ಯ ಹೇಗಿದೆ ಗೊತ್ತಾ?

ತುಲಾ
 

ಸಂಗಾತಿಯ ಬಗ್ಗೆ ನಿಮಗೆ ಪ್ರೀತಿ ಇದೆ. ಜೊತೆಗೆ ಪೊಸೆಸ್ಸಿವ್‌ನೆಸ್‌ ತುಸು ಹೆಚ್ಚೇ ಇದೆ. ಇದನ್ನು ಈ ವರ್ಷವಾದರೂ ಕಡಿಮೆ ಮಾಡಿ. ಇಲ್ಲದಾವರೆ ನಿಮ್ಮ ಸಂಬಂಧ ಉಸಿರುಗಟ್ಟಿದಂತಾಗಬಹುದು. ಎಂಥಾ ಆತ್ಮೀಯ ಸಂಬಂಧವೇ ಆದರೂ ಒಂದಿಷ್ಟು ಗ್ಯಾಪ್‌ ಇದ್ದರೆ ಚೆನ್ನ. ಇಲ್ಲವಾದರೆ ಅದು ಕಡಿದು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಸಂಗಾತಿಯನ್ನು ಪ್ರೀತಿಸಿ, ಆದರೆ ಅತಿಯಾದ ವ್ಯಾಮೋಹ ಬೇಡ. ಸಂಗಾತಿಯ ಬಗ್ಗೆ ಹೆಚ್ಚೆಚ್ಚು ನಿರೀಕ್ಷೆ ಇಟ್ಟುಕೊಳ್ಳಬೇಡಿ. ಅವರಿದ್ದ ಹಾಗೇ ಅವರನ್ನು ಒಪ್ಪಿಕೊಳ್ಳುವ ಮನೋಭಾವ ನಿಮಗೂ ಒಳ್ಳೆಯದು, ಅವರಿಗೂ ಒಳ್ಳೆಯದು.

ವೃಶ್ಚಿಕ

ಕಳೆದ ಕೆಲವು ವರ್ಷಗಳಿಂದ ಏನಂದುಕೊಂಡಿದ್ದಾರೋ ಅದಾಗದೇ ನಿರಾಶೆಯಾದದ್ದೇ ಹೆಚ್ಚು. ಹೃದಯ ಒಡೆದ ಚೂರಾದ ಅನುಭವವೂ ಆಗಿರಬಹುದು. ಆದರೆ 2020 ನಿಮ್ಮ  ಆ ಗಾಯಗಳನ್ನೆಲ್ಲ ಮಾಯ ಮಾಡಲಿದೆ. ಪ್ರೀತಿಯ ತಂಗಾಳಿ ಈ ವರ್ಷದಲ್ಲಿ ನಿಮ್ಮ ಹೃದಯಕ್ಕೆ ತಂಪೆರೆಯಲಿದೆ. ನಿಮ್ಮ ಗೃಹಗತಿಗಳ ಪ್ರಕಾರ ಸ್ನೇಹಿತರಲ್ಲೇ ಯಾರೋ ಒಬ್ಬರು ನಿಮ್ಮ ಹೃದಯದಲ್ಲಿ ಜಾಗ ಪಡೆಯಲಿದ್ದಾರೆ. ಈ ಪ್ರೀತಿಯಿಂದ ನೊಂದು ಬೆಂದ ನಿಮ್ಮ ಮನಸ್ಸಿಗೆ ಆಹ್ಲಾದಕರ ಅನುಭವವಾಗಲಿದೆ. ನಿರಾಸೆಯನ್ನು ಮರೆತು 2020 ಯನ್ನು ಸಂಭ್ರಮಿಸಿ.

ಈ ಮನೆಯಲ್ಲಿ ರಾಹು ಇದ್ದರೆ ದಾಂಪತ್ಯ ಸುಖ ಕನಸಷ್ಟೇ!

ಧನುಸ್‌

ಒಂಥರಾ ಇಬ್ಬಗೆ ಉಂಟಾಗಬಹುದು. ಪ್ರೀತಿ ನಿಮ್ಮ ಸಾಧನೆಗೆ ಅಡ್ಡಿ ಅಂತ ಪದೇ ಪದೇ ಅನಿಸಬಹುದು. ನಿಮಗೀಗ ಅಂದುಕೊಂಡದ್ದನ್ನು ಸಾಧಿಸುವ ಗುರಿಮುಟ್ಟುವ ಸಮಯ. ಈ ಟೈಮ್‌ನಲ್ಲಿ ಬದುಕಿನ ಮತ್ತೊಂದು ಅಂಗವಾದ ಪ್ರೀತಿಯೇ ಅಡ್ಡಿಯಾದರೆ? ಏನೂ ಮಾಡಕ್ಕಾಗಲ್ಲ, ಪ್ರೀತಿಯನ್ನೂ ಬದಿಗೆ ಸರಿಸಿ ಮುಂದೆ ಹೋಗಲೇ ಬೇಕು. ನೀವು ಅದನ್ನೇ ಮಾಡುತ್ತೀರಿ. ಭವಿಷ್ಯಕ್ಕೆ ಅಡ್ಡಿಯಾದ ಪ್ರೀತಿಗೆ ಗುಡ್‌ಬೈ ಹೇಳಿ ಕನಸಿನ ಹಿಂದೆ ನಡೆಯುತ್ತೀರಿ. ಗುರಿ ಮುಟ್ಟುತ್ತೀರಿ. ನೀವು ಅವಿವಾಹಿತರಾಗಿದ್ದರೆ ಈ ವರ್ಷ ನಿಮ್ಮ ಸಿಂಗಲ್‌ ಸ್ಟೇಟಸ್‌ ಮುಂದುವರಿಯಲಿದೆ.

ಮಕರ

ಈ ವರ್ಷದ ನಿಮ್ಮ ಪ್ರೀತಿ ಸ್ಮೂಥ್‌ ಗೋಯಿಂಗ್‌ ವರ್ಷ. ಅಷ್ಟೇ ಅಲ್ಲ, ಪ್ರೀತಿ, ಪ್ರೇಮ ಸಂಬಂಧದ ವಿಚಾರಕ್ಕೆ ಬಂದರೆ ಎಲ್ಲವೂ ನಿಧಾನ ಗತಿಯಲ್ಲಿ ಚಲಿಸಲಿವೆ. ಹಾಗಂತ ಟೆನ್ಶನ್‌ ಬೇಡ. ವರ್ಷವಿಡೀ ಹೀಗಾಗಲ್ಲ. ಒಂದು ಟೈಮ್‌ನ ಬಳಿಕೆ ನಿಮ್ಮ ಪ್ರೀತಿ ಹೆಚ್ಚು ವೇಗ ಪಡೆದುಕೊಳ್ಳಬಹುದು. ಸಂಬಂಧ ಕೂಡಿಕೊಳ್ಳಬಹುದು. ಅನೇಕ ಅನಿರೀಕ್ಷಿತ ತಿರುವುಗಳು ಕಂಗಾಲು ಮಾಡಿದರೂ ಉತ್ತಮ ದಿನಗಳು ಮುಂದಿವೆ ಅನ್ನೋದನ್ನು ಮರೀಬೇಡಿ. ಯಾವ ಕಾರಣಕ್ಕೂ ಸಂಗಾತಿಯ ಬಗ್ಗೆ ನಂಬಿಕೆ ಕಳೆದುಕೊಳ್ಳಬೇಡಿ. ನಂಬಿಕೆಗೆ ಹಾನಿ ಮಾಡುವಂಥಾ ಕೆಲಸ ಮಾಡಬೇಡಿ.

ಪ್ರಕೃತಿ ಸೊಬಗಿನಿಂದ ಮನಸೆಳೆಯುವ ಈ ದೇವಾಲಯಗಳಿಗೆ ತಪ್ಪದೇ ಭೇಟಿ ನೀಡಿ!

ಕುಂಭ

ಈಗ ಪ್ರೀತಿಯ ಬಾಲ್‌ ನಿಮ್ಮ ಕೋರ್ಟ್‌ನಲ್ಲಿದೆ. ತಾನಾಗಿಯೇ ಒಲಿದು ಬಂದ ಪ್ರೀತಿಯನ್ನು ಒಪ್ಪಿ ಮುನ್ನಡೆಯುವುದೋ, ಅಥವಾ ನಿರಾಕರಿಸುವುದೋ ಅನ್ನೋದನ್ನು ನೀವೇ ನಿರ್ಧರಿಸಬೇಕಿದೆ. ನಿಮ್ಮ ಈ ನಿರ್ಧಾರ ನಿಮ್ಮ ಮುಂದಿನ ಭವಿಷ್ಯವನ್ನು ನಿರ್ಣಯಿಸಲಿದೆ. ಯೋಚಿಸಿ ಮುಂದಡಿ ಇಡಿ. ಪ್ರೀತಿಯ ವಿಷಯದಲ್ಲಿ ಯಾಮಾರಬೇಡಿ. ಈ ಬಾರಿ ನೀವು ಆಕರ್ಷಣೆಯ ಕೇಂದ್ರಬಿಂದು ಆಗಲಿದ್ದೀರಿ. ಆದರೆ  ಪರಿಸ್ಥಿತಿಯನ್ನು ನಾಜೂಕಾಗಿ ಹ್ಯಾಂಡಲ್‌ ಮಾಡೋದನ್ನು ಕಲಿಯಿರಿ. ಮುಂದುವರಿಯಿರಿ.

ಮೀನ

ಯಾಕೋ ಮೊದಲೆಲ್ಲ ಅಷ್ಟು ಕಾಳಜಿ ಮಾಡುತ್ತಿದ್ದ  ಗೆಳೆಯ/ತಿ ನನ್ನನ್ನೀಗ ನಿರ್ಲಕ್ಷಿಸುತ್ತಿದ್ದಾಳಾ? ಅವಳ ಗಮನ ಬೇರೆಡೆ ಹೋಗಿರಬಹುದಾ, ನನ್ನಲ್ಲಿ ಆಸಕ್ತಿ ಕಡಿಮೆ ಆಗಿರಬಹುದಾ .. ಈ ಥರದ ಅನುಮಾನಗಳು ಬರಬಹುದು. ಇದಕ್ಕೆ ಉತ್ತಮ ಪರಿಹಾರ ಇಂಥ ಸಂದೇಹಗಳನ್ನು ಅಲ್ಲಲ್ಲೇ ಪರಿಹರಿಸಿಕೊಳ್ಳೋದು. ದಯವಿಟ್ಟು ಮನಸ್ಸಲ್ಲೇ ಇಟ್ಟು ಮುಂದುವರಿಸಬೇಡಿ. ಅವಿವಾಹಿತರಿಗೆ ಲವ್‌ ಅಟ್‌ ಫಸ್ಟ್‌ ಸೈಟ್‌ನಂಥಾ ಅನುಭವಗಳಾಗಬಹುದು. ಆದರೆ  ಇಂಥಾ ಬೆಳವಣಿಗೆ ನಿಮ್ಮ ಬದುಕು ಬದಲಿಸೋದು ಬಿಡೋದು 50-50 ಇರುತ್ತದೆ.