ಈ ಮನೆಯಲ್ಲಿ ರಾಹು ಇದ್ದರೆ ದಾಂಪತ್ಯ ಸುಖ ಕನಸಷ್ಟೇ!
ಗ್ರಹಗಳಲ್ಲಿ ಶನಿ ಬಿಟ್ಟರೆ ರಾಹು ಹೆಚ್ಚು ಅಶುಭವನ್ನುಂಟು ಮಾಡುತ್ತಾನೆ. ಅದರಲ್ಲಿಯೂ ಈ ರಾಹು ಯಾವ ಮನೆಯಲ್ಲಿದ್ದಾನೆ ಎನ್ನುವುದರ ಮೇಲೆ ಜೀವಮಾನವಿಡೀ ನೋವು ಅನುಭವಿಸುವ ಸಾಧ್ಯತೆಯೂ ಇದೆ. ಯಾವ ಮನೆಯಲ್ಲಿ ರಾಹು ಇದ್ದರೆ ಯಾರಿಗೆ ಶುಭ? ಯಾರಿಗೆ ಅಶುಭ? ನಿಮ್ಮ ಜಾತಕ ನೀವೇ ನೋಡಿಕೊಳ್ಳಿ...
ಡಾ| ಹರಿಶ್ಚಂದ್ರ ಪಿ.ಸಾಲಿಯಾನ್, ಮೂಲ್ಕಿ
ಮೊಬೈಲ್: 9448490860
ರಾಹುವನ್ನು ಮೋಸಗಾರ, ಕೃತಘ್ನ, ಸ್ವಾರ್ಥಿ, ಅನೀತಿವಂತ, ಕೆಟ್ಟ ಮಿತ್ರ ಎಂದು ಹೇಳುತ್ತಾರೆ. ಶನಿಯ ನಂತರ ಅಶುಭ ಮಾಡಲು ಯಾವ ಮನೆಯಲ್ಲಿ ಇದ್ದಾನೆ ಎಂದು ನೋಡಬೇಕು. ರಾಹು ಜಾತಕದಲ್ಲಿ ಒಳ್ಳೆಯದಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಇಡೀ ಆಯುಷ್ಯದಲ್ಲಿ ರಾಹುವಿನ ತೊಂದರೆಯನ್ನು ಅನುಭವಿಸುತ್ತಾನೆ. ಇವನು ಇರುವ ಮನೆಯಲ್ಲಿ ಬಲಹೀನನಾಗಿದ್ದರೆ ಕಂಟಕವನ್ನುಂಟು ಮಾಡುತ್ತಾನೆ.
2020 ಯಲ್ಲಿ ಈ ಮೊದಲ ಐದು ರಾಶಿಯವರ ಲವ್ ಭವಿಷ್ಯ ಹೇಗಿದೆ ಗೊತ್ತಾ?
ಧನು ರಾಶಿಯಲ್ಲಿರುವ ರಾಹುವನ್ನು ಕೋದಂಡ ರಾಹು ಎಂದು ಹೇಳುತ್ತಾರೆ. ಕೋದಂಡ ರಾಹು ಶುಭಗ್ರಹ. ನೋಡಿದರೆ, ಇನ್ನೂ ಒಳ್ಳೆಯ ಫಲ ಸಿಗುತ್ತದೆ. ಇದು ರಾಹುದೆಶೆಯಲ್ಲಿ ಬಂದರೆ, ಅವನಿಂದ ಸಂಪತ್ತು ಬಂದು ಸುಖವನ್ನು ಕೊಡುತ್ತಾನೆ. ಕುಜದೆಶೆಯ ಕೊನೆ ದಿನಗಳು ಮತ್ತು ರಾಹುದೆಶೆ ಮುಗಿದು ಗುರುದೆಶೆ ಆರಂಭವಾಗುವಾಗ ಬಹಳ ಕೆಟ್ಟದ್ದನ್ನು ರಾಹು ಮಾಡುತ್ತಾನೆ. ಇದರಿಂದ ಜಾತಕನು ಎಲ್ಲವನ್ನು ಕಳೆದುಕೊಳ್ಳುವುದು ಇದೆ.
ಕಾಳ ಸರ್ಪ ಯೋಗ: ರಾಹು ಕೇತುಗಳ ಒಂದೇ ಮಗ್ಗುಲಲ್ಲಿ ಗ್ರಹಗಳು ಬಂದರೆ ಅದು ಕಾಳ ಸರ್ಪಯೋಗ. ಉಳಿದ ರಾಶಿಗಳು ಶೂನ್ಯವಾಗಿದ್ದರೆ ಭವಿಷ್ಯದಲ್ಲಿ ತೊಂದರೆ ಇದೆ. ಕಾಳ ಸರ್ಪ ಯೋಗವನ್ನು ಕೆಲವರು ಭಯಂಕರ ಎಂದು ಹೇಳುತ್ತಾರೆ. ಆದರೆ ಕೆಲವರಿಗೆ ಕೆಟ್ಟ ಫಲ ಅನುಭವಕ್ಕೆ ಬರುತ್ತದೆ.
ಕುಜ ರಾಹು ಸಂಧಿ: ರಾಹುದೆಶೆ ಮೊದಲಾಗುವ ಹಿಂದು ಮುಂದು ಅಂದರೆ ಕುಜ ದೆಶೆಯ ಕೊನೆಯ ದಿನಗಳು ಮತ್ತು ರಾಹುದೆಶೆಯು ಮುಗಿದು ಗುರು ದೆಶೆಯ ಆರಂಭ ದಿನಗಳು ರಾಹು ಬಹಳ ಕೆಟ್ಟದು ಮಾಡುತ್ತಾನೆ. ಇದನ್ನು ಕುಜರಾಹು ಸಂಧಿ ಎಂದು ಕರೆೆಯುತ್ತಾರೆ. ಈ ದೆಶೆಯ ಸಂಧಿಯಲ್ಲಿ ಶುಭ ಕೆಲಸಗಳನ್ನು ಮಾಡಬಾರದು.
2020ರಲ್ಲಿ ಸಂಗಾತಿ ಸಿಗೋ ಲಕ್ ನಿಮಗಿದ್ಯಾ? ಅದೃಷ್ಟ ರಾಶಿಗಳ ಪಟ್ಟಿ ಇಲ್ಲಿದೆ!
ಬೇರೆ ಬೇರೆ ರಾಶಿಯಲ್ಲಿ ರಾಹುವಿನ ಫಲ: ಲಗ್ನದ ರಾಹು ಭೂತ ಪ್ರೇತದ ಭಯ ತರುತ್ತದೆ. ಭಯವನ್ನುಂಟು ಮಾಡುತ್ತದೆ. ಉಪಚಯ ಸ್ಥಾನದಲ್ಲಿದ್ದು ಶುಭಗ್ರಹಗಳಿಂದ ವೀಕ್ಷಿತರಾದರೆ ದೀರ್ಘಾಯುಷ್ಯ, ಜಯ ತಂದು ಕೊಡುತ್ತಾನೆ. ಮೂರರಲ್ಲಿ ರಾಹು ಇದ್ದರೆ ಸಹೋದರರನ್ನು ಕಳೆದು ಕೊಳ್ಳುತ್ತೀರಿ. ನಾಲ್ಕನೆ ಮನೆಯಲ್ಲಿ ಇದ್ದರೆ ಜೀವನವಿಡೀ ನಿರಾಸೆ, ಐದನೇ ಮನೆಯಲ್ಲಿ ರಾಹು ಇದ್ದರೆ ದಾಂಪತ್ಯ ಸುಖ ಇರುವುದಿಲ್ಲ ಸಂತಾನಕ್ಕೆ ತೊಂದರೆ ಇರುತ್ತದೆ. ಆರನೇ ಮನೆಯಲ್ಲಿ ರಾಹು ಇದ್ದರೆ ಅನಾರೋಗ್ಯ ಇರುತ್ತದೆ. ಸಪ್ತಮದಲ್ಲಿ ರಾಹು ಇರಲೇಬಾರದು- ಪುರುಷನ ಜಾತಕದಲ್ಲಿ ಸಪ್ತಮದಲ್ಲಿ ರಾಹು ಇದ್ದರೆ ವ್ಯಭಿಚಾರ ಮಾಡುತ್ತಾರೆ, ಸ್ತ್ರೀಯರಾದರೆ ಗಂಡನನ್ನು ಕಳೆದುಕೊಳ್ಳುವುದು ಖಂಡಿತಾ., ಎಂಟರ ಮನೆಯಲ್ಲಿ ರಾಹು ಇದ್ದರೆ ಬಹಳ ದುಃಖ ಇರುತ್ತದೆ, ಒಂಭತ್ತನೆ ಮನೆಯಲ್ಲಿ ರಾಹು ಇದ್ದರೆ ತಂದೆಯಿಂದ ತೊಂದರೆ ಇದೆ, ದಶಮದಲ್ಲಿ ರಾಹು ಇದ್ದರೆ ಉದ್ಯೋಗದಲ್ಲಿ ತೊಂದರೆ ಇರುತ್ತದೆ, ಹನ್ನೊಂದರಲ್ಲಿ ರಾಹು ಇದ್ದು ಶುಭ ಗ್ರಹ ನೋಡಿದರೆ ಬಹಳ ಒಳ್ಳೆಯದು ಸಂಪತ್ತು ಬರುತ್ತದೆ, ಹನ್ನೆರಡನೇ ಮನೆಯಲ್ಲಿ ಇದ್ದರೆ ಎಲ್ಲರಿಂದ ತಿರಸ್ಕಾರ, ಕೋಪ ಜಾಸ್ತಿ ಇರುತ್ತದೆ.
ರಾಹು ಮತ್ತು ಅವನಿಂದ ತೊಂದರೆ: ಚರ್ಮರೋಗ, ಸಿಡುಬುರೋಗ, ಲಕ್ವ ಕಾಯಿಲೆಗೆ ರಾಹು ಕಾರಣ ಎನ್ನುತ್ತಾರೆ. ಮಾನಸಿಕ ಕಾಯಿಲೆಗೆ ರಾಹು ಕಾರಣ ಎಂದು ಜ್ಯೋತಿಷ್ಯರು ಹೇಳುತ್ತಾರೆ. ರಾಹುವಿನೊಂದಿಗೆ ಶನಿ, ಶುಕ್ರ, ಬುಧ, ಕುಜ, ಸರ‍್ಯ ಚಂದ್ರರು ಒಟ್ಟಿಗೆ ಇದ್ದರೆ ಜಾಸ್ತಿ ತೊಂದರೆ ಇದೆ.
ಈ ರಾಶಿಯವರು ಈ ಒಂದು ಕೆಟ್ಟ ಚಟ ಬಿಟ್ರೆ ಒಳ್ಳೇದು!
ಜ್ಯೋತಿಷ್ಯದ ಪ್ರಕಾರ ರಾಹು ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಕೊಡುತ್ತದೆ. ಚಂದ್ರನೊಂದಿಗೆ ರಾಹು ಇದ್ದರೆ ಅವರು ಹುಚ್ಚರಾಗಬಹುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವ ಇದೆ. ರಾಹು 5ನೇ ಮನೆಯಲ್ಲಿ ಇದ್ದರೆ ಚಿಕ್ಕ ಪ್ರಾಯದಲ್ಲಿಯೇ ಅನಾರೋಗ್ಯದಿಂದ ಬಳಲುತ್ತಾರೆ. ಆಗಾಗ ಹೊಟ್ಟೆ ನೋವಿನಿಂದ ಮಾನಸಿಕ ನೆಮ್ಮದಿ ಇರುವುದಿಲ್ಲ, ಮಾಂದಿಯ ಜೊತೆಯಲ್ಲಿ ರಾಹು ಇದ್ದರೆ ಸಾಂಕ್ರಮಿಕ ಕಾಯಿಲೆ ಇರುತ್ತದೆ. ಪಂಚಮದಲ್ಲಿ ರಾಹು ಕುಜನಿದ್ದರೆ ಇವರಿಗೆ ಗರ್ಭ ನಿಲ್ಲುವುದು ಕಷ್ಟ. ಪಂಚಮದಲ್ಲಿ ಲಗ್ನಾಧಿಪತಿ ಇದ್ದು ಅದರೊಂದಿಗೆ ರಾಹು ಇದ್ದರೆ ಸಂತಾನ ಇರುವುದಿಲ್ಲ..