ಗ್ರಹಗಳ ಚಲನೆ ನಮ್ಮ ಪ್ರೀತಿ, ಸಂಬಂಧ, ವ್ಯವಹಾರ ಹೀಗೆ ಲೈಫ್‌ನ ನಾನಾ ಆಯಾಮಗಳ ಮೇಲೆ ಪರಿಣಾಮ ಬೀರುತ್ತೆ. ಈಗಾಗಲೇ ಪ್ರೀತಿಯಲ್ಲಿ ಬಿದ್ದವರು, ಪ್ರೊಪೋಸ್‌ ಮಾಡಲು ಹೊಂಚು ಹಾಕುತ್ತಿರುವವರು, ಸಂಸಾರಸ್ಥರು ಹೀಗೆ ಪ್ರತಿಯೊಬ್ಬರಿಗೂ ತಮ್ಮ ಲವ್‌ಲೈಫ್‌ ಬಗ್ಗೆ ಕುತೂಹಲ ಇದ್ದೇ ಇರುತ್ತೆ. ಅಷ್ಟಕ್ಕೂ ಪ್ರೀತಿ ಇಲ್ಲದೇ ಜಗತ್ತು ಇರೋದಕ್ಕೆ ಸಾಧ್ಯನಾ, ಪ್ರತಿಯೊಬ್ಬನ ಜೀವನದಲ್ಲೂ ಸಂಬಂಧಗಳದ್ದು ದೊಡ್ಡ ಅಧ್ಯಾಯ. ಯಾರೊಬ್ಬರೂ ಅದರಿಂದ ಹೊರಬರೋದು ಸಾಧ್ಯವಿಲ್ಲ. ಹೀಗಿರುವ ಜ್ಯೋತಿಷ್ಯದಲ್ಲಿ  ಪ್ರೀತಿ ಸಿಗುತ್ತಾ ಇಲ್ವಾ ಇರೋ ಪ್ರೀತಿನ ಉಳಿಸಿಕೊಳ್ಳಕ್ಕಾಗುತ್ತಾ ಅನ್ನೋದರ ಬಗ್ಗ್ಗೆ ವಿವರಗಳು ಸಿಗುತ್ತವೆ. ಸೋ, ಆರಂಭದ ಐದು ರಾಶಿಗಳ  ಪ್ರೀತಿ 2020ಯಲ್ಲಿ ಹೇಗಿರಬಹುದು, ನೋಡಿ.

ಪ್ರಕೃತಿ ಸೊಬಗಿನಿಂದ ಮನಸೆಳೆಯುವ ಈ ದೇವಾಲಯಗಳಿಗೆ ತಪ್ಪದೇ ಭೇಟಿ ನೀಡಿ!

ಮೇಷ

ನಿಮ್ಮ ಸ್ವಭಾವದಲ್ಲಿ ಒಂದು ಬಗೆಯ ಡಾಮಿನೇಶನ್‌ ಇದ್ದೇ ಇರುತ್ತೆ. ಆದರೆ ಎಷ್ಟೋ ಸಲ ಈ ಮೇಲರಿಮೆ ಕಾರಣಕ್ಕೇ ಪ್ರೀತಿಯಲ್ಲಿ ಬಿರುಕು ಉಂಟಾಗಿರೋ ಸಾಧ್ಯತೆ ಇದೆ. ಆದರೆ ಈ ವರ್ಷ ಹಾಗಾಗಲ್ಲ. ನಿಮ್ಮ ಪ್ರೀತಿ ಖಂಡಿತಾ ದಕ್ಕುತ್ತದೆ. ಅಷ್ಟು ಮಾತ್ರವಲ್ಲ, ನೀವು ಪ್ರೀತಿಯಲ್ಲಿ ಮಿಂದೇಳುವಂತಾಗುತ್ತದೆ. ಹಾಗಂತ ಸಂಬಂಧದಲ್ಲಿ ಏರಿಳಿತ ಇಲ್ಲಾ ಅನ್ನೋ ಹಾಗಿಲ್ಲ. ಲೈಫ್‌ ಅಂದ್ರೆ ಅದೆಲ್ಲ ಇದ್ದಿದ್ದೇ. ಹಾಗಿದ್ದರೂ ನೀವು ನಿಮ್ಮ ಪ್ರೀತಿಯನ್ನು ಉಳಿಸಿಕೊಂಡೇ ಉಳಿಸಿಕೊಳ್ಳುತ್ತೀರಿ. ಬಿರುಕುಗಳೆಲ್ಲ ಸರಿಹೋಗಿ ಮನಸ್ಸಿಗೆ ಮುದವಿರುತ್ತದೆ.

ವೃಷಭ

ಅರ್ಜಿ ಫಾರಂನಲ್ಲಿ ನೀವು ಸಿಂಗಲ್‌ ಸ್ಟೇಟಸ್‌ಗೆ ಟಿಕ್‌ ಮಾಡೋರಾಗಿದ್ರೆ ಈವರೆಗೂ ನಿಮಗೆ ಬಯಸಿದಂಥಾ ಪ್ರೀತಿ ಸಿಗದೇ ಹೋಗಿದ್ದರೆ ದಯವಿಟ್ಟು ಬೇಜಾರು ಮಾಡ್ಬೇಡಿ, ಈ ವರ್ಷದ ಮೊದಲಾರ್ಧ ಅದೇ ಸ್ಥಿತಿ ಮುಂದುವರಿಯಬಹುದು. ಅಂದರೆ ಬಯಸಿದ ಪ್ರೀತಿಗೆ ಸಿಗದೇ ಹೋಗಬಹುದು. ಬದುಕು ಬರಡು ಅನಿಸಬಹುದು. ಹಾಗಂತ ನಿರಾಶರಾಗ್ಬೇಕಿಲ್ಲ. ಸೆಕೆಂಡ್‌ ಹಾಫ್‌ ನಿಮ್ಮ ಪರವಾಗಿದೆ. ನಿಮ್ಮ ಮನಸ್ಸು ಬಯಸುವಂಥಾ ಪ್ರೀತಿ ವರ್ಷಾಂತ್ಯದ ಹೊತ್ತಿಗೆ ನಿಮಗೆ ಸಿಕ್ಕೇ ಸಿಗುತ್ತೆ.

2020ರಲ್ಲಿ ಸಂಗಾತಿ ಸಿಗೋ ಲಕ್‌ ನಿಮಗಿದ್ಯಾ? ಅದೃಷ್ಟ ರಾಶಿಗಳ ಪಟ್ಟಿ ಇಲ್ಲಿದೆ!

ಮಿಥುನ

ಪ್ರೀತಿಯಲ್ಲಿ ಬಿದ್ದಿದ್ದೀರಿ, ಅದನ್ನು ನಿಭಾಯಿಸಲಾಗುತ್ತಿಲ್ಲ, ಅದರಿಂದ ಹೊರಬರಲೂ ಆಗ್ತಾ ಇಲ್ಲ. ಸದ್ಯಕ್ಕೀಗ ಪ್ರೀತಿ ಅನ್ನೋದು ದೊಡ್ಡ ಬೆಟ್ಟದಂತೆ ಕಾಣ್ತಿದೆ. ಅದನ್ನೇರುವುದು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಹಾಗಂತ ಆಚೆ ಹೋಗುವುದಕ್ಕೂ ಆಗ್ತಾ ಇಲ್ಲ. ಬೆಟ್ಟದ ತುದಿಯಲ್ಲಿ ಕಣ್ಣು ನೆಟ್ಟು ನಿಂತಿದ್ದೀರಿ. ಒಂದು ವಿಷಯ ನೆನಪಿಟ್ಟುಕೊಳ್ಳಿ. ಅದೆಷ್ಟೇ ಕಷ್ಟವಾದರೂ ಪ್ರೀತಿಯನ್ನು ಉಳಿಸಿಕೊಳ್ಳೋದರ ಬಗ್ಗೆಯೇ ಯೋಚಿಸಿ. ಇಲ್ಲಿ ಸೋಲು ಗೆಲುವು ಇದ್ದಿದ್ದೇ. ಹಾಗಂತ ಪ್ರೀತಿಯನ್ನು ಬಿಟ್ಟು ಓಡಬೇಡಿ.

ಕರ್ಕಾಟಕ

ನೀವು ಬಹಳ ಭಾವುಕ ವ್ಯಕ್ತಿತ್ವದವರು. ಬೆಳ್ಳಗೆ ಕಂಡದ್ದೆಲ್ಲಾ ಹಾಲು ಅಂತ ನಂಬುವವರು. ನಿಮ್ಮ ಈ ಸ್ವಭಾವ ನಿಮಗೂ ಗೊತ್ತಿದ್ದಿದ್ದೇ. ಆದರೆ ಭಾವನೆಗಳ ಮೇಲೆ ಹಿಡಿತವಿರಲಿ. ನಿಮ್ಮ ಈ ಸ್ವಭಾವವನ್ನೇ ಮುಖ್ಯವಾಗಿಟ್ಟು ದಾರಿತಪ್ಪಿಸುವ ಕೆಲಸ ಆಗಬಹುದು. ಜನ ನಿಮ್ಮ ಈ ಸ್ವಭಾವವನ್ನು ಬಳಸಿಕೊಂಡು ತಾವು ಲಾಭ ಮಾಡಿಕೊಳ್ಳಬಹುದು. ಈ ವರ್ಷ ನಿಮಗೆ ನೀವು ಪ್ರಯಾರಿಟಿ ಕೊಡೋದನ್ನು ಪ್ರಯತ್ನಿಸಿ. ನಿಮ್ಮನ್ನು ನೀವು ಪ್ರೀತಿಸುವುದು ಬಹಳ ಮುಖ್ಯ. ಇತರರು ನಿಮಗೆ ನೀಡುವ ಪ್ರೀತಿಗಿಂತಲೂ ನಿಮಗೆ ನೀವೇ ನೀಡುವ ಪ್ರೀತಿ ಅಮೂಲ್ಯ.

ಈ ರಾಶಿಯವರು ಈ ಒಂದು ಕೆಟ್ಟ ಚಟ ಬಿಟ್ರೆ ಒಳ್ಳೇದು!

ಸಿಂಹ

ಬದುಕಿನ ಬಗ್ಗೆ ನಿಮಗೆ ಅದಮ್ಯ ಉತ್ಸಾಹ ಇದೆ, ಪ್ರೀತಿ ಇದೆ. ನಿಮಗೆ ಉಳಿದವರ ಬಗ್ಗೆ ನಿರೀಕ್ಷೆಗಳು ಕಡಿಮೆ. ನಿಮ್ಮ ಮಿತಿಗಳನ್ನೂ ಮೀರಿ ನೀವು ಮುಂದೆ ಹೋಗುವ ಸಾಧ್ಯತೆ ಹೊಸ ವರ್ಷದಲ್ಲಿದೆ. ಪ್ರೀತಿಯ ವಿಷಯಕ್ಕೆ ಹೊಸ ಸಾಹಸ ಮಾಡುತ್ತೀರಿ. ನಿಮ್ಮ ಪ್ರೀತಿ ಮತ್ತಷ್ಟು ಗಾಢವಾಗುತ್ತೆ. ಸಂಬಂಧಗಳು ಆಪ್ತವಾಗುತ್ತಾ ಹೋಗುತ್ತವೆ. ಒಂದು ವೇಳೆ ನೀವು ಸಿಂಗಲ್‌ ಆಗಿದ್ರೆ ಹೊಸ ಎಗ್ಸಾಯಿಟ್‌ಮೆಂಟ್‌ಗಳು ನಿಮಗಾಗಿ ಕಾದಿವೆ. ಲೈಫ್‌ನಲ್ಲಿ ಬಹಳ ಖುಷಿ ಕೊಡುವ ಗಳಿಗೆಗಳು ಬರುತ್ತವೆ.