Asianet Suvarna News Asianet Suvarna News

ಶ್ರಾವಣ ಮಾಸದಲ್ಲಿ ಈ ಐದು ರಾಶಿಗಳ ಮೇಲೆ ಶಿವನ ಕೃಪೆ ಇರಲಿದೆ..

ಜ್ಯೋತಿಷ್ಯದ ಪ್ರಕಾರ, ಶಿವನು ಶ್ರಾವಣ ಮಾಸದಲ್ಲಿ ಈ 5 ರಾಶಿಚಕ್ರದ ಚಿಹ್ನೆಗಳಿಗೆ ದಯೆ ತೋರುತ್ತಾನೆ. ಶ್ರಾವಣದಲ್ಲಿ ಶಿವನ ಅನುಗ್ರಹದಿಂದ ಈ ರಾಶಿಚಕ್ರ ಚಿಹ್ನೆಗಳ ಭವಿಷ್ಯವು ಬದಲಾಗಬಹುದು.

Lord Shiva will be kind to these 5 lucky zodiac signs in Sawan skr
Author
Bangalore, First Published Jul 28, 2022, 12:02 PM IST

ಶ್ರಾವಣ ಮಾಸವು ಅತ್ಯಂತ ಪವಿತ್ರ ಮಾಸಗಳಲ್ಲಿ ಒಂದಾಗಿದೆ. ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಐದನೇ ಮಾಸ ಇದಾಗಿದೆ. ಈ ಬಾರಿ ಜುಲೈ 29ಕ್ಕೆ ಶ್ರಾವಣ ಪ್ರಾರಂಭವಾಗಿ ಆಗಸ್ಟ್ 27ರಂದು ಮುಕ್ತಾಯವಾಗುತ್ತದೆ. ಈ ಮಾಸ ಸಂಪೂರ್ಣ ಶಿವನಿಗೆ ಸಮರ್ಪಿತವಾಗಿದೆ. ಈ ಸಮಯದಲ್ಲಿ ಬರುವ ಬಹುತೇಕ ಹಬ್ಬಗಳು ಶಿವ, ಪಾರ್ವತಿಗೆ ಸಂಬಂಧಿಸಿದವೇ. ಅದರಲ್ಲೂ ಶ್ರಾವಣ ಸೋಮವಾರಗಳಂದು ಎಲ್ಲ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಶ್ರಾವಣ ಸೋಮವಾರ ಆಗಸ್ಟ್ 1ರಿಂದ ಪ್ರಾರಂಭವಾಗುತ್ತದೆ. ಶ್ರಾವಣ ಸೋಮವಾರ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಈ ದಿನ ಮಾಡಿದ ಶಿವನ ಆರಾಧನೆಯು ವ್ಯರ್ಥವಾಗುವುದಿಲ್ಲ. 

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶ್ರಾವಣ ಮಾಸವು ಕೆಲವು ರಾಶಿಚಕ್ರಗಳಿಗೆ ಅತ್ಯಂತ ಮಂಗಳಕರವಾಗಿದೆ. ಶ್ರಾವಣ ಮಾಸದಲ್ಲಿ ಈ ಅದೃಷ್ಟದ ರಾಶಿಯವರಿಗೆ ಶಿವನ ಸಂಪೂರ್ಣ ಅನುಗ್ರಹ ದೊರೆಯುತ್ತದೆ.  ಮಹಾದೇವನ ವಿಶೇಷ ಆಶೀರ್ವಾದವನ್ನು ಪಡೆಯುವ 5 ಅದೃಷ್ಟದ ರಾಶಿಚಕ್ರಗಳು ಯಾವುವು ನೋಡೋಣ.

Jyotirlinga Series: ಶ್ರೀರಾಮ ಶಿವನನ್ನು ಪೂಜಿಸಿದ ಪುಣ್ಯ ಪವಿತ್ರ ತಾಣ ರಾಮೇಶ್ವರಂ

ಮಿಥುನ ರಾಶಿ(Gemini)
ಮಿಥುನ ರಾಶಿಯವರಿಗೆ ಶ್ರಾವಣ ಮಾಸ ಶುಭಕರವಾಗಿರಲಿದೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು. ಶಿವನ ಕೃಪೆಯಿಂದ ಎಲ್ಲದರಲ್ಲೂ ಯಶಸ್ಸು ಸಿಗುತ್ತದೆ. ಆರ್ಥಿಕ ಲಾಭಗಳ ಅನೇಕ ಅವಕಾಶಗಳಿವೆ. ವ್ಯವಹಾರದಲ್ಲಿ ಹಣಕಾಸಿನ ಭಾಗವು ಬಲವಾಗಿರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಉಳಿಯುತ್ತದೆ. ಈ ರಾಶಿಯವರಿಗೆ ಶ್ರಾವಣ ಮಾಸದಲ್ಲಿ ಶಿವನ ಸಮೇತ ಪಾರ್ವತಿ ಮಾತೆಯ ಆರಾಧನೆಯು ಅತ್ಯಂತ ಫಲಪ್ರದವಾಗಿ ಪರಿಣಮಿಸುತ್ತದೆ. 

ಕರ್ಕಾಟಕ ರಾಶಿ(Cancer)
ಶ್ರಾವಣ ಮಾಸವು ಈ ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ. ಶ್ರಾವಣ ಮಾಸ ಪೂರ್ತಿ ಶಿವನ ವಿಶೇಷ ಕೃಪೆ ಇರುತ್ತದೆ. ಈ ಸಮಯದಲ್ಲಿ ನೀವು ಸಾಲಗಳಿಂದ ಮುಕ್ತರಾಗಬಹುದು. ಅಲ್ಲದೆ, ಆರ್ಥಿಕ ಜೀವನವು ಮೊದಲಿಗಿಂತ ಉತ್ತಮವಾಗಿರುತ್ತದೆ. ಉದ್ಯೋಗ-ಉದ್ಯೋಗದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಶ್ರಾವಣ ಮಾಸದಲ್ಲಿ ಮಾತಾಪಿತೃಗಳ ಸೇವೆಯ ಜೊತೆಗೆ ಶಿವನ ಆರಾಧನೆ ಫಲಪ್ರದವಾಗುತ್ತದೆ. ಜೊತೆಗೆ, ಸೋಮವಾರದ ದಿನ ದಾನ ಕಾರ್ಯ ಮಾಡುವುದು ಕೂಡಾ ಉತ್ತಮವಾಗಿದೆ.

ತುಲಾ ರಾಶಿ(Libra)
ಶ್ರಾವಣ ಮಾಸದಲ್ಲಿ ಶಿವ ಈ ರಾಶಿಯವರಿಗೆ ದಯೆ ತೋರಲಿದ್ದಾನೆ. ಈ ರಾಶಿಯವರ ಅದೃಷ್ಟ ಶ್ರಾವಣದಲ್ಲಿ ಹೊಳೆಯುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ. ಅಲ್ಲದೆ, ಶ್ರಾವಣ ಮಾಸದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ಈ ರಾಶಿಯವರ ಕೆಲಸಕ್ಕೆ ಸಿಗುತ್ತದೆ. ಶ್ರಾವಣ ಸೋಮವಾರದಂದು ಶಿವನಿಗೆ ಗಂಗಾಜಲವನ್ನು ಅರ್ಪಿಸುವುದು ಮಂಗಳಕರವಾಗಿರುತ್ತದೆ. ಉದ್ಯೋಗಸ್ಥರಿಗೆ ಹೊಸ ಉದ್ಯೋಗಾವಕಾಶ ದೊರೆಯಬಹುದು.

ಕುಂಭ ರಾಶಿ(Aquarius)
ಕುಂಭ ರಾಶಿಯವರಿಗೆ ಶ್ರಾವಣ ಮಾಸವು ಮಂಗಳಕರವಾಗಿರುತ್ತದೆ. ವಾಸ್ತವವಾಗಿ, ಈ ತಿಂಗಳಲ್ಲಿ ಅದೃಷ್ಟ ಇರುತ್ತದೆ. ನೀವು ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ಹಣಕಾಸಿನ ನೆರವು ಪಡೆಯುತ್ತೀರಿ. ಹೊಸ ಮನೆ ಅಥವಾ ವಾಹನವನ್ನು ಖರೀದಿಸಲು ಮಂಗಳಕರ ಸಮಯವಿರುತ್ತದೆ. ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಬಹುದು.

ಶನಿ ಗೋಚಾರ: 3 ರಾಶಿಗಳ ಜಾತಕದಲ್ಲಿ ಉಂಟಾಗುತ್ತಿದೆ ಮಹಾಪುರುಷ ರಾಜಯೋಗ!

ಮೀನ ರಾಶಿ(Pisces)
ಶಿವನ ಕೃಪೆ ಶ್ರಾವಣದಲ್ಲಿ ಮೀನ ರಾಶಿಯವರಿಗೆ ವಿಶೇಷವಾಗಿರುತ್ತದೆ. ಶ್ರಾವಣ ಮಾಸದ ಸಂಪೂರ್ಣ ಅವಧಿಯಲ್ಲಿ ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಲಾಭದ ಮೊತ್ತವಿದೆ. ಶ್ರಾವಣ ಸೋಮವಾರದಂದು ಶಿವ ದೇವಾಲಯಕ್ಕೆ ಭೇಟಿ ನೀಡಿ ಕ್ಷೀರಾಭಿಷೇಕ ಮಾಡಿಸಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios