Asianet Suvarna News Asianet Suvarna News

Jyotirlinga Series: ಶ್ರೀರಾಮ ಶಿವನನ್ನು ಪೂಜಿಸಿದ ಪುಣ್ಯ ಪವಿತ್ರ ತಾಣ ರಾಮೇಶ್ವರಂ

ಶ್ರಾವಣದಲ್ಲಿ ಜ್ಯೋತಿರ್ಲಿಂಗ ದೇವಾಲಯಗಳನ್ನು ಭೇಟಿ ನೀಡುವುದು ಶಿವನನ್ನು ಮೆಚ್ಚಿಸಲು ಶ್ರೇಷ್ಠ ಎಂದು ತಿಳಿದಿದ್ದೇವೆ. ನಮಗೆ ಅತಿ ಹತ್ತಿರದಲ್ಲಿರುವ ಜ್ಯೋತಿರ್ಲಿಂಗ ಕ್ಷೇತ್ರವೆಂದರೆ ಅದು ತಮಿಳುನಾಡಿನ ರಾಮೇಶ್ವರಂ. ಈ ಕ್ಷೇತ್ರ ಮಹಿಮೆ, ಪುರಾಣ ಕತೆ ತಿಳಿಯೋಣ. 

What is the history of Rameshwaram Jyotirlinga skr
Author
Bangalore, First Published Jul 28, 2022, 11:10 AM IST

ಜ್ಯೋತಿರ್ಲಿಂಗಗಳು ಶಿವನ ಪವಿತ್ರ ಕ್ಷೇತ್ರಗಳಾಗಿವೆ. ಭಗವಾನ್ ಶಿವನು ಈ ಸ್ಥಳಗಳಿಗೆ ಭೇಟಿ ನೀಡಿದ್ದಾನೆ ಮತ್ತು ಆದ್ದರಿಂದ ಈ ಸ್ಥಳಗಳು ಭಕ್ತರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಜ್ಯೋತಿರ್ಲಿಂಗ ಎಂದರೆ 'ಸ್ತಂಭ ಅಥವಾ ಬೆಳಕಿನ ಕಂಬ'. 'ಸ್ತಂಭ' ಚಿಹ್ನೆಯು ಪ್ರಾರಂಭ ಅಥವಾ ಅಂತ್ಯವಿಲ್ಲದ್ದನ್ನು ಪ್ರತಿನಿಧಿಸುತ್ತದೆ.

ಭಗವಾನ್ ಬ್ರಹ್ಮ ಮತ್ತು ಭಗವಾನ್ ವಿಷ್ಣುವು ಸರ್ವೋಚ್ಚ ದೇವರು ಯಾರು ಎಂಬ ಬಗ್ಗೆ ವಾದವನ್ನು ಹೊಂದಿದ್ದಾಗ, ಶಿವನು ಬೆಳಕಿನ ಸ್ತಂಭವಾಗಿ ಕಾಣಿಸಿಕೊಂಡನು ಮತ್ತು ಸ್ತಂಭದ ತುದಿಗಳನ್ನು ಹುಡುಕಲು ಕೇಳಿದನು. ಇಬ್ಬರೂ ಈ ಜ್ಯೋತಿರ್ಲಿಂಗದ ಆದಿ ಅಂತ್ಯ ಹುಡುಕುವಲ್ಲಿ ಸೋತರು. ಹಾಗೆ ಸ್ಥಾಪಿಸಿದ ಈ ಬೆಳಕಿನ ಸ್ತಂಭಗಳು ಬಿದ್ದ ಸ್ಥಳಗಳಲ್ಲಿ ಜ್ಯೋತಿರ್ಲಿಂಗಗಳಾಗಿ ನೆಲೆಗೊಂಡಿವೆ ಎಂದು ನಂಬಲಾಗಿದೆ. ಇಂಥ 64 ಜ್ಯೋತಿರ್ಲಿಂಗಗಳು ಭಾರತ, ನೇಪಾಳದಲ್ಲಿ ಹರಡಿಕೊಂಡಿದ್ದು, 12 ಮಹಾ ಜ್ಯೋತಿರ್ಲಿಂಗಗಳಿವೆ. ಇಂದು ಈ ಜ್ಯೋತಿರ್ಲಿಂಗ ಸರಣಿಯಲ್ಲಿ 5ನೇ ಜ್ಯೋತಿರ್ಲಿಂಗ ರಾಮೇಶ್ವರಂ ಬಗ್ಗೆ ತಿಳಿಯೋಣ. 

ರಾಮೇಶ್ವರಂ ಜ್ಯೋತಿರ್ಲಿಂಗ ಎಲ್ಲಿದೆ?
ರಾಮನಾಥ ಅಥವಾ ರಾಮೇಶ್ವರಂ ಅಥವಾ ರಾಮನಾಥಸ್ವಾಮಿ ದೇವಸ್ಥಾನವು ತಮಿಳುನಾಡಿನ ರಾಮೇಶ್ವರಂ ದ್ವೀಪದಲ್ಲಿದೆ. ರಾಮೇಶ್ವರಂ ಜ್ಯೋತಿರ್ಲಿಂಗ ಎಂಬ ಹೆಸರು ಬಂದಿದ್ದು, ಶ್ರೀರಾಮ ಈ ಸ್ಥಳದಲ್ಲಿ ಶಿವನನ್ನು ಪೂಜಿಸಿದ್ದರಿಂದ.

Jyotirlinga Series: ವಿಂಧ್ಯಾಚಲನ ಭಕ್ತಿಗೆ ಮೆಚ್ಚಿ ದ್ವಿರೂಪದಲ್ಲಿ ಪ್ರಕಟವಾದ ಪರಮೇಶ್ವರ ಲಿಂಗ!

ರಾಮೇಶ್ವರಂ ಜ್ಯೋತಿರ್ಲಿಂಗದ ಇತಿಹಾಸ(History)
ಪುರಾತನ ದೇಗುಲವು 12ನೇ ಶತಮಾನದವರೆಗೂ ಹುಲ್ಲಿನ ಗುಡಿಸಲಿನೊಳಗೆ ಇತ್ತು ಎಂದು ಹೇಳಲಾಗುತ್ತದೆ. ಶ್ರೀಲಂಕಾದ ಪರಾಕ್ರಮ ಬಹು ಇಲ್ಲಿ ಕಲ್ಲಿನ ಕೆಲಸವನ್ನು ಪ್ರಾರಂಭಿಸಿದರು. ಉಳಿದ ದೇವಾಲಯವನ್ನು ರಾಮನಾಥಪುರದ ಸೇತುಪತಿ ಅರಸರು ನಿರ್ಮಿಸಿದ್ದಾರೆ. ದೇವಾಲಯದ ಪ್ರಸ್ತುತ ರಚನೆಯು 17ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ತಿರುವಾಂಕೂರು, ರಾಮನಾಥಪುರಂ, ಮೈಸೂರು ಮತ್ತು ಪುದುಕ್ಕೊಟ್ಟೈನಿಂದ ಹಲವಾರು ರಾಜ ಮನೆತನಗಳು ದೇವಾಲಯವನ್ನು ಪೋಷಿಸಿವೆ ಮತ್ತು ಅದರ ಪ್ರಸ್ತುತ ಸೌಂದರ್ಯವನ್ನು ಹೆಚ್ಚಿಸಿದ್ದಾರೆ.

ರಾಮೇಶ್ವರಂ ದೇವಾಲಯದ ವಿಶೇಷತೆಗಳು
ದೇವಾಲಯವು 15 ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು ಇದು ಎತ್ತರದ ಪಿರಮಿಡ್ ಗೋಪುರಗಳು ಮತ್ತು ಬೃಹತ್ ನಂದಿಯನ್ನು ಹೊಂದಿದೆ. 4,000 ಅಡಿ ಕಾರಿಡಾರ್‌ನಲ್ಲಿ 4,000 ಚೆಂದದ ಕೆತ್ತನೆ ಹೊಂದಿದ ಗ್ರಾನೈಟ್ ಕಂಬಗಳಿವೆ. ಇದು ವಿಶ್ವದ ಅತಿ ಉದ್ದದ ದೇವಸ್ಥಾನ ಕಾರಿಡಾರ್ ಆಗಿದೆ ಎಂದು ಹೇಳಲಾಗುತ್ತದೆ. 
ಗರ್ಭಗುಡಿಯೊಳಗೆ ಎರಡು ಲಿಂಗಗಳಿವೆ - ರಾಮನು ಮರಳಿನಿಂದ ನಿರ್ಮಿಸಿದ ರಾಮಲಿಂಗ ಮತ್ತು ಇನ್ನೊಂದು ಹನುಮಾನ್  ಕೈಲಾಸ ಪರ್ವತದಿಂದ ತಂದ ವಿಶ್ವಲಿಂಗ. 

ರಾಮೇಶ್ವರಂ ದ್ವೀಪದ ಸುತ್ತಲೂ 64 ಜಲಮೂಲಗಳು ಅಥವಾ ಕಲ್ಯಾಣಿಗಳಿವೆ. ಅವುಗಳಲ್ಲಿ 24ನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಅವುಗಳಲ್ಲಿ ಸ್ನಾನ ಮಾಡುವುದು ನಿಮ್ಮ ಪಾಪಗಳನ್ನು ಶುದ್ಧೀಕರಿಸುತ್ತದೆ ಎಂದು ನಂಬಲಾಗಿದೆ. ಮುಖ್ಯ ತೀರ್ಥವೆಂದರೆ ಅಗ್ನಿ ತೀರ್ಥಂ ಎಂದು ಕರೆಯಲ್ಪಡುವ ಬಂಗಾಳ ಕೊಲ್ಲಿ.

ರಾಮನಾಥಸ್ವಾಮಿ, ಅವರ ಪತ್ನಿ ಪರ್ವತವರ್ಧಿನಿ ಮತ್ತು ವಿಷ್ಣು, ಗಣೇಶ ಮತ್ತು ವಿಶಾಲಾಕ್ಷಿ ದೇವಿಗೆ ಪ್ರತ್ಯೇಕ ಗುಡಿಗಳಿವೆ. ದೇವಾಲಯದಲ್ಲಿ ಸೇತುಪತಿ ಮಂಟಪ, ಕಲ್ಯಾಣ ಮಂಟಪ ಮತ್ತು ನಂದಿ ಮಂಟಪದಂಥ ಅನೇಕ ಸಭಾಂಗಣಗಳಿವೆ.

ಜ್ಯೋತಿರ್ಲಿಂಗ ಸರಣಿ: ಸ್ಮಶಾನ ಭೂಮಿಯಲ್ಲಿ ಕೂತ ದಕ್ಷಿಣಮುಖಿ ಮಹಾಕಾಳೇಶ್ವರ, ಇಲ್ಲಿ ರಾತ್ರಿ ಕಳೆದೋರ ಅಧಿಕಾರ ಪತನ!

ರಾಮೇಶ್ವರಂ ಜ್ಯೋತಿರ್ಲಿಂಗದ ಹಿಂದಿನ ಕಥೆ ಏನು?
ರಾಕ್ಷಸ ರಾಜನಾದ ರಾವಣನನ್ನು ಸೋಲಿಸಿದ ನಂತರ - ಲಂಕಾದಿಂದ ಹಿಂದಿರುಗುವ ಮಾರ್ಗದಲ್ಲಿ ಭಗವಾನ್ ರಾಮನು ಈ ಸ್ಥಳದಲ್ಲಿ ಶಿವನನ್ನು ಪೂಜಿಸಿದನೆಂದು ದಂತಕಥೆಯಿದೆ. ಬ್ರಾಹ್ಮಣ ಮತ್ತು ಮಹಾನ್ ಶಿವಭಕ್ತನಾದ ರಾವಣನನ್ನು ಕೊಂದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಭಗವಾನ್ ರಾಮನು ಶಿವನಿಗೆ ಇಲ್ಲಿ ಪ್ರಾರ್ಥನೆ ಸಲ್ಲಿಸಿದನು. ಈ ಸ್ಥಳದಲ್ಲಿ ಶಿವನಿಗೆ ಯಾವುದೇ ಗುಡಿ ಇಲ್ಲದ ಕಾರಣ, ರಾಮನು ಲಿಂಗವನ್ನು ತರಲು ಹನುಮಂತನನ್ನು ಶಿವನ ನಿವಾಸವಾದ ಕೈಲಾಸ ಪರ್ವತಕ್ಕೆ ಕಳುಹಿಸಿದನು.

ಆದರೆ, ಹನುಮಂತನು ಪೂಜೆಯನ್ನು ಮಾಡಲು ನಿಗದಿಪಡಿಸಿದ ಶುಭ ಮುಹೂರ್ತದ ಮೊದಲು ಹಿಂತಿರುಗಲು ಸಾಧ್ಯವಾಗಲಿಲ್ಲ, ಆದ್ದರಿಂದ ಸೀತೆ ಈ ಸ್ಥಳದಲ್ಲಿ ಮರಳಿನಿಂದ ಲಿಂಗವನ್ನು ಮಾಡಿದಳು. ಮತ್ತು ರಾಮನು ಮುಹೂರ್ತಕ್ಕೆ ಸರಿಯಾಗಿ ಈ ಲಿಂಗವನ್ನು ಪೂಜಿಸಿದನು. ಇದೇ ರಾಮಲಿಂಗ. 
ಹನುಮಂತನು ಹಿಂತಿರುಗಿದಾಗ, ರಾಮನು ತಾನು ತರುವ ಲಿಂಗಕ್ಕಾಗಿ ಕಾಯಲಿಲ್ಲ ಎಂದು ನಿರಾಶೆಗೊಂಡನು. ಅವನನ್ನು ಸಮಾಧಾನಪಡಿಸಲು, ರಾಮನು ಹನುಮಂತನು ತಂದ ಲಿಂಗವನ್ನೂ ಪೂಜಿಸುವಂತೆ ಭಕ್ತರಿಗೆ ಸೂಚಿಸಿದನು. ಅದನ್ನು ಅವನು ವಿಶ್ವಲಿಂಗ ಎಂದು ಕರೆದನು.

Follow Us:
Download App:
  • android
  • ios