Asianet Suvarna News Asianet Suvarna News

ವ್ಯಾಪಾರದಲ್ಲಿ ನಷ್ಟವೇ? ಲಾಲ್ ಕಿತಾಬ್‌ನ ಈ ಪರಿಹಾರಗಳನ್ನು ಪಾಲಿಸಿ..

ವೈದಿಕ ಜ್ಯೋತಿಷ್ಯದ ಅತಿ ಪ್ರಮುಖ ಪುಸ್ತಕವಾದ ಲಾಲ್ ಕಿತಾಬ್‌ನಲ್ಲಿ ವ್ಯಾಪಾರ ನಷ್ಟಕ್ಕೆ ನೀಡಲಾದ ಪರಿಣಾಮಕಾರಿ ಪರಿಹಾರ ಮಾರ್ಗಗಳು ಇಲ್ಲಿವೆ. 

Lal Kitab remedies for continuous loss in business skr
Author
Bangalore, First Published Jun 25, 2022, 3:12 PM IST

ನೀವು ವ್ಯಾಪಾರದಲ್ಲಿ ನಿರಂತರ ನಷ್ಟ( loss in business)ವನ್ನು ಎದುರಿಸುತ್ತಿದ್ದರೆ ಮತ್ತು ಹಣಕಾಸಿನ ತೊಂದರೆಗೊಳಗಾಗಿದ್ದರೆ, ಲಾಲ್ ಕಿತಾಬ್‌ನ ಈ ಪರಿಹಾರಗಳನ್ನು(remedies) ಪ್ರಯತ್ನಿಸುವುದು ಪ್ರಯೋಜನಕಾರಿಯಾಗಿದೆ.
ಲಾಲ್ ಕಿತಾಬ್(Lal Kitab) ಅನ್ನು ವೈದಿಕ ಜ್ಯೋತಿಷ್ಯಕ್ಕೆ ವಿಶಿಷ್ಟವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಒಬ್ಬರ ಜಾತಕದಲ್ಲಿನ ಕೆಲವು ಗ್ರಹಗಳ ಸ್ಥಾನಗಳು ಅವರ ಅಂಗೈಯ ರೇಖೆಗಳಲ್ಲಿ ಹೇಗೆ ಪ್ರತಿಫಲಿಸುತ್ತದೆ ಎಂಬುದನ್ನು ವಿವರಿಸುವ ಶಾಖೆಯಾಗಿದೆ. ಲಾಲ್ ಕಿತಾಬ್ ಅನ್ನು 19ನೇ ಶತಮಾನದಲ್ಲಿ ರೂಪ್ ಚಂದ್ ಜೋಶಿ ಉರ್ದು ಭಾಷೆಯಲ್ಲಿ ಬರೆದರು. 1939ರಲ್ಲಿ ಪ್ರಕಟವಾದ ಮೊದಲ ಪುಸ್ತಕದ ಪ್ರತಿಯನ್ನು ಲಾಹೋರ್ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿದೆ. ಜ್ಯೋತಿಷ್ಯ ಕ್ಷೇತ್ರದಲ್ಲಿ ಅತ್ಯಂತ ಅಪರೂಪದ ಪುಸ್ತಕವಾಗಿರುವ ಲಾಲ್ ‌ಕಿತಾಬ್‌ನಲ್ಲಿ ವ್ಯವಹಾರದಲ್ಲಿ ಪ್ರಗತಿಗಾಗಿ ಮತ್ತು ಹಣವನ್ನು ಪಡೆಯಲು ಈ ಪರಿಹಾರಗಳನ್ನು ತಿಳಿಸಲಾಗಿದೆ. 

1. ಎಲ್ಲ ಕಠಿಣ ಕೆಲಸ ಮತ್ತು ತಂತ್ರಗಳ ಹೊರತಾಗಿಯೂ, ನಿಮ್ಮ ಕೆಲಸದಲ್ಲಿ ಅಡಚಣೆ ಎದುರಾಗುತ್ತಿದ್ದರೆ, ಲಾಲ್ ಕಿತಾಬ್ ಪ್ರಕಾರ ಪ್ರತಿ ದಿನ ಕಪ್ಪು ನಾಯಿ(black dog)ಗೆ ಆಹಾರವನ್ನು ನೀಡಿ. ಇದಲ್ಲದೆ, ನಿಮ್ಮ ಪೂರ್ವಜರ ಹೆಸರಿನಲ್ಲಿ ದಾನ ಮಾಡುವುದರಿಂದ ನಿಮ್ಮ ದುರಾದೃಷ್ಟ(bad luck)ವನ್ನು ದೂರಗೊಳಿಸಿ, ಅದೃಷ್ಟವನ್ನು ಪುನರುಜ್ಜೀವನಗೊಳಿಸಬಹುದು ಮತ್ತು ನಿಮ್ಮ ಕೆಲಸದಲ್ಲಿನ ಅಡೆ ತಡೆಗಳನ್ನು ನಿವಾರಿಸಬಹುದು.

ಮನೆಯೊಳಗೆ ಹಾವು ಬಂದರೆ ಏನರ್ಥ? ನೀವೇನು ಮಾಡಬೇಕು?

2. ಲಾಲ್ ಕಿತಾಬ್ ಪ್ರಕಾರ, ನಿಮ್ಮ ಆದಾಯದ ಮೂಲಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದರೆ ಮತ್ತು ನೀವು ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು(financial problems) ಎದುರಿಸುತ್ತಿದ್ದರೆ, ಪ್ರತಿ ಶುಕ್ರವಾರದಂದು, ನಿಮ್ಮ ಚಿನ್ನಾಭರಣಗಳನ್ನು ಲಕ್ಷ್ಮಿ ಮಾತೆಯ ಮುಂದೆ ಇರಿಸಿ ಮತ್ತು ಕುಂಕುಮ ತಿಲಕವನ್ನು ಅನ್ವಯಿಸಿ. ಇದಾದ ನಂತರ ತಾಯಿ ಲಕ್ಷ್ಮಿಯ ಮುಂದೆ ಕುಳಿತು ಕನಕಧಾರಾ ಮೂಲವನ್ನು ಪಠಿಸಿ. ಹಾಗೆಯೇ ಪ್ರತಿದಿನವೂ ಹಣೆಗೆ ಕುಂಕುಮ ತಿಲಕವನ್ನು ಹಚ್ಚಿಕೊಂಡು ಕೆಲಸಕ್ಕೆ ಹೊರಡಬೇಕು. ಈ ಕ್ರಮದಿಂದ ವ್ಯಾಪಾರದಲ್ಲಿ ಪ್ರಗತಿಯ ಹಾದಿಯನ್ನು ತೆರೆಯುವುದರ ಜೊತೆಗೆ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ.

3. ವ್ಯಾಪಾರದಲ್ಲಿ ನಿರಂತರ ನಿಧಾನಗತಿಯಿದೆ ಎಂದರೆ, ಲಾಲ್ ಕಿತಾಬ್‌ನ ಕ್ರಮಗಳ ಪ್ರಕಾರ, ಪ್ರತಿ ಬುಧವಾರ(wednesday)ದಂದು ನಿಮ್ಮ ಕಚೇರಿ ಅಥವಾ ಅಂಗಡಿಯಲ್ಲಿ ಗಣಪತಿಯನ್ನು ಪೂಜಿಸಿ ಮತ್ತು ದೂರ್ವೆಯನ್ನು ಅರ್ಪಿಸಿ. ನಂತರ ಕೈ ಮುಗಿದು ನಿಮ್ಮ ಪ್ರಗತಿಗಿರುವ ಅಡಚಣೆಯನ್ನು ತೆಗೆಯುವಂತೆ ಪ್ರಾರ್ಥಿಸಿ. ಗಣೇಶನ ಕೃಪೆಯಿಂದ ಜೀವನದಲ್ಲಿ ಸುಖ-ಸಮೃದ್ಧಿ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

4. ಪ್ರತಿ ದಿನ ಶನಿ ದೇವರನ್ನು ಮತ್ತು ತಾಯಿ ಲಕ್ಷ್ಮಿಯನ್ನು ಆರಾಧಿಸಿ. ವೃತ್ತಿಪರ ಯಶಸ್ಸಿನಲ್ಲಿ ಶನಿ ದೇವರು ಪ್ರಮುಖ ಪಾತ್ರ ವಹಿಸುತ್ತಾನೆ. ಸಂಪತ್ತು ನೀಡುವಲ್ಲಿ ಲಕ್ಷ್ಮಿಯ ಕೃಪೆ ಬೇಕು. ಹೀಗಾಗಿ ಶನಿ(Saturn) ಮತ್ತು ಲಕ್ಷ್ಮಿಯನ್ನು ಆರಾಧಿಸುವುದರಿಂದ ಅಗಾಧವಾದ ಸಂಪತ್ತು ಮತ್ತು ವ್ಯವಹಾರದಲ್ಲಿ ಸ್ಥಿರತೆಯನ್ನು ನೀಡುತ್ತದೆ. 

Higher Education: ಈ ಗ್ರಹ ಪ್ರಭಾವಿಯಾಗಿದ್ದರೆ ಉನ್ನತ ಶಿಕ್ಷಣ ಪಡೆಯೋದು ಸುಲಭ

5. ಪ್ರತಿ ದಿನ ಬೆಳಿಗ್ಗೆ ಸೂರ್ಯೋದಯದ ನಂತರ, ಬೆಲ್ಲ(Jaggery) ಮತ್ತು ಹಳದಿ ಹೂವುಗಳನ್ನು ಬೆರೆಸಿದ ನೀರನ್ನು ಸೂರ್ಯನಿಗೆ ಅರ್ಪಿಸಿ ಮತ್ತು ಸೂರ್ಯ ಗಾಯತ್ರಿ ಮಂತ್ರವನ್ನು 108 ಬಾರಿ ಜಪಿಸಿ. ತಿಂಗಳ ಮೊದಲ ಭಾನುವಾರದಿಂದ ನಿರಂತರವಾಗಿ 11 ದಿನಗಳ ಕಾಲ ಈ ಆಚರಣೆಯನ್ನು ಮಾಡಬೇಕು.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios