Asianet Suvarna News Asianet Suvarna News

Higher Education: ಈ ಗ್ರಹ ಪ್ರಭಾವಿಯಾಗಿದ್ದರೆ ಉನ್ನತ ಶಿಕ್ಷಣ ಪಡೆಯೋದು ಸುಲಭ

ಎಷ್ಟೇ ಓದಿದ್ರೂ ವಿದ್ಯೆ ತಲೆಗೆ ಹತ್ತೋದಿಲ್ಲ ಎನ್ನುತ್ತೇವೆ. ಇದಕ್ಕೆ ನಮ್ಮ  ಜಾತಕದಲ್ಲಿರುವ ಗ್ರಹಗಳೂ ಕಾರಣವಾಗಿರುತ್ತವೆ. ಅನೇಕ ಬಾರಿ ಜಾತಕದಲ್ಲಿರುವ ಗ್ರಹ ದುರ್ಬಲವಾದ್ರೆ ನಾವು ಎಷ್ಟೇ ಓದಿದ್ರೂ ಉನ್ನತ ಶಿಕ್ಷಣ ಪ್ರಾಪ್ತಿಯಾಗುವುದಿಲ್ಲ.
 

moon Jupiter must be strong on horoscope to gain higher education
Author
Bangalore, First Published Jun 25, 2022, 1:15 PM IST

ಗ್ರಹಗಳು (Planets) ನಮ್ಮ ಜೀವನದ ಮೇಲೆ ಮಹತ್ವದ ಬದಲಾವಣೆಯನ್ನು ಮಾಡುತ್ತವೆ. ನಮ್ಮ ಶಿಕ್ಷಣ (Education) ಹಾಗೂ ಉನ್ನತ ಶಿಕ್ಷಣ (Higher Education) ಕೂಡ ಗ್ರಹವನ್ನು ಅವಲಂಭಿಸಿರುತ್ತದೆ. ಜಾತಕ (Horoscope) ದಲ್ಲಿ ಅತ್ಯಂತ ಪ್ರಬಲವಾದ ಗ್ರಹಕ್ಕೆ ಸಂಬಂಧಿಸಿದ ಶಿಕ್ಷಣವನ್ನು ಹಾಗೂ ವ್ಯವಹಾರವನ್ನು ವ್ಯಕ್ತಿ ಮಾಡುತ್ತಾನೆ. ಉದಾಹರಣೆಗೆ, ಗುರುವು ಜಾತಕದಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದರೆ, ವ್ಯಕ್ತಿಯು ಔಷಧ, ಬರಹ, ಶಿಕ್ಷಣ, ಆಹಾರ ಪದಾರ್ಥಗಳ ಮೂಲಕ ಆದಾಯ (Income) ವನ್ನು ಗಳಿಸುತ್ತಾನೆ. ಮಂಗಳ ಗ್ರಹವು  ಗುರುವಿನೊಂದಿಗೆ ಉತ್ತಮ ಯೋಗವನ್ನು ರೂಪಿಸಿದರೆ ಆತ ಶಸ್ತ್ರಚಿಕಿತ್ಸಕನಾಗುತ್ತಾನೆ. ಸೂರ್ಯನಿಂದ ಯೋಗವು ರೂಪುಗೊಳ್ಳುತ್ತಿದ್ದರೆ,  ನೇತ್ರ ಔಷಧ ಅಥವಾ ಸೋನೋಗ್ರಫಿ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಸಂಬಂಧಿಸಿದ ಶಿಕ್ಷಣ ಪಡೆಯುತ್ತಾನೆ. ಶುಕ್ರ ಜೊತೆಗೆ ಇದ್ದರೆ ಸ್ತ್ರೀರೋಗತಜ್ಞ, ಬುಧ ಇದ್ದರೆ ಮನೋರೋಗ ಮತ್ತು ರಾಹು ಇದ್ದರೆ ಮೂಳೆ ಚಿಕಿತ್ಸಕರಾಗುತ್ತಾರೆ ಎಂದು ಹೇಳಲಾಗುತ್ತದೆ. ಇಂದು ಶಿಕ್ಷಣ ಹಾಗೂ ಗ್ರಹದ ಬಗ್ಗೆ ಇನ್ನೊಂದಿಷ್ಟು ಮಾಹಿತಿ ಪಡೆಯೋಣ.

ಯಾವ ಗ್ರಹ ಶಿಕ್ಷಣಕ್ಕೆ ಕಾರಣ?: 

ಚಂದ್ರ : ಚಂದ್ರ ಮನಸ್ಸನ್ನು ನಿಯಂತ್ರಿಸುತ್ತಾನೆ. ಮನಸ್ಸಿನಿಂದಲೇ ಎಲ್ಲ ಕೆಲಸಗಳೂ ಸಾಧ್ಯ. ಉನ್ನತ ಶಿಕ್ಷಣಕ್ಕೆ ಚಂದ್ರನು ಪ್ರಮುಖ ಕಾರಣ. ಚಂದ್ರನಿಂದ ಬಾಲಾರಿಷ್ಟ ಯೋಗ ಉಂಟಾಗುತ್ತಿದ್ದರೆ ಬಾಲ್ಯದಿಂದ ಬಳಲುವುದು ಅನಿವಾರ್ಯ ಮತ್ತು ಆಗ ಪ್ರಾಥಮಿಕ ಶಿಕ್ಷಣ ದುರ್ಬಲವಾಗುತ್ತದೆ. ಉನ್ನತ ಶಿಕ್ಷಣದಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆಯಿದೆ. ಚಂದ್ರನ ಬಲವು  ಯಾವಾಗಲೂ ಉನ್ನತ ಶಿಕ್ಷಣದಲ್ಲಿ ಸಹಾಯಕವಾಗಿರುತ್ತದೆ. ಜಾತಕದಲ್ಲಿ ಚಂದ್ರನ ಬಲ ಪಡೆದಿರುವ ಜನರ ಮನಸ್ಸು ವಿಚಲಿತವಾಗುವುದಿಲ್ಲ. ಏಕಾಗ್ರತೆಯಿಂದ ಕೂಡಿರುತ್ತದೆ. ಉನ್ನತ ಶಿಕ್ಷಣವನ್ನು ಅವರು ಮುಂದುವರಿಸಬಹುದು.

Astrology Tips: ಕಾಲ ಮೇಲೆ ಕಾಲಾಕಿ ಕೂತ್ಕೊಂಡು ಹಣ ಕಳ್ಕೊಳ್ಬೇಡಿ!

ಗುರು (Jupiter) ಗ್ರಹ : ಇದು ಉನ್ನತ ಶಿಕ್ಷಣಕ್ಕೆ ಪ್ರಮುಖ ಗ್ರಹವಾಗಿದೆ. ಗುರುವು ಕರ್ಕಾಟಕ, ಧನು ರಾಶಿ ಅಥವಾ ಮೀನ ರಾಶಿಯಲ್ಲಿದ್ದರೆ, ವ್ಯಕ್ತಿಯು ಉನ್ನತ ಶಿಕ್ಷಣವನ್ನು ಹೊಂದಿರುತ್ತಾನೆ. ಕರ್ಕಾಟಕ, ಧನು ಅಥವಾ ಮೀನದಲ್ಲಿ ಗುರುವಿನ ಅಂಶವು ಐದನೇ ಮನೆಯಲ್ಲಿದ್ದರೆ, ಉನ್ನತ ಶಿಕ್ಷಣವು ಖಂಡಿತವಾಗಿಯೂ ಪ್ರಾಪ್ತಿಯಾಗುತ್ತದೆ.  

ಬುಧ (Mercury) ಗ್ರಹ : ಉನ್ನತ ಶಿಕ್ಷಣದಲ್ಲಿ ಬುಧ ಗ್ರಹದ ಕೊಡುಗೆಯಿದೆ. ಬುಧವು ಬುದ್ಧಿವಂತಿಕೆಯ ಅಂಶವಾಗಿದೆ. ಇದು ನಿಮ್ಮನ್ನು ಚಟುವಟಿಕೆಯಲ್ಲಿ ತೊಡಗಿಸುತ್ತದೆ. ಉನ್ನತ ಮಟ್ಟದ ಬೌದ್ಧಿಕ ಸಾಮರ್ಥ್ಯವನ್ನು ಸ್ಥಾಪಿಸುತ್ತದೆ.  

ಶನಿ (Saturn) ಗ್ರಹ : ಪ್ರಸ್ತುತ ಇದು ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಗ್ರಹವಾಗಿದೆ. ಶನಿ ಗ್ರಹವು ಮೂಲ ಚಿಂತನೆಯನ್ನು ಅಭಿವೃದ್ಧಿಪಡಿಸುತ್ತದೆ. ಒಬ್ಬ ವ್ಯಕ್ತಿ ಕಷ್ಟಪಟ್ಟು ದುಡಿಯುವಂತೆ ಈ ಗ್ರಹ ಮಾಡುತ್ತದೆ. ಅವನಲ್ಲಿ ಯುದ್ಧದ ಪ್ರವೃತ್ತಿಯನ್ನು ಉಂಟುಮಾಡುತ್ತದೆ.  

ಮಂಗಳ (Mars) ಗ್ರಹ : ಉನ್ನತ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಮಂಗಳನ ಪಾತ್ರ ಬಹಳ ಮುಖ್ಯವಾಗಿದೆ. ಇದು ವ್ಯಕ್ತಿಯಲ್ಲಿ ತಾಳ್ಮೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.  ಉನ್ನತ ಶಿಕ್ಷಣಕ್ಕಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ದೊರಕಿಸಿಕೊಡುವುದು ಮಂಗಳ ಕಾರ್ಯ. ಮಂಗಳ ಮಾತ್ರ ವಿವಿಧ ಅಡೆತಡೆಗಳನ್ನು ತೆಗೆದುಹಾಕುವ ಸಾಮರ್ಥ್ಯವನ್ನು ಹೊಂದಿದ್ದಾನೆ.

Zodiac signs: ಇವರಿಗೆ ಸಂಬಂಧಗಳಲ್ಲಿ ಆತಂಕ, ಒತ್ತಡ ಹೆಚ್ಚು

ಉನ್ನತ ಶಿಕ್ಷಣಕ್ಕೆ (Higher Education) ಅಡ್ಡಿ : ಪಂಚಮೇಶನು 6, 8, 12ರಲ್ಲಿ ರಾಹು ಅಥವಾ ಕೇತುವಿನೊಡನೆ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ. ಒಂಭತ್ತನೇ ಅಧಿಪತಿ ಎಂಟನೇ ಮನೆಯಲ್ಲಿದ್ದರೂ ಅಥವಾ ಒಂಬತ್ತರಲ್ಲಿ ದೋಷಪೂರಿತ ಗ್ರಹ ಅಥವಾ ದುರ್ಬಲ ಗ್ರಹವಿದ್ದರೂ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ. ಐದನೇ ಮನೆಯ ಅಧಿಪತಿಯು ಗುರುವಿಂದ ದುರ್ಬಲನಾಗಿದ್ದರೂ ಅಥವಾ ರಾಹು ಮತ್ತು ಕೇತುಗಳ ಪ್ರಭಾವದಿಂದ ಅಡೆತಡೆಗಳು ಸಾಧ್ಯ.

ಉಪಾಯ : ಉನ್ನತ ಶಿಕ್ಷಣವನ್ನು ಪಡೆಯಲು ಅಡಚಣೆ ಆಗ್ಬಾರದು ಅಂದ್ರೆ  ರಾಹುವಿನ ಶಾಂತಿ ಮಾಡಿಸಬೇಕು. ಗುರುಗಳನ್ನು ಗೌರವಿಸುವುದು ಹಾಗೂ ಸರಸ್ವತಿ ಮತ್ತು ವಿವಿಧ ಗ್ರಹಗಳನ್ನು ಪೂಜಿಸುವ ಕೆಲಸ ಮಾಡ್ಬೇಕು. 
 

Follow Us:
Download App:
  • android
  • ios