ಮೊನಾಲಿಸಾಳ ಮೇಕಪ್ ರಹಿತ ವಿಡಿಯೋ ವೈರಲ್: ಎರ್‍ರಾ ಬಿರ್‍ರಿ ಹೊಗಳ್ದೋರೇ ಉಲ್ಟಾ ಹೊಡೀಯೋದಾ?
ಕುಂಭಮೇಳದ ಕ್ರಷ್ ಮೊನಾಲಿಸಾ ಮೇಕಪ್ ಇಲ್ಲದೇ ಹೇಗೆ ಕಾಣಿಸ್ತಾಳೆ? ವಿಡಿಯೋ ವೈರಲ್ ಬೆನ್ನಲ್ಲೇ ಹೊಗಳಿದೋರೆಲ್ಲಾ ಹೇಳ್ತಿರೋದೇನು ನೋಡಿ...

ಈ ಬಾರಿಯ ಕುಂಭಮೇಳ ಸಕತ್ ವೈರಲ್ ಆಗಲು ಕಾರಣ, ಮೊನಾಲಿಸಾ ಎನ್ನುವ ಹೆಣ್ಣುಮಗಳು. ಸೋಷಿಯಲ್ ಮೀಡಿಯಾಗಳಲ್ಲಿ ಈಕೆಯದ್ದೇ ಕಾರುಬಾರು. ಕುಂಭಮೇಳ ಎಂದರೆ ಮೊನಾಲಿಸಾ ಎನ್ನುವಷ್ಟರ ಮಟ್ಟಿಗೆ ಈಕೆ ಸದ್ದು ಮಾಡುತ್ತಿದ್ದಾಳೆ. ರುದ್ರಾಕ್ಷಿ ಮಾರುತ್ತಿದ್ದ ಮೊನಾನಿಸಾಳ ಬ್ಯೂಟಿಯನ್ನು ಯೂಟ್ಯೂಬರ್ ಒಬ್ಬರು ತಮ್ಮ ಯೂಟ್ಯೂಬ್‌ನಲ್ಲಿ ಶೇರ್ ಮಾಡಿದ್ದೇ, ಎಲ್ಲರೂ ಆಕೆಯನ್ನು ಹುಡುಕಿ ಹೋಗುವಂತೆ ಮಾಡಿದೆ. ಹೆಣ್ಣು- ಗಂಡುಗಳು ಎನ್ನುವ ಬೇಧವಿಲ್ಲದೇ ಈಕೆಯ ಮೇಲೆ ಕವನ ಬರೆಯುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಕವಿಗಳು ಅಲ್ಲದವರೂ ಕವಿಗಳಾಗಿ ಬಿಟ್ಟಿದ್ದಾರೆ.
ಅಷ್ಟಕ್ಕೂ, ಇದಕ್ಕೆಲ್ಲಾ ಕಾರಣ ಈಕೆಯ ಆಕರ್ಷಕ ಕಣ್ಣುಗಳು. ಜೇನುಕಣ್ಣೋಳೇ, ಮೀನ ಕಣ್ಣೋಳೆ, ನೀಲಿ ಕಣ್ಣೋಳೆ, ಐಶ್ವರ್ಯ ಕಣ್ಣೋಳೆ.... ಹೀಗೆ ಏನೇನೋ ಬಿರುದು ಬಾವಲಿಗಳನ್ನು ಕೊಟ್ಟು ಈಕೆಯನ್ನು ಸ್ಟಾರ್ ಮಾಡಿದವರು, ಕೊನೆಗೆ ಆಕೆಗೆ ಚಿತ್ರಹಿಂಸೆ ಎನ್ನಿಸುವಷ್ಟರ ಮಟ್ಟಿಗೆ ಕಾಡತೊಡಗಿದರು. ಮೊನಾಲಿಸಾಳ ಸೇರಿದಂತೆ ಆಕೆಯ ಕುಟುಂಬಸ್ಥರು ಕಣ್ಣೀರು ಹಾಕುವಷ್ಟರ ಮಟ್ಟಿಗೆ ಯೂಟ್ಯೂಬರ್‌ಗಳು ಹಾಗೂ ಪ್ರವಾಸಿಗರ ಕಾಟ ಶುರುವಾಯಿತು. ಮಾಸ್ಕ್ ಹಾಕಿಕೊಂಡು ಈಕೆ ತಿರುಗಿದರೂ ಬಿಡಲಿಲ್ಲವಂತೆ. ರುದ್ರಾಕ್ಷಿಯನ್ನು ಖರೀದಿ ಮಾಡುವ ಬದಲು ಬರುವವರೆಲ್ಲರೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರೇ ಆದರು.
ಬಾಲಿವುಡ್ಗೆ ಮೊನಾಲಿಸಾ: ನಿರ್ದೇಶಕ ಸನೋಜ್ ಮಿಶ್ರಾ ಆಫರ್- ರಾಣು ಸ್ಥಿತಿ ಆಗದಿರಲಿ ಅಂತಿರೋ ಫ್ಯಾನ್ಸ್
ಇದೀಗ ಮೊನಾಲಿಸಾದ ಸಿನಿಮಾಗಳ ಆಫರ್ ಕೂಡ ಬರುತ್ತಿವೆ. ಇದಾಗಲೇ ಸ್ಟೋರಿ ಆಫ್ ಮಣಿಪುರ್‌ನಲ್ಲಿ ಈಕೆಯನ್ನು ಸೇರಿಸಿಕೊಳ್ಳುವುದಾಗಿ ನಿರ್ದೇಶಕರು ಹೇಳಿಯಾಗಿದೆ. ಈ ವಿಷಯದ ನಡುವೆಯೇ, ಇದೀಗ ಮೊನಾಲಿಸಾಳ ಮೇಕಪ್ ರಹಿತ ವಿಡಿಯೋ ಒಂದು ವೈರಲ್ ಆಗಿದೆ. ಈಕೆಯದ್ದೇ ಒಂದು ಇನ್‌ಸ್ಟಾಗ್ರಾಮ್ ಇದ್ದು, ಅದರಲ್ಲಿ ಕೂಡ ಇವಳು ಸಾಕಷ್ಟು ಮೇಕಪ್ ಮಾಡಿಕೊಂಡು ರೀಲ್ಸ್ ಮಾಡಿರುವುದನ್ನು ನೋಡಬಹುದು. ಆದರೆ ಆಕೆ ಈಗ ಕುಂಭಮೇಳದ ಸುಂದ್ರಿಯಾಗಿರುವ ಕಾರಣದಿಂದ ಮೇಕಪ್ ಆರ್ಟಿಸ್ಟ್ ಒಬ್ಬರು ಆಕೆಯನ್ನು ಕರೆದುಕೊಂಡು ಹೋಗಿ ಮೇಕಪ್ ಮಾಡಿದ್ದಾರೆ.
ಅದಕ್ಕೂ ಮುನ್ನ ಆಕೆಯ ಮೇಕಪ್ ರಹಿತ ಮುಖ ವೈರಲ್ ಆಗಿದೆ! ಈಕೆಯನ್ನು ಹಾಡಿ ಕೊಂಡಾಡಿ, ಹೊಗಳಿ ಅಟ್ಟಕ್ಕೇರಿಸಿದವರೇ ಈಕೆಯ ನಿಜ ರೂಪ ಹೀಗಿದ್ಯಾ ಎಂದು ಇನ್ನಿಲ್ಲದಂತೆ ಕಮೆಂಟ್ ಮಾಡುತ್ತಿದ್ದಾರೆ. ನೈಜ ಸುಂದರಿ ಎಂದೆಲ್ಲಾ ಹೊಗಳಿಬಿಟ್ಟೇವಲ್ಲಪ್ಪಾ, ಈಕೆಯದ್ದೂ ಮೇಕಪ್ ಸೌಂದರ್ಯವೇ ಎಂದು ಗೋಳಾಡುತ್ತಿದ್ದಾರೆ. ಅನವಶ್ಯಕವಾಗಿ ಯಾರ್‍ಯಾರಿಗೋ ಹೋಲಿಸಿಬಿಟ್ಟೆವಲ್ಲ ಎಂದೆಲ್ಲಾ ಕಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ. ದೈವದತ್ತವಾಗಿ ಸುಂದರ ಕಣ್ಣಿರುವುದು ನಿಜವಾದರೂ ಅದಕ್ಕೂ ಮೇಕಪ್ ಬಳಿದುಕೊಂಡು ಆಕರ್ಷಕವಾಗಿ ಮಾಡಲಾಗಿದೆ, ಸುಮ್ಮನೇ ಈಕೆಯನ್ನು ಹೊಗಳಿಬಿಟ್ಟೆವಲ್ಲಪ್ಪಾ ಎನ್ನುತ್ತಿದ್ದಾರೆ. ಈ ವಿಡಿಯೋ ಅನ್ನು ನ್ಯೂಸ್ರೌಂಡ್ ಎನ್ನುವ ಇನ್‌ಸ್ಟಾಗ್ರಾಮ್ ಶೇರ್ ಮಾಡಿಕೊಂಡಿದೆ.
ಮಹಾಕುಂಭ ಸೆನ್ಸೇಶನ್ ಮೊನಾಲಿಸಾ ಈಗ ಮಾಡೆಲ್, ಬದಲಾಗಿ ಹೋಯ್ತು ಬದುಕು!