Name Astrology: ಕುಬೇರನಿಗೆ ಈ ನಾಲ್ಕು ಹೆಸರಿನವರ ಮೇಲೆ ವಿಶೇಷ ಪ್ರೀತಿ!
ವ್ಯಕ್ತಿಯ ಬದುಕಿನಲ್ಲಿ ಆತನ ಹೆಸರು ಸಾಕಷ್ಟು ಪರಿಣಾಮ ಬೀರುತ್ತದೆ. ಈ ಕೆಳಗಿನ ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಜನರು ಹೆಚ್ಚಿನ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಅವರ ಜೀವನದಲ್ಲಿ ಹಣ ಮತ್ತು ಆಹಾರದ ಕೊರತೆಯಿರುವುದಿಲ್ಲ. ಏಕೆಂದರೆ ಸಂಪತ್ತಿನ ದೇವರು ಕುಬೇರನು ಅವರ ಮೇಲೆ ಕರುಣೆ ತೋರುತ್ತಾನೆ.
ಕೆಲವರು ತುಂಬಾ ಅದೃಷ್ಟವಂತರು, ಅವರು ಇತರರಿಗಿಂತ ಮೊದಲು ಏನನ್ನಾದರೂ ಪಡೆಯುತ್ತಾರೆ. ಈ ಜನರು ತಾವು ಕೈ ಹಾಕುವ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಈ ಜನರು ಹಣ ಸಂಪಾದಿಸಲು ಉಳಿದವರಷ್ಟು ಕಷ್ಟಪಡಬೇಕಾಗಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಅಂತಹ ಜನರನ್ನು ಹೆಸರಿನ ಆಧಾರದ ಮೇಲೆ ತಿಳಿಯಬಹುದು. ಕೆಲವು ಅಕ್ಷರಗಳ ಹೆಸರನ್ನು ಹೊಂದಿರುವ ಜನರು ಹಣವನ್ನು ಗಳಿಸುವಲ್ಲಿ ಪರಿಣಿತರು. ಏಕೆಂದರೆ ಅವರಿಗೆ ಸಂಪತ್ತಿನ ದೇವರಾದ ಕುಬೇರನ ವಿಶೇಷ ಅನುಗ್ರಹವಿದೆ.
ಹೌದು, ವ್ಯಕ್ತಿಯ ಜನ್ಮ (Birth) ದಿನಾಂಕ, ಸಮಯ, ಅವನ ರಾಶಿಚಕ್ರ ಚಿಹ್ನೆ ಮತ್ತು ಹೆಸರಿನ ಮೊದಲ ಅಕ್ಷರವನ್ನು ಆಧರಿಸಿ, ಅದಕ್ಕೆ ಹೊಂದುವ ಅಕ್ಷರದಿಂದಲೇ ಹೆಸರಿಡಲಾಗುತ್ತದೆ. ಹೀಗೆ ಹುಟ್ಟಿದ ಸಮಯಕ್ಕನುಗುಣವಾಗಿ ಇಟ್ಟ ಅಕ್ಷರದ ಹೆಸರು ನಮ್ಮ ಸಂಪೂರ್ಣ ಭವಿಷ್ಯವನ್ನಾವರಿಸುತ್ತದೆ. ಅದು ನಮ್ಮ ಬಗೆಗೆ ಸಾಕಷ್ಟನ್ನು ಹೇಳುತ್ತದೆ.
Letter A
A ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಹೆಚ್ಚಿನ ಅದೃಷ್ಟವಂತರು. ಅವರು ಮೊದಲ ಅಕ್ಷರದಂತೆ ಸದಾ ನಂಬರ್ ಒನ್. ಅವರ ಜೀವನದಲ್ಲಿ ಹಣ ಮತ್ತು ಆಹಾರದ ಕೊರತೆಯಿರುವುದಿಲ್ಲ. ಏಕೆಂದರೆ ಸಂಪತ್ತಿನ ದೇವರು ಕುಬೇರನು ಅವರ ಮೇಲೆ ಕರುಣೆ ತೋರುತ್ತಾನೆ. ಅವರು ಏನಾದರೂ ಕೆಲಸ ಮಾಡಲು ನಿರ್ಧರಿಸಿದರೆ, ಅದು ಪೂರ್ಣಗೊಂಡ ಬಳಿಕವೇ ವಿಶ್ರಾಂತಿ ಪಡೆಯುತ್ತಾರೆ. ಈ ಜನರು ಬುದ್ಧಿವಂತರು ಮತ್ತು ಶ್ರಮಜೀವಿಗಳು. ಜೊತೆಗೆ ನಾಯಕತ್ವ ಗುಣ ಹೊಂದಿದವರು. ಯಾರಿಗೂ ಹೆದರದ ಗುಣ, ಆತ್ಮವಿಶ್ವಾಸ ಹೆಚ್ಚು. ಈ ವ್ಯಕ್ತಿತ್ವದ ಕಾರಣದಿಂದ ಇವರು ಜೀವನದಲ್ಲಿ ಬಹಳಷ್ಟು ಹಣವನ್ನು ಗಳಿಸುತ್ತಾರೆ.
Name Astrology: ಈ ಹೆಸರಿನ ಮಕ್ಕಳ ಮೆದುಳು ಕಂಪ್ಯೂಟರ್‌ಗಿಂತ ಫಾಸ್ಟ್!
Letter B
B ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಶ್ರಮಶೀಲರು ಮತ್ತು ಬುದ್ಧಿವಂತರು. ಇವರು ಹಣೆಬರಹವನ್ನು ನಂಬುವುದಿಲ್ಲ, ಆದರೆ, ತಮ್ಮ ಹಣೆಬರಹ ತಾವೇ ಬರೆದುಕೊಳ್ಳುತ್ತಾರೆ. ತಮ್ಮ ಯೋಗ್ಯತೆಯ ಕಾರಣದಿಂದ ಅವರು ಜೀವನದಲ್ಲಿ ಸಾಕಷ್ಟು ಸಂಪತ್ತನ್ನು ಗಳಿಸುತ್ತಾರೆ. ಅವರ ಜೀವನದಲ್ಲಿ ಸೌಕರ್ಯಗಳ ಕೊರತೆ ಅಪರೂಪ. ಕೆಲವೊಮ್ಮೆ ಶ್ರಮವಿಲ್ಲದೆಯೂ ಆಸ್ತಿ ಇವರನ್ನು ಅರಸಿ ಬರುತ್ತದೆ. ಹಣಕಾಸಿನ ಅಡಚಣೆ ಇವರನ್ನು ಎಂದೂ ಬಾಧಿಸುವುದಿಲ್ಲ.
Letter K
K ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ತಮ್ಮ ಜೀವನದಲ್ಲಿ ಎಂದಿಗೂ ಸಂಪತ್ತಿನ ಕೊರತೆಯನ್ನು ಅನುಭವಿಸುವುದಿಲ್ಲ. ಅವರು ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಅವರ ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಉತ್ತಮವಾಗಿರುತ್ತದೆ. ಸಂಪತ್ತಿನ ದೇವರು ಕುಬೇರನ ವಿಶೇಷ ಕೃಪೆ ಅವರಿಗಿರುತ್ತದೆ. ಇವರು ತಾವು ಗಳಿಸಿ ತಮ್ಮ ಕುಟುಂಬವನ್ನು ಮೇಲೆ ತರುವವರು. . ಸಣ್ಣಪುಟ್ಟ ನಷ್ಟಗಳಿಗೆ ಕಂಗಾಲಾಗುವ ಸ್ಥಿತಿ ಇವರಿಗೆ ಎಂದಿಗೂ ಇರುವುದಿಲ್ಲ.
Name Astrology: ಈ ಹೆಸರಿನ ಹುಡುಗಿ ಕೈ ಹಿಡಿದ್ರೆ ಅದೃಷ್ಟವೋ ಅದೃಷ್ಟ!
Letter N
N ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ತಮಾಷೆಯಾಗಿರುತ್ತಾರೆ. ಅಷ್ಟೇ ಐಷಾರಾಮಿ ಜೀವನ ನಡೆಸುತ್ತಾರೆ. ಅದಕ್ಕಾಗಿ ಅವರು ಇತರರಿಗಿಂತ ಹೆಚ್ಚು ಶ್ರಮ ಹಾಕಬೇಕಿಲ್ಲ. ಅವರ ಹುಟ್ಟಾ ಕೌಶಲ್ಯಗಳು, ಪ್ರತಿಭೆ ಅವರನ್ನು ಜೀವನದಲ್ಲಿ ಸಾಕಷ್ಟು ಮೇಲೆ ಕೊಂಡೊಯ್ಯುತ್ತವೆ. ಬದ್ಧತೆಯೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಆ ವಿಷಯ ಇವರಿಗೆ ಚೆನ್ನಾಗಿ ಗೊತ್ತಿದೆ. ಜೀವನದಲ್ಲಿ ಅವರ ಪರಿಶ್ರಮಕ್ಕೆ ತಕ್ಕಂತೆ ಸಾಕಷ್ಟು ವಿಭಿನ್ನ ಸ್ಥಾನಮಾನವನ್ನೂ ಪಡೆಯುತ್ತಾರೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.