Name Astrology: ಈ ಹೆಸರಿನ ಹುಡುಗಿ ಕೈ ಹಿಡಿದ್ರೆ ಅದೃಷ್ಟವೋ ಅದೃಷ್ಟ!
ಇತ್ತೀಚಿನ ದಿನಗಳಲ್ಲಿ ಜನರು ಮನಸ್ಸಿಗೆ ಬಂದ ಹೆಸರನ್ನು ಇಡ್ತಾರೆ. ಆದ್ರೆ ಹೆಸರು ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಅವರು ಗಮನಿಸೋದಿಲ್ಲ. ಕರೆಯೋಕೆ ಮಾತ್ರವಲ್ಲ ಹೆಸರಿನಲ್ಲಿ ಇನ್ನೇನೇನೋ ಅಡಗಿದೆ.
ಹೆಸರಿ (Name) ನಲ್ಲೇನಿದೆ ಬಿಡಿ ಅಂತಾ ನಾವು ಅನೇಕ ಬಾರಿ ಹೇಳಿರ್ತೇವೆ. ಆದ್ರೆ ಹೆಸರಿನಲ್ಲಿ ನಮ್ಮ ಗುರುತಿ (Identity) ದೆ. ಹೆಸರು ನಮ್ಮ ಜೀವನ (Life)ದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಹಾಗಾಗಿಯೇ ನಾಮಕರಣವನ್ನು ಭಾರತೀಯರು ಶಾಸ್ತ್ರೋಕ್ತವಾಗಿ ಮಾಡ್ತಾರೆ. ವ್ಯಕ್ತಿಯ ಜನ್ಮ (Birth) ದಿನಾಂಕ, ಸಮಯ, ಅವನ ರಾಶಿಚಕ್ರ ಚಿಹ್ನೆ ಮತ್ತು ಹೆಸರಿನ ಮೊದಲ ಅಕ್ಷರವನ್ನು ಆಧರಿಸಿ, ಅದಕ್ಕೆ ಹೊಂದುವ ಅಕ್ಷರದಿಂದಲೇ ಹೆಸರಿಡುವ ಪ್ರಯತ್ನ ಮಾಡ್ತಾರೆ. ಹೆಸರಿನಿಂದ ಸಮಸ್ಯೆಯಾಗ್ತಿದೆ ಎನ್ನುವ ಕಾರಣಕ್ಕೆ ಅನೇಕರು ಹೆಸರು ಬದಲಿಸಿಕೊಂಡಿದ್ದನ್ನು ಕೂಡ ನೀವು ನೋಡಿರುತ್ತೀರಿ. ಹೆಸರು ಬದಲಾದ ನಂತ್ರ ಅದೃಷ್ಟ (Good luck) ಬದಲಾದ ಉದಾಹರಣೆ (Example) ಗಳೂ ಇವೆ. ಸಾಮಾನ್ಯವಾಗಿ ಮದುವೆ (Marriage) ಯಾಗುವ ಸಂದರ್ಭದಲ್ಲಿ ನಾವು ಜಾತಕ (Horoscope) ನೋಡ್ತೇವೆ. ಆದ್ರೆ ಹೆಸರಿಗೆ ಹೆಚ್ಚು ಮಹತ್ವ ನೀಡಲು ಹೋಗುವುದಿಲ್ಲ.
ಶಾಸ್ತ್ರದಲ್ಲಿ, ವ್ಯಕ್ತಿಯ ಹೆಸರಿನ ಮೊದಲ ಅಕ್ಷರ, ವ್ಯಕ್ತಿಯ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಲಾಗಿದೆ. ಶಾಸ್ತ್ರದಲ್ಲಿ ವ್ಯಕ್ತಿಯ ಹೆಸರಿನ ಮಹತ್ವವನ್ನು ಹೇಳಲಾಗಿದೆ. ಹಾಗೆಯೇ ಯಾವ ಹೆಸರಿನಿಂದ ಶುರುವಾಗುವ ಹುಡುಗಿಯ ಸ್ವಭಾವ ಹೇಗಿರುತ್ತದೆ ಎಂಬುದನ್ನೂ ಹೇಳಲಾಗಿದೆ.
ಜ್ಯೋತಿಷ್ಯದ ಪ್ರಕಾರ, ಕೆಲ ಹೆಸರಿನ ಹುಡುಗಿಯರು ತಾವು ಮದುವೆಯಾಗುವ ಹುಡುಗನಿಗೆ ಅದೃಷ್ಟ ತರ್ತಾರೆ. ಮದುವೆಯ ನಂತರ ಹುಡುಗರಿಗೆ ಲಾಟರಿ ಹೊಡೆದಂತೆ. ಜೀವನ ಪರ್ಯಂತ ಲಕ್ಷ್ಮಿ ಮನೆಯಲ್ಲಿರುತ್ತಾಳೆ. ಸಂಪತ್ತಿನ ದೇವರ ಕೃಪೆಯಿರುವ ಹುಡುಗಿಯರು ಮನೆಯಲ್ಲಿದ್ದರೆ ಯಾವುದೇ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ಇಂದು ಯಾವ ಹೆಸರಿನ ಹುಡುಗಿಯರು ಮದುವೆ ನಂತ್ರ ಪತಿ ಮನೆಯಲ್ಲಿ ಹಣದ ಹೊಳೆ ಹರಿಸ್ತಾರೆ ಎಂಬುದನ್ನು ನೋಡೋಣ.
ಈ ಹೆಸರಿನ ಹುಡುಗಿಯ ಗಂಡನಿಗೆ ಹಣದ ಹೊಳೆ
ಪಿ (P) ಅಕ್ಷರದಿಂದ ಪ್ರಾರಂಭವಾಗುವ ಹುಡುಗಿ : ಶಾಸ್ತ್ರದ ಪ್ರಕಾರ, ಯಾವ ಹುಡುಗಿ ಹೆಸರು ಪಿ ಅಕ್ಷರದಿಂದ ಶುರುವಾಗುತ್ತದೆಯೋ ಆ ಹುಡುಗಿಯರು ಅದೃಷ್ಟವಂತರು. ಈ ಹುಡುಗಿಯರು ತುಂಬಾ ಸರಳ ಸ್ವಭಾವದವರು. ಅವರಿಗೆ ಮಾತಿನ ಕಲೆ ಗೊತ್ತು. ಒಳ್ಳೊಳ್ಳೆ ಮಾತುಗಳನ್ನಾಡಿ ಎಲ್ಲರ ಮನಸ್ಸು ಕದಿಯುತ್ತಾರೆ. ಅವರಿಗೆ ವಿಭಿನ್ನವಾದ ಆಕರ್ಷಣೆಯ ಶಕ್ತಿ ಇರುತ್ತದೆ. ಈ ಹುಡುಗಿಯರ ಮಾತಿಗೆ ಮರುಳಾಗದವರಿಲ್ಲ. ಮದುವೆಯ ನಂತರ ಅವಳು ತನ್ನ ಗಂಡನಿಗೆ ಅದೃಷ್ಟಶಾಲಿ ಎಂದು ಸಾಬೀತುಪಡಿಸುತ್ತಾಳೆ. ಪಿ ಅಕ್ಷರದ ಹುಡುಗಿಯನ್ನು ಮದುವೆಯಾದ ಹುಡುಗ್ರ ಬಾಳಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ.
ಇಂಥ ಕನಸು ಬಿದ್ದರೆ ಶೀಘ್ರದಲ್ಲೇ ಹಣದ ಸುರಿಮಳೆಯಾಗಲಿದೆ ಎಂದರ್ಥ!
ಎಲ್ (L ) ಅಕ್ಷರದ ಹೆಸರಿನ ಹುಡುಗಿಯರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತಾಯಿ ಲಕ್ಷ್ಮಿ ಈ ಹೆಸರಿನ ಹುಡುಗಿಯರಿಗೆ ವಿಶೇಷ ಕೃಪೆ ತೋರುತ್ತಾಳೆ. ಜೀವನದಲ್ಲಿ ಎಲ್ಲಾ ಸೌಕರ್ಯಗಳು ಸುಲಭವಾಗಿ ದೊರೆಯುತ್ತವೆ. ತಾಯಿ ಲಕ್ಷ್ಮಿಯ ಕೃಪೆಯಿಂದ ಅವರ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಮದುವೆಯ ನಂತರ, ಗಂಡನ ಅದೃಷ್ಟ ಬದಲಾಗುತ್ತದೆ. ಎಲ್ ಅಕ್ಷರದಿಂದ ಶುರುವಾಗುವ ಹುಡುಗಿಯನ್ನು ಮದುವೆಯಾಗುವ ಹುಡುಗನಿಗೆ ಕುಬೇರ ಒಲಿಯುತ್ತಾನೆ ಎಂದು ನಂಬಲಾಗಿದೆ.
ಈ 5 ರಾಶಿಯವರ ಉದ್ಯೋಗ, ವ್ಯಾಪಾರಕ್ಕೆ ಈಗ ಶುಕ್ರದೆಸೆ!
ಕೆ (K) ಅಕ್ಷರದ ಹುಡುಗಿಯರು : ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಸಮಾಜದ ಒಳಿತಿಗಾಗಿ ಸಾಕಷ್ಟು ಕೆಲಸವನ್ನು ಕೆ ಅಕ್ಷರದ ಹುಡುಗಿಯರು ಮಾಡುತ್ತಾರೆ. ಅವರು ಸ್ವಭಾವತಃ ತುಂಬಾ ನೇರವಾಗಿರುತ್ತಾರೆ. ಪ್ರತಿಯೊಬ್ಬರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗ್ತಾರೆ. ಪ್ರತಿ ಕೆಲಸವನ್ನೂ ತುಂಬಾ ಜಾಗರೂಕತೆಯಿಂದ ಮಾಡ್ತಾರೆ. ಜಾಗರೂಕತೆಯಿಂದ ಮಾಡುವ ಕೆಲಸವೇ ಗಂಡನ ಯಶಸ್ಸಿಗೆ ಕಾರಣವಾಗುತ್ತದೆ. ಕೆ ಅಕ್ಷರದಿಂದ ಶುರುವಾಗುವ ಹುಡುಗಿಯನ್ನು ಮದುವೆಯಾದ ವ್ಯಕ್ತಿಯ ಬಾಳಲ್ಲಿ ಆರ್ಥಿಕ ಸಮಸ್ಯೆ ಕಾಡುವುದಿಲ್ಲ.