Asianet Suvarna News Asianet Suvarna News

ಕೊಡಗಿನಾದ್ಯಂದ ಹುತ್ತರಿ ಹಬ್ಬ: ಧಾನ್ಯಲಕ್ಷ್ಮಿಯ ಮನೆ ತುಂಬಿಕೊಂಡ ಜನರು

ಕೊಡಗಿನಾದ್ಯಂದ ಇಂದು ಪುತ್ತರಿ ಸಂಭ್ರಮ ಕಳೆಗಟ್ಟಿದೆ. ಕೊಡಗಿನ ಧಾನ್ಯಲಕ್ಷ್ಮಿಯ ಹಬ್ಬವೆಂದೇ ಕರೆಯುವ ಪುತ್ತರಿ ಆಚರಣೆ ಸಂಭ್ರಮ ಸಡಗರದಿಂದ ನಡೆಯುತ್ತಿದೆ. ವರ್ಷಪೂರ್ತಿ ಅನ್ನನೀಡೋ ಧಾನ್ಯಲಕ್ಷ್ಮಿಯನ್ನು ಪೂಜಿಸಿ ಮನೆಗೊಯ್ಯೋ ಸಾಂಪ್ರದಾಯಿಕ ಆಚರಣೆ ಎಲ್ಲರ ಗಮನಸೆಳೆಯುತ್ತದೆ. 

Kodava people celebrated huttari festival in paddy ground in kodagu gvd
Author
First Published Dec 8, 2022, 6:48 AM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಡಿ.08): ಕೊಡಗಿನಾದ್ಯಂದ ಇಂದು ಪುತ್ತರಿ ಸಂಭ್ರಮ ಕಳೆಗಟ್ಟಿದೆ. ಕೊಡಗಿನ ಧಾನ್ಯಲಕ್ಷ್ಮಿಯ ಹಬ್ಬವೆಂದೇ ಕರೆಯುವ ಪುತ್ತರಿ ಆಚರಣೆ ಸಂಭ್ರಮ ಸಡಗರದಿಂದ ನಡೆಯುತ್ತಿದೆ. ವರ್ಷಪೂರ್ತಿ ಅನ್ನನೀಡೋ ಧಾನ್ಯಲಕ್ಷ್ಮಿಯನ್ನು ಪೂಜಿಸಿ ಮನೆಗೊಯ್ಯೋ ಸಾಂಪ್ರದಾಯಿಕ ಆಚರಣೆ ಎಲ್ಲರ ಗಮನಸೆಳೆಯುತ್ತದೆ. ಪೊಲಿ ಪೊಲಿ ದೇವಾ, ಪೊಲಿಯೇ ದೇವಾ ಎಂದು ಶ್ರದ್ಧಾಭಕ್ತಯಿಂದ ದೇವರ ನೆನೆಯುತ್ತಾ ಮನೆಮಂದಿಯೆಲ್ಲಾ ಧಾನ್ಯವನ್ನು ಮನೆಗೊಯ್ದು ಪೂಜಿಸಿ ಸಂಭ್ರಮಿಸುತ್ತಿದ್ದು ಎಲ್ಲೆಲ್ಲೂ ಹಬ್ಬದ ಸಡಗರ ಮನೆಮಾಡಿದೆ. 

ಇಂದು ಕೊಡಗಿನಾದ್ಯಂತ ಪುತ್ತರಿ ಹಬ್ಬದ ಸಂಭ್ರಮ ಮನೆಮಾಡಿದೆ. ಕೊಡವರ ಪ್ರಮುಖ ಹಬ್ಬ ಪುತ್ತರಿ ಧಾನ್ಯಲಕ್ಷ್ಮಿಯನ್ನು ಮನೆಗೊಯ್ಯೋ ಜಾನಪದೀಯ ವಿಶಿಷ್ಟ ಹಬ್ಬ ನಿಜಕ್ಕೂ ವೈಶಿಷ್ಟ್ಯ ಪೂರ್ಣ ನಮ್ಮೆ. ಈ ಹಿನ್ನಲೆಯಲ್ಲಿ ಇಂದು ಮಂಜಿನ ನಗರಿ ಮಡಿಕೇರಿಯ ಕೊಡವ ಸಮಾಜ ಹಾಗೂ ಓಂಕಾರೇಶ್ವರ ದೇವಾಲಯದ ಸಮಿತಿ ವತಿಯಿಂದ ನಡೆದ ಪುತ್ತರಿ ನಮ್ಮೆ ಗಮನ ಸೆಳೆಯಿತು. ಸಾಂಪ್ರದಾಯಿಕ ಉಡುಗೆತೊಟ್ಟ ಕೊಡವರು ದೇವಾಲಯದ ಆವರಣದಲ್ಲಿ ಇರುವ ಭತ್ತದ ಬೆಳೆಗೆ ನಮಿಸಿ ನೆರೆಕಟ್ಟಿದರು. ನಂತರ ಮಂಗಳವಾದ್ಯ ದುಡಿಕೊಟ್ಟು ಪಾಟ್ ಸಮೇತ ಕೋವಿಯೊಂದಿಗೆ ಊರಿನ ಮಂದಿಯೆಲ್ಲಾ ಮೆರವಣಿಗೆ ಮೂಲಕ ಗದ್ದೆಗೆ ತೆರಳಿದರು. 

ಕೊಡಗು: ಅದ್ಧೂರಿ ಹನುಮಜಯಂತಿ; ಗಮನ ಸೆಳೆದ ಉತ್ಸವ

ಅಲ್ಲಿ ಸಂಭ್ರಮದಿಂದ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಕದಿರು ಕೊಯ್ದರು. ಪೊಲಿ ಪೊಲಿ ದೇವಾ, ಪೊಲಿಯೇ ದೇವಾ ಎಂದು ಸಂತಸದಿಂದ ಕೂಗುತ್ತಾ ಧಾನ್ಯಲಕ್ಷ್ಮಿಯನ್ನು ಶಾಸ್ತ್ರೋಕ್ತವಾಗಿ ತೆಗೆದು ಸಾಂಪ್ರದಾಯಿಕ ಹಾಡಿನೊಂದಿಗೆ ಸಾಗಿದರು. ಅಧಿಕೃತವಾಗಿ ಕೊಡಗಿನಾದ್ಯಂತ ಪುತ್ತರಿ ಮಂಗಳವಾರ ರಾತ್ರಿಯಿಂದಲೇ ಆರಂಭವಾಗಿದೆ. ಕೊಡವರ ಕುಲದೈವ ಇಗ್ಗುತಪ್ಪನ ಸನ್ನಿದಿಯಲ್ಲಿ ನೆಲ್ಲಕ್ಕಿಯಲ್ಲಿ ಅಕ್ಕಿ ಹಾಕಿ ನೆರೆಕಟ್ಟುವ ಮೂಲಕ ಇದಕ್ಕೆ ಚಾಲನೆ ಸಿಗುತ್ತದೆ. ಅಂದರೆ ಪ್ರಕೃತಿಯೊಂದಿಗೆ ಹೊಂದಿಕೊಂಡ ಕೊಡಗಿನ ಜನರ ಆಚಾರದ ಸಂಕೇತವಾಗಿ ಐದು ಬಗೆಯ ಹಸಿರು ಮರದ ಎಲೆಗಳಾದ ಉಂಬಳಿ, ಹಲಸು, ಗೇರು, ಮಾವು ಸೇರಿದಂತೆ ಐದು ಬಗೆಯ ಹಸಿರೆಲೆಗಳನ್ನು ಒಟ್ಟುಗೂಡಿಸಿ ನೆರೆಕಟ್ಟಿ ಗುರುಕಾರೋಣರಿಗೆ -ದೈವಕ್ಕೆ ನಮಿಸಲಾಗುತ್ತೆ, 

ನಂತರ ರಾತ್ರಿ 8 ಗಂಟೆಗೆ ಕದಿರು ತೆಗೆಯಲಾಯಿತು. ಇದಾದನಂತರ ಜಿಲ್ಲೆಯಾದ್ಯಂತ ನೆರೆ ಕಟ್ಟಿ, ಕದಿರು ತೆಗೆಯುವುದು ನಿಗದಿಯಾಗಿತ್ತು. ಆದರೆ ಕೊಡವರ ವಿಶಿಷ್ಟ ಸಂಸ್ಕೃತಿ ಆಚಾರ ವಿಚಾರ, .ಹೀಗೆ ಸಂಭ್ರಮ ಸಡಗರದಿಂದ ಎಲ್ಲರು ಒಂದೆಡೆ ಕಲೆತು ವರ್ಷಪೂರ್ತಿ ಮನೆ ಮಂದಿಗೆಲ್ಲಾ ಅನ್ನನೀಡೋ ಧಾನ್ಯಲಕ್ಷ್ಮಿಯನ್ನು ಪೂಜ್ಯಭಾವನೆಯಿಂದ ಮನೆಗೆ ಬರಮಾಡಿಕೊಳ್ಳಲಾಗುತ್ತೆ. ಸಾಂಪ್ರದಾಯಿಕ ಉಡುಗೆಯಲ್ಲಿ ಹಬ್ಬದ ಸಂಭ್ರಮದಲ್ಲಿರೋ ಜನರು ಗದ್ದೆಯಿಂದ ತಂದ ಭತ್ತದ ಪೈರನ್ನು ಕಣದಲ್ಲಿರಿಸಿ ತಮ್ಮ ಜಾನಪದ ನೃತ್ಯಗಳ ಮೂಲಕ ನಲಿಯುತ್ತಾರೆ. ಕೊನೆಗೆ ಎಲ್ಲರೂ ಸಾಮೂಹಿಕವಾಗಿ ಕೈಯಲ್ಲಿ ಕತ್ತಿ ಹಿಡಿದು ನೃತ್ಯಮಾಡಿ, ಪುದಿಯ ಎಂದರೆ ಹೊಸ ಅರಿ ಎಂದರೆ ಭತ್ತ ಅಂದ್ರೆ ಹೊಸ ಬತ್ತವನ್ನು ಮನೆಗೊಯ್ಯೋ ಹಬ್ಬ ಪುತ್ತರಿಯನ್ನ ಸಾಂಪ್ರದಾಯಿಕವಾಗಿ ಆಚರಿಸಿ ಸಂಭ್ರಮದಿಂದ ಆಚರಿಸಿ ಧಾನ್ಯ ಲಕ್ಷ್ಮಿಯನ್ನ ಮನೆಗೆ ಬರಮಾಡಿಕೊಳ್ಳುತ್ತಾರೆ. 

ಕೊಡಗಿನಲ್ಲಿ ಅನಾವರಣಗೊಂಡ ಹಾಡಿ ಸಂಸ್ಕೃತಿ, ಶ್ರೀಮಂತ ಜಾನಪದ ಕಲೆಗಳ ಅನಾವರಣ

ಒಟ್ನಲ್ಲಿ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಮಡಿಕೇರಿ ಕೊಡವ ಸಮಾಜದ ಆಶ್ರಯದಲ್ಲಿ ಸಡಗರದ ಪುತ್ತರಿ ಆಚರಿಸಲಾಯಿತು.  ನಾನಾ ಕಾರಣಗಳಿಂದ ಪ್ರಪಂಚದ ಬೇರೆ ಬೇರೆ ಕಡೆ ನೆಲೆಸಿರೋ ಎಲ್ಲಾ ಕೊಡವರು ಈ ಹಬ್ಬಕ್ಕೆ ಬಂದೇ ಬರುತ್ತಾರೆ. ನೆಂಟರಿಷ್ಟರೆಲ್ಲಾ ಒಂದೆಡೆ ಕಲೆತು, ಸಂಭ್ರಮಿಸುತ್ತಾರೆ. ಪುತ್ತರಿಯ ಪ್ರಯುಕ್ತ ತಂಬಿಟ್ಟು, ವಿಶಿಷ್ಟ ಪುತ್ತರಿ ಗೆಣಸು, ಕಡಂಬಿಟ್ಟು ಘಮಘಮಿಸುತ್ತೆ, ಪುತ್ತರಿ ವಿಶೇಷವಾಗಿ ಇಂದು ಕದಿರು ತೆಗೆದ ಭತ್ತದಿಂದ ತಯಾರಿಸಿದ ಪಾಯಸ ಪ್ರಮುಖವಾಗಿದ್ದು ಎಲ್ಲೆಲ್ಲು ಪುತ್ತರಿ ಪಾಯಸದ ಸುವಾಸನೆ ಪಸರಿಸಿದೆ. ಪುತ್ತರಿ ಸಂಭ್ರಮ ಕೇವಲ ಇಂದಿಗೆ ಮಾತ್ರ ಸೀಮಿತವಾಗದೆ ನಾಳೆಯಿಂದ ಕೊಡಗಿನ ಜಾನಪದದ ನೃತ್ಯಲೋಕದ ಅನಾವರಣದ ಜೊತೆಗೆ ಇಡೀ ನಾಡಲ್ಲಿ ಪುತ್ತರಿ ಸಂಭ್ರಮ ಕಳೆಗಟ್ಟಲಿದೆ.

Follow Us:
Download App:
  • android
  • ios