ರಾಶಿಚಕ್ರದ ಪ್ರಕಾರ ಜ್ಯೋತಿಷ್ಯ ಪರಿಹಾರಗಳನ್ನು ತೆಗೆದುಕೊಳ್ಳುವ ಮೂಲಕ ಗ್ರಹಣದ ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಿದೆ. ಆ ಮೂಲಕ, ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.

ಧಾರ್ಮಿಕ ದೃಷ್ಟಿಕೋನದಿಂದ ಗ್ರಹಣವನ್ನು ಎಂದಿಗೂ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿಯೇ ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಗ್ರಹಣವು ಎಲ್ಲ ರಾಶಿಚಕ್ರ ಚಿಹ್ನೆಗಳ ಮೇಲೆ ಮಿಶ್ರ ಪರಿಣಾಮವನ್ನು ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ಗ್ರಹಣ ಸಮಯದಲ್ಲಿ, ರಾಶಿಚಕ್ರದ ಪ್ರಕಾರ ಜ್ಯೋತಿಷ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ನೀವು ಗ್ರಹಣದ ದುಷ್ಟ ಪರಿಣಾಮವನ್ನು ಕಡಿಮೆ ಮಾಡಬಹುದು. ಇದರಿಂದ, ನಿಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಗೆ ಭಂಗ ಬಾರದಂತೆ ನೋಡಿಕೊಳ್ಳಬಹುದು. ಈ ಬಾರಿ ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 30 ರಂದು ಸಂಭವಿಸುತ್ತಿದೆ. ಇದರಲ್ಲಿ ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ನೀಡಲಾಗಿರುವ ಈ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ಮೇಷ(Aries): ಸೂರ್ಯಗ್ರಹಣದ ಕೆಟ್ಟ ಪ್ರಭಾವವನ್ನು ತಪ್ಪಿಸಲು, ನೀವು ಗ್ರಹಣದ ದಿನ ಹನುಮಾನ್ ಚಾಲೀಸಾವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಸಮೃದ್ಧಿ, ಸಂತೋಷ ಹೆಚ್ಚಾಗುತ್ತದೆ.

ವೃಷಭ(Taurus): ಸೂರ್ಯಗ್ರಹಣದ ದುಷ್ಟ ಪ್ರಭಾವವನ್ನು ತಪ್ಪಿಸಲು, ಗ್ರಹಣ ಸಮಯದಲ್ಲಿ ಶ್ರೀಸೂಕ್ತವನ್ನು ಪಠಿಸಿ. ಇದರಿಂದ ಲಕ್ಷ್ಮಿದೇವಿಯ ಆಶೀರ್ವಾದ ದೊರೆಯುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಬರುತ್ತಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಧನ ವೃದ್ಧಿಯಾಗಲಿದೆ.

ಮಿಥುನ(Gemini): ಗ್ರಹಣದ ಸಮಯದಲ್ಲಿ ಮಿಥುನ ರಾಶಿಯವರು ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ಇದರ ಪರಿಣಾಮವಾಗಿ ನಿಮ್ಮ ಜೀವನದಲ್ಲಿ ಸಂತೋಷ ಇರುತ್ತದೆ ಮತ್ತು ಪ್ರಗತಿಯ ಬಾಗಿಲುಗಳು ತೆರೆದುಕೊಳ್ಳುತ್ತವೆ.

ಕರ್ಕಾಟಕ(Cancer): ಕರ್ಕಾಟಕ ರಾಶಿಯವರಿಗೆ ಗ್ರಹಣವು ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ, ನೀವು ಮನೆಯಲ್ಲಿಯೇ ಇದ್ದು ಶಿವನನ್ನು ಧ್ಯಾನಿಸಬೇಕು. ಶಿವ ಚಾಲೀಸಾವನ್ನು ಪಠಿಸಿ ಮತ್ತು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ.

ಸಿಂಹ(Leo): ಗ್ರಹಣದ ಸಮಯದಲ್ಲಿ ನೀವು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಸ್ಥಗಿತಗೊಂಡ ಕೆಲಸವು ಪುನರಾರಂಭವಾಗುತ್ತದೆ.

ಬುಧ ಗ್ರಹ: ಚಂದ್ರನ ಮಗ, ಗುರುವಿನ ಮಲಮಗ- ಏನೀ ಕತೆ?

ಕನ್ಯಾ(Virgo): ಈ ರಾಶಿಯ ಜನರು ರಾಮ ರಕ್ಷಾಸ್ತೋತ್ರವನ್ನು ಪಠಿಸಬೇಕು. ಇದರಿಂದ ಇವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ತುಲಾ(Libra): ಗ್ರಹಣದ ಪ್ರಭಾವದಿಂದ ದೂರವಿರಲು ಕನಕಧಾರೆಯನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ವೃಶ್ಚಿಕ(Scorpio): ಬಜರಂಗಬಾಣವನ್ನು ಪಠಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ. ಇದರಿಂದ ಉದ್ಯೋಗ ಮತ್ತು ವ್ಯಾಪಾರದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ.

ಧನು(Sagittarius): ಧನು ರಾಶಿಯವರು ಸೂರ್ಯಗ್ರಹಣದ ಸಮಯದಲ್ಲಿ ಗೀತೆಯನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಏಳ್ಗೆಯಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ.

ಮಕರ(Capricorn): ಈ ರಾಶಿಯ ಜನರು ಗ್ರಹಣದ ಸಮಯದಲ್ಲಿ ಸುಂದರ ಕಾಂಡವನ್ನು ಪಠಿಸಬೇಕು. ಇದರ ಪರಿಣಾಮವಾಗಿ ನಿಮ್ಮ ಜೀವನದಲ್ಲಿ ಬರುವ ಎಲ್ಲ ತೊಂದರೆಗಳಿಂದ ನೀವು ಸ್ವಾತಂತ್ರ್ಯವನ್ನು ಪಡೆಯುತ್ತೀರಿ.

ಗೃಹ ಪ್ರವೇಶದ ಸಂದರ್ಭದಲ್ಲಿ ನೆನಪಿಡಬೇಕಾದ ವಿಷಯಗಳು

ಕುಂಭ(Aquarius): ಸೂರ್ಯಗ್ರಹಣವು ಈ ರಾಶಿಯ ಜನರ ಮೇಲೆ ಮಿಶ್ರ ಪರಿಣಾಮ ಬೀರುತ್ತದೆ. ಈ ದಿನ ನೀವು ಸುಂದರ ಕಾಂಡವನ್ನು ಪಠಿಸಬೇಕು. ಇದರಿಂದ ನಿಮ್ಮ ಮನದ ಇಂಗಿತ ಪೂರೈಕೆಯಾಗುವುದು. 

ಮೀನ(Pisces): ಈ ರಾಶಿಯ ಜನರು ಸೂರ್ಯ ಗ್ರಹಣದ ದಿನದಂದು ರಾಮ ಚರಿತ ಮಾನಸ ಪಠಿಸಬೇಕು. ಇದನ್ನು ಮಾಡುವುದರಿಂದ ನಿಮ್ಮ ಮನದಾಸೆ ಫಲಪ್ರದವಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.