Asianet Suvarna News Asianet Suvarna News

‘2047ರವರೆಗೂ ದೇವರು ನನ್ನನ್ನು ಕರೆಸಿಕೊಳ್ಳಲ್ಲ’ : ಪ್ರಧಾನಿ ಮೋದಿ

ದೇವರೇ ತನ್ನನ್ನು 2047ರವರೆಗೆ ಭಾರತ ಮತ್ತು ಭಾರತೀಯರ ಸೇವೆ ಮಾಡುವಂತೆ ದೀಕ್ಷೆ ನೀಡಿ ಕಳುಹಿಸಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ತಾವು ಬದುಕಿರುವವರೆಗೂ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವ ಕುರಿತು ಸುಳಿವನ್ನು ನೀಡಿದ್ದಾರೆ.

God has sent me to serve people says PM modi rav
Author
First Published May 25, 2024, 7:25 AM IST

ನವದೆಹಲಿ ಮೇ.25: ದೇವರೇ ತನ್ನನ್ನು 2047ರವರೆಗೆ ಭಾರತ ಮತ್ತು ಭಾರತೀಯರ ಸೇವೆ ಮಾಡುವಂತೆ ದೀಕ್ಷೆ ನೀಡಿ ಕಳುಹಿಸಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ತಾವು ಬದುಕಿರುವವರೆಗೂ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವ ಕುರಿತು ಸುಳಿವನ್ನು ನೀಡಿದ್ದಾರೆ.

ಈ ಕುರಿತು ಇಂಡಿಯಾ ಟಿವಿಯ ಸಲಾಂ ಟಿವಿ ಶೋನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ‘ದೇವರೇ ನನ್ನನ್ನು ವಿಶೇಷ ಕಾರ್ಯಕ್ಕಾಗಿ ಇಲ್ಲಿಗೆ ಕಳುಹಿಸಿದ್ದಾನೆ. ಆ ಮೂಲಕ 2047ರೊಳಗೆ ಭಾರತವನ್ನು ವಿಕಸಿತ nಭಾರತವನ್ನಾಗಿ ರೂಪಿಸಬೇಕಿದೆ. ಅದಕ್ಕಾಗಿ ನನಗೆ ದಿನದ 24 ಗಂಟೆಯೂ ದುಡಿಯುವ ಶಕ್ತಿ ನೀಡುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ 2047ರೊಳಗೆ ಭಾರತವನ್ನು ವಿಕಸಿತ ಭಾರತ ಮಾಡುವ ಗುರಿಯಲ್ಲಿ ನಾನು ಯಶಸ್ವಿಯಾಗುವೆ. ಅಲ್ಲಿಯವರೆಗೂ ದೇವರು ನನ್ನನ್ನು ಕರೆಸಿಕೊಳ್ಳುವುದಿಲ್ಲ ಎಂಬ ನಂಬಿಕೆ ಹೊಂದಿದ್ದೇನೆ’ ಎಂದು ತಿಳಿಸಿದ್ದಾರೆ.

ಬಿಜೆಪಿಗೆ 305 ಸ್ಥಾನ: ಅಮೆರಿಕ ರಾಜಕೀಯ ತಜ್ಞ ಬ್ರೆಮ್ಮರ್ ಭವಿಷ್ಯ !

Latest Videos
Follow Us:
Download App:
  • android
  • ios