Asianet Suvarna News Asianet Suvarna News

Love Horoscope 2022: ಹೊಸ ವರ್ಷದಲ್ಲಿ ಹಸನಾಗಲಿರುವ ಲವ್ ಲೈಫ್, ನಿಮ್ಮ ರಾಶಿಗೇನಿದೆ ನೋಡಿ

ಪ್ರೀತಿಯ ಅಧಿಪತಿ ಶುಕ್ರನು ಹೊಸ ವರ್ಷಾರಂಭದಲ್ಲಿ ಧನು ರಾಶಿಯಲ್ಲಿರುತ್ತಾನೆ. ಇವನ ಪ್ರಭಾವ ಯಾವ ರಾಶಿಯ ಮೇಲೆ ಹೇಗಿರಲಿದೆ, ಯಾವ ರಾಶಿಯ ಪ್ರೀತಿಯ ಮೊಗ್ಗು ಅರಳಲಿದೆ, ಯಾವ ರಾಶಿಯ ಪ್ರೀತಿಯ ಹೂವು ಮುದುಡಲಿದೆ ಎಲ್ಲ ಇಲ್ಲಿ ತಿಳಿಯಿರಿ. 

Know about your love life in the new year skr
Author
Bangalore, First Published Dec 13, 2021, 6:19 PM IST
  • Facebook
  • Twitter
  • Whatsapp

ಹೊಸ ವರ್ಷಾರಂಭದಲ್ಲಿ ಪ್ರೀತಿ, ಪ್ರೇಮ, ಪ್ರಣಯದ ಅಧಿಕಾರಕ ಗ್ರಹವಾಗಿರುವ ಶುಕ್ರ ಧನು(Sagittarius) ರಾಶಿಯ ಅಗ್ನಿ ಚಿಹ್ನೆಯಲ್ಲಿರುತ್ತಾನೆ. ಸೂರ್ಯನ ಸಂಯೋಗದಲ್ಲಿರುತ್ತಾನೆ. ಇದರಿಂದ ಬಹಳಷ್ಟು ರಾಶಿಗಳ ಪ್ರೇಮ ಜೀವನ ಇನ್ನಷ್ಟು ಮಧುರವಾಗಲಿದೆ. ಈ ಶುಕ್ರನ ಅನುಗ್ರಹ ಯಾವ ರಾಶಿಗಳ ಮೇಲೆ ಹೇಗಿರಲಿದೆ ನೋಡೋಣ. 

ಮೇಷ(Aries)
ನಿಮ್ಮ ಸಂಗಾತಿಯೊಂದಿಗಿನ ಪ್ರೇಮ ಜೀವನವನ್ನು ಹೆಚ್ಚು ಆಸ್ವಾದಿಸಲಿರುವಿರಿ. ನಿಮ್ಮಿಬ್ಬರ ನಡುವಿನ ಲೈಂಗಿಕ ಜೀವನ ಹೆಚ್ಚು ಆಸಕ್ತಿಕರವಾಗಲಿದೆ. ನಿಮ್ಮಿಬ್ಬರ ನಡುವಿನ ನಂಬಿಕೆ ಹಿಂದೆಂದಿಗಿಂತಲೂ ಹೆಚ್ಚಿ ಪ್ರೀತಿಯ ರಸ ನಿಮಿಷಗಳು ಭವಿಷ್ಯಕ್ಕೆ ಉತ್ತಮ ನೆನಪಾಗಲಿವೆ. ಒಂಟಿಯಾಗಿರುವವರು ತಮ್ಮಿಷ್ಟದ ಸಂಗಾತಿಯೊಂದಿಗೆ ವಿವಾಹಕ್ಕೆ ಸಜ್ಜಾಗಬಹುದು. 

ವೃಷಭ(Taurus)
ನೀವು ನಿಮ್ಮ ಸಂಗಾತಿಯ ತಪ್ಪುಗಳನ್ನು ಹುಡುಕುವುದು, ಅವರನ್ನು ದೂರುವುದು ಬಿಟ್ಟು, ನಿಮ್ಮ ಸಂಬಂಧವನ್ನು ಉತ್ತಮಗೊಳಿಸುವ ಬಗೆ ಬಗ್ಗೆ ಹೆಚ್ಚು ಗಮನ ಹರಿಸುವುದೊಳಿತು. ಮಾತಿನ ಮೇಲೆ ಹಿಡಿತವಿರಲಿ. ಒಮ್ಮೆ ಸಂಗಾತಿಯ ನಂಬಿಕೆಯನ್ನು ಗಳಿಸಿದಿರಾದರೆ, ಸಂಗಾತಿಯ ಸಂಪೂರ್ಣ ಬೆಂಬಲವನ್ನು ಅವರ ಮನಸಾರೆ ಗಳಿಸುವಿರಿ. ಇದರಿಂದ ನಿಮ್ಮ ಆತ್ಮವಿಶ್ವಾಸ(self-confidence) ಹೆಚ್ಚುವುದು. 

ಮಿಥುನ(Gemini)
ಹೊಸ ವರ್ಷವು ಪ್ರೀತಿಯ ವಿಷಯದಲ್ಲಿ ನಿಮ್ಮ ಪಾಲಿಗೆ ವರ(boon)ವಾಗಲಿದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧ(relationship) ಬಲಗೊಳ್ಳಲಿದೆ. ನೀವಿಬ್ಬರೂ ಪರಸ್ಪರರ ಸಂಗವನ್ನು ಆಸ್ವಾದಿಸಲಿರುವಿರಿ. ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಯೋಚಿಸುವಿರಿ. ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಕೊಡುವುದು, ನೆನಪಾಗುಳಿಯುವಂಥ ಸನ್ನಿವೇಶ ಸೃಷ್ಟಿಸಲು ಮರೆಯಬೇಡಿ.

Lizard Falling Meaning: ಹಲ್ಲಿ ಮೈ ಮೇಲೆ ಎಲ್ಲಿ ಬಿದ್ದರೆ ಏನರ್ಥ ತಿಳ್ಕೊಳಿ..

ಕಟಕ(Cancer)
ನಿಮ್ಮ ಸಂಗಾತಿಗೆ ಸುರಕ್ಷತಾ ಭಾವನೆ ಕಟ್ಟಿಕೊಡುವ ಕೆಲಸ ನೀವು ಮಾಡಬೇಕು. ನಿಮ್ಮ ಪ್ರಾಮಾಣಿಕತೆ(sincerity) ಹಾಗೂ ಸಂಬಂಧದ ಮೇಲಿರುವ ಬದ್ಧತೆಯನ್ನು ಅವರ ಅರಿವಿಗೆ ತರುವ ಕೆಲಸ ಮಾಡಬೇಕು. 
ಪರಸ್ಪರ ಸುಂದರ ಸಮಯವನ್ನು ಕಳೆಯಬೇಕು. ಅವರ ನೋವು, ಸಮಸ್ಯೆಗಳಿಗೆ ಭಾವನಾತ್ಮಕವಾಗಿ ಬೆಂಬಲ ಕೊಟ್ಟರೆ ನಿಮ್ಮ ಲವ್ ಲೈಫ್ ಒಳ್ಳೆಯ ದಾರಿಗೆ ಬರಲಿದೆ. 

Gemstones for Success: ನಿಮ್ಮ ವೃತ್ತಿಗೆ ಯಶಸ್ಸು ತಂದುಕೊಡುವ ರತ್ನ ಯಾವುದು ತಿಳಿಯಿರಿ

ಸಿಂಹ(Leo)
ನಿಮ್ಮ ಪ್ರೇಮ ಸಂಬಂಧವನ್ನು ಸಹಾನುಭೂತಿ(compassion), ಪ್ರೀತಿಯಿಂದಲೇ ಪಡೆದುಕೊಳ್ಳಬೇಕು. ಒಮ್ಮೆ ಹಾಗೆ ಮಾಡಿದಿರಾದರೆ ನಿಮ್ಮ ಪ್ರೇಮ ಜೀವನ ಅರಳುತ್ತಲೇ ಹೋಗುತ್ತದೆ. ಸಂತೋಷದ ಹೊನಲಾಗುತ್ತದೆ. ನಿಮ್ಮೆಲ್ಲ ಕಷ್ಟದ ಸಮಯದಲ್ಲಿ ನಿಮ್ಮ ಸಂಗಾತಿ ಹೆಗಲು ಕೊಟ್ಟು ನಿಲ್ಲುವರು. ಇದರಿಂದ ನಿಮ್ಮಿಬ್ಬರ ನಡುವಿನ ಆಪ್ತತೆ ಗಟ್ಟಿಯಾಗುವುದು.

ಕನ್ಯಾ(Virgo)
ನಿಮ್ಮ ಪ್ರೇಮ ಜೀವನದಲ್ಲಿ ಬಹಳ ಸಂತೋಷಮಯ ಸಮಯ ಕಳೆಯುವಿರಿ. ಸಧ್ಯ ಒಂಟಿಯಾಗಿರುವವರು ಕೂಡಾ ಪ್ರೇಮ ಜೀವನಕ್ಕೆ ಪ್ರವೇಶ ಪಡೆದು ಬದುಕಿನ ಅತ್ಯುತ್ತಮ ದಿನಗಳನ್ನು ನೋಡುವರು. ನಿಮ್ಮ ಸಂಗಾತಿಯೆಡೆಗಿನ ನಿಮ್ಮ ಕಾಳಜಿಯೇ ಇಬ್ಬರನ್ನೂ ಹೆಚ್ಚು ಹತ್ತಿರ ತರುವುದು. 

ತುಲಾ(Libra)
ಗಟ್ಟಿಯಾದ ಬಾಂಡಿಂಗ್ ಹೊಂದಿರುವ ಪ್ರೇಮಿಗಳು ವಿವಾಹ ಜೀವನಕ್ಕೆ ಕಾಲಿಡಲು ಮುಂದಡಿ ಇಡಬಹುದು. ವಿವಾಹಿತರ ನಡುವೆ ಕೂಡಾ ಪ್ರೀತಿ ಹಾಗೂ ಶಾಂತಿ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿಯೆಡೆಗೆ ಸಿಟ್ಟಿನಿಂದ ವರ್ತಿಸಬೇಡಿ. ಪ್ರೇಮಿಗಳಿಗೆ ಕೂಡಾ ಹೊಸ ವರ್ಷ ಹೆದರುವ ಅಗತ್ಯವಿಲ್ಲ.

ವೃಶ್ಚಿಕ(Scorpio)
ನಿಮ್ಮ ಸಂಬಂಧದ ಬಗ್ಗೆ ನಿಮ್ಮಲ್ಲಿ ತೃಪ್ತಿ ಇರಲಿದೆ. ಎಲ್ಲೆಲ್ಲೂ ಪ್ರೀತಿಯೇ ತುಂಬಿದೆ ಎನಿಸಬಹುದು. ಪ್ರೀತಿ ಜೀವನದ ಪ್ರತಿಯೊಂದು ಕ್ಷಣಗಳನ್ನೂ ಆಸ್ವಾದಿಸಲಿರುವಿರಿ. ಸಿಂಗಲ್ ಆಗಿರುವವರೂ ಪ್ರೀತಿಯಲ್ಲಿ ಬೀಳುವಿರಿ. 

ಧನು(Sagittarius)
ನಿಮ್ಮ ಸಂಗಾತಿ ಜೊತೆ ಹೆಚ್ಚಿನ ಸಮಯ ಕಳೆಯುವುದರಿಂದ ಬಾಂಡಿಂಗ್ ಹೆಚ್ಚುವುದು. ಬಹಳ ಸಮಯದಿಂದ ಪ್ರೇಮದಲ್ಲಿರುವ ಪ್ರೇಮಿಗಳು ವಿವಾಹ ಜೀವನಕ್ಕೆ ಕಾಲಿಡಲು ಸುಸಮಯ. ನಿಮ್ಮ ಅಭದ್ರತಾ ಭಾವನೆ
(insecurity)ಯಿಂದಾಗಿ ಸಂಬಂಧ ಹಾಳಾಗಲು ಬಿಡದಿರಿ. ನಿಮ್ಮ ಸಂಗಾತಿಯನ್ನು ಸಂಪೂರ್ಣವಾಗಿ ನಂಬಿರಿ. 

ಮಕರ(Capricorn)
ವರ್ಷಾರಂಭದಲ್ಲಿ ನಿಮ್ಮ ಪ್ರೇಮ ಸಂಬಂಧದಲ್ಲಿ ಕೆಲ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಕೆಲ ತಿಂಗಳ ಬಳಿಕ ಮತ್ತೆ ಸರಿಹಾದಿಗೆ ಸಂಬಂಧ ಬರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಪ್ರೀತಿಯ ವಿಷಯದಲ್ಲಿ ನೆಮ್ಮದಿ ಸಾಧಿಸುವಿರಿ. 

ಕುಂಭ(Aquarius)
ನಿಮ್ಮ ಪ್ರೇಮಿಯೊಂದಿಗೆ ಹೆಚ್ಚಿನ ಸಮಯ ಕಳೆದು ಅವರನ್ನು ಹೆಚ್ಚು ಅರ್ಥ ಮಾಡಿಕೊಳ್ಳಿ. ಇದರಿಂದ ಸಂಬಂಧ ಬಲವಾಗುವುದು. ನಿಮ್ಮ ಹಳೆ ಯೋಚನೆಗೇ ಅಂಟಿಕೊಂಡಿರುವ ಬದಲು ಮನಸ್ಸನ್ನು ತೆರೆದಿಡಿ. ಹೊಸ ಯೋಚನೆಗಳನ್ನು ಒಳಗೆ ಬಿಟ್ಟುಕೊಳ್ಳಿ. ಸಂಗಾತಿಯೊಂದಿಗೆ ಪ್ರವಾಸ ಹೋಗಿಬನ್ನಿ. 

ಮೀನ(Pisces)
ನೀವಿನ್ನೂ ಒಂಟಿಯಾಗಿದ್ದರೆ, ನಿಮ್ಮ ಪ್ರೀತಿಯ ಜೀವನಕ್ಕೆ ಕಾಲಿಡಲು ಒಬ್ಬರು ಬಾಗಿಲು ತಟ್ಟಲಿದ್ದಾರೆ. ಅವರೊಂದಿಗೆ ನಿಮ್ಮ ಬಾಂಡೇಜ್ ಹೆಚ್ಚಲಿದೆ. ವಿವಾಹಿತರಲ್ಲಿ ಪ್ರೀತಿ, ಸಂತೋಷ ತುಂಬಿರಲಿದೆ. ಮಾತುಕತೆ ಚೆನ್ನಾಗಿಟ್ಟುಕೊಳ್ಳಿ. ಯಾವುದೇ ವಿಷಯವನ್ನು ಗೊಂದಲ(ambiguity)ದಲ್ಲಿಡಬೇಡಿ. 

Follow Us:
Download App:
  • android
  • ios