Asianet Suvarna News Asianet Suvarna News

Gemstones for Success: ನಿಮ್ಮ ವೃತ್ತಿಗೆ ಯಶಸ್ಸು ತಂದುಕೊಡುವ ರತ್ನ ಯಾವುದು ತಿಳಿಯಿರಿ

ಪ್ರತಿ ರತ್ನಗಳೂ ಕೆಲವು ವೃತ್ತಿಗೆ ಚೆನ್ನಾಗಿ ಹೊಂದಿ ಬರುತ್ತವೆ. ಯಶಸ್ಸಿಗಾಗಿ ನಿಮ್ಮ ವೃತ್ತಿಗೆ ಹೊಂದುವ ರತ್ನ ಯಾವುದು ತಿಳಿದುಕೊಳ್ಳಿ. 

Chose Gemstones According To Profession for success skr
Author
Bangalore, First Published Dec 12, 2021, 12:24 PM IST

ಜ್ಯೋತಿಷ್ಯ ಶಾಸ್ತ್ರ(astrology)ದ ಪ್ರಕಾರ, ಸರಿಯಾದ ರತ್ನ(gemstone)ಗಳನ್ನು ಸರಿಯಾದ ರೀತಿಯಲ್ಲಿ ಧರಿಸುವುದರಿಂದ ಅವು ಬದುಕಿನಲ್ಲಿ ಪವಾಡವನ್ನೇ ಮಾಡಬಹುದು. ನವಗ್ರಹಗಳ ಚಲನೆ ನಮ್ಮ ಬದುಕಿನ ಆಗುಹೋಗುಗಳಿಗೆ ಮೂಲ ಕಾರಣ. ಅವು ತಂದಿಡುವ ಸಮಸ್ಯೆಗೆ ಏನಾದರೂ ಪರಿಹಾರ ಇರಲೇಬೇಕಲ್ಲ, ಪೂಜೆಪುನಸ್ಕಾರಗಳು ಒಂದಾದರೆ, ಸರಿಯಾದ ಜೆಮ್ ಸ್ಟೋನ್ ಧರಿಸುವುದು ಕೂಡಾ ಒಳಿತು ಮಾಡಲಿವೆ. ಪ್ರತಿಯೊಂದು ರತ್ನವೂ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳನ್ನ ಬೀರುತ್ತವೆ. ಆದರೆ, ನಮಗೆ ಧನಾತ್ಮಕವಾಗಿ ಹೊಂದುವ ರತ್ನ ಯಾವುದು ಎಂದು ಅರಿತು ಧರಿಸುವದರಿಂದ ಯಶಸ್ಸಿನ ಮೆಟ್ಟಿಲು ಹತ್ತಲು ಸಾಧ್ಯವಾಗುತ್ತದೆ. ನಿಮ್ಮ ವೃತ್ತಿಗೆ ಯಾವ ರತ್ನ ಹೊಂದುತ್ತದೆ ಎಂದು ಕಂಡುಕೊಳ್ಳಿ. 

ಮಾಣಿಕ್ಯ(Ruby)
ಮಾಣಿಕ್ಯದ ಶಕ್ತಿ ಅಪಾರ. ಇದು ಬಹುತೇಕ ಎಲ್ಲರನ್ನೂ ಆಕರ್ಷಿಸುತ್ತದೆ. ಹಿಂದೂ ಧರ್ಮದಲ್ಲಿ ಮಾಣಿಕ್ಯಕ್ಕೆ ಬಹಳ ಪ್ರಾಮುಖ್ಯತೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾಣಿಕ್ಯವು ಎಲ್ಲ ರಾಶಿಗಳ ರಾಜನಾಗಿರುವ ಸೂರ್ಯನ ರತ್ನ. ಸೂರ್ಯನು ಶಕ್ತಿಗಳ ಮೂಲ ಹಾಗೂ ಈ ಜಗತ್ತಿನ ಆತ್ಮ. ರತ್ನವು ಸೂರ್ಯನ ಎನರ್ಜಿ ಎಳೆದುಕೊಳ್ಳುವುದರಿಂದ ಇದು ಎಲ್ಲ ರತ್ನಗಳಿಗಿಂತಲೂ ಹೆಚ್ಚು ಶಕ್ತಿಶಾಲಿ ರತ್ನ. 
ಸರ್ಕಾರಿ ನೌಕರರು(government employees), ಸಚಿವರು, ಅಧಿಕಾರಿ ವರ್ಗದವರು, ಅರಣ್ಯ ಇಲಾಖೆ ಉದ್ಯೋಗಿಗಳು, ವೈದ್ಯ ರಂಗದಲ್ಲಿರುವವರು, ಮೂಳೆ ಹಾಗೂ ಹೃದಯ ತಜ್ಞರು, ಕಾಂಟ್ರ್ಯಾಕ್ಟರ್‌ಗಳಿಗೆ ರೂಬಿ ಒಳ್ಳೆಯದಾಗಿ ಬರುತ್ತದೆ. 
ಹೇಗೆ ಧರಿಸಬೇಕು?: ಬಂಗಾರದ ಉಂಗುರದಲ್ಲಿ ಸೇರಿಸಿಕೊಂಡು ಬಲಗೈಯ ಉಂಗುರ ಬೆರಳಿಗೆ ಭಾನುವಾರದಂದು ಧರಿಸಿ. 

Chose Gemstones According To Profession for success skr

ಮುತ್ತು(Pearl)
ಕಡಲಿನ ಆಳದಲ್ಲಿ ಸಿಗುವ ರತ್ನವಿದು. ಕ್ಯಾಲ್ಶಿಯಂ ಕಾರ್ಬೋನೇಟ್‌ನಿಂದ ಮಾಡಲ್ಪಟ್ಟಿರುವ ಇದು ಶ್ವೇತ ವರ್ಣದಲ್ಲಿರುತ್ತದೆ. ಕೆಲವೊಂದು ಮುತ್ತುಗಳು ಹಳದಿ, ನೀಲಿ, ಗುಲಾಬಿ, ಬೆಳ್ಳಿಯ ಬಣ್ಣದಲ್ಲಿರುವುದೂ ಇದೆ. ಮುತ್ತು ಚಂದ್ರನ ರತ್ನವಾಗಿದ್ದು, ಭಾವನೆಗಳು, ಸ್ವಭಾವ(character), ದೂರದೃಷ್ಟಿ ಹಾಗೂ ಸಂಪತ್ತು ಇದಕ್ಕೆ ಸಂಬಂಧಿಸಿರುತ್ತದೆ. ಬೆಳ್ಳಿ(silver), ನೀರಿನ ವ್ಯವಹಾರ ನಡೆಸುತ್ತಿರುವವರು, ಟ್ರಾವೆಲ್ ಏಜೆನ್ಸಿ ಹೊಂದಿರುವವರು, ಕೃಷಿಕರು, ಆಹಾರ ಉತ್ಪನ್ನಗಳು ಹಾಗೂ ಅಕ್ಕಿಯ ವ್ಯಾಪಾರ ಮಾಡುವವರಿಗೆ, ಮನಶಾಸ್ತ್ರಜ್ಞರಿಗೆ(psychologist), ಹೆರಿಗೆ ತಜ್ಞರಿಗೆ ಮುತ್ತು ಒಳ್ಳೆಯದಾಗಿಬರುತ್ತದೆ. 
ಹೇಗೆ ಧರಿಸಬೇಕು?: ಬೆಳ್ಳಿಯ ಉಂಗುರಕ್ಕೆ ಸೇರಿಸಿಕೊಂಡು ಬಲಗೈ ಕಿರಬೆರಳಿಗೆ ಸೋಮವಾರದಂದು ಹಾಕಿಕೊಳ್ಳಬೇಕು. 

Chose Gemstones According To Profession for success skr

Marriage Horoscope 2022: ಈ ರಾಶಿಗಳಿಗೆ ಕೂಡಿ ಬರಲಿದೆ ಕಂಕಣ

ಕೆಂಪು ಹವಳ(Red Coral)
ಕೆಂಪು ಹವಳವು ಮಂಗಳ(Mars)ಕ್ಕೆ ಸಂಬಂಧಿಸಿದುದಾಗಿದೆ. ಮಂಗಳನು ಗ್ರಹ ವ್ಯವಸ್ಥೆಯ ಮುಖ್ಯಸೇನಾನಿಯಾಗಿದ್ದು, ಶಕ್ತಿ, ರಕ್ತ ಸಂಚಲನ, ಆಸೆಗಳನ್ನು ಪ್ರತಿನಿಧಿಸುತ್ತದೆ. ಮೆಟಲ್ಲರಿ ಎಂಜಿನಿಯರ್‌ಗಳಿಗೆ, ಆಸ್ತಿ ಡೀಲರ್‌ಗಳಿಗೆ, ಎಲೆಕ್ಟ್ರಿಶಿಯನ್, ವಕೀಲರಿಗೆ, ಸರ್ಜನ್‌ಗಳು ಹಾಗೂ ಶಸ್ತ್ರಾಸ್ತ ತಯಾರಿಕೆಯಲ್ಲಿರುವವರಿಗೆ ಕೆಂಪು ಹವಳ ಧನಾತ್ಮಕ ಶಕ್ತಿ ನೀಡುತ್ತದೆ. 
ಹೇಗೆ ಧರಿಸಬೇಕು?: ತಾಮ್ರ ಅಥವಾ ಬಂಗಾರದ ಉಂಗುರದಲ್ಲಿ ಸೇರಿಸಿಕೊಂಡು ಮಂಗಳವಾರ(Tuesday) ಬಲಗೈಯ ಉಂಗುರ ಬೆರಳಲ್ಲಿ ಧರಿಸಿ. 

Astrological Remedies: ತಡ ವಿವಾಹಕ್ಕೆ ಕೆಲ ಪರಿಹಾರಗಳು

ಪಚ್ಚೆ(Emerald)
ಇದು ರತ್ನಗಳಲ್ಲೇ ಅತಿ ಸುಂದರವಾದುದು ಹಾಗೂ ಆಕರ್ಷಕವಾದುದು. ಬೆರಿಲ್ ಹಾಗೂ ಕೋರಿಯಂನಿಂದಾಗಿರುವುದರಿಂದ ಇದು ನೀಲಿ ಹಾಗೂ ಹಸಿರು ಮಿಶ್ರಣವಾಗಿ ಪ್ರತಿಫಲಿಸುತ್ತದೆ. ಜ್ಯೋತಿಷ್ಯದ ಪ್ರಕಾರ ಇದು ಬುಧ(mercury) ಗ್ರಹವನ್ನು ಪ್ರತಿನಿಧಿಸುತ್ತದೆ. ಬುಧವು ವ್ಯಕ್ತಿಯ ಜ್ಞಾನ ಹಾಗೂ ತೀರ್ಪು ನೀಡುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಸಂವಹನ, ಚರ್ಮ, ಇಂದ್ರಿಯ ವ್ಯವಸ್ಥೆಗೂ ಸಂಬಂಧಿಸಿದ ಗ್ರಹ ಇದಾಗಿದೆ. ಪಚ್ಚೆಯು ಪಾಲಿಸಿ ಏಜೆಂಟ್‌ಗಳು, ಬರವಣಿಗೆ ವೃತ್ತಿಯಲ್ಲಿರುವವರು, ಬ್ರೋಕರ್ಸ್, ಅಕೌಂಟೆಂಟ್‌ಗಳು, ಪಬ್ಲಿಶರ್ಸ್, ಶಿಕ್ಷಕರು, ಬ್ಯಾಂಕ್ ಉದ್ಯೋಗಿಗಳು, ಕೊರಿಯರ್ ಏಜೆನ್ಸಿ ನಡೆಸುವವರು ಹಾಗೂ ಎಂಜಿನಿಯರ್‌ಗಳಿಗೆ ಆಗಿ ಬರುತ್ತದೆ. 
ಹೇಗೆ ಧರಿಸಬೇಕು?: ಚಿನ್ನದ ಉಂಗುರದಲ್ಲಿ ಸೇರಿಸಿ ಬುಧವಾರ(Wednesday)ದ ದಿನ ಬಲಗೈಯ ಕಿರುಬೆರಳಿಗೆ ಧರಿಸಿ. 

Chose Gemstones According To Profession for success skr

ಹಳದಿ ನೀಲಮಣಿ(Yellow Sapphire)
ತಿಳಿಹಳದಿ ಬಣ್ಣದ ಈ ರತ್ನ ಗುರು ಗ್ರಹವನ್ನು ಪ್ರತಿನಿಧಿಸುತ್ತದೆ. ಗುರುವು ಗ್ರಹವ್ಯವಸ್ಥೆಗೆ ಗುರುವಾಗಿದ್ದಾನೆ. ಇದು ವ್ಯಕ್ತಿಯ ಜೀವನದಲ್ಲಿ ಸುಖ, ಸಂಪತ್ತು, ವಿವಾಹಗಳಿಗೆ ಕಾರಣವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ, ಬ್ಯಾಂಕ್ ಉದ್ಯೋಗಿಗಳಿಗೆ, ಮ್ಯಾನೇಜರ್‌ಗಳಿಗೆ, ಆಧ್ಯಾತ್ಮ ಗುರುಗಳಿಗೆ, ಕನ್ಸ‌ಲ್ಟೆಂಟ್‌ಗಳಿಗೆ ಹಳದಿ ನೀಲಮಣಿ ಒಳ್ಳೆಯದು ಮಾಡುತ್ತದೆ. 
ಹೇಗೆ ಧರಿಸಬೇಕು?: ಚಿನ್ನದ ಉಂಗುರದಲ್ಲಿ ಸೇರಿಸಿ ಗುರುವಾರ(Thursday)ದಂದು ಬಲಗೈಯ ತೋರುಬೆರಳಿಗೆ ಧರಿಸಿ. 

Chose Gemstones According To Profession for success skr

ವಜ್ರ(Diamond)
ಇದು ರತ್ನಗಳ ಚಕ್ರವರ್ತಿ. ಅತಿ ಗಟ್ಟಿಯಾದ ಖನಿಜವಾಗಿದ್ದು, ಶುಕ್ರನನ್ನು ಪ್ರತಿನಿಧಿಸುತ್ತದೆ. ಶುಕ್ರನು ವಿವಾಹದ ನಂತರದ ಸಂತಸ, ಶ್ರೀಮಂತಿಕೆಗೆ ಕಾರಣನಾಗಿದ್ದಾನೆ. ನೆನಪುಗಳು ಹಾಗೂ ಸೃಜನಶೀಲತೆಗೂ ಕಾರಣ ಇವನೇ. ವಜ್ರವು ಚಿತ್ರೋದ್ಯಮದಲ್ಲಿರುವವರು, ಗಾಯಕರು, ಆಭರಣ ಮಾರಾಟಗಾರರು, ಫೋಟೋಗ್ರಾಫರ್ಸ್, ಹೋಟೆಲ್ ಉದ್ಯಮ, ಸೇವಾ ಉದ್ಯಮ, ಜಾಹಿರಾತು ಉದ್ಯಮದಲ್ಲಿರುವವರು, ಬ್ಯೂಟಿ ಪಾರ್ಲರ್ ಹೊಂದಿರುವವರು, ಫ್ಯಾಶನ್ ಹಾಗೂ ಮಾಡೆಲಿಂಗ್ ಇಂಡಸ್ಟ್ರಿಯಲ್ಲಿರುವವರು, ಕಾಸ್ಮೆಟಿಕ್, ಹೂವಿನ ವ್ಯಾಪಾರ, ಆರ್ಕಿಟೆಕ್ಟ್‌ಗಳಿಗೆ ಧನಾತ್ಮಕ ಫಲಿತಾಂಶ ನೀಡುತ್ತದೆ. 
ಹೇಗೆ ಧರಿಸಬೇಕು?: ಚಿನ್ನ ಅಥವಾ ಬೆಳ್ಳಿ ಇಲ್ಲವೇ ಪ್ಲ್ಯಾಟಿನಂ ಉಂಗುರದಲ್ಲಿ ಸೇರಿಸಿ ಶುಕ್ರವಾರ(Friday)ದಂದು ಬಲಗೈಯ ಕಿರುಬೆರಳಿಗೆ ಧರಿಸಬೇಕು. 

Chose Gemstones According To Profession for success skr

ನೀಲಮಣಿ(Sapphire)
ಅತಿ ಬಲಶಾಲಿ ಹಾಗೂ ವೇಗವಾಗಿ ಪ್ರತಿಕ್ರಿಯಿಸುವ ನೀಲಿ ಬಣ್ಣದ ಹರಳಿದು. ಇದು ಹಲವರಿಗೆ ಅತಿ ಬೇಗ ಪ್ರತಿಕ್ರಿಯಿಸಿ ಧನಸಂಪತ್ತು ಕರುಣಿಸಿ, ಯಶಸ್ಸು ನೀಡಿ, ಸಮಸ್ಯೆಗಳನ್ನು ಪರಿಹರಿಸುತ್ತದೆ. ಇದು ಶನಿ ಗ್ರಹಕ್ಕೆ ಸಂಬಂಧಿಸಿದೆ. ಶನಿಯು ವ್ಯಕ್ತಿಯ ಕಾರ್ಯಗಳಿಗನುಗುಣವಾಗಿ ಫಲಿತಾಂಶ ನೀಡುವವನು. ರಬ್ಬರ್ ಇಂಡಸ್ಟ್ರಿ, ಡೆಂಟಿಸ್ಟ್, ರೈತರು, ಪೆಟ್ರೋಲಿಯಂ ಉತ್ಪನ್ನಗಳ ಸಂಬಂಧಿ ಉದ್ಯೋಗದಲ್ಲಿರುವವರು, ಮಾನವ ಸಂಪನ್ಮೂಲ, ಮೆಟಲ್ ಇಂಡಸ್ಟ್ರಿಯಲ್ಲಿರುವವರಿಗೆ ನೀಲಮಣಿ ಒಳ್ಳೆಯದು. 
ಹೇಗೆ ಧರಿಸಬೇಕು?: ಪಂಚಧಾತುವಿನಿಂದ ಮಾಡಿದ ರಿಂಗ್‌ಗೆ ಸೇರಿಸಿ ಶನಿವಾರ(Saturday)ದಂದು ಬಲಗೈಯ ಮಧ್ಯದ ಬೆರಳಿಗೆ ಧರಿಸಿ. 

Chose Gemstones According To Profession for success skr

Follow Us:
Download App:
  • android
  • ios