Asianet Suvarna News Asianet Suvarna News

Lizard Falling Meaning: ಹಲ್ಲಿ ಮೈ ಮೇಲೆ ಎಲ್ಲಿ ಬಿದ್ದರೆ ಏನರ್ಥ ತಿಳ್ಕೊಳಿ..

ಗೌಳಿ ಪಂಚಾಂಗದಂತೆ ಹಲ್ಲಿಗಳು ದೇಹದ ಕೆಲ ಭಾಗದ ಮೇಲೆ ಬಿದ್ದಾಗ ಶುಭ ಸೂಚನೆಯಾಗಿದ್ದರೆ, ಮತ್ತೆ ಕೆಲ ಭಾಗದ ಮೇಲೆ ಬಿದ್ದು ಅಶುಭದ ಸೂಚನೆ ನೀಡುತ್ತವೆ. ಎಲ್ಲಿ ಬಿದ್ದರೆ ಏನರ್ಥ ಎಂದು ಇಲ್ಲಿ ತಿಳಿಯಿರಿ. 

Lizard falling on body can be a hint of likely events skr
Author
Bangalore, First Published Dec 13, 2021, 4:25 PM IST

ಹಲ್ಲಿ ಮೈ ಮೇಲೆ ಬಿದ್ದರೆ ಅದು ಶಕುನ(omen) ಹೇಳುತ್ತಿದೆ ಎಂಬ ನಂಬಿಕೆ ನಮ್ಮ ಭಾರತೀಯರಲ್ಲಿದೆ. ಗೌಳಿ ಪಠಣ ಶಾಸ್ತ್ರದಲ್ಲಿ ಹಲ್ಲಿಯು ದೇಹದ ಒಂದೊಂದು ಭಾಗಕ್ಕೆ ಬಿದ್ದಾಗ ಒಂದೊಂದು ಶಕುನವನ್ನು ಸೂಚಿಸುತ್ತದೆ. ಗೌಳಿ ಪಂಚಾಂಗದಲ್ಲಿ ಹೇಳಿರುವಂತೆ ಹಲ್ಲಿ ಬಿದ್ದ ಸಮಯ ಹಾಗೂ ಬಿದ್ದ ಭಾಗದಿಂದ ನಮ್ಮ ಬದುಕಿನಲ್ಲಿ ಮುಂದಾಗಲಿರುವ ಘಟನೆಯ ಸೂಚನೆ ಪಡೆದುಕೊಳ್ಳಬಹುದು. 

ಸಾಮಾನ್ಯವಾಗಿ, ಹೆಂಗಸಿರಿಗೆ ದೇಹದ ಎಡ ಭಾಗದ ಮೇಲೆ, ಪುರುಷರಿಗೆ ದೇಹದ ಬಲ ಭಾಗದಲ್ಲಿ ಹಲ್ಲಿ ಬಿದ್ದರೆ ಒಳ್ಳೆಯದಾಗುತ್ತದೆ ಎಂದೂ, ಇದು ತಿರುವು ಮುರುವಾದರೆ ಕೆಟ್ಟದಾಗುತ್ತದೆ ಎಂದೂ ಹೇಳಲಾಗುತ್ತದೆ. ಹಾಗಾದರೆ ಹಲ್ಲಿ ದೇಹದ ಯಾವ ಭಾಗದ ಮೇಲೆ ಬಿದ್ದರೆ ಏನನ್ನು ಸೂಚಿಸುತ್ತದೆ ನೋಡೋಣ..

ಪುರುಷರಿಗೆ(For men)

  • ಒಂದು ವೇಳೆ ಹಲ್ಲಿಯು ಪುರುಷರ ತಲೆ(head)ಯ ಮೇಲೆ ಬಿದ್ದರೆ ವಿವಾದಗಳು ಎದುರಾಗಲಿವೆ. 
  • ಹಲ್ಲಿಯೇನಾದರೂ ನೆತ್ತಿಯ ಮೇಲೆಯೇ ಬಿದ್ದಿತೋ, ಸಾವಿನ ಭಯದ ಮುನ್ಸೂಚನೆ ಅದೆಂದು ಹೇಳಲಾಗುತ್ತದೆ. 
  • ಮುಖ(face)ದ ಮೇಲೆ ಹಲ್ಲಿ ಬಿದ್ದರೆ ಭಯದಿಂದಲ್ಲ, ಖುಷಿಯಿಂದ ಕಿರುಚಿ. ಏಕೆಂದರೆ ಇದು ಮುಂದೆ  ಅನಿರೀಕ್ಷಿತ ಸಂಪತ್ತು ದೊರೆಯುವ ಯೋಗವನ್ನು ಹೇಳುತ್ತಿದೆ. 
  • ಎಡಗಣ್ಣಿ(left eye)ನ ಮೇಲೆ ಬಿದ್ದರೆ ಒಳ್ಳೆಯ ಸುದ್ದಿಯೊಂದು ನಿಮಗಾಗಿ ಕಾದಿದೆಯೆಂದೂ, ಬಲಗಣ್ಣಿನ ಮೇಲೆ ಬಿದ್ದರೆ ನೀವು ಕೈಗೊಂಡ ಕೆಲಸವು ವಿಫಲವಾಗಲಿದೆಯೆಂದೂ ಅರ್ಥ. 
  • ಹಲ್ಲಿಯು ನಿಮ್ಮ ಹಣೆಯ ಮೇಲೆ ಬಿದ್ದರೆ ಹಣೆಬರಹವೇ ಬದಲಾಗಲಿದೆ. ಯಾಕೆಂದರೆ, ನಿಮ್ಮ ಪ್ರೀತಿಪಾತ್ರರಿಂದ ದೂರಾಗಲಿರುವುದರ ಮುನ್ಸೂಚನೆ ಇದಾಗಿದೆ. 
  • ಹಲ್ಲಿಯೇನಾದರೂ ನಿಮ್ಮ ಬಲಗೆನ್ನೆಯ ಮೇಲೆ ಬಿದ್ದರೆ ಅಂದು ನೀವು ಕೆಟ್ಟ ಸುದ್ದಿ(bad news) ಕೇಳಲು ಸಿದ್ಧರಾಗಿ. 
  • ಹಲ್ಲಿಯು ಎಡಗಿವಿಗೆ ತಾಕಿ ಕೆಳ ಬಿದ್ದರೆ ಧನಲಾಭ(money gain)ದ ನಿರೀಕ್ಷೆ ಇಟ್ಟುಕೊಳ್ಳಬಹುದು. 
  • ಹಲ್ಲಿಯು ತುಟಿಗೆ ತಾಕಿದರೆ ಯಾರದೋ ಸಾವಿನ ಸುದ್ದಿ ಕೇಳಬೇಕಾಗಿ ಬರಬಹುದು. 
  • ಎಡ ಬೆನ್ನಿನ ಮೇಲೆ ಹಲ್ಲಿ ಬಿದ್ದರೆ ಯಶಸ್ಸು(success) ಇಲ್ಲವೇ ಲಾಭ ನಿಮಗೆ ಲಭಿಸಿಯೇ ಸಿದ್ಧ. 
  • ಹಲ್ಲಿಯು ಕನಸಿನಲ್ಲಿ ಬಂದರೆ ಸರ್ಕಾರಕ್ಕೆ ಹೆದರಬೇಕಾದ ಸಂದರ್ಭವಿದೆ ಎಂದರ್ಥ.

    ರೇವತಿ ನಕ್ಷತ್ರದಲ್ಲಿ Kashi Vishwanath Corridor ಉದ್ಘಾಟಿಸಿದ ಮೋದಿ, ಹೀಗಿದೆ ಈ ನಕ್ಷತ್ರದ ಮಹತ್ವ!
     
  • ಮೊಣಕೈ ಮೇಲೆ ಬಿದ್ದರೆ ಮನೆ ನವೀಕರಣ(renovation) ಕೆಲಸ ಕೈಗೊಳ್ಳಲಿರುವಿರಿ ಎಂಬ ಸೂಚನೆ.
  • ಬಲ ತೋಳಿನ ಮೇಲೆ ಹಲ್ಲಿ ಬಿದ್ದರೆ ಹಣ ಕಳೆದುಕೊಳ್ಳುವುದರ ಮುನ್ಸೂಚನೆಯದು. ಎಡ ತೋಳಿನ ಮೇಲೆ ಬಿದ್ದರೆ ಅವಮಾನ ಎದುರಿಸಬೇಕಾಗುತ್ತದೆ.
  • ಹಲ್ಲಿಯು ಬೆರಳುಗಳ ಮೇಲೆ ಬಿದ್ದರೆ ಹಳೆ ಗೆಳೆಯರನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.
  • ಹಲ್ಲಿಯು ಕಾಲಿನ ಮೇಲೆ ಬಿದ್ದರೆ ಸವಾಲಿನ ದಿನಗಳನ್ನು ಕಳೆಯಬೇಕಾಗಿದೆ ಎಂದರ್ಥ.
  • ಕಾಲಿನ ಹಿಂಭಾಗಕ್ಕೆ ತಾಕಿ ಬಿದ್ದರೆ, ಪ್ರವಾಸಕ್ಕೆ ಸಿದ್ಧರಾಗಿ. 

ಮಹಿಳೆಯರಿಗೆ(For women)

  • ಹಲ್ಲಿಯು ಮಹಿಳೆಯ ತಲೆಯ ಮೇಲೆ ಬಿದ್ದರೆ ಸಾವ ಭಯ(fear of death) ಕಾಡಲಿದೆ. 
  • ಕೂದಲ ಮೇಲೆ ಬಿದ್ದರೆ ಅನಾರೋಗ್ಯ ಸಂಬಂಧಿ ಗೊಂದಲಗಳು ಹೆಚ್ಚಲಿವೆ ಎಂದರ್ಥ.
  • ಎಡಗಣ್ಣಿನ ಮೇಲೆ ಬಿದ್ದರೆ ನಿಮ್ಮ ಪ್ರೇಮಿ ನಿಮ್ಮನ್ನು ಪ್ರೇಮಿಸುತ್ತಾನೆಂದೂ, ಬಲಗಣ್ಣಿನ ಮೇಲೆ ಬಿದ್ದರೆ ಮಾನಸಿಕ ಒತ್ತಡ(mental stress)ಗಳನ್ನು ಎದುರಿಸಬೇಕಾಗಿಲಿದೆ ಎಂದೂ ಸೂಚನೆ.

    Good Luck : ಹೊಸ ವರ್ಷದಂದು ಈ ವಸ್ತುಗಳನ್ನು ಮನೆಗೆ ತಂದರೆ ಸದಾ ಸಂತೋಷ
     
  • ಬಲಗೆನ್ನೆಯ ಮೇಲೆ ಹಲ್ಲಿ ಬಿದ್ದರೆ ಅಥವಾ ಕಾಲ್ಬೆರಳುಗಳ ಮೇಲೆ ಬಿದ್ದರೆ ನಿಮಗೆ ಗಂಡು ಮಗುವಾಗಲಿದೆ.
  • ಬಲಗಿವಿಯ ಮೇಲೆ ಹಲ್ಲಿ ಬಿದ್ದರೆ ಆರ್ಥಿಕ ಲಾಭಗಳು ನಿಮ್ಮ ದಾರಿಯಲ್ಲಿವೆ. 
  • ತುಟಿ(lips)ಗೆ ತಾಕಿ ಹಲ್ಲಿ ಬಿದ್ದರೆ ವಿವಾದಗಳು ಮೈಮೇಲೆ ಬೀಳುವ ಸಾಧ್ಯತೆ ನಿಚ್ಚಳವಾಗಿದೆ. 
  • ಬೆನ್ನಿನ ಮೇಲೆ ಹಲ್ಲಿ ಬಿದ್ದರೆ ಸಾವಿನ ಸುದ್ದಿ ಕೇಳಬೇಕಾಗುತ್ತದೆ. 
  • ಕೈಗಳ ಮೇಲೆ ಬಿದ್ದರೆ ಧನಲಾಭ ಕಟ್ಟಿಟ್ಟ ಬುತ್ತಿ. 
  • ಹಲ್ಲಿಯು ಬೆರಳುಗಳ ಮೇಲೆ ಬಿದ್ದರೆ ಅಥವಾ ಭುಜದ ಮೇಲೆ ತಾಕಿ ಬಿದ್ದರೆ ಹೊಸ ಆಭರಣ(jewels)ಗಳನ್ನು ಪಡೆಯಲಿದ್ದೀರಿ ಎಂದರ್ಥ.
  • ಬಲತೋಳಿನ ಮೇಲೆ ಬಿದ್ದರೆ ಅಥವಾ ತೊಡೆಗೆ ತಾಕಿದರೆ ಸರಸ ಸಂದರ್ಭಗಳು ಹೆಚ್ಚಲಿವೆ.
  • ಹಲ್ಲಿಯು ಕಾಲುಗಂಟಿಗೆ ತಾಕಿದರೆ, ಪ್ರೀತಿಯು ನಿಮ್ಮನ್ನು ಅರಸಿ ಬರಲಿದೆ.
  • ಕಾಲಿನ ಸ್ನಾಯುಗಳ ಮೇಲೆ ಹಲ್ಲಿ ಬಿದ್ದರೆ ಮನೆಗೆ ನೆಂಟರು ಬರುತ್ತಾರೆಂಬ ಸೂಚನೆ.
  • ಬಲಗಾಲಿಗೆ ಹಲ್ಲಿ ತಾಕಿದರೆ ಸೋಲು(failure)ಗಳನ್ನು ಎದುರಿಸಬೇಕಾಗುವುದು.

 

Follow Us:
Download App:
  • android
  • ios