ಈ ವಸ್ತುಗಳನ್ನು ಪರ್ಸ್‌ನಲ್ಲಿರಿಸಿದರೆ, ಹಣದ ಅಭಾವ ಕಾಡದು!

ಕೆಲವು ವಸ್ತುಗಳಿಗೆ ವಿಶೇಷ ಶಕ್ತಿಯೂ, ಹಿಂದೂ ಧರ್ಮದಲ್ಲಿ ಮಹತ್ವವೂ ಇರುತ್ತದೆ. ಅವನ್ನು ಪರ್ಸ್‌ನಲ್ಲಿಟ್ಟುಕೊಂಡರೆ ಎಂದಿಗೂ ಹಣದ ಕೊರತೆಯುಂಟಾಗದು. 

Keep this thing in your purse Pockets will never be empty skr

ಇಂದು ಅತ್ಯಂತ ಮುಖ್ಯವಾದ ವಿಷಯವೆಂದರೆ ಹಣ. ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ಹಣವಿದ್ದರೆ ಇಂದು ನೀವು ಎಲ್ಲವನ್ನೂ ಹೊಂದಬಹುದು ಎಂಬುದು ವಾಸ್ತವ. ಹಾಗಾಗಿಯೇ ಹಣವನ್ನು ಬೇಡವೆನ್ನುವವರು ಯಾರೂ ಸಿಗುವುದಿಲ್ಲ. ಹಣದಿಂದ ಜೀವನದ ಎಲ್ಲ ಸೌಕರ್ಯಗಳನ್ನು ಖರೀದಿಸಬಹುದು. ಹಣವು ನಿಮ್ಮ ಕುಟುಂಬವನ್ನು ಸಂತೋಷವಾಗಿರಿಸುತ್ತದೆಯೋ ಇಲ್ಲವೋ ಕಂಫರ್ಟನ್ನಂತೂ ನೀಡುತ್ತದೆ. ಸುರಕ್ಷತೆಯನ್ನು ಕೊಡುತ್ತದೆ. 

ಇಲ್ಲಿ ನಿಮಗೆ ಏಳು ವಿಷಯಗಳ ಬಗ್ಗೆ ಹೇಳಲಿದ್ದೇವೆ, ಅವುಗಳಲ್ಲಿ ಯಾವುದನ್ನಾದರೂ ಒಂದನ್ನು ನೀವು ಅನುಸರಿಸಿದರೂ ಪರ್ಸ್‌ನಲ್ಲಿ ನಿಮ್ಮ ಹಣಕ್ಕೆ ಎಂದಿಗೂ ಕೊರತೆಯಾಗುವುದಿಲ್ಲ ಮತ್ತು ತಾಯಿ ಲಕ್ಷ್ಮಿಯ ಕೃಪೆಯು ನಿರಂತರವಾಗಿ ಸುರಿಯುತ್ತದೆ. ಅವೇನೇನು ನೋಡೋಣ.

ತಾಯಿ ಲಕ್ಷ್ಮಿಯ ಫೋಟೋ
ಪರ್ಸ್‌ನಲ್ಲಿ ಕುಳಿತಿರುವ ಭಂಗಿಯಲ್ಲಿರುವ ಲಕ್ಷ್ಮಿಯ ಫೋಟೋವನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡುವುದರಿಂದ ನಿಮ್ಮ ಪರ್ಸ್‌ನಲ್ಲಿ ಹಣವು ಎಂದಿಗೂ ಖಾಲಿಯಾಗುವುದಿಲ್ಲ.

ಈ ವಸ್ತುಗಳನ್ನು ರೂಪಾಯಿಯೊಂದಿಗೆ ಇರಿಸಿ
ಅಶ್ವತ್ಥ ಮರದ ಎಲೆಯೊಂದಿಗೆ ಒಂದು ರೂಪಾಯಿಯಿಟ್ಟು ಪೂಜೆ ಮಾಡಿ. ನಂತರ, ಒಳ್ಳೆಯ ಸಮಯ ನೋಡಿ ಅದನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ನೀವು ಎಂದಿಗೂ ದುಃಖವನ್ನು ಅನುಭವಿಸಬೇಕಾಗಿಲ್ಲ.

ಈ ರಾಶಿಗಳಿಗೆ ವಜ್ರ ಧರಿಸಿದ್ರೆ ಅಪಾಯ ತಪ್ಪಿದ್ದಲ್ಲ!

ಕೆಂಪು ಬಣ್ಣದ ಕಾಗದ
ಕೆಂಪು ಕಾಗದದ ಮೇಲೆ ನಿಮ್ಮ ಆಸೆಯನ್ನು ಬರೆದು, ಅದನ್ನು ರೇಷ್ಮೆ ದಾರದಲ್ಲಿ ಪರ್ಸ್‌ನಲ್ಲಿ ಗಂಟನ್ನು ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಆಸೆ ಬೇಗ ಈಡೇರುತ್ತದೆ.

ಅಕ್ಕಿ
ಹಿಂದೂ ಧರ್ಮದಲ್ಲಿ ಅಕ್ಕಿಗೆ ವಿಶೇಷ ಮಹತ್ವವಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಒಂದು ಚಿಟಿಕೆ ಅಕ್ಕಿಯನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಂಡರೆ, ನೀವು ಎಂದಿಗೂ ಹಣವನ್ನು ವ್ಯರ್ಥ ಮಾಡುವುದಿಲ್ಲ ಮತ್ತು ಹಣದ ಕೊರತೆಯಿರುವುದಿಲ್ಲ ಎಂದು ಹೇಳಲಾಗುತ್ತದೆ.

ಆಶೀರ್ವಾದ ಹಣ
ಪೋಷಕರು ಅಥವಾ ಹಿರಿಯರಿಂದ ಆಶೀರ್ವಾದವಾಗಿ ಹಣ ಪಡೆದರೆ, ಆ ಹಣಕ್ಕೆ ಕುಂಕುಮ ಮತ್ತು ಅರಿಶಿನವನ್ನು ಹಾಕಬೇಕು. ನಂತರ ಅದನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು. ಹಿರಿಯರ ಆಶೀರ್ವಾದದಿಂದ ನಿಮ್ಮ ಪರ್ಸ್ ಎಂದಿಗೂ ಖಾಲಿಯಾಗುವುದಿಲ್ಲ.

ಗೋಮತಿ ಚಕ್ರ
ನೀವು ನಿಮ್ಮ ಪರ್ಸ್‌ನಲ್ಲಿ ಹಣವನ್ನು ಗೋಮತಿ ಚಕ್ರದೊಂದಿಗೆ ಇಟ್ಟುಕೊಳ್ಳಬೇಕು. ಇದರಿಂದ ನಿಮ್ಮ ಸಂಪತ್ತು ಎಂದೂ ಕರಗದು. ಜೊತೆಗೆ, ಹಣದ ಅನಗತ್ಯ ಖರ್ಚುಗಳು ನಿಲ್ಲಲಿವೆ. 

ದಾಂಪತ್ಯ ಸುಖ, ಆರ್ಥಿಕ ವೃದ್ಧಿಗಾಗಿ ಇರುವೆ ಮೇಲೆ ತೋರಿ ಪ್ರೀತಿ

ಇವೂ ಕೂಡಾ
ಲಕ್ಷ್ಮಿಗೆ ಸಂಬಂಧಿಸಿದ ಗೋಮತಿ ಚಕ್ರ, ಕಮಲಗಟ್ಟ, ಬೆಳ್ಳಿ ನಾಣ್ಯ ಇತ್ಯಾದಿಗಳನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದು. ಇವುಗಳಲ್ಲಿ ಯಾವುದನ್ನಾದರೂ ನಿಮ್ಮ ಪರ್ಸ್‌ನಲ್ಲಿ ಹಾಕುವ ಮೊದಲು, ಅದನ್ನು ಸ್ವಲ್ಪ ಸಮಯದವರೆಗೆ ಲಕ್ಷ್ಮೀಯ ಪಾದತಲದಲ್ಲಿ ಇರಿಸಿ ಪೂಜಿಸಿ. ಹೀಗೆ ಮಾಡುವುದರಿಂದ ಹಣದ ಕೊರತೆ ಬರುವುದಿಲ್ಲ ಎಂದು ಹೇಳಲಾಗುತ್ತದೆ.

ಹಾಗೆಯೇ ಪರ್ಸ್‌ನಲ್ಲಿ ಈ ಕೆಲ ವಸ್ತುಗಳನ್ನು ಇಟ್ಟುಕೊಳ್ಳಬಾರದು. 

ಸತ್ತವರ ಫೋಟೋ(Photos of the deceased)
ಬಹುತೇಕರಿಗೆ ತಮ್ಮ ಮನಸ್ಸಿಗೆ ಹತ್ತಿರವಾದವರ ಫೋಟೋವನ್ನು ಪರ್ಸ್‌ನಲ್ಲಿಟ್ಟುಕೊಳ್ಳುವುದು ಅಭ್ಯಾಸ. ಆದರೆ, ಎಷ್ಟೇ ಹತ್ತಿರದವರಿರಲಿ, ಆಪ್ತರಿರಲಿ, ತೀರಿಕೊಂಡವರ ಫೋಟೋಗಳನ್ನು ನಮ್ಮ ಪರ್ಸ್‌ನಲ್ಲಿಟ್ಟುಕೊಂಡು ತಿರುಗಬಾರದು. ಇದರಿಂದ ಹಣದ ಕೊರತೆ ಸದಾ ಕೂಡುತ್ತದೆ ಎನ್ನಲಾಗುತ್ತದೆ. 

Astrology Tips : ಪತಿಯ ಸಾಲಕ್ಕೆ ಕಾರಣವಾಗುತ್ತೆ ಪತ್ನಿಯ ಈ ತಪ್ಪು

ಬೀಗ(Keys)
ಸಾಮಾನ್ಯವಾಗಿ ಜನರಿಗೆ ಮನೆಯಿಂದ ಹೊರಡುವಾಗ ಕೀಗಳನ್ನು ಪರ್ಸ್‌ನಲ್ಲಿ ಹಾಕಿಕೊಳ್ಳುವ ಅಭ್ಯಾಸ. ಆದರೆ, ಕೀಗಳನ್ನು ಪರ್ಸ್‌ನಲ್ಲಿಟ್ಟುಕೊಳ್ಳುವುದರಿಂದ ಬದುಕಿಗೆ ನಕಾರಾತ್ಮಕತೆ ಎಳೆದುಕೊಂಡಂತಾಗುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

(ಇಲ್ಲಿ ನೀಡಿದ ಮಾಹಿತಿಯು ಸಾಮಾನ್ಯ ಜನರ ನಂಬಿಕೆಯ ಭಾಗವಾಗಿ ಆಯ್ದವಾಗಿವೆ.)

Latest Videos
Follow Us:
Download App:
  • android
  • ios