Asianet Suvarna News Asianet Suvarna News

ದಾಂಪತ್ಯ ಸುಖ, ಆರ್ಥಿಕ ವೃದ್ಧಿಗಾಗಿ ಇರುವೆ ಮೇಲೆ ತೋರಿ ಪ್ರೀತಿ

ಮನೆಗೆ ಒಂದು ಇರುವೆ ಬಂದ್ರೆ ಸಾಕು ದೊಡ್ಡ ರಂಪಾಟವೇ ಆಗಿಬಿಡುತ್ತೆ. ಸಿಹಿ ಪದಾರ್ಥಕ್ಕೆ ಮುತ್ತುವ ಇರುವೆ ನೋಡಿದ್ರೆ ಕೋಪ ನೆತ್ತಿಗೇರುತ್ತದೆ. ಆದ್ರೆ ಮನೆಗೆ ಬರುವ ಇದೇ ಇರುವೆ ಕೈನಲ್ಲಿ ನಿಮ್ಮ ಅದೃಷ್ಟವಿದೆ ಅಂದ್ರೆ ನಂಬ್ತೀರಾ? 
 

Ants In The House Are Auspicious Or Not
Author
Bangalore, First Published May 21, 2022, 1:23 PM IST

ಮೂರನೇ ಅಂತಸ್ತಿನಲ್ಲಿ ಮನೆ (Home) ಯಿರಲಿ ಇಲ್ಲ ಕೆಳಗಡೆ ಮನೆ ಇರಲಿ, ಇರುವೆ (Ant) ಮಾತ್ರ ಎಲ್ಲ ಕಡೆ ಬರುತ್ತದೆ. ಸಿಹಿ (Sweet) ಇಟ್ಟಲ್ಲೆಲ್ಲ ನುಗ್ಗುವ ಇರುವೆಗಳು ಕೆಲವೊಮ್ಮೆ ಹಾಲಿ (milk) ಗೂ ಮುತ್ತಿಗೆ ಹಾಕುತ್ತವೆ. ಎಲ್ಲರ ಮನೆಯಲ್ಲೂ ಈ ಇರುವೆ ಸಮಸ್ಯೆ ಸಾಮಾನ್ಯ. ಮನೆಗೆ ಬಂದ ಇರುವೆಯನ್ನು ಹೊರಗೆ ಹಾಕೋದೇ ದೊಡ್ಡ ಸಮಸ್ಯೆ ಎನ್ನುತ್ತಾರೆ ಮಹಿಳೆಯರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಇರುವೆಗಳಿಗೂ ಮಹತ್ವದ ಸ್ಥಾನವಿದೆ. ಇರುವೆಗಳನ್ನು ವಿಷ್ಣುವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ, ಕಪ್ಪು ಇರುವೆಗಳ ಸಂಬಂಧವನ್ನು ಶನಿ ಗ್ರಹದೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಇರುವೆಗಳಿಗೆ ಹಿಟ್ಟು ಸುರಿಯುವುದರಿಂದ ವೈಕುಂಠ ಲೋಕದ ಸುಖ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಇರುವೆಗಳಿಗೆ ಹಿಟ್ಟನ್ನು ನೀಡುವುದ್ರಿಂದ ದುರದೃಷ್ಟ ಕೊನೆಗೊಳ್ಳುತ್ತದೆ ಎನ್ನಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಇರುವೆಗಳಿಗೆ ಕೆಲವು ನಿಯಮಗಳನ್ನು ಹೇಳಲಾಗಿದೆ. ಅದೇನು ಎಂಬುದು ಇಲ್ಲಿದೆ.  

ತೆಂಗಿನ ತುರಿ : ಮೊದಲೇ ಹೇಳಿದಂತೆ ಸಿಹಿ ಇದ್ದಲ್ಲಿ ಇರುವೆ ಇದ್ದೇ ಇರುತ್ತದೆ. ಇರುವೆಗೆ ಇಷ್ಟವಾಗುವ ತೆಂಗಿನ ತುರಿಯನ್ನು ಮನೆಗೆ ಬಂದ ಇರುವೆಗಳಿಗೆ ನೀಡಬೇಕೆಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಇದ್ರಿಂದ ಮನೆಯ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.  

VASTU TIPS: ಹೊಸ ಮನೆ ಪ್ರವೇಶ ಹೀಗಾದರೆ ಫಲ ಮಂಗಳಕರ..

ದಾಂಪತ್ಯ ಜೀವನದಲ್ಲಿ ಮೂಡುತ್ತೆ ಸಂತಸ : ದಾಂಪತ್ಯ ಜೀವನದಲ್ಲಿ ಸಮಸ್ಯೆ ಕಾಣಿಸಿಕೊಳ್ತಿದ್ದರೆ ಅದಕ್ಕೆ ನೀವು ಇರುವೆಯಿಂದಲೂ ಪರಿಹಾರ ಕಂಡುಕೊಳ್ಳಬಹುದು. ಅನೇಕ ಬಾರಿ ನಾವು ಮನೆಗೆ ಬಂದ ಇರುವೆಯನ್ನು ಓಡಿಸುವ ಪ್ರಯತ್ನ ಮಾಡ್ತೇವೆ. ಅಪ್ಪಿತಪ್ಪಿಯೂ ಅದಕ್ಕೆ ಸಿಹಿ ನೀಡುವುದಿಲ್ಲ. ಆದ್ರೆ ದಾಂಪತ್ಯದಲ್ಲಿ ಸಿಹಿ ಹೆಚ್ಚಾಗಬೇಕೆಂದ್ರೆ ನೀವು ಇರುವೆಗೆ ಸಿಹಿ ನೀಡ್ಬೇಕು. ಹೌದು, ವಾಸ್ತುಶಾಸ್ತ್ರದ ಪ್ರಕಾರ, ಇರುವೆಗಳಿಗೆ ನೀವು ಸಕ್ಕರೆ ನೀಡಿದ್ರೆ ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ತೊಂದರೆ ಕಾಡುವುದಿಲ್ಲ. ಇದಲ್ಲದೆ, ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯವೂ ಕೊನೆಗೊಳ್ಳುತ್ತದೆ. ದಂಪತಿ ಮಧ್ಯೆ ಸುಖ, ಸಾಮರಸ್ಯ ನೆಲೆಸಿರುತ್ತದೆ. 

ಸೀಮಿತ ಸಂಖ್ಯೆಯ ಇರುವೆಗಳು ಮಂಗಳಕರ : ಮನೆಯಲ್ಲಿ ಇರುವೆ ಕಾಮನ್. ಅನೇಕರ ಮನೆಯಲ್ಲಿ ಇರುವೆಗಳ ಹಾವಳಿ ಮಿತಿ ಮೀರಿರುತ್ತದೆ. ಇರುವೆ ಒಳ್ಳೆಯದು ಎನ್ನುವ ಕಾರಣಕ್ಕೆ ಮನೆಯಲ್ಲಿರುವ ಎಲ್ಲ ಪದಾರ್ಥವನ್ನು ಹಾಳು ಮಾಡಲು ಬಿಡಬೇಡಿ. ಕೆಲವರ ಮನೆಯಲ್ಲಿ ಸೀಮಿತ ಪ್ರಮಾಣದಲ್ಲಿ ಇರುವೆಗಳಿರುತ್ತವೆ. ವಾಸ್ತುಶಾಸ್ತ್ರದ ಪ್ರಕಾರ, ಸೀಮಿತ ಪ್ರಮಾಣದಲ್ಲಿ ಇರುವೆಗಳಿರುವುದು ಮಂಗಳಕರವಂತೆ. ಇದು ಮನೆಯ ಅಭಿವೃದ್ಧಿ ಸೂಚಕ. 

ಕೆಂಪು ಬಣ್ಣದ ಇರುವೆಗಳು ಅಶುಭ : ವಾಸ್ತು ಶಾಸ್ತ್ರದಲ್ಲಿ ಇರುವೆ ಬಣ್ಣಕ್ಕೂ ಮಹತ್ವ ನೀಡಲಾಗಿದೆ. ಯಾವ ಬಣ್ಣದ ಇರುವೆ ಶುಭ, ಯಾವ ಬಣ್ಣದ ಇರುವೆ ಅಶುಭ ಎಂಬುದನ್ನು ತಿಳಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಇರುವೆಗಳಲ್ಲಿ ಕೆಂಪು ಮತ್ತು ಕಪ್ಪು ಎರಡು ವಿಧಗಳಿವೆ. ಮನೆಯಲ್ಲಿ ಕೆಂಪು ಇರುವೆಗಳಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಕಪ್ಪು ಇರುವೆಗಳು ಶುಭವೆಂದು ನಂಬಲಾಗಿದೆ.

Astrology Tips : ಪತಿಯ ಸಾಲಕ್ಕೆ ಕಾರಣವಾಗುತ್ತೆ ಪತ್ನಿಯ ಈ ತಪ್ಪು

ರಾಹು ಮತ್ತು ಶನಿ ಬಲ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇರುವೆಗಳಿಗೆ ಆಹಾರವನ್ನು ನೀಡುವುದರಿಂದ ಜಾತಕದಲ್ಲಿ ರಾಹು ಮತ್ತು ಶನಿಯ ದಶಾ ಬಲಗೊಳ್ಳುತ್ತದೆ. ವ್ಯಕ್ತಿಯ ಜೀವನದಲ್ಲಿ ರಾಹು ಮತ್ತು ಕೇತುಗಳು ಪ್ರಬಲವಾಗಿದ್ದರೆ, ವ್ಯಕ್ತಿಯು ಅನೇಕ ಪ್ರಯೋಜನಗಳನ್ನು ಪಡೆಯುತ್ತಾನೆ. ಜಾತಕದಲ್ಲಿ ರಾಹು ಮತ್ತು ಶನಿ ದುರ್ಬಲವಾಗಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ರಾಹು ಹಾಗೂ ಕೇತು ಮತ್ತು ಶನಿ ಬಲಪಡೆಯಬೇಕೆಂದ್ರೆ ಇರುವೆಗೆ ಆಹಾರ ನೀಡಿ.

ವ್ಯಕ್ತಿಯ ಅದೃಷ್ಟ : ಇರುವೆಗಳು ನಿಮ್ಮ ಮನೆಗೆ ಬಂದರೆ, ನೀವು ಅದಕ್ಕೆ ಏನನ್ನಾದರೂ ತಿನ್ನಲು ನೀಡಬೇಕು. ಇದ್ರಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ. ಪೃಥ್ವಿ ತತ್ವ ಬಲಗೊಳ್ಳುತ್ತದೆ.   
 

Follow Us:
Download App:
  • android
  • ios