Asianet Suvarna News Asianet Suvarna News

Astrology Tips : ಪತಿಯ ಸಾಲಕ್ಕೆ ಕಾರಣವಾಗುತ್ತೆ ಪತ್ನಿಯ ಈ ತಪ್ಪು

ಹಿಂದೂ ಧರ್ಮದಲ್ಲಿ (Hindu Religion) ಪ್ರತಿಯೊಂದಕ್ಕೂ ಮಹತ್ವದ ಸ್ಥಾನವಿದೆ. ಮಹಿಳೆ (Woman) ಧರಿಸುವ ಆಭರಣದ ಬಗ್ಗೆಯೂ ಶಾಸ್ತ್ರದಲ್ಲಿ ಹೇಳಲಾಗಿದೆ. ಕಾಲುಂಗುರದ (Toe Ring) ಬಗ್ಗೆಯೂ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಮಹಿಳೆಯರು ಕಾಲುಂಗುರವನ್ನು ಸರಿಯಾಗಿ ಧರಿಸದೆ ಹೋದ್ರೆ ಸಮಸ್ಯೆ ಎದುರಿಸಬೇಕಾಗುತ್ತದೆ.
 

Jyotish Shastra Women Toe Ring
Author
Bangalore, First Published May 20, 2022, 2:03 PM IST

ಭಾರತೀಯ (Indian) ಸಂಪ್ರದಾಯದಲ್ಲಿ ಅಲಂಕಾರ (Decoration) ಕ್ಕೆ ಹೆಚ್ಚಿನ ಮಹತ್ವವಿದೆ. ಅದರಲ್ಲೂ ಮಹಿಳೆ (Woman) ಯರ ಅಲಂಕಾರಕ್ಕೆ ಆದ್ಯತೆ ನೀಡಲಾಗುತ್ತದೆ. ಯುವತಿಯರ ಅಲಂಕಾರ ಹಾಗೂ ವಿವಾಹಿತ ಮಹಿಳೆಯರ ಅಲಂಕಾರದಲ್ಲಿ ವ್ಯತ್ಯಾಸವಿರುತ್ತದೆ. ಮಹಿಳೆ ಧರಿಸಿದ ಆಭರಣದಿಂದಲೇ ಆಕೆ ವಿವಾಹಿತೆ ಎಂಬುದನ್ನು ಕಂಡು ಹಿಡಿಯಬಹುದು. ಮದುವೆಯ ನಂತರ ಪ್ರತಿ ಮಹಿಳೆ ಮಾಂಗಲ್ಯ ಸರ,ಕಾಲುಂಗುರ (toe ring) ಧರಿಸ್ತಾಳೆ. ಕಾಲುಂಗುರ ಮುತ್ತೈದೆಗೆ ಶೋಭೆ ತರುವಂತಹದ್ದು. ಇದು 16 ಅಲಂಕಾರಗಳಲ್ಲಿ ಒಂದು. ಮಾರುಕಟ್ಟೆಯಲ್ಲಿ ಅನೇಕ ವೆರೈಟಿಯ ಕಾಲುಂಗುರ ಸಿಗುತ್ತದೆ. ಬಂಗಾರ, ಬೆಳ್ಳಿ ಸೇರಿದಂತೆ ಅನೇಕ ಡಿಸೈನ್ ನ ಕಾಲುಂಗುರಗಳು ಲಭ್ಯವಿದೆ. ಈ ರೀತಿಯ ಆಭರಣಗಳನ್ನು ಧರಿಸುವುದರಿಂದ ಮನಸ್ಸಿಗೆ ಹೆಚ್ಚಿನ ಶಾಂತಿ ಸಿಗುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ಪ್ರತಿಯೊಬ್ಬ ಮುತೈದೆಯೂ ಬೆಳ್ಳಿ ಕಾಲುಂಗುರವನ್ನು ಧರಿಸಬೇಕು. ಆದ್ರೆ ಕಾಲುಂಗುರ ಧರಿಸುವ ಮೊದಲು ಅದರ ನಿಯಮಗಳನ್ನು ತಿಳಿದುಕೊಳ್ಳಬೇಕು. ನಿಯಮ ಮೀರಿ ಕಾಲ್ಬೆರಳುಗಳನ್ನು ಧರಿಸಿದರೆ, ಆಗ ಅವರ ಜೀವನದಲ್ಲಿ ಮತ್ತು ಅವರ ಗಂಡನ ಜೀವನದ ಮೇಲೆ ಅನೇಕ ರೀತಿಯ ತೊಂದರೆಗಳು ಬರಬಹುದು. ಮಹಿಳೆಯರು ಕಾಲುಂಗುರ ಧರಿಸುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂದು ನಾವಿಂದು ಹೇಳ್ತೇವೆ. 

JYOTISH TIPS : ಸಂಜೆ ದೇವರ ಪೂಜೆ ವೇಳೆ ಮಾಡ್ಬೇಡಿ ಈ ತಪ್ಪು

ಕಾಲುಂಗುರ ಧರಿಸುವಾಗ ಈ ಬಗ್ಗೆ ಇರಲಿ ಗಮನ :  

ಬೇರೆಯವರಿಗೆ ಕಾಲುಂಗುರ ನೀಡ್ಬೇಡಿ : ಮಹಿಳೆಯರು ಎಂದಿಗೂ ತಮ್ಮ ಕಾಲಿನ ಬೆರಳಿಗೆ ಹಾಕಿರುವ ಕಾಲುಂಗುರವನ್ನು ತೆಗೆದು ಅದನ್ನು ಬೇರೆಯವರಿಗೆ ನೀಡಬೇಡಿ. ಬೇರೆಯವರಿಗೆ ಕಾಲುಂಗುರ ನೀಡುವುದ್ರಿಂದ  ಮಹಿಳೆಯ ಮನೆಯವರು ಮತ್ತು ಗಂಡನಿಗೆ ಸಮಸ್ಯೆ ಎದುರಾಗುತ್ತದೆ. ಪತಿಯ ಕೆಲಸದಲ್ಲಿ ನಷ್ಟ ಉಂಟಾಗುತ್ತದೆ ಮತ್ತು ಆಕೆಯ ಪತಿ ಯಾವಾಗಲೂ ಸಾಲದ ಸಮಸ್ಯೆಯಲ್ಲಿ ಬೀಳ್ತಾರೆ. ಮಹಿಳೆಯ ಪತಿಗೆ  ಯಾವಾಗಲೂ ಮಾನಸಿಕ ಒತ್ತಡ ಕಾಡುತ್ತಿರುತ್ತದೆ. ಹಣದ ಮೂಲದ ಬಾಗಿಲು ಮುಚ್ಚುತ್ತದೆ. ಕೆಲಸಗಳು ಸಂಪೂರ್ಣವಾಗಿ ನಿಲ್ಲುತ್ತದೆ. ಇದ್ರಿಂದ ಆರ್ಥಿಕ ಸಮಸ್ಯೆ ಕುಟುಂಬಸ್ಥರನ್ನು ಕಾಡುತ್ತದೆ.  ಅನೇಕ ಬಾರಿ ಮಹಿಳೆಯರು ಪರಸ್ಪರ ಕಾಲುಂಗುರವನ್ನು ಬದಲಾಯಿಸಿಕೊಳ್ತಾರೆ. ಇದು ಧರ್ಮಗ್ರಂಥದ ಪ್ರಕಾರ ಸೂಕ್ತವಲ್ಲ. ಹಾಗೆ ಮಾಡುವುದರಿಂದ ಜೀವನದಲ್ಲಿ ಬಹಳಷ್ಟು ತೊಂದರೆ ಎದುರಿಸಬೇಕಾಗುತ್ತದೆ. 

ಕಡಿಮೆ ಶಬ್ಧ : ನಮ್ಮ ವೇದಗಳು ಮತ್ತು ಪುರಾಣಗಳಲ್ಲಿ ಮಹಿಳೆಯರು ಯಾವ ಕಾಲುಂಗುರ ಧರಿಸಬೇಕೆಂದು ಹೇಳಲಾಗಿದೆ. ಮಹಿಳೆಯರು ಅತಿ ಹೆಚ್ಚು ಶಬ್ಧ ಮಾಡುವ ಕಾಲುಂಗುರವನ್ನು ಧರಿಸಬಾರದು. ಕಡಿಮೆ ಶಬ್ಧ ಬರುವ ಹಾಗೂ ಶಬ್ಧ ಬರದೆ ಇರುವ ಕಾಲುಂಗುರವನ್ನು ಧರಿಸಬೇಕು ಎಂದು ಹೇಳಲಾಗಿದೆ. ಶಬ್ಧವಿಲ್ಲದ ಕಾಲುಂಗುರ ಧರಿಸಿದ್ರೆ  ಗಂಡನ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಬಹುದು. ಒಳ್ಳೆಯ ಕಾಲುಂಗುರ ಧರಿಸುವುದ್ರಿಂದ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. 

ಬಂಗಾರದ ಕಾಲುಂಗುರ ಧರಿಸ್ಬೇಡಿ : ಶಾಸ್ತ್ರದಲ್ಲಿ ಬೆಳ್ಳಿಯ ಕಾಲುಂಗುರವನ್ನು ಮಾತ್ರ ಧರಿಸಬೇಕು ಎನ್ನಲಾಗಿದೆ. ಪತಿ ಇರುವ ಮಹಿಳೆಯರು ಬಂಗಾರದ ಕಾಲುಂಗುರ ಧರಿಸಬಾರದು. ಇದು ಮುತ್ತೈದೆಯ ಸಂಕೇತವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಶಾಸ್ತ್ರಗಳ ಪ್ರಕಾರ, ಮಹಿಳೆ ಯಾವುದೇ ಬಂಗಾರದ ಆಭರಣವನ್ನು ಸೊಂಟದ ಕೆಳ ಭಾಗದಲ್ಲಿ ಧರಿಸಬಾರದು. 

ಸತ್ತು ಮತ್ತೆ ಜೀವ ಬಂದಿದ್ದ ವ್ಯಕ್ತಿಗೆ ತಿಥಿ ಮಾಡಿದ ಗ್ರಾಮಸ್ಥರು: ಚಾಮರಾಜನಗರ ಜಿಲ್ಲೆಯಲ್ಲೊಂದು ವಿಚಿತ್ರ ಆಚರಣೆ!

ಕಾಲಿನ ಈ ಬೆರಳಿಗೆ ಕಾಲುಂಗುರ : ಕಾಲಿನ ಎರಡನೇ ಬೆರಳಿಗೆ ಕಾಲುಂಗುರವನ್ನು ಪ್ರತಿ ದಿನ ಧರಿಸಬೇಕು. ಅನೇಕ ಮಹಿಳೆಯರು ಎರಡು ಮೂರು ಕಾಲುಂಗುರ ಧರಿಸ್ತಾರೆ. ಅದು ಅವರಿಗೆ ಬಿಟ್ಟಿದ್ದು. ಎರಡನೇ ಬೆರಳಿಗೆ ಮಾತ್ರ ಅವಶ್ಯಕವಾಗಿ ಕಾಲುಂಗುರ ಧರಿಸಬೇಕು, 

ಕಾಲುಂಗುರ ಕಳೆದರೆ ಅಶುಭ : ಕಾಲುಂಗುರದ ಸುತ್ತು ಕೂಡ ಮಹತ್ವ ಪಡೆಯುತ್ತದೆ. ಕಾಲುಂಗುರವನ್ನು ಕಳೆದುಕೊಳ್ಳುವುದು ಕೂಡ ಶುಭ ಸಂಕೇತವಲ್ಲ. ಅಪ್ಪಿತಪ್ಪಿಯೂ ಕಾಲುಂಗುರವನ್ನು ಕಳೆದುಕೊಳ್ಳಬಾರದು. ಕಾಲುಂಗುರವನ್ನು ಎಚ್ಚರಿಕೆಯಿಂದ ಧರಿಸಬೇಕು. ಕಾಲುಂಗುರ ಕಾಲಿನಲ್ಲಿದ್ದರೆ ಸಂತೋಷದ ಜೀವನ ಸದಾ ಮನೆ ಮಾಡಿರುತ್ತದೆ. 

Follow Us:
Download App:
  • android
  • ios