Asianet Suvarna News Asianet Suvarna News

ಬೆಂಗಳೂರಿನಿಂದ ಕೇದಾರನಾಥಕ್ಕೆ ಪ್ರಯಾಣ ವೆಚ್ಚ ಎಷ್ಟು? ಹೋಗೋದು ಹೇಗೆ?

ಬೆಂಗಳೂರಿನಿಂದ ಕೇದಾರನಾಥಕ್ಕೆ ಹೋಗುವ ಇಚ್ಛೆ ಇದ್ದಲ್ಲಿ ಹೇಗೆಲ್ಲ ಹೋಗಬಹುದು? ರಸ್ತೆ, ರೈಲು, ವಿಮಾನ ಇತ್ಯಾದಿ ಪ್ರಯಾಣ ವೆಚ್ಚಗಳು ಎಷ್ಟಾಗುತ್ತದೆ, ಸಮಯ ಎಷ್ಟು ತಗಲುತ್ತದೆ ವಿವರಗಳು ಇಲ್ಲಿವೆ..

Kedarnath Temple Tour Package From Bangalore all you need to know skr
Author
First Published Jun 21, 2023, 6:36 PM IST

ಇದೀಗ ಕೇದಾರನಾಥ ಯಾತ್ರೆಗೆ ಸಕಾಲ. ನೀವು ಚಾರ್‌ಧಾಮ್ ಯಾತ್ರೆ ಕೈಗೊಳ್ಳಬಹುದು. ಇಲ್ಲವೇ ಶಿವನ ಜ್ಯೋತಿರ್ಲಿಂಗವನ್ನೊಳಗೊಂಡ ಕೇದಾರನಾಥಕ್ಕೆ ಪ್ರಯಾಣ ಬೆಳೆಸಬಹುದು. ಬೆಂಗಳೂರಿನಿಂದ ಕೇದಾರನಾಥಕ್ಕೆ ಹೋಗುವ ಇಚ್ಛೆ ಇದ್ದಲ್ಲಿ ಹೇಗೆಲ್ಲ ಹೋಗಬಹುದು? ರಸ್ತೆ, ರೈಲು, ವಿಮಾನ ಇತ್ಯಾದಿ ಪ್ರಯಾಣ ವೆಚ್ಚಗಳು ಎಷ್ಟಾಗುತ್ತದೆ, ಸಮಯ ಎಷ್ಟು ತಗಲುತ್ತದೆ ಇತ್ಯಾದಿ ಸಂಪೂರ್ಣ ವಿವರಗಳು ಇಲ್ಲಿವೆ. 

ಎಷ್ಟು ದೂರ?
ಕೇದಾರನಾಥವು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಬೆಂಗಳೂರಿನಿಂದ ಕೇದಾರನಾಥಕ್ಕೆ ಒಟ್ಟು 2558 ಕಿಲೋಮೀಟರ್‌ಗಳು. 

ಬೆಂಗಳೂರಿನಿಂದ ಕೇದಾರನಾಥಕ್ಕೆ ತಲುಪಲು 3 ಮಾರ್ಗಗಳು
ರೈಲು ಮಾರ್ಗ
ಬೆಂಗಳೂರು ಮತ್ತು ಕೇದಾರನಾಥ ನಡುವೆ ನೇರ ಸಾರಿಗೆ ಸಂಪರ್ಕವಿಲ್ಲ. ಬೆಂಗಳೂರಿನಿಂದ ಕೇದಾರನಾಥಕ್ಕೆ ತಲುಪಲು ಅಗ್ಗದ ಮಾರ್ಗವೆಂದರೆ ನವದೆಹಲಿಗೆ ರೈಲಿನಲ್ಲಿ ತಲುಪಿ, ನಂತರ ಹಲ್ದ್ವಾನಿಗೆ ಬಸ್ ಪ್ರಯಾಣ ಬೆಳೆಸಬೇಕು. ನಂತರ ಕೇದಾರನಾಥಕ್ಕೆ ಕ್ಯಾಬ್ ಹಿಡಿಯಬೇಕು. ಇದು ಒಟ್ಟು 51 ಗಂಟೆ 48 ನಿಮಿಷ ತೆಗೆದುಕೊಳ್ಳುತ್ತದೆ. ಇದಲ್ಲದೆ, ಬೆಂಗಳೂರಿನಿಂದ ಹೃಷಿಕೇಷದವರೆಗೆ ರೈಲಿನ ಪ್ರಯಾಣ ಕೈಗೊಳ್ಳಬಹುದು. ಇದು ಸುಮಾರು 41 ಗಂಟೆಗಳ ಪ್ರಯಾಣವಾಗುತ್ತದೆ.

ಶನಿ- ಮಂಗಳ ಯೋಗದಿಂದ ಈ ಐದು ರಾಶಿಯವರಿಗೆ ಕಾದಿದೆ ಅಪಾಯ

ವಿಮಾನ ಪ್ರಯಾಣ
ಬೆಂಗಳೂರಿನಿಂದ ಕೇದಾರನಾಥಕ್ಕೆ ತಲುಪಲು ಅತ್ಯಂತ ವೇಗವಾದ ಮಾರ್ಗವೆಂದರೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ, ನಂತರ ಹಲ್ದ್ವಾನಿಗೆ ಬಸ್, ನಂತರ ಕೇದಾರನಾಥಕ್ಕೆ ಕ್ಯಾಬ್. ಇದು 22 ಗಂಟೆ 48 ನಿಮಿಷ ತೆಗೆದುಕೊಳ್ಳುತ್ತದೆ. 

ಮತ್ತೊಂದು ಮಾರ್ಗವೆಂದರೆ ಬೆಂಗಳೂರಿನಿಂದ ಡೆಹ್ರಾಡೂನ್ ವಿಮಾನ ನಿಲ್ದಾಣ ಅಥವಾ ಹರಿದ್ವಾರ ಅಥವಾ ಋಷಿಕೇಶ ವಿಮಾನ ನಿಲ್ದಾಣಕ್ಕೆ ಪ್ರಯಾಣ ಅಲ್ಲಿಂದ ➜ ಸೋನಪ್ರಯಾಗ ➜ ಗೌರಿಕುಂಡ್ ➜ ನಂತರ ಅಂತಿಮವಾಗಿ ಕೇದಾರನಾಥ ದೇವಾಲಯಕ್ಕೆ ಚಾರಣ. ಗೌರಿಕುಂಡ್ ಕೇದಾರನಾಥಕ್ಕೆ ರಸ್ತೆಯ ಕೊನೆಯ ಮೋಟಾರು ಸ್ಥಳವಾಗಿದೆ ಎಂಬುದನ್ನು ನೆನಪಿಡಿ. ಅದರ ನಂತರ, ನೀವು 16 ಕಿಮೀ ಉದ್ದದ ಚಾರಣವನ್ನು ನೀವೇ ಪೂರ್ಣಗೊಳಿಸಬೇಕು.

ಸ್ವಂತ ವಾಹನದ ಪ್ರಯಾಣ
ರಸ್ತೆ ಮಾರ್ಗವನ್ನು ನೀವು ಕೇದಾರನಾಥಕ್ಕೆ ಹೋಗಲು ಆರಿಸಿಕೊಂಡರೆ 40 ಗಂಟೆಗಳು ತಗುಲುತ್ತವೆ. ಇದಲ್ಲದೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದರೂ ಗೌರಿಕುಂಡ್‌ವರೆಗೆ ಬಸ್ ಪ್ರಯಾಣ ಕೈಗೊಳ್ಳಬಹುದು.

ಕೇದಾರನಾಥ ಪ್ರಯಾಣ ವೆಚ್ಚ
ನೀವು ತಂಡದೊಂದಿಗೆ ಬೆಂಗಳೂರಿನಿಂದ ಕೇದಾರನಾಥ ಯಾತ್ರೆ ಕೈಗೊಂಡರೆ 6 ದಿನದ ಪ್ಯಾಕೇಜ್‌ಗೆ 26 ಸಾವಿರದಿಂದ 30 ಸಾವಿರ ರುಪಾಯಿಗಳು ತಗುಲಬಹುದು. ಇನ್ನು ರೈಲು ಅಥವಾ ಬಸ್ ಪ್ರಯಾಣವಾದರೆ 10 ಸಾವಿರ ರುಪಾಯಿಯೊಳಗೆ ಈ ಪ್ರಯಾಣ ಕೈಗೊಳ್ಳಬಹುದು. 

ಶಿವನ ತಲೆಯ ಮೇಲೆ ಚಂದ್ರನಿರುವುದೇಕೆ? ಈ ಆಸಕ್ತಿದಾಯಕ ಕಥೆ ಗೊತ್ತಾ?

ಯಾವ ತಿಂಗಳು ಉತ್ತಮ?
ಕೇದಾರನಾಥಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮೇ ತಿಂಗಳು ಅಥವಾ ಸೆಪ್ಟೆಂಬರ್-ಅಕ್ಟೋಬರ್ ಸಮಯದಲ್ಲಿ ಜನಸಂದಣಿ ಕಡಿಮೆ ಇರುತ್ತದೆ.

ನೋಂದಣಿ ಕಡ್ಡಾಯ
ಯಾತ್ರೆಯನ್ನು ಪ್ರಾರಂಭಿಸುವ ಮೊದಲು ಕೇದಾರನಾಥ ನೋಂದಣಿ ಕಡ್ಡಾಯವಾಗಿದೆ. ಕೇದಾರನಾಥ ಯಾತ್ರೆಯ ಸಮಯದಲ್ಲಿ ಮಾನ್ಯವಾದ ವೈಯಕ್ತಿಕ ಗುರುತಿನ ಪುರಾವೆಗಳನ್ನು ಒಯ್ಯುವುದನ್ನು ಖಚಿತಪಡಿಸಿಕೊಳ್ಳಿ.

Follow Us:
Download App:
  • android
  • ios