ಶನಿ- ಮಂಗಳ ಯೋಗದಿಂದ ಈ ಐದು ರಾಶಿಯವರಿಗೆ ಕಾದಿದೆ ಅಪಾಯ
ಮಂಗಳ ಗ್ರಹವು ಸಿಂಹ ರಾಶಿಯಲ್ಲಿ ಸಂಚರಿಸೋದ್ರಿಂದ, ಮಂಗಳನ ಕೋಪ ಹೆಚ್ಚಾಗಲಿದೆ. ಶನಿ ಪ್ರಸ್ತುತ ಕುಂಭ ರಾಶಿಯಲ್ಲಿದ್ದಾನೆ. ಮಂಗಳನ ಈ ಸಂಕ್ರಮಣದೊಂದಿಗೆ, ಶನಿ ಮತ್ತು ಮಂಗಳ ಪರಸ್ಪರ ಮುಖಾಮುಖಿಯಾಗುತ್ತವೆ. ಮಂಗಳ ಮತ್ತು ಶನಿಯ ಸಂಯೋಜನೆಯು ಕೆಲವು ರಾಶಿಗಳಿಗೆ ಸಮಸ್ಯೆಯನ್ನುಂಟು ಮಾಡುತ್ತೆ, ಆ ರಾಶಿಗಳು ಯಾವುವು ಅನ್ನೋದನ್ನು ನೋಡೋಣ.
ಮಂಗಳ ಗ್ರಹವು ಜುಲೈ 1 ರಂದು ಸಿಂಹ ರಾಶಿಯನ್ನು(Leo) ಪ್ರವೇಶಿಸಲಿದೆ. ಮಂಗಳ ಗ್ರಹವು ಅಗ್ನಿ ಅಂಶ ಗ್ರಹವಾಗಿದೆ ಮತ್ತು ಸಿಂಹವು ಅಗ್ನಿ ಅಂಶ ರಾಶಿಚಕ್ರವಾಗಿದೆ. ಹಾಗಾಗಿ ಮಂಗಳನು ಸಿಂಹ ರಾಶಿಯಲ್ಲಿ ಬರೋದ್ರಿಂದ ಹೆಚ್ಚು ಆಕ್ರಮಣಕಾರಿಯಾಗುತ್ತಾನೆ. ಸಿಂಹ ರಾಶಿಯಲ್ಲಿ ಮಂಗಳನ ಆಗಮನದಿಂದಾಗಿ, ಶನಿ ಮತ್ತು ಮಂಗಳ ಸಂಯೋಗವಾಗುತ್ತೆ. ಯಾಕಂದ್ರೆ ಶನಿ ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ.
ಶನಿ ಮಂಗಳನ ಮುಖಾಮುಖಿಯಿಂದಾಗಿ, ವಿಶ್ವಾದ್ಯಂತ ನೈಸರ್ಗಿಕ ವಿಕೋಪದಿಂದಾಗಿ(Natural calamities) ಜನ - ಧನಕ್ಕೆ ಹಾನಿ ಉಂಟಾಗಲಿದೆ. ಶನಿ ಮತ್ತು ಮಂಗಳ ಮುಖಾಮುಖಿಯಾಗುವುದು ಅನೇಕ ರಾಶಿಗಳಿಗೆ ಹಾನಿಕಾರಕವಾಗಿದೆ. ಯಾವ ರಾಶಿಗಳಿಗೆ ಶನಿ ಮಂಗಳನು ಪ್ರತಿಕೂಲವಾಗಿರಲಿದ್ದಾನೆ ಎಂದು ತಿಳಿದುಕೊಳ್ಳೋಣ.
ಮೇಷ ರಾಶಿ (Aries)
ಮಂಗಳ ಮತ್ತು ಶನಿಯ ಮುಖಾಮುಖಿಯಿಂದ, ಮೇಷ ರಾಶಿಯ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತೆ. ಯಾಕಂದ್ರೆ ಈ ರಾಶಿಯವರು ಹೊಟ್ಟೆಗೆ ಸಂಬಂಧಿಸಿದ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಈ ಅವಧಿಯಲ್ಲಿ ಆಹಾರ ಮತ್ತು ಪಾನೀಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಸೂಚಿಸಲಾಗುತ್ತೆ ಮತ್ತು ಮಸಾಲೆಯುಕ್ತ ಆಹಾರದಿಂದ ದೂರವಿರೋದು ಪ್ರಯೋಜನಕಾರಿ.
ವಾಹನವನ್ನು ತುಂಬಾ ಯೋಚನೆ ಮಾಡಿ ಬಳಸಬೇಕು. ಪ್ರೇಮ ಸಂಬಂಧಗಳಲ್ಲಿ ಸಮಯವು ಮೇಷ ರಾಶಿಯವರಿಗೆ ಸ್ವಲ್ಪ ಕಡಿಮೆ ಅನುಕೂಲಕರವಾಗಿರುತ್ತೆ. ಪ್ರೇಮ ಸಂಬಂಧದಲ್ಲಿರುವ(Love relationship) ಜನರು ತಮ್ಮ ಸಂಗಾತಿಯ ಮುಂದೆ ಭಾವನೆಗಳನ್ನು ವ್ಯಕ್ತಪಡಿಸಲು ಸಾಕಷ್ಟು ಕಷ್ಟಪಡುತ್ತಾರೆ. ಒಟ್ಟಾರೆಯಾಗಿ, ಶನಿ ಮತ್ತು ಮಂಗಳನ ಪ್ರಭಾವವು ಮೇಷ ರಾಶಿಯವರ ವೈಯಕ್ತಿಕ ಜೀವನದ ಮೇಲೆ ಹೆಚ್ಚು ಕಂಡುಬರುತ್ತೆ.
ಕರ್ಕಾಟಕ ರಾಶಿ
ಮಂಗಳ ಮತ್ತು ಶನಿಯ ಮುಖಾಮುಖಿಯಿಂದಾಗಿ, ಕರ್ಕಾಟಕ ರಾಶಿಯವರ ಮಾತು ಸ್ವಲ್ಪ ಕಹಿಯಾಗಬಹುದು. ಯಾರೊಂದಿಗಾದರೂ ಮಾತನಾಡುವಾಗ (Talk) ನಿಮ್ಮ ಮಾತನ್ನು ನಿಯಂತ್ರಿಸಿ. ಇತರರೊಂದಿಗೆ ವಾದಿಸೋದನ್ನು ತಪ್ಪಿಸಿ ಇಲ್ಲದಿದ್ದರೆ ಇದು ಇಮೇಜ್ ಮೇಲೆ ಪರಿಣಾಮ ಬೀರಬಹುದು. ಸಂಬಂಧಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ತಾಯಿಯೊಂದಿಗಿನ ಸಂಬಂಧಕ್ಕೆ ಸಹ ಹೆಚ್ಚು ಪರಿಣಾಮ ಬೀರಬಹುದು. ಇದು ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದೆ.
ಕನ್ಯಾರಾಶಿ (Virgo)
ಮಂಗಳ ಮತ್ತು ಶನಿಯ ಪ್ರಭಾವದಿಂದಾಗಿ, ಕನ್ಯಾ ರಾಶಿಯವರು ಈ ಅವಧಿಯಲ್ಲಿ ತಮ್ಮ ಆರ್ಥಿಕ ಪರಿಸ್ಥಿತಿ ಹೆಚ್ಚು ಗಮನ ಹರಿಸಬೇಕು. ಬಹಳ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ವಿದೇಶಕ್ಕೆ ಹೋಗಲು ಯೋಜಿಸುತ್ತಿರುವ ಜನರು ಸ್ವಲ್ಪ ಸಮಯ ಕಾಯಬೇಕಾಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಸಹ ಹೊಂದಬಹುದು. ಆದ್ದರಿಂದ, ಆರೋಗ್ಯದ ಬಗ್ಗೆ ಜಾಗರೂಕರಾಗಿ.ಈ ಸಮಯದಲ್ಲಿ, ನೀವು ಯಾವುದೋ ಒಂದು ವಿಷಯದ ಬಗ್ಗೆ ಒತ್ತಡವನ್ನು ಹೊಂದುವ ಸಾಧ್ಯತೆ ಇದೆ. ಒತ್ತಡವು(Stress) ನಿಮ್ಮನ್ನು ಆವರಿಸಲು ಬಿಡಬೇಡಿ.
ಮಕರ ರಾಶಿ
ಮಂಗಳ ಮತ್ತು ಶನಿಯ ಪ್ರಭಾವದಿಂದಾಗಿ, ಈ ಅವಧಿಯಲ್ಲಿ ಮಕರ ರಾಶಿಯವರ ಖರ್ಚುಗಳು ತುಂಬಾ ಹೆಚ್ಚಾಗಲಿವೆ. ಸೌಕರ್ಯಗಳಿಗಾಗಿ ಹೆಚ್ಚು ಖರ್ಚು ಮಾಡುತ್ತಾರೆ. ವಾಹನವನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಇಲ್ಲದಿದ್ದರೆ, ದೈಹಿಕ ನೋವು (Physical pain)ಉಂಟಾಗಬಹುದು. ವಾಹನಗಳ ಬಳಕೆ ಕಡಿಮೆ ಮಾಡೋದು ಉತ್ತಮ.
ಕುಟುಂಬದಲ್ಲಿ (Family) ಸಾಕಷ್ಟು ಅಶಾಂತಿ ಇರಲಿದೆ. ಮನೆಯ ಯಾವುದೇ ವಿವಾದದಲ್ಲಿ ಯಾವುದೇ ಹೊರಗಿನವರು ಹಸ್ತಕ್ಷೇಪ ಮಾಡಲು ಅವಕಾಶ ನೀಡಬೇಡಿ ಮತ್ತು ನಿಮ್ಮ ತಿಳುವಳಿಕೆಗೆ ಅನುಗುಣವಾಗಿ ಸಾಧ್ಯವಾದಷ್ಟು ಬೇಗ ಆ ವಿವಾದವನ್ನು ಪರಿಹರಿಸಲು ಪ್ರಯತ್ನಿಸಿ. ಈ ಸಮಯದಲ್ಲಿ ಹಣ ಗಳಿಸುವಿರಿ, ಆದರೆ ನಿಮ್ಮ ಖರ್ಚುಗಳಿಂದಾಗಿ, ನೀವು ಸಮಸ್ಯೆ ಎದುರಿಸಬೇಕಾಗಬಹುದು.
ಮೀನ ರಾಶಿ (Pisces)
ಮಂಗಳ ಮತ್ತು ಶನಿಯ ಸಂಚಾರವು ಮೀನ ರಾಶಿಯ ಜನರಿಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ನೀವು ನಿಮ್ಮ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ, ಆದರೆ ಇದಕ್ಕಾಗಿ, ಸಾಕಷ್ಟು ಹೋರಾಟ ಮತ್ತು ಕಠಿಣ ಪರಿಶ್ರಮವನ್ನು ಮಾಡಬೇಕಾಗುತ್ತೆ.
ಈ ರಾಶಿಯ ವಿದ್ಯಾರ್ಥಿಗಳು ತಮ್ಮ ಅಧ್ಯಯನದ(Study) ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕೆಲಸದ ಸ್ಥಳದಲ್ಲಿ, ನಿಮ್ಮ ಇಮೇಜ್ ಚೆನ್ನಾಗಿರಬೇಕು. ಆಗ ಮಾತ್ರ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುತ್ತೀರಿ. ಮಂಗಳನ ಪ್ರಭಾವದಿಂದಾಗಿ, ಮೀನ ರಾಶಿಯವರು ಸಾಕಷ್ಟು ಅಹಂ ಪಡೆಯುತ್ತೀರಿ. ಇದು ನಿಮ್ಮ ಜೀವನದಲ್ಲಿ ತುಂಬಾ ನಕಾರಾತ್ಮಕ ಪರಿಣಾಮ ಬೀರಲಿದೆ.