ಮದುವೆ ಬೇಗ ಆಗ್ಬೇಕಾ? ಈ ಜ್ಯೋತಿಷ್ಯ ಸಲಹೆ ಪಾಲೋ ಮಾಡಿ
ಸಂಬಂಧ ಕೂಡಿ ಬಂದಿಲ್ಲ, ಮದುವೆ ಮುಂದೆ ಹೋಗ್ತಿದೆ, ಒಂದಲ್ಲ ಒಂದು ಕಾರಣಕ್ಕೆ ಮದುವೆ ನಿಲ್ಲುತ್ತಿದೆ ಎನ್ನುವವರು ಇದನ್ನೊಮ್ಮೆ ಓದಿ. ಮದುವೆ ಸುಸೂತ್ರವಾಗಿ ನಡೆಯಬೇಕೆಂದ್ರೆ ಕಾರ್ತಿಕ ಮಾಸದ ಹುಣ್ಣಿಮೆ ದಿನ ಈ ಕೆಲಸ ಮಾಡಲು ಮರೆಯಬೇಡಿ.
ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸದ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಕಾರ್ತಿಕ ಮಾಸದ ಹುಣ್ಣಿಮೆ ದಿನ ಶಿವನು ತ್ರಿಪುರಾಸುರ ಎಂಬ ರಾಕ್ಷಸನನ್ನು ಕೊಂದು ದೇವತೆಗಳಿಗೆ ಸ್ವರ್ಗವನ್ನು ವಾಪಸ್ ನೀಡಿದನು ಎಂದು ನಂಬಿಕೆಯಿದೆ. ಇದೇ ದಿನ ವಿಷ್ಣು ಮತ್ಸ್ಯ ಅವತಾರದಲ್ಲಿ ಭೂಮಿಯ ಮೇಲಿರುವ ಜೀವಿಗಳನ್ನು ರಕ್ಷಿಸಿದನು ಎನ್ನಲಾಗುತ್ತದೆ. ಈ ದಿನ ಎಲ್ಲ ದೇವಾನುದೇವತೆಗಳು ಸಂತೋಷಗೊಂಡು ಭೂಮಿಗೆ ಬರುತ್ತವೆ ಎಂಬ ನಂಬಿಕೆಯಿದೆ.
ದೇವಾನುದೇವತೆಗಳನ್ನು ಮೆಚ್ಚಿಸಲು ಕಾರ್ತಿಕ (Kartika) ಹುಣ್ಣಿಮೆ ದಿನ ಕೆಲ ವಿಶೇಷ ಕೆಲಸಗಳನ್ನು ಮಾಡಬೇಕು. ಹಾಗೆ ಮಾಡಿದ್ರೆ ದೇವಾನುದೇವತೆಗಳು ನಮಗೆ ಆಶೀರ್ವಾದ ನೀಡಿ, ನಾವು ಬಯಸಿದ್ದನ್ನು ನೀಡುತ್ತವೆ. ಈ ಬಾರಿ ನವೆಂಬರ್ 8ರಂದು ಕಾರ್ತಿಕ ಹುಣ್ಣಿಮೆ ಆಚರಿಸಲಾಗ್ತಿದೆ. ಮದುವೆ ತಡವಾಗ್ತಿದೆ, ಕಂಕಣ ಕೂಡಿ ಬರ್ತಿಲ್ಲ, ಬಂದ ಸಂಬಂಧ (Relationship) ಯಾವುದೂ ಮದುವೆ ಹಂತಕ್ಕೆ ಹೋಗ್ತಿಲ್ಲ, ಒಂದಲ್ಲ ಒಂದು ಕಾರಣಕ್ಕೆ ಮದುವೆಯನ್ನು ಮುಂದೂಡಲಾಗ್ತಿದೆ ಎಂದಾದ್ರೆ ಕಾರ್ತಿಕ ಮಾಸದ ಹುಣ್ಣಿಮೆ ದಿನ ಏನು ಮಾಡ್ಬೇಕು ಎಂಬುದನ್ನು ನಾವು ಹೇಳ್ತೇವೆ.
ರಾತ್ರಿ ಮಹಿಳೆಯರು ಈ ಕಾರಣಕ್ಕೆ ಕೂದಲು ಕಟ್ಟಿ ಮಲಗ್ಬೇಕು
ಶೀಘ್ರ ಮದುವೆ (Marriage) ಗೆ, ಕಾರ್ತಿಕ ಹುಣ್ಣಿಮೆ ದಿನ ಮಾಡಿ ಈ ಕೆಲಸ :
ಶೀಘ್ರ ಮದುವೆಗೆ ದೀಪ (Lamp) ದಾನ ಮಾಡಿ : ಮದುವೆ ವಿಳಂಬವಾಗುತ್ತಿದ್ದರೆ ಅಥವಾ ನಿಶ್ಚಿತವಾದ ನಂತರವೂ ಮದುವೆ ನಡೆಯುತ್ತಿಲ್ಲ ಎಂದಾದ್ರೆ ಕಾರ್ತಿಕ ಪೂರ್ಣಿಮೆಯ ದಿನದಂದು ನೀವು ದೀಪ ದಾನ ಮಾಡಬೇಕು. ಮನೆಯ ಸಮೀಪವಿರುವ ಕೊಳ ಅಥವಾ ನದಿಯ ಬಳಿ ದೀಪವನ್ನು ದಾನ ಮಾಡಬೇಕು. ಈ ದಿನ ಮನೆಯ ಕೆಲವು ಪ್ರಮುಖ ಸ್ಥಳಗಳಲ್ಲಿ ದೀಪವನ್ನು ಹಚ್ಚಬೇಕು. ದೇವರ ಮನೆಯಲ್ಲಿ ದೀಪ ಬೆಳಗಿಸಿ. ಇದ್ರಿಂದ ಶೀಘ್ರ ಕಂಕಣ ಭಾಗ್ಯ ಕೂಡಿ ಬರುತ್ತದೆ.
ಕಾರ್ತಿಕ ಹುಣ್ಣಿಮೆಯಂದು ತುಳಸಿ ಪೂಜೆ : ಕಾರ್ತಿಕ ಹುಣ್ಣಿಮೆ ದಿನ ತುಳಸಿ ಮದುವೆ ನಡೆಯುತ್ತದೆ. ತುಳಸಿಗೆ ಸಾಲಿಗ್ರಾಮದ ಜೊತೆ ಮದುವೆ ಮಾಡಲಾಗುತ್ತದೆ. ಮದುವೆ ಬೇಗ ಆಗ್ಬೇಕು ಎನ್ನುವವರು ಈ ದಿನ ತುಳಸಿ ಪೂಜೆಯನ್ನು ಮಾಡಬೇಕು. ತುಳಸಿಯನ್ನು ಲಕ್ಷ್ಮಿ ದೇವಿ ಎನ್ನಲಾಗುತ್ತದೆ. ಕಾರ್ತಿಕ ಹುಣ್ಣಿಮೆ ದಿನ ನೀವು ತುಳಸಿ ಪೂಜೆ ಮಾಡಿದ್ರೆ ತಾಯಿ ಲಕ್ಷ್ಮಿ ಮದುವೆಗೆ ಕೃಪೆ ತೋರುತ್ತಾಳೆ ಎನ್ನಲಾಗುತ್ತದೆ.
ಪವಿತ್ರ ಜಲದಲ್ಲಿ ಸ್ನಾನ : ಪವಿತ್ರ ಜಲದಲ್ಲಿ ಸ್ನಾನ ಮಾಡುವುದ್ರಿಂದ ಪಾಪ ಪರಿಹಾರವಾಗುತ್ತದೆ ಎಂದು ನಂಬಲಾಗಿದೆ. ಕಾರ್ತಿಕ ಪೂರ್ಣಿಮೆ ದಿನ ಪವಿತ್ರ ಸ್ಥಾನಕ್ಕೆ ಮಹತ್ವವಿದೆ. ಗಂಗಾಜಲದಲ್ಲಿ ಸ್ನಾನ ಮಾಡಿದ್ರೆ ಶುಭ ಫಲ ಸಿಗುತ್ತದೆ. ಸ್ನಾನ ಮಾಡುವ ನೀರಿಗೆ ಗಂಗಾಜಲ ಬೆರೆಸಿ ನೀವು ಶುದ್ಧರಾಗಬಹುದು. ಹೀಗೆ ಮಾಡಿದ್ರೆ ನಿಮ್ಮ ವಿವಾಹಕ್ಕೆ ಆಗ್ತಿರುವ ಅಡೆತಡೆ ನಿಲ್ಲುತ್ತದೆ. ಶೀಘ್ರವೇ ಮದುವೆ ಭಾಗ್ಯ ಕೂಡಿ ಬರುತ್ತದೆ.
ಅರಿಶಿನ ಹಚ್ಚಿ : ಅರಿಶಿನ – ಕುಂಕುಮವನ್ನು ಸೌಭಾಗ್ಯದ ಸಂಕೇತವೆಂದು ಭಾವಿಸಲಾಗುತ್ತದೆ. ಮದುವೆ ವಿಳಂಬವಾಗ್ತಿದೆ ಎನ್ನುವವರು ತಾಯಿ ಲಕ್ಷ್ಮಿಗೆ ಕಾರ್ತಿಕ ಮಾಸದ ಹುಣ್ಣಿಮೆ ದಿನ ಅರಿಶಿನ ಅರ್ಪಿಸಬೇಕು. ಜೊತೆಗೆ ನಿಮ್ಮ ಹಣೆಗೆ ಅರಿಶಿನದ ತಿಲಕವನ್ನು ಇಟ್ಟುಕೊಳ್ಳಬೇಕು. ಹಾಗೆ ಮನೆ ದ್ವಾರದಲ್ಲಿ ಅರಿಶಿನದ ಸ್ವಸ್ತಿಕವನ್ನು ಹಚ್ಚಿ. ಹೀಗೆ ಮಾಡಿದ್ರೆ ನಿಮ್ಮ ಮದುವೆ ಯಾವುದೇ ವಿಘ್ನವಿಲ್ಲದೆ ಸರಾಗವಾಗಿ ನಡೆಯುತ್ತದೆ.
ಪಾರ್ವತಿಗೆ ಸಿಂಧೂರ : ವಿವಾಹದಲ್ಲಿ ಯಾವುದೇ ಅಡೆತಡೆಯಾಗಬಾರದು ಎಂದಾದ್ರೆ ಕಾರ್ತಿಕ ಪೂರ್ಣಿಮೆಯಂದು ತಾಯಿ ಪಾರ್ವತಿಗೆ ಕುಂಕುಮವನ್ನು ಅರ್ಪಿಸಬೇಕು. ದೇವಿಯ ಹಣೆಗೆ ಕುಂಕುಮ ಹಚ್ಚಿ, ಸುಖ, ಸಮೃದ್ಧಿಗೆ ಪ್ರಾರ್ಥನೆ ಮಾಡ್ಬೇಕು.
ಗ್ರಹಣಕಾಲದಲ್ಲಿ ಹುಟ್ಟಿದ ಮಗುವಿನ ಸ್ವಭಾವ ಹೀಗಿರುತ್ತೆ?
ಚಂದ್ರನನ್ನು ಮರೆಯಬೇಡಿ : ಕಾರ್ತಿಕ ಹುಣ್ಣಿಮೆಯನ್ನು ನೀರಿಗೆ ಚಿಟಕಿ ಅರಿಶಿನ ಬೆರೆಸಿ ಅದನ್ನು ಚಂದ್ರನಿಗೆ ಅರ್ಘ್ಯ ನೀಡಿದ್ರೆ ನಿಮ್ಮೆಲ್ಲ ಸಮಸ್ಯೆ ಬಗೆಹರಿಯುತ್ತದೆ. ಮದುವೆ ಸರಾಗವಾಗಿ ನಡೆಯುತ್ತದೆ.