ರಾತ್ರಿ ಮಹಿಳೆಯರು ಈ ಕಾರಣಕ್ಕೆ ಕೂದಲು ಕಟ್ಟಿ ಮಲಗ್ಬೇಕು
ಕೂದಲು ಬಿಚ್ಚಿಕೊಂಡು ಓಡಾಡೋದು ಈಗ ಫ್ಯಾಷನ್. ಪಾರ್ಟಿಗೆ, ಸಮಾರಂಭಕ್ಕೆ ಮಾತ್ರವಲ್ಲ ರಾತ್ರಿ ಕೂಡ ಕೂದಲು ಬಿಚ್ಚಿ ಮಲಗುವ ಅನೇಕ ಮಹಿಳೆಯರಿದ್ದಾರೆ. ಶಾಸ್ತ್ರಗಳಲ್ಲಿ ಇದು ತಪ್ಪು ಎನ್ನಲಾಗಿದೆ. ಬರೀ ಶಾಸ್ತ್ರ ಮಾತ್ರವಲ್ಲ ವಿಜ್ಞಾನದಲ್ಲೂ ಕೂದಲು ಬಿಚ್ಚಿ ಮಲಗಬೇಡಿ ಎನ್ನಲಾಗುತ್ತದೆ.
ಧಾರ್ಮಿಕ ಗ್ರಂಥಗಳಲ್ಲಿ, ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಆ ನಿಯಮಗಳನ್ನು ಪಾಲನೆ ಮಾಡಿದ್ರೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ. ಒಂದ್ವೇಳೆ ಈ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡ್ರೆ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಲಾಗುತ್ತದೆ. ರಾತ್ರಿ ಉಗುರು ಕತ್ತರಿಸಬಾರದು, ವಾರದ ಕೆಲ ದಿನ ತಲೆ ಸ್ನಾನ ಮಾಡಬಾರದು, ಕೂದಲು ಕತ್ತರಿಸಬಾರದು ಎಂಬ ನಿಯಮವಿದೆ. ಹಾಗೆಯೇ ಆಹಾರ ಸೇವನೆ ಬಗ್ಗೆಯೂ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಯಾವುದೇ ದೇವರ ಪೂಜೆಯಿರಲಿ ಇಲ್ಲ ದೇವಸ್ಥಾನಕ್ಕೆ ಹೋಗುವುದಿರಲಿ ಬಿಚ್ಚಿದ ಕೂದಲಿನಲ್ಲಿ ಹೋಗಬಾರದು ಎನ್ನಲಾಗುತ್ತದೆ. ಹಾಗೆಯೇ ಮಲಗುವ ಮೊದಲು ಕೂದಲು ಕಟ್ಟಿ ಮಲಗಬೇಕೆಂಬ ನಿಯಮವೂ ಇದೆ. ಇಂದು ನಾವು ರಾತ್ರಿ ಮಲಗುವ ಮೊದಲು ಮಹಿಳೆಯರು ಏಕೆ ಕೂದಲು ಕಟ್ಟಿ ಮಲಗಬೇಕು ಎಂಬುದನ್ನು ಹೇಳ್ತೇವೆ.
ಯಾಕೆ ಕೂದಲು (Hair) ಬಿಚ್ಚಿ ಮಲಗಬಾರದು ಗೊತ್ತಾ? :
ಕೂದಲು ಬಿಚ್ಚಿ ಮಲಗೋದು ದುಃಖ (Sadness) ದ ಸಂಕೇತ : ಹಿಂದೆ ಉದ್ದದ ಜಡೆ ಹಾಕಿಕೊಂಡೆ ಮಹಿಳೆಯರು ಸಮಾರಂಭಗಳಿಗೆ ಹೋಗ್ತಿದ್ದರು. ಉದ್ದುದ್ದದ ಜಡೆ ಫ್ಯಾಷನ್ (Fashion) ಆಗಿತ್ತು ಕೂಡ. ಆದ್ರೀಗ ಕೂದಲು ಕತ್ತರಿಸುವುದು ಸಾಮಾನ್ಯ. ಅದ್ರ ಜೊತೆ ಬಹುತೇಕ ಮಹಿಳೆಯರು ಕೂದಲು ಕಟ್ಟೋದಿಲ್ಲ. ಪಾರ್ಟಿ (Party) ಗೆ ಮಾತ್ರವಲ್ಲ ರಾತ್ರಿ ಮಲಗುವಾಗ ಕೂಡ ಕೂದಲು ಬಿಚ್ಚಿಕೊಂಡು ಮಲಗ್ತಾರೆ. ಇದು ಈಗ ಫ್ಯಾಷನ್ ಆಗಿದೆ. ಆದ್ರೆ ಶಾಸ್ತ್ರಗಳ ಪ್ರಕಾರ, ಕೂದಲು ಕಟ್ಟದೆ ಹಾಗೆ ಮಲಗಿದ್ರೆ ಜೀವನದಲ್ಲಿ ನಕಾರಾತ್ಮ ಪ್ರಭಾವವುಂಟಾಗುತ್ತದೆ. ಧನಾತ್ಮಕ ಪ್ರಭಾವ ಆಗುವುದಿಲ್ಲ. ಕೂದಲು ಬಿಚ್ಚಿ ಮಲಗುವುದು ದುಃಖದ ಸಂಕೇತವಾಗಿದೆ.
ದುಡ್ಡನ್ನು ಯಾರಾದ್ರೂ ಬೇಡ ಅಂತಾರಾ? ಹೀಗ್ ಮಾಡಿದ್ರೆ ಜೇಬು ತುಂಬುತ್ತೆ ನೋಡಿ!
ನಕಾರಾತ್ಮಕ (Negative) ಶಕ್ತಿ ಪ್ರಭಾವ : ರಾತ್ರಿ ನಕಾರಾತ್ಮಕ ಶಕ್ತಿ ಸಕ್ರಿಯವಾಗುತ್ತದೆ ಎಂದು ನಂಬಲಾಗಿದೆ. ರಾತ್ರಿ ಕೂದಲು ಬಿಚ್ಚಿ ಮಲಗಿದ್ರೆ ನಕಾರಾತ್ಮಕ ಶಕ್ತಿ ಮಹಿಳೆಯರ ಮೇಲೆ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ. ನಕಾರಾತ್ಮಕ ಶಕ್ತಿಯ ಪ್ರಭಾವಕ್ಕೆ ಒಳಗಾದ್ರೆ ಕೋಪ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಒತ್ತಡಕ್ಕೆ ಕಾಣಿಸಿಕೊಳ್ಳುತ್ತದೆ. ಜೀವನದಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ.
ಕುಟುಂಬದಲ್ಲಿ (Family) ಹೆಚ್ಚಾಗುತ್ತೆ ಸಮಸ್ಯೆ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾತ್ರಿ ಮಹಿಳೆಯರು ಕೂದಲು ಬಿಚ್ಚಿಕೊಂಡು ಮಲಗಿದ್ರೆ ಜೀವನದಲ್ಲಿ ಅನೇಕ ಸಮಸ್ಯೆ ಉಂಟಾಗುತ್ತದೆ. ಇಂಥ ಮಹಿಳೆಯರ ಮನೆಯಲ್ಲಿ ಕೌಟುಂಬಿಕ ವೈಷಮ್ಯ ಹೆಚ್ಚಾಗಲು ಶುರುವಾಗುತ್ತದೆ. ಮನೆಯವರ ಮಧ್ಯೆ ನಿರಾಸಕ್ತಿ, ಗಲಹವಾಗುವ ಸಾಧ್ಯತೆಯಿರುತ್ತದೆ.
ಕಪ್ಪು ಬಣ್ಣ ಶನಿಯ ಸಂಕೇತ : ಕಪ್ಪು ಬಣ್ಣವನ್ನು ಶನಿಯ ಬಣ್ಣ ಎನ್ನಲಾಗುತ್ತದೆ. ಕಪ್ಪು ಕೂದಲನ್ನು ಬಿಚ್ಚಿ ಮಲಗಿದ್ರೆ ಅದು ಶನಿ ದೋಷಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.
ದೃಷ್ಟಿ ತಾಕದಿರಲೆಂದು ಮಗುವಿನ ಕೈ, ಕಾಲುಗಳಿಗೆ ಕಪ್ಪು ದಾರ ಕಟ್ಟೋದು ಸರಿಯೇ?
ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ : ಜ್ಯೋತಿಷ್ಯದಲ್ಲಿ ನಂಬಿಕೆ ಇಲ್ಲದಿದ್ದರೂ ರಾತ್ರಿ ವೇಳೆ ಕೂದಲು ಬಿಚ್ಚಿ ಮಲಗುವುದು ಒಳ್ಳೆಯದಲ್ಲ. ರಾತ್ರಿ ಅತ್ತಿದ್ದ ಕತ್ತು ಹೊರಳಿಸುವುದ್ರಿಂದ ದಿಂಬಿಗೆ ಕೂದಲು ಸಿಕ್ಕಿ ಬೀಳುತ್ತದೆ. ಇದ್ರಿಂದ ಕೂದಲು ಉದುರುವ ಸಾಧ್ಯತೆಯಿರುತ್ತದೆ. ಕೂದಲು ಇದ್ರಿಂದ ದುರ್ಬಲಗೊಳ್ಳುತ್ತದೆ. ರಾತ್ರಿ ಕೂದಲು ಬಿಚ್ಚಿ ಮಲಗಿದಾಗ ಕೂದಲಿನಲ್ಲಿ ಸಿಕ್ಕಾಗುತ್ತದೆ. ಬೆಳಿಗ್ಗೆ ಅದನ್ನು ಬಿಡಿಸಲು ಹೋದಾಗ ಕೂದಲು ಉದುರುತ್ತದೆ. ಇದ್ರಿಂದ ಕೂದಲ ಶಕ್ತಿ ಕೂಡ ಕಡಿಮೆಯಾಗುತ್ತದೆ. ರಾತ್ರಿ ಕೂದಲು ಬಿಚ್ಚಿ ಮಲಗಿದ್ರೆ ನಿದ್ರೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿರುತ್ತದೆ. ಅನೇಕ ಬಾರಿ ಮುಖಕ್ಕೆ ಕೂದಲು ಬರುವುದ್ರಿಂದ ನಿದ್ರಾಭಂಗವಾಗುತ್ತದೆ. ಜೊತೆಗೆ ಕೂದಲಿನಲ್ಲಿರುವ ಹೊಟ್ಟು ಮುಖಕ್ಕೆ ಬರುವ ಕಾರಣ ಚರ್ಮದ ಸಮಸ್ಯೆ ಕೂಡ ಕಾಡುವ ಸಾಧ್ಯತೆಯಿದೆ. ಇಷ್ಟೇ ಅಲ್ಲ, ರಾತ್ರಿ ಕೂದಲು ಬಿಚ್ಚಿ ಮಲಗುವುದ್ರಿಂದ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು.