Asianet Suvarna News Asianet Suvarna News

ಗ್ರಹಣಕಾಲದಲ್ಲಿ ಹುಟ್ಟಿದ ಮಗುವಿನ ಸ್ವಭಾವ ಹೀಗಿರುತ್ತೆ?

ಗ್ರಹಣ ಆಕಾಶದಲ್ಲಿ ನಡೆಯುವ ಒಂದು ಘಟನೆ. ಆದ್ರೆ ಇದನ್ನು ನಮ್ಮ ಜೀವನದ ಜೊತೆ ಸಂಬಂಧ ಹೊಂದಿದೆ. ಗ್ರಹಣ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಹಾಗೆ ಗ್ರಹಣದ ಸಮಯದಲ್ಲಿ ಜನಿಸಿದ ಮಕ್ಕಳು ಕೂಡ ಭಿನ್ನವಾಗಿರ್ತಾರೆ.
 

What Happens When A Baby Is Born During An Eclipse
Author
First Published Nov 2, 2022, 1:34 PM IST

ಜನನ ಮತ್ತೆ ಮರಣದ ಸಮಯವನ್ನು ನಿರ್ದಿಷ್ಟವಾಗಿ ಹೇಳೋಕೆ ಸಾಧ್ಯವಿಲ್ಲ. ವೈದ್ಯಕೀಯ ಜಗತ್ತಿನಲ್ಲಿ ಈಗ ಜನನದ ದಿನವನ್ನು ನಿಗದಿ ಮಾಡಬಹುದು. ಕೆಲವೊಮ್ಮೆ ಎಷ್ಟೆ ಪ್ರಯತ್ನಪಟ್ಟರೂ ಜನನದ ಸಮಯದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿರುತ್ತದೆ. ನಾವು ಜನಿಸಿದ ದಿನ ಮತ್ತು ಸಮಯ ನಮ್ಮ ವ್ಯಕ್ತಿತ್ವ ಮತ್ತು ಮನೋಧರ್ಮಕ್ಕೆ ನೇರ ಸಂಬಂಧ ಹೊಂದಿರುತ್ತದೆ. ಮಗು ಜನಿಸಿದಾಗ ಅದರ ಜನ್ಮ ಸಮಯದ ಮೂಲಕ ಅವರ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. 

ಗ್ರಹಣ (Eclipse) ವನ್ನು ನಮ್ಮಲ್ಲಿ ಕೆಟ್ಟ ಸಮಯ (Time) ವೆಂದು ಪರಿಗಣಿಸಲಾಗುತ್ತದೆ. ಆ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ದೇವರಿಗೆ ಗ್ರಹಣ ತಾಕಬಾರದು ಎನ್ನುವ ಕಾರಣಕ್ಕೆ ಬಟ್ಟೆ ಮುಚ್ಚಿರಲಾಗುತ್ತದೆ. ಆದ್ರೆ ಈ ಗ್ರಹಣ ಕಾಲದಲ್ಲಿ ಮಗು (Child) ಜನಿಸೋದನ್ನು ತಡೆಯಲು ಸಾಧ್ಯವಿಲ್ಲ. ಒಂದ್ವೇಳೆ ಚಂದ್ರ ಗ್ರಹಣ ಅಥವಾ ಸೂರ್ಯ ಗ್ರಹಣದ ಸಮಯದಲ್ಲಿ ಮಗು ಜನಿಸಿದರೆ ಅವರ ಭವಿಷ್ಯ ಮತ್ತು ಸ್ವಭಾವ ಹೇಗಿರುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ.

ಗ್ರಹಣ ಕಾಲದಲ್ಲಿ ಜನಿಸಿದ ಮಗುವಿನ ಸ್ವಭಾವ (Nature) : 
ನಾಯಕತ್ವದ ಗುಣ :
ಸಾಮಾನ್ಯವಾಗಿ ಗ್ರಹಣ ಕಾಲದಲ್ಲಿ ಹುಟ್ಟಿದ ಮಗುವಿನ ಬಗ್ಗೆ ಪಾಲಕರಿಗೆ ಅನೇಕ ಗೊಂದಲವಿರುತ್ತದೆ. ಅವರ ಭವಿಷ್ಯ ಕೆಟ್ಟದಾಗಿರಬಹುದೆಂದು ಅನೇಕರು ಅಂದಾಜಿಸುತ್ತಾರೆ. ಆದ್ರೆ ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ ಯಾವುದೇ ಗ್ರಹಣದ ಸಮಯದಲ್ಲಿ ಹುಟ್ಟುವ ಮಕ್ಕಳಲ್ಲಿ ನಾಯಕತ್ವದ ಗುಣ ಕಂಡುಬರುತ್ತವೆ. ಈ ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸದಾ ಮುಂದಿರುತ್ತಾರೆ. ಗ್ರಹಣದ ಸಮಯದಲ್ಲಿ ಜನಿಸಿದ ಮಕ್ಕಳು ಭೂಮಿಗೆ ಬಂದು ಮೊದಲ ಉಸಿರು ತೆಗೆದುಕೊಳ್ತಿದ್ದಂತೆ ಆಧ್ಯಾತ್ಮಿಕ (spiritual) ಯೋಧರ ಸ್ವಭಾವ ಪಡೆಯುತ್ತಾರೆ. ಅವರ ಈ ಸ್ವಭಾವ ಸದಾ ಅವರನ್ನು ಮುಂದಿರಲು ಪ್ರೇರೇಪಿಸುತ್ತದೆ. ಈ ಮಕ್ಕಳು ಎಂದಿಗೂ ಹಿಂದೆ ಸರಿಯುವುದಿಲ್ಲ. ಸದಾ ಜಯಶಾಲಿಗಳಾಗಿ ಬರ್ತಾರೆ. ಗ್ರಹಣ ಕಾಲದಲ್ಲಿ ಮಕ್ಕಳು ಜನಿಸುವುದು ವರದಾನ ಎನ್ನಬಹುದು.  

ಸೂರ್ಯ (Sun) ಗ್ರಹಣದಲ್ಲಿ ಜನಿಸಿದ ಮಕ್ಕಳಲ್ಲಿರುತ್ತೆ ಆತ್ಮವಿಶ್ವಾಸ (Confidence) : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯಗ್ರಹಣದ ಸಮಯದಲ್ಲಿ ಮಗು ಜನಿಸಿದರೆ ಪಾಲಕರು ಖುಷಿಪಡಬೇಕು. ಸೂರ್ಯನನ್ನು ಆತ್ಮ ಮತ್ತು ಆತ್ಮ ವಿಶ್ವಾಸದ ಅಂಶವೆಂದು ಪರಿಗಣಿಸಲಾಗಿದೆ. ಸೂರ್ಯಗ್ರಹಣದಲ್ಲಿ ಮಗು ಜನಿಸಿದ್ರೆ, ರಾಹುವಿಗೆ ಸಂಬಂಧಿಸಿದ ಗುಣಗಳು ಅವರಿಗೆ ಬರುತ್ತದೆ. ಸೂರ್ಯ ಗ್ರಹಣದ ಸಮಯದಲ್ಲಿ ಜನಿಸಿದ ಮಗು ಸದಾ ಆತ್ಮವಿಶ್ವಾಸದಿಂದ ಕೂಡಿರುತ್ತದೆ.ಯಾವಾಗಲೂ ತನ್ನ ಮೇಲೆ ನಂಬಿಕೆ ಹೊಂದಿರುತ್ತದೆ. ಸಕಾರಾತ್ಮಕ ಆಲೋಚನೆ ಅವರಲ್ಲಿ ತುಂಬಿರುತ್ತದೆ. 

Vastu Tips: ಮನೆಯ ನೆಮ್ಮದಿ ಹಾಳು ಮಾಡುವ ಜೇಡರ ಬಲೆ

ಸೃಜನ ಶೀಲರಾಗಿರ್ತಾರೆ ಗ್ರಹಣದಲ್ಲಿ ಜನಿಸಿದ ಮಕ್ಕಳು : ಆಕಾಶದಲ್ಲಿ ನಡೆಯುವ ದೊಡ್ಡ ಘಟನೆ ಗ್ರಹಣ. ಚಂದ್ರ ಗ್ರಹಣವಿರಲಿ ಇಲ್ಲ ಸೂರ್ಯ ಗ್ರಹಣವಿರಲಿ, ಗ್ರಹಣದ ಕಾಲದಲ್ಲಿ ಜನಿಸಿದ ಮಕ್ಕಳು ಸೃಜನಶೀಲ ಸ್ವಭಾವವನ್ನು ಹೊಂದಿರುತ್ತಾರೆ. ಸೃಜನಶೀಲತೆ ಅವರ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ.

ದುಡ್ಡನ್ನು ಯಾರಾದ್ರೂ ಬೇಡ ಅಂತಾರಾ? ಹೀಗ್ ಮಾಡಿದ್ರೆ ಜೇಬು ತುಂಬುತ್ತೆ ನೋಡಿ!

ಗ್ರಹಣದ ಸಮಯದಲ್ಲಿ ಜನಿಸಿದವರಿಗೆ ಹೋರಾಟ ಸಾಮಾನ್ಯ : ಗ್ರಹಣ ಕಾಲದಲ್ಲಿ ಜನಿಸಿದವರ ಮೇಲೆ ಧನಾತ್ಮಕ ಪ್ರಭಾವ ಮಾತ್ರವಲ್ಲ ಋಣಾತ್ಮಕ ಪ್ರಭಾವ ಕೂಡ ಉಂಟಾಗುತ್ತದೆ. ಈ ಮಕ್ಕಳು ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸೂರ್ಯಗ್ರಹಣದ ಸಮಯದಲ್ಲಿ ಜನಿಸಿದ ಮಕ್ಕಳು ಬಾಲ್ಯದಲ್ಲಿ ಯಾವುದೇ ಕಷ್ಟ ನೋಡುವುದಿಲ್ಲ. ಆದ್ರೆ ಯೌವನದ ಸ್ವಲ್ಪ ಸಮಸ್ಯೆ ಎದುರಿಸುತ್ತಾರೆ. ಇನ್ನು ಗ್ರಹಣದ ಸಮಯದಲ್ಲಿ ಜನಿಸಿದ ಮಕ್ಕಳಿಗೆ ಕೆಲವು ಆರೋಗ್ಯ ಸಂಬಂಧಿ ಸಮಸ್ಯೆಗಳು ಕೂಡ ಕಾಡುತ್ತದೆ. ಈ ಮಕ್ಕಳ ಬದುಕಿನಲ್ಲಿ ಹೋರಾಟ, ಸವಾಲುಗಳು ಸಾಮಾನ್ಯವಾಗಿರುತ್ತವೆ. ಯಾವುದೇ ಹೋರಾಟವಿದ್ದರೂ ಗ್ರಹಣ ಕಾಲದಲ್ಲಿ ಜನಿಸಿದವರು  ತಮ್ಮ ಮನೋಬಲದ ಮೂಲಕ ಎಲ್ಲ ಸಮಸ್ಯೆಗಳನ್ನು ಜಯಿಸಿ ಮುನ್ನಡೆಯುವ ಶಕ್ತಿಯನ್ನು ಹೊಂದಿರುತ್ತಾರೆ. 

Follow Us:
Download App:
  • android
  • ios