Astro Tips : ಕಂಕಣ ಭಾಗ್ಯ ಕೂಡಿ ಬರಲು ಕಾಡಿಗೆಯ ಈ ಉಪಾಯ ಅನುಸರಿಸಿ
ಮದುವೆಯಾಗಿಲ್ಲ, ಸಾಡೆ ಸಾಥ್ ಶನಿ ಬಿಡ್ತಿಲ್ಲ, ಮನೆಗೆ ದೃಷ್ಟಿ ಬಿದ್ದಿರಬೇಕು, ಮಗುವಿಗೆ ಆರೋಗ್ಯ ಸರಿಯಿಲ್ಲ, ಹೀಗೆ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ. ಈ ಎಲ್ಲ ಸಮಸ್ಯೆಗೆ ಸುಲಭ ಪರಿಹಾರವಿದೆ. ಕಣ್ಣಿಗೆ ಹಚ್ಚುವ ಕಾಡಿಗೆಯಲ್ಲಿದೆ ಪರಿಹಾರದ ಗುಟ್ಟು.
ಹುಡುಗಿ(Girl)ಯರ ಕಣ್ಣಿ(Eye)ನ ಸೌಂದರ್ಯ(Beauty)ವನ್ನು ಹೆಚ್ಚಿಸಲು ಕಾಡಿ(Kajal )ಗೆ ಸಹಾಯ ಮಾಡುತ್ತದೆ. ಕಾಡಿಗೆಯನ್ನು ಕಣ್ಣಿಗೆ ಹಚ್ಚಿದಾಗ ಮುಖ(Face)ದ ಸೌಂದರ್ಯ ದುಪ್ಪಟ್ಟಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ. ಕಾಡಿಗೆ ಸೌಂದರ್ಯ ವರ್ಧಕ ಮಾತ್ರವಲ್ಲ, ಜ್ಯೋತಿಷ್ಯ (Astrology) ಮತ್ತು ವಾಸ್ತು ಶಾಸ್ತ್ರದಲ್ಲಿಯೂ ಕಾಜಲ್ ಗೆ ಮಹತ್ವದ ಸ್ಥಾನವಿದೆ. ದೃಷ್ಟಿ ದೋಷವನ್ನು ಅನೇಕರು ನಂಬುತ್ತಾರೆ. ನವಜಾತ ಶಿಶು ಸೇರಿದಂತೆ ಎಲ್ಲ ಸುಂದರ ವಸ್ತುವಿಗೆ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ಕಾಡಿಗೆಯನ್ನು ಹಚ್ಚುತ್ತಾರೆ. ಕಾಡಿಗೆಗೆ ಸಂಬಂಧಿಸಿದ ಕೆಲವು ಉಪಾಯಗಳನ್ನು ವಾಸ್ತುಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅದನ್ನು ಪಾಲಿಸುವ ಮೂಲಕ ದೃಷ್ಟಿ ದೋಷಗಳಿಂದ ರಕ್ಷಣೆ ಪಡೆಯಬಹುದು. ಅಲ್ಲದೆ, ಮನೆಯಲ್ಲಿ ಸದಾ ಸಂತೋಷ, ಸಮೃದ್ಧಿ ನೆಲೆಸುವಂತೆ ಮಾಡಬಹುದು.
ದೃಷ್ಟಿ ದೋಷದಿಂದ ಮನೆಯ ರಕ್ಷಣೆ
ಕೇವಲ ಮನುಷ್ಯರಿಗೆ ಮಾತ್ರ ದೃಷ್ಟಿ ದೋಷವಾಗುವುದಿಲ್ಲ. ಕೆಲವರ ಕಣ್ಣು ಕೆಟ್ಟದಾಗಿರುತ್ತದೆ. ಒಮ್ಮೆ ಮನೆಯನ್ನು ದಿಟ್ಟಿಸಿ ನೋಡಿದ್ರೆ ಮನೆಗೂ ದೃಷ್ಟಿ ಬೀಳುವ ಸಾಧ್ಯತೆಯಿರುತ್ತದೆ. ಇದ್ರಿಂದ ಮನೆಯಲ್ಲಿರುವವ ಸಂತೋಷ, ಸುಖ, ಆರೋಗ್ಯ ಹದಗೆಡುತ್ತದೆ. ಮನೆಗೆ ದೃಷ್ಟಿ ಬೀಳಬಾರದು ಎಂದರೆ ಶನಿವಾರ ಬೆಳಿಗ್ಗೆ, ತೆಂಗಿನಕಾಯಿಯನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ. ನಂತರ ಬಟ್ಟೆ ಮೇಲೆ ಕಾಡಿಗೆಯ 21 ಚುಕ್ಕೆಗಳನ್ನು ಹಾಕಿ ಮನೆಯ ಹೊರಗೆ ನೇತು ಹಾಕಬೇಕು. ಇದರಿಂದ ಧನಾತ್ಮಕ ಶಕ್ತಿ ಮನೆ ಪ್ರವೇಶಿಸುತ್ತದೆ. ಪತಿ-ಪತ್ನಿಯರ ನಡುವಿನ ಉದ್ವಿಗ್ನತೆ ಮತ್ತು ಸಮಸ್ಯೆಗಳು ದೂರವಾಗುತ್ತವೆ. ಮನೆಯಲ್ಲಿ ಸಂತೋಷ, ಸಮೃದ್ಧಿ, ಮತ್ತು ಶಾಂತಿ ನೆಲೆಸುತ್ತದೆ.
ಸಮಾಜದಲ್ಲಿ ಗೌರವ
ಭಾನುವಾರದಂದು ಅತ್ತಿಮರದ ಹೂವು ಮತ್ತು ಹತ್ತಿಯನ್ನು ಬೆರೆಸಿ ಬತ್ತಿ ತಯಾರಿಸಬೇಕು. ಅದಕ್ಕೆ ಬೆಣ್ಣೆಯನ್ನು ಹಾಕಿ ಸುಡಬೇಕು. ಆಗ ಬರುವ ಕಾಡಿಗೆಯನ್ನು ಪ್ರತಿದಿನ ಮಲಗುವ ಮೊದಲು ಕಣ್ಣಿಗೆ ಹಚ್ಚಿಕೊಳ್ಳಬೇಕು. ವಾಸ್ತು ಮತ್ತು ಜ್ಯೋತಿಷ್ಯದ ಪ್ರಕಾರ, ಇದು ಸಮಾಜದಲ್ಲಿ ವ್ಯಕ್ತಿಯ ಗೌರವವನ್ನು ಹೆಚ್ಚಿಸುತ್ತದೆ.
ಮಗುವಿಗೆ ದೃಷ್ಟಿ ದೋಷದಿಂದ ರಕ್ಷಣೆ
ಮಗು ಅತಿಯಾಗಿ ಅತ್ತಾಗ, ಊಟ ಮಾಡದೆ ಹೋದಾಗ, ಸದಾ ಅನಾರೋಗ್ಯದಿಂದ ಬಳಲುತ್ತಿದ್ದರೆ ದೃಷ್ಟಿ ದೋಷವಾಗಿದೆ ಎನ್ನುತ್ತಾರೆ. ಈಗ್ಲೂ ಇದ್ರ ಬಗ್ಗೆ ಜನರು ನಂಬುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ಕಾಡಿಗೆಗಳು ಲಗ್ಗೆಯಿಟ್ಟಿವೆ. ಆದ್ರೆ ಅವುಗಳನ್ನು ಮಕ್ಕಳ ಕಣ್ಣುಗಳಿಗೆ ಹಚ್ಚುವುದು ಅಪಾಯ. ಹಾಗಾಗಿ ಮನೆಯಲ್ಲಿಯೇ ಕಾಡಿಗೆ ಮಾಡಿ ಹಚ್ಚುವುದು ಒಳ್ಳೆಯದು. ಇಲ್ಲವೆಂದ್ರೆ ಮಗುವಿನ ಹಣೆ, ಕೆನ್ನೆ, ಪಾದಕ್ಕೆ ಕಾಡಿಗೆ ಹಚ್ಚುವ ಮೂಲಕ ದೃಷ್ಟಿ ದೋಷದಿಂದ ಮಗುವನ್ನು ರಕ್ಷಿಸುವುದು.
Zodiacs and Relationship: ರಾಶಿ ಪ್ರಕಾರ, ವಿವಾಹ ಜೀವನ ಸಿಹಿಯಾಗಿರಲು ನೀವೇನು ಮಾಡ್ಬೇಕು..?
ಉದ್ಯೋಗ ಸಮಸ್ಯೆ
ನಿರುದ್ಯೋಗ ಅಥವಾ ಉದ್ಯೋಗದಲ್ಲಿ ತೊಂದರೆಯಾಗ್ತಿದ್ದರೂ ಕಾಡಿಗೆ ನಿಮ್ಮ ನೆರವಿಗೆ ಬರಲಿದೆ. ಶನಿವಾರದಂದು ಐದು ಗ್ರಾಂ ಕಾಡಿಗೆಯನ್ನು ತೆಗೆದುಕೊಂಡು ಅದನ್ನು ಏಕಾಂತ ಸ್ಥಳದಲ್ಲಿ ಇಡಬೇಕು. ಇದು ಉದ್ಯೋಗ ನಷ್ಟ ಅಥವಾ ಯಾವುದೇ ರೀತಿಯ ತೊಂದರೆಯಿಂದ ಪರಿಹಾರವನ್ನು ನೀಡುತ್ತದೆ ಎಂದು ನಂಬಲಾಗಿದೆ.
Samudrika Shastra: ಲವ್, ಸೆಕ್ಸ್, ಹೆಲ್ತ್‌ನ ಮಚ್ಚೆ ಭವಿಷ್ಯ.. ನಿಮಗೆಲ್ಲಿದೆ?
ಮದುವೆಯಲ್ಲಿ ಅಡೆತಡೆ
ಮದುವೆಯಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಕೊನೆಯ ಹಂತಕ್ಕೆ ಬಂದ ಮದುವೆ ಮುರಿದು ಬೀಳುತ್ತದೆ. ಇದಕ್ಕೂ ಕಾಡಿಗೆಯಿಂದ ಪರಿಹಾರ ಕಂಡುಕೊಳ್ಳಬಹುದು. ಶನಿವಾರದಂದು ಕೋಲಿನಿಂದ ನಿರ್ಜನ ಸ್ಥಳವನ್ನು ಅಗೆಯಿರಿ. ನಂತರ ಅದರಲ್ಲಿ ನೀಲಿ ಹೂವುಗಳು ಮತ್ತು ಕಾಡಿಗೆಯ ಗಟ್ಟಿಯನ್ನು ಹಾಕಿ ಮುಚ್ಚಿಡಬೇಕು. ಸತತ 5 ಶನಿವಾರದಂದು ಈ ಪರಿಹಾರವನ್ನು ಮಾಡಬೇಕು. ಮದುವೆ ಮಾತ್ರವಲ್ಲ ದಾಂಪತ್ಯದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯೂ ದೂರವಾಗುತ್ತದೆ.
ಶನಿಯ ಸಾಡೆ ಸಾಥ್ ನಿಂದ ರಕ್ಷಣೆ
ಶನಿಯ ಸಾಡೆ ಸಾಥ್‌ನಿಂದ ರಕ್ಷಣೆ ಪಡೆಯಬೇಕೆಂದ್ರೆ ಒಂದು ಡಬ್ಬದಲ್ಲಿ ಕಾಡಿಗೆಯನ್ನು ಹಾಕಿ. ಶನಿವಾರ ವ್ಯಕ್ತಿಯ ತಲೆಯಿಂದ ಕಾಲಿನವರೆಗೆ 9 ಸುತ್ತು ಹಾಕಿ. ನಂತ್ರ ಅದನ್ನು ನಿರ್ಜನ ಪ್ರದೇಶದಲ್ಲಿ ಹೂಳಬೇಕು. ಹೂಳಲು ಬಳಸಿದ ಕೋಲನ್ನು ಕೂಡ ಅಲ್ಲಿಯೇ ಇಡಬೇಕು. ಕಾಡಿಗೆಯನ್ನು ಹಾಕಿದ ಮೇಲೆ ತಿರುಗಿ ನೋಡದೆ ಮನೆಗೆ ಬರಬೇಕು. ಇದು ಸಾಡೆ ಸಾಥ್ ಶನಿಯಿಂದ ರಕ್ಷಣೆ ನೀಡುತ್ತದೆ.