ಶ್ರೀಕೃಷ್ಣ ಯಾಕೆ ಯಾವಾಗಲೂ ತನ್ನ ತಲೆಯ ಮೇಲೆ ನವಿಲುಗರಿಯನ್ನು ಧರಿಸಿರುತ್ತಾನೆ? ಅದರ ಹಿಂದೆ ಒಂದು ಕುತೂಹಲಕಾರಿ ಕತೆಯಿದೆ.
ಶ್ರೀಕೃಷ್ಣನು ತಲೆಯ ಮೇಲೆ ಯಾವಾಗಲೂ ನವಿಲುಗರಿಯನ್ನು ಧರಿಸಿರುತ್ತಾನೆ. ಅದ್ಯಾಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಿರಬಹುದಲ್ಲವೇ? ಅದಕ್ಕೊಂದು ಕತೆಯಿದೆ.
ಶ್ರೀರಾಮ ತಂದೆ ದಶರಥನಿಂದ ವನವಾಸದ ದೀಕ್ಷೆಯನ್ನು ಪಡೆದು ಹೊರಟಾಗ, ಲಕ್ಷ್ಮಣನೂ ಆತನೊಂದಿಗೆ ಹೊರಟನು. ಆಗ ಸೀತಾಮಾತೆ ರಾಮನನ್ನು ಉದ್ದೇಶಿಸಿ, ನಾನು ಕೂಡ ಕಾಡಿಗೆ ಬರುತ್ತೇನೆ ಎಂದು ಹೇಳಿದಳು. ರಾಮನು ಸೀತೆಗೆ, ಕಾಡಿನಲ್ಲಿ ಕಲ್ಲು-ಮುಳ್ಳಿನ ದಾರಿಯಲ್ಲಿ ಹಾದು ಹೋಗಬೇಕು. ನಿನ್ನ ಕೋಮಲ ಚರಣಗಳಿಗೆ ಅದನ್ನು ಸಹಿಸಲಾಗುವುದಿಲ್ಲ, ನೀನು ಬರಬೇಡ ಸೀತಾ ಎಂದು ಹೇಳಿದನು. ಸೀತೆ ಆಗ, ಪ್ರಾಣನಾಥ, ನೀನಿದ್ದಲ್ಲಿಯೇ ನಾನಿರುವುದು, ನನ್ನನ್ನು ಬಿಟ್ಟು ಹೋಗಬೇಡ ಎಂದಳು. ರಾಮನು ಒಪ್ಪಿದ. ನಂತರ ಅವರು ಮೂವರೂ ಕಾಡಿಗೆ ಹೊರಟುಹೋದರು. ಬಿರುಬಿಸಿಲು ಮತ್ತು ಕಲ್ಲು ಮುಳ್ಳುಗಳ ದಾರಿಯಿಂದ ಸೀತೆಗೆ ದಣಿವಾಯಿತು. ಅವಳು ರಾಮನಿಗೆ, “ಎಲ್ಲಿಯಾದರೂ ನೀರು ಇದೆಯೇ ಎಂದು ನೋಡಿ. ನನಗೆ ತುಂಬಾ ಬಾಯಾರಿಕೆಯಾಗಿದೆ” ಎಂದು ಕೇಳಿ ಒಂದು ಮರದ ಕೆಳಗೆ ಕುಳಿತಳು. ರಾಮ ಮತ್ತು ಲಕ್ಷ್ಮಣ ನೀರು ಎಲ್ಲಿ ಸಿಗುತ್ತದೆ ಎಂದು ಹುಡುಕಲು ಹೊರಟರು. ತುಂಬಾ ದೂರದವರೆಗೆ ಹುಡುಕಿದರೂ ಎಲ್ಲಿಯೂ ನದಿ-ಕೆರೆಗಳು ಕಾಣಿಸಲಿಲ್ಲ. ಅವರು ಮತ್ತೆ ಸೀತೆ ಇರುವಲ್ಲಿ ಹಿಂತಿರುಗಿದರು.
ಸ್ವಲ್ಪ ಸಮಯದ ನಂತರ, ಒಂದು ದೊಡ್ಡ ನವಿಲು ಒಂದು ಮರದಿಂದ ಜಿಗಿದು ಸೀತೆಯ ಮುಂದೆ ಬಂದು ನಿಂತಿತು. ಸೀತೆ ಇಷ್ಟು ದೊಡ್ಡ ನವಿಲನ್ನು ನೋಡಿರಲಿಲ್ಲ, ಹಾಗಾಗಿ ಅವಳಿಗೆ ಹೆದರಿಕೆಯಾಯಿತು. “ಕಾಡಿನಲ್ಲಿ ತುಂಬಾ ದೊಡ್ಡ ದೊಡ್ಡ ನವಿಲುಗಳಿವೆ” ಎಂದು ರಾಮ ಹೇಳಿದ. ಆಗ ಚೈತ್ರ ಮಾಸ ನಡೆಯುತ್ತಿತ್ತು. ನವಿಲು ಸಂತೋಷದಿಂದ, ಗರಿ ಬಿಚ್ಚಿ ನೃತ್ಯ ಮಾಡತೊಡಗಿತು. ನವಿಲು ಬಹಳ ಸಮಯ ನೃತ್ಯ ಮಾಡಿತು. ಸೀತೆ ನರ್ತಿಸುವ ನವಿಲನ್ನು ಬಹಳ ಮೆಚ್ಚುಗೆಯಿಂದ ನೋಡುತ್ತಿದ್ದಳು. ಕುಣಿದು ಕುಣಿದು ದಣಿದ ನವಿಲು ನೃತ್ಯ ಮಾಡುವುದನ್ನು ನಿಲ್ಲಿಸಿತು. ಸೀತೆಯು ರಾಮನಿಗೆ, “ನವಿಲಿಗೆ ಮತ್ತೆ ನೃತ್ಯ ಮಾಡಲು ಹೇಳಿ!” ಎಂದು ಬೇಡಿದಳು. ಆಗ ರಾಮನು “ಇಲ್ಲ ಸೀತೆ, ಆ ಅಧಿಕಾರ ನಮಗಿಲ್ಲ” ಎಂದನು.
ನೀವು ಡಿಸೆಂಬರ್‌ನಲ್ಲಿ ಹುಟ್ಟಿದವರಾ? ಈ ಗುಣ ನಿಮ್ಮದಾಗಿರುತ್ತೆ! ...
ಆ ನವಿಲು ಬಂದ ಹಾಗೆಯೇ ಹೊರಟು ಹೋಯಿತು. ಸೀತೆಯು ನವಿಲು ಹೋದ ದಿಕ್ಕಿನಲ್ಲಿ ನವಿಲನ್ನು ಹಿಂಬಾಲಿಸಲು ಪ್ರಾರಂಭಿದಳು. ನವಿಲು ಒಂದೊಂದು ಗರಿಯನ್ನು ಬೀಳಿಸುತ್ತ ಮುನ್ನಡೆಯಿತು. ರಾಮನಿಗೆ ‘ನವಿಲಿನ ರೂಪ ಧರಿಸಿ ಸೀತೆಯನ್ನು ಯಾರಾದರೂ ಮೋಸ ಮಾಡುತ್ತಿದ್ದಾರೆಯೇ?’ ಎಂಬ ವಿಚಾರ ಬಂದು, ರಾಮ ಮತ್ತು ಲಕ್ಷ್ಮಣ ಇಬ್ಬರೂ ಸೀತೆಯನ್ನು ಹಿಂಬಾಲಿಸಿದರು. ಅಷ್ಟರಲ್ಲಿ ಅವರು ಒಂದು ಕೆರೆಯ ಹತ್ತಿರ ಬಂದರು. ಅಲ್ಲಿನ ನೀರನ್ನು ನೋಡಿ ಸೀತೆಗೆ ಮತ್ತೆ ತನಗೆ ಬಾಯಾರಿಕೆಯಾಗಿರುವ ಬಗ್ಗೆ ನೆನಪಾಯಿತು. ಸೀತೆ ರಾಮನಿಗೆ, “ನನಗೆ ನೀರು ತಂದುಕೊಡಿ. ನನಗೆ ತುಂಬಾ ಬಾಯಾರಿಕೆಯಾಗಿದೆ” ಎಂದು ಹೇಳಿದಳು. ಆಗ ರಾಮನು “ಸೀತೆ, ನಮಗೆ ಎಲ್ಲಿಯೂ ನೀರು ಸಿಕ್ಕಿರಲಿಲ್ಲ; ಆದರೆ ಈ ನವಿಲು ನಮ್ಮನ್ನು ಕೆರೆಗೆ ಕರೆತಂದಿತು. ಮೊದಲು ಅದಕ್ಕೆ ಧನ್ಯವಾದಗಳನ್ನು ಸಲ್ಲಿಸುವ”. ಸೀತೆ ಆ ನವಿಲಿಗೆ ಧನ್ಯವಾದ ಹೇಳಿದಳು.
ಬ್ರಹ್ಮ ಭೂಮಿ, ಮನುಷ್ಯ, ಪ್ರಾಣಿ ಸಂಕುಲವನ್ನು ಸೃಷ್ಟಿಸಿದ್ದು ಹೇಗೆ? ಭಾಗವತ ಏನು ಹೇಳುತ್ತದೆ? ...
ಆಗ ಆ ನವಿಲು ಮಾತನಾಡಿತು. ರಾಮಚಂದ್ರ, ನಿನ್ನ ಮಹಿಮೆಯನ್ನು ತಿಳಿದಿದ್ದೇನೆ, ನೀನು ವನಕ್ಕೆ ಬಂದುದು ವನವಾಸಿಗಳಾದ ನಮಗೆ ಸಂತೋಷ ತಂದಿದೆ ಎಂದು ಹೇಳಿತು. ರಾಮ ನವಿಲಿಗೆ, “ನೀನಿಂದು ನಮಗೆ ದೊಡ್ಡ ಉಪಕಾರ ಮಾಡಿದ್ದೀಯ. ಏನು ಬೇಕು ಕೇಳು” ಎಂದು ಹೇಳಿದಾಗ ಆ ನವಿಲು, “ರಾಮಾ, ನಾನು ಇನ್ನೇನನ್ನೂ ಬಯಸುವುದಿಲ್ಲ. ನನ್ನನ್ನು ಸದಾ ನಿಮ್ಮ ಬಳಿ ಇಟ್ಟುಕೊಳ್ಳಿ” ಎಂದು ಬೇಡಿಕೊಂಡಿತು. ರಾಮಚಂದ್ರನು ಆಗ “ನಾನೇ ಊರು ಮನೆ ಎಲ್ಲ ತೊರೆದು ಕಾಡಿನಲ್ಲಿ ಅಂಡಲೆಯುತ್ತಿದ್ದೇನೆ. ನನಗೇ ನೆಲೆ ಇಲ್ಲ. ಇನ್ನು ನಿನ್ನನ್ನು ಜೊತೆಗೆ ಇಟ್ಟುಕೊಳ್ಳಲು ಹೇಗೆ ಸಾಧ್ಯ? ಈ ಜೀವನದಲ್ಲಿ ಸಾಧ್ಯವಿಲ್ಲ. ನನ್ನ ಮುಂದಿನ ಜನ್ಮ ಶ್ರೀಕೃಷ್ಣನಾಗಿ ಇರುವುದು. ನನ್ನ ತಲೆಯ ಮೇಲೆ ಆಗ ಕಿರೀಟವನ್ನು ಹೊಂದಿದ್ದರೂ ಸಹ, ನಾನು ಯಾವಾಗಲೂ ಅದರ ಮೇಲೆ ನವಿಲುಗರಿಯನ್ನು ಧರಿಸುವೆ, ಅಂದರೆ, ನಾನು ಯಾವಾಗಲೂ ನಿನ್ನೊಂದಿಗಿರುವೆ. ನಾನು ಅದನ್ನು ಎಂದಿಗೂ ಮರೆಯುವುದಿಲ್ಲ”. ನವಿಲು ಅದನ್ನು ಒಪ್ಪಿಕೊಂಡಿತು.
ಅಂದಿನಿಂದ ಶ್ರೀಕೃಷ್ಣನ ತಲೆಯಲ್ಲಿ ನವಿಲುಗರಿ ಇರುತ್ತದೆ.
ವಿಭೂತಿಯ ಮಹಿಮೆ ಅಂತಿಂಥದ್ದಲ್ಲ! ಧರ್ಮದಲ್ಲಿ ಬಳಕೆ, ಆರೋಗ್ಯಕ್ಕೂ ಬೇಕು ...
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 4, 2020, 4:48 PM IST